ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ನಿವಾರಣೆಗೆ 3 ಸಾವಿರ ವರ್ಷಗಳ ಹಿಂದಿನ ಚಿಕಿತ್ಸಾ ಪದ್ಧತಿ

|
Google Oneindia Kannada News

ಬೀಜಿಂಗ್, ಫೆಬ್ರವರಿ.16: ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೊನಾ ವೈರಸ್ ಸೋಂಕು ನಿವಾರಣೆಗೆ 3 ಸಾವಿರ ವರ್ಷಗಳ ಹಿಂದಿನ ಚಿಕಿತ್ಸಾ ಪದ್ಧತಿಯನ್ನು ಅನುಸರಿಸಲು ಚೀನಾ ಸರ್ಕಾರವು ಮುಂದಾಗಿದೆ.

ಡ್ರ್ಯಾಗನ್ ರಾಷ್ಟ್ರದಲ್ಲಿ 3 ಸಾವಿರ ವರ್ಷಗಳ ಹಿಂದೆ ಅನುಸರಿಸುತ್ತಿದ್ದ ಚೀನಾ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಯನ್ನು ಅಳವಡಿಸಿಕೊಂಡು ಮಾರಕ ಸೋಂಕು ನಿವಾರಣೆಗೆ ಸರ್ಕಾರವು ಕ್ರಮ ತೆಗೆದುಕೊಂಡಿದೆ ಎಂದು ಹಿರಿಯ ವೈದ್ಯ ವಾಂಗ್ ಹೆಶಾಂಗ್ ತಿಳಿಸಿದ್ದಾರೆ.

Coronavirus: ಚೀನಾದಲ್ಲಿ ಚಿಕಿತ್ಸೆ ನೀಡಿದ 1700 ವೈದ್ಯರಿಗೇ ಸೋಂಕುCoronavirus: ಚೀನಾದಲ್ಲಿ ಚಿಕಿತ್ಸೆ ನೀಡಿದ 1700 ವೈದ್ಯರಿಗೇ ಸೋಂಕು

ಪಾಶ್ಚಾತ್ಯ ವೈದ್ಯಕೀಯ ಚಿಕಿತ್ಸಾ ಪದ್ಧತಿಗಿಂತಲೂ ಚೀನಾದ ಪುರಾತನ ಸಾಂಪ್ರದಾಯಿತ ಚಿಕಿತ್ಸಾ ಪದ್ಧತಿ(TCM)ಯು ಹೆಚ್ಚು ಪರಿಣಾಮಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಟಿಸಿಎಂ ಚಿಕಿತ್ಸಾ ಪದ್ಧತಿಯಲ್ಲಿ ನುರಿತ ಹಿರಿಯ ವೈದ್ಯರನ್ನು ಕೊರೊನಾ ವೈರಸ್ ಗೆ ಚಿಕಿತ್ಸೆ ಮತ್ತು ಔಷಧಿ ಪತ್ತೆಗೆ ಸಂಶೋಧನೆಗೆ ನಿಯೋಜಿಸಲಾಗಿದೆ ಎಂದು ವಾಂಗ್ ಹೆಶಾಂಗ್ ತಿಳಿಸಿದ್ದಾರೆ.

Traditional Chinese Medicine For Control Coronavirus In China

ಚೀನಾದ ಹುಬೈ ನಗರಕ್ಕೆ 2,200 ತಜ್ಞ ವೈದ್ಯರ ತಂಡ:

ಚೀನಾದಲ್ಲಿ ಕೊರೊನಾ ವೈರಸ್ ನಿಂದ 1,665 ಮಂದಿ ಪ್ರಾಣ ಬಿಟ್ಟಿದ್ದು, 70 ಸಾವಿರಕ್ಕೂ ಅಧಿಕ ಜನರಲ್ಲಿ ಸೋಂಕು ತಗಲಿರುವ ಬಗ್ಗೆ ತಿಳಿದು ಬಂದಿದೆ. ಈ ಪೈಕಿ ಹುಬೈ ನಗರ ಒಂದರಲ್ಲೇ 15 ಸಾವಿರಕ್ಕೂ ಅಧಿಕ ಜನರಲ್ಲಿ ಸೋಂಕು ಪತ್ತೆಯಾಗಿದೆ. ಹೀಗಾಗಿ ಟಿಸಿಎಂ ಚಿಕಿತ್ಸೆಯಲ್ಲಿ ನುರಿತರಾದ 2,200 ವೈದ್ಯರ ತಂಡವನ್ನು ಹುಬೈ ನಗರಕ್ಕೆ ಕಳುಹಿಸಿಕೊಡಲಾಗಿದೆ.

English summary
China Government Follow 3,000 Years-Old Treatement For Covid-19. Traditional Chinese Medicine For Control Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X