ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನದಿಗೆ ಬಿದ್ದ ತೈಪೆ ವಿಮಾನ, ಹಲವಾರು ಮಂದಿ ಸಾವು

By Mahesh
|
Google Oneindia Kannada News

ತೈಪೆ, ಫೆ.4: ತೈವಾನ್‌ ರಾಜಧಾನಿ ತೈಪೆಯಲ್ಲಿ ಬುಧವಾರ ಬೆಳಗ್ಗೆ ವಿಮಾನ ದುರಂತ ಸಂಭವಿಸಿದೆ. ಸುಮಾರು 53 ಪ್ರಯಾಣಿಕರಿದ್ದ ವಿಮಾನ ಟೇಕಾಫ್ ಆದ ಕೆಲ ನಿಮಿಷಗಳಲ್ಲೇ ಸೇತುವೆಯೊಂದಕ್ಕೆ ಗುದ್ದಿ ನದಿಗೆ ಬಿದ್ದಿದೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಸಾವು ನೋವಿನ ಬಗ್ಗೆ ಖಚಿತ ಮಾಹಿತಿ ಇನ್ನೂ ಸಿಕ್ಕಿಲ್ಲ

ಇತ್ತೀಚಿನ ವರದಿಗಳು ಬಂದಾಗ ತೈಪೆ ನದಿಯಿಂದ ಸುಮಾರು 9 ಶವಗಳನ್ನು ಹೊರ ತೆಗೆಯಲಾಗಿದೆ. ಇನ್ನುಳಿದ 48ಕ್ಕೂ ಜನ ನೀರಲ್ಲಿ ಮುಳುಗಿರುವ ವಿಮಾನದಲ್ಲಿ ಸಿಲುಕಿಹಾಕಿಕೊಂಡಿದ್ದು, ಅವರು ಬದುಕುಳಿಯುವ ಸಾಧ್ಯತೆಗಳು ತೀರಾ ಕಡಿಮೆ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.

Plane with 53 passengers crashes in Taipei; many dead

ಟ್ರಾನ್ಸ್ ಏಷ್ಯಾ ಏರ್ ವೇಸ್ ಗೆ ಸೇರಿದ ಎಟಿಆರ್ 72 ವಿಮಾನದಲ್ಲಿ ಸಿಬ್ಬಂದಿ ಸೇರಿದಂತೆ 58 ಜನರಿದ್ದರು. ಇಲ್ಲಿ ತನಕ ಇಬ್ಬರು ಮಕ್ಕಳು ಸೇರಿದಂತೆ 17 ಜನರನ್ನು ರಕ್ಷಿಸಲಾಗಿದೆ ಎಂದು ತೈವಾನ್ ಸರ್ಕಾರ ಹೇಳಿದೆ.

ಫ್ರೆಂಚ್ ನಿರ್ಮಿತ ಟ್ವಿನ್ ಇಂಜಿನ್ ಟರ್ಬೊ ಪ್ರಾಪ್ ಎಟಿಆರ್ 72 ವಿಮಾನ ತೈವಾನ್ ನಲ್ಲಿ ವಾಣಿಜ್ಯ ಉದ್ದೇಶಿತ ವಿಮಾನವಾಗಿದೆ. ಈ ಹಿಂದೆ ಕೂಡಾ ಎಟಿಆರ್ 72 ವಿಮಾನದ ಬಗ್ಗೆ ಪ್ರಶ್ನೆಗಳು ಎದ್ದಿತ್ತು.

ಕಳೆದ ಜುಲೈನಲ್ಲಿ ಪೆಂಘು ದ್ವೀಪದಲ್ಲಿ ಲ್ಯಾಂಡ್ ಆಗಬೇಕಿದ್ದ ಎಟಿಆರ್ 72 ವಿಮಾನ ಅಪಘಾತಕ್ಕೀಡಾಗಿ 48 ಜನರನ್ನು ಬಲಿ ಪಡೆದಿತ್ತು. ಕಳೆದ ವರ್ಷ ಕೂಡಾ ಟ್ರಾನ್ಸ್ ಏಷ್ಯಾ ವಿಮಾನ ತೈವಾನಿನ ಪಶ್ಚಿಮ ಕರಾವಳಿಯಲ್ಲಿ ಪತನಗೊಂಡು 50 ಜನರ ಸಾವಿಗೆ ಕಾರಣವಾಗಿತ್ತು.


ತೈವಾನ್ ವಿಮಾನ ಪ್ರಾಧಿಕಾರ ಅಧಿಕೃತ ಹೇಳಿಕೆ ಪ್ರಕಾರ, ವಿಮಾನದಲ್ಲಿದ್ದ 9 ಜನ ಸಾವನ್ನಪ್ಪಿದ್ದು, 18 ಜನ ಗಾಯಗೊಂಡಿದ್ದು, ನದಿಗೆ ಬಿದ್ದ ಸಮಯದಲ್ಲಿ 58 ಜನ ವಿಮಾನದಲ್ಲಿದ್ದರು, 51 ಜನ ವಯಸ್ಕರು, 2 ಮಕ್ಕಳು, 5 ಜನ ಸಿಬ್ಬಂದಿ.

English summary
A Taiwanese commercial flight with 53 passengers aboard and 5 crew members clipped a bridge shortly after takeoff and crashed into a river in the island’s capital of Taipei on Wednesday morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X