ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೋಟಲ್ ಸಿಇಒ ಬಲಿಪಡೆದ ವಿಮಾನ ದುರಂತ

|
Google Oneindia Kannada News

ಮಾಸ್ಕೋ, ಅ.21: ಫ್ರಾನ್ಸ್‌ ನ ಬಹುಮುಖ್ಯ ತೈಲ ವಹಿವಾಟು ಸಂಸ್ಥೆ ಟೋಟಲ್ ಸಿಇಒ ಕ್ರಿಸ್ಟೋಫರ್ ಮಾರ್ಗೆರ್ ವಿಮಾನ ದುರಂತದಲ್ಲಿ ಸೋಮವಾರ ಮೃತಪಟ್ಟಿದ್ದಾರೆ. ಮಾಸ್ಕೋದ ವಿನಕೊವೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಕ್ರಿಸ್ಟೋಫರ್ ಇದ್ದ ಜೆಟ್ ವಿಮಾನ ಟೇಕ್‌ ಆಫ್ ಆದ ಕೇಲವೇ ಕ್ಷಣದಲ್ಲಿ ಹಿಮಪಾತಕ್ಕೆ ಸಿಲುಕಿ ಪತನವಾಗಿದೆ ಎಂದು ಕಂಪನಿ ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಕ್ರಿಸ್ಟೋಫರ್ ಜತೆಗೆ ಇತರೇ ಮೂವರು ಮೃತಪಟ್ಟಿದ್ದಾರೆ. ಈ ಬಗ್ಗೆ ಟೋಟಲ್ ಕಂಪನಿ ತೀವ್ರ ವಿಷಾದ ವ್ಯಕ್ತಪಡಿಸಿದ್ದು ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ದುರಂತ ಸಂಭವಿಸಿದೆ ಎಂದು ತಿಳಿಸಿದೆ.[ಮತ್ತೊಂದು ವಿಮಾನ ದುರಂತ, 116 ಜನ ಸಾವು?]

crash

ಸುಮಾರು 102 ಬಿಲಿಯನ್ ಯೂರೋ ಮಾರುಕಟ್ಟೆ ಮೌಲ್ಯ ಹೊಂದಿರುವ ಟೋಟಲ್ ಸಂಸ್ಥೆ ಫ್ರಾನ್ಸ್ ನ ಎರಡನೇ ಅತಿದೊಡ್ಡ ಸಂಸ್ಥೆಯಾಗಿದೆ. ದುರಂತಕ್ಕೆ ಇನ್ನು ಸ್ಪಷ್ಟ ಕಾರಣಗಳು ತಿಳಿದು ಬಂದಿಲ್ಲ. ವಿನಕೊವೋ ಮಾಸ್ಕೋದ ಅತಿ ಹಳೆಯ ಮತ್ತು ಅತಿ ದೊಡ್ಡ ವಿಮಾನ ನಿಲ್ದಾಣವಾಗಿದೆ. ವಾಲ್ಡಿಮರ್ ಪುಟಿನ್ ಸೇರಿದಂತೆ ಮತ್ತಿತರ ಪ್ರಮುಖರು ಇದೇ ವಿಮಾನ ನಿಲ್ದಾಣ ಬಳಸುತ್ತಾರೆ.[ರಷ್ಯಾ ವಿಮಾನ ದುರಂತ ಭೀಕರ ಚಿತ್ರಗಳು]

63 ವರ್ಷದ ಕ್ರಿಸ್ಟೊಫರ್ ವಿಶ್ವದ ಅಗ್ರಮಾನ್ಯರ ಸಾಲಲ್ಲಿ ಸ್ಥಾನ ಪಡೆದಿದ್ದರು. ಇವರ ನಿಧನದಿಂದ ಫ್ರಾನ್ಸ್ ಒಬ್ಬ ಅತ್ಯುತ್ತಮ ಕೈಗಾರಿಕೋದ್ಯಮಿ, ಚಿಂತನಾಶೀಲ ವ್ಯಕ್ತಿಯನ್ನು ಕಳೆದುಕೊಂಡಿದೆ ಎಂದು ವಿಶ್ಲೇಷಿಸಲಾಗಿದೆ.

ರಷ್ಯಾದ ಕೈಗಾರಿಕಾ ಪ್ರಗತಿ ಮತ್ತು ಟೋಟಲ್ ಕಂಪನಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಕ್ರಿಸ್ಟೋಫರ್ ವಿಮಾನ ದುರಂತದಲ್ಲಿ ಮೃತರಾಗಿರುವುದು ಕೈಗಾರಿಕಾ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿ ಪರಿಣಮಿಸಿದೆ.

English summary
The Chief Executive of French oil major Total, Christophe de Margerie, was killed when a business jet collided with a snow plough during takeoff at Moscow’s Vnukovo International Airport, the company and airport officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X