ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಚೀನಾ-ತೈವಾನ್ ಉದ್ವಿಗ್ನತೆ: ತೈವಾನ್‌ ರಕ್ಷಣಾ ಅಧಿಕಾರಿ ಶವವಾಗಿ ಪತ್ತೆ

|
Google Oneindia Kannada News

ಕ್ಷಿಪಣಿ ಅಭಿವೃದ್ಧಿ ತಂಡದ ನೇತೃತ್ವ ವಹಿಸಿದ್ದ ತೈವಾನ್‌ನ ಉನ್ನತ ಅಧಿಕಾರಿಯೊಬ್ಬರು ಶುಕ್ರವಾರ ಹೋಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಯುಎಸ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ತೈವಾನ್ ಭೇಟಿಯ ನಂತರ ಚೀನಾ ಮತ್ತು ತೈವಾನ್ ನಡುವಿನ ಉದ್ವಿಗ್ನತೆಯ ನಡುವೆ ಇದು ಸಂಭವಿಸಿದೆ.

ಯುಎಸ್ ಪಾರ್ಲಿಮೆಂಟ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ತೈವಾನ್ ಭೇಟಿಯ ಬಗ್ಗೆ ಚೀನಾ ಕೋಪಗೊಂಡಿದ್ದು, ವಿಶ್ವದ ಎರಡು ಮಹಾಶಕ್ತಿಗಳಾದ ಚೀನಾ ಮತ್ತು ಅಮೆರಿಕ ನಡುವೆ ಯುದ್ಧ ಸಂಭವಿಸಬಹುದು ಎಂಬ ಆತಂಕವನ್ನು ಹುಟ್ಟುಹಾಕಿದೆ. ಇದಕ್ಕೆ ಕಾರಣ ಜೋ ಬೈಡನ್ ಅವರೊಂದಿಗಿನ ದೂರವಾಣಿ ಸಂಭಾಷಣೆಯ ಬಳಿಕವೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಬೆಂಕಿಯೊಂದಿಗೆ ಆಟವಾಡುವ ತಪ್ಪನ್ನು ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದರು. ಇದರ ಹೊರತಾಗಿಯೂ ತೈವಾನ್‌ಗೆ ನ್ಯಾನ್ಸಿ ಪೆಲೋಸಿಯ ಭೇಟಿ ನೀಡಿದರು. ಈ ಬಗ್ಗೆ ಚೀನಾ ಕೋಪಗೊಂಡಿದೆ ಮತ್ತು ನಿರಂತರವಾಗಿ ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸುತ್ತಿದೆ. ಇಷ್ಟೇ ಅಲ್ಲ, ಚೀನಾ ತನ್ನ ಸೇನಾ ಪಡೆಯನ್ನೂ ತೈವಾನ್ ಗಡಿಯ ಬಳಿ ವ್ಯಾಯಾಮದ ಹೆಸರಿನಲ್ಲಿ ಬಿಟ್ಟಿದೆ. ಆದರೆ, ಚೀನಾ ಸೇನೆಯು ನಾಲ್ಕು ದಿನಗಳ ಸಮರಾಭ್ಯಾಸ ನಡೆಸುವುದಾಗಿ ಹೇಳಿದೆ.

ನ್ಯಾನ್ಸಿ ಪೆಲೋಸಿ ತೈವಾನ್ ಭೇಟಿಯಿಂದ ಆಕ್ರೋಶಗೊಂಡಿರುವ ಚೀನಾ "ರಾತ್ರೋರಾತ್ರಿ ತೈವಾನ್ ಅನ್ನು ಗುರಿಯಾಗಿಸಿಕೊಂಡು ಅಂದಾಜು 11 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದೆ. ಇದು ದ್ವೀಪದ ಈಶಾನ್ಯ, ಪೂರ್ವ ಮತ್ತು ಆಗ್ನೇಯಕ್ಕೆ ಪರಿಣಾಮ ಬೀರಿದೆ" ಎಂದು ಅಮೆರಿಕ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯತಂತ್ರ ಸಂವಹನಗಳ ಸಂಯೋಜಕ ಜಾನ್ ಕಿರ್ಬಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

Top Taiwanese defence official found dead in hotel room

ಚೀನಾದ ಈ ಕ್ರಮಗಳನ್ನು ನಾವು ಖಂಡಿಸುತ್ತೇವೆ. ಇದು ಬೇಜವಾಬ್ದಾರಿ ಮತ್ತು ತೈವಾನ್ ಜಲಸಂಧಿಯಾದ್ಯಂತ ಮತ್ತು ಆ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳುವ ನಮ್ಮ ದೀರ್ಘಕಾಲದ ಉದ್ದೇಶಕ್ಕೆ ವಿರುದ್ಧವಾಗಿದೆ, "ಎಂದು ಕಿರ್ಬಿ ಹೇಳಿದ್ದಾರೆ.

Top Taiwanese defence official found dead in hotel room

"ಈ ಕ್ರಮಗಳು ಮುಂದುವರಿಯುತ್ತವೆ ಮತ್ತು ಮುಂಬರುವ ದಿನಗಳಲ್ಲಿ ಚೀನಿಯರು ಹೀಗೆ ಪ್ರತಿಕ್ರಿಯಿಸುತ್ತಾರೆ ಎಂದು ನಾವು ನಿರೀಕ್ಷಿಸಿದ್ದು, ಇದಕ್ಕೆ ಏನು ಮಾಡಬೇಕೆಂದು ಅಮೆರಿಕ ಸಹ ಸಿದ್ಧವಾಗಿದೆ. ಆದರೆ ನಾವು ಬಿಕ್ಕಟ್ಟನ್ನು ಹುಡುಕುವುದಿಲ್ಲ ಅಥವಾ ಬಯಸುವುದಿಲ್ಲ" ಎಂದು ಅವರು ತಿಳಿಸಿದ್ದಾರೆ.ಅಮೆರಿಕ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ಭೇಟಿ ಬಳಿಕ ತೈವಾನ್ ಸುತ್ತಲೂ ಯುದ್ಧ ವಿಮಾನಗಳು, ಸಮರ ನೌಕೆಗಳನ್ನು ನಿಯೋಜಿಸುವ ಮೂಲಕ ದಿಗ್ಬಂಧನ ವಿಧಿಸುವಂತೆ ಅತಿ ದೊಡ್ಡ ಸೇನಾ ತಾಲೀಮನ್ನು ಚೀನಾ ಮಾಡುತ್ತಿದೆ.

Recommended Video

ಚೀನಾ ಹಡಗು ಲಂಕಾ ಬಂದರಿನತ್ತ ಸಾಗುತ್ತಿದೆ | OneIndia Kannada

English summary
A top Taiwanese official who led the missile development team was found dead in a hotel room on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X