ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಾಪ್-5 ರಾಷ್ಟ್ರ: ಅತಿಹೆಚ್ಚು ತಪಾಸಣೆ ನಡೆಸಿದ್ದಲ್ಲೇ ಕೊವಿಡ್-19 ಕಡಿವಾಣ!

|
Google Oneindia Kannada News

ನವದೆಹಲಿ, ಆಗಸ್ಟ್.06: ಭಾರತದಲ್ಲಿ ಕೊರೊನಾವೈರಸ್ ಸೋಂಕಿನ ತಪಾಸಣೆಯಲ್ಲಿ ತೀರಾ ಹಿಂದೆ ಬಿದ್ದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಎರಡನೇ ರಾಷ್ಟ್ರವಾಗಿರುವ ಭಾರತದಲ್ಲಿ ಕೊವಿಡ್-19 ಸೋಂಕಿನ ತಪಾಸಣೆ ವೇಗ ಹೆಚ್ಚಿಸಬೇಕಿದೆ.

ಗುರುವಾರದ ಅಂಕಿ-ಸಂಖ್ಯೆಗಳ ಪ್ರಕಾರ ಭಾರತದಲ್ಲಿ 1967700 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಇದುವರೆಗೂ 40772 ಜನರು ಸಾವಿನ್ನಪ್ಪಿದ್ದಾರೆ. 13,29,026 ಸೋಂಕಿತರು ಗುಣಮುಖರಾಗಿದ್ದು, 597902 ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ.

ಭಾರತದಲ್ಲಿ ಕೊರೊನಾವೈರಸ್ ಹೆಚ್ಚಾಗುವುದರ ಹಿಂದಿನ ಕಾರಣ!ಭಾರತದಲ್ಲಿ ಕೊರೊನಾವೈರಸ್ ಹೆಚ್ಚಾಗುವುದರ ಹಿಂದಿನ ಕಾರಣ!

ಭಾರತದಲ್ಲಿ 138,13,07,956 ಜನಸಂಖ್ಯೆಯಿದ್ದು, ದೇಶದಲ್ಲಿ ಇದುವರೆಗೂ 2,21,49,351 ಜನರನ್ನು ಮಾತ್ರ ಕೊವಿಡ್-19 ಸೋಂಕಿನ ತಪಾಸಣೆಗೆ ಒಳಪಡಿಸಲಾಗಿದೆ. ಅಂದರೆ ಪ್ರತಿ 10 ಲಕ್ಷ ಜನರಲ್ಲಿ ಕೇವಲ 16035 ಜನರನ್ನು ಈವರೆಗೂ ಕೊರೊನಾವೈರಸ್ ಸೋಂಕಿನ ತಪಾಸಣೆ ನಡೆಸಲಾಗಿದೆ ಎಂದು ಅಂಕಿ-ಅಂಶಗಳು ಹೇಳುತ್ತಿವೆ. ಪ್ರತಿ 10 ಲಕ್ಷದಲ್ಲಿ

ಹಾಗಿದ್ದಲ್ಲಿ ಅತಿಹೆಚ್ಚು ಜನರನ್ನು ಕೊವಿಡ್-19 ಸೋಂಕಿನ ತಪಾಸಣೆಗೆ ಒಳಪಡಿಸಿದ ರಾಷ್ಟ್ರಗಳು ಯಾವವು, ಆ ದೇಶಗಳಲ್ಲಿನ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಎಷ್ಟು, ಭಾರತದಲ್ಲಿ ಕೊವಿಡ್-19 ಸೋಂಕಿತರ ತಪಾಸಣೆ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಹೇಳಿದ ಮಾತುಗಳೇನು ಎನ್ನುವುದುರ ಕುರಿತು ಒಂದು ವಿಸ್ತೃತ ವರದಿ ಇಲ್ಲಿದೆ ನೋಡಿ.

ಕೊರೊನಾವೈರಸ್ ಸೋಂಕಿನ ತಪಾಸಣೆ ವೇಗ ಹೆಚ್ಚಿಸಬೇಕು

ಕೊರೊನಾವೈರಸ್ ಸೋಂಕಿನ ತಪಾಸಣೆ ವೇಗ ಹೆಚ್ಚಿಸಬೇಕು

ವಿಶ್ವದಾದ್ಯಂತ ಹರಡುತ್ತಿರುವ ಕೊರೊನಾವೈರಸ್ ಸೋಂಕು ಹರಡುವಿಕೆಗೆ ಕಡಿವಾಣ ಹಾಕುವುದಕ್ಕೆ ತಪಾಸಣೆ ವೇಗವನ್ನು ಹೆಚ್ಚಿಸಬೇಕು. ಕೊವಿಡ್-19 ಸೋಂಕಿತರನ್ನು ಗುರುತಿಸಿ ಚಿಕಿತ್ಸೆಗೆ ಒಳಪಡಿಸುವುದಕ್ಕೆ ಅನುಕೂಲವಾಗಲಿದೆ. ಪ್ರತಿ 10 ಲಕ್ಷ ಜನರಲ್ಲಿ ಅತಿಹೆಚ್ಚು ಜನರನ್ನು ಸೋಂಕು ತಪಾಸಣೆಗೆ ಒಳಪಡಿಸಿರುವ ಟಾಪ್-5 ರಾಷ್ಟ್ರಗಳ ಪಟ್ಟಿ ಮತ್ತು ಸೋಂಕಿತರ ಪ್ರಮಾಣ ಹಾಗೂ ಸಾವಿನ ಸಂಖ್ಯೆಗಳು ಮುಂದಿವೆ.

ಕೊವಿಡ್-19 ತಪಾಸಣೆಯಲ್ಲಿ ಲಕ್ಸಂಬರ್ಗ್ ಅಗ್ರಸ್ಥಾನ

ಕೊವಿಡ್-19 ತಪಾಸಣೆಯಲ್ಲಿ ಲಕ್ಸಂಬರ್ಗ್ ಅಗ್ರಸ್ಥಾನ

ಕೊರೊನಾವೈರಸ್ ಸೋಂಕಿತರ ತಪಾಸಣೆಯಲ್ಲಿ ಲಕ್ಸಂಬರ್ಗ್ ರಾಷ್ಟ್ರವು ಅಗ್ರಸ್ಥಾನದಲ್ಲಿದೆ. ದೇಶದಲ್ಲಿ ಇರುವುದೇ 626924 ಜನಂಖ್ಯೆ. ಇಷ್ಟರದಲ್ಲಿ ಈಗಾಗಲೇ 613923 ಜನರನ್ನು ಕೊವಿಡ್-19 ಸೋಂಕು ತಪಾಸಣೆಗೆ ಒಳಪಡಿಸಲಾಗಿದೆ. ಅಂದರೆ 10 ಲಕ್ಷದ ಅಂಕಿ-ಸಂಖ್ಯೆಯಲ್ಲಿ 979262 ಜನರಿಗೆ ಸೋಂಕು ತಪಾಸಣೆ ಮಾಡಲಾಗಿದೆ. ಒಟ್ಟು 7007 ಮಂದಿಗೆ ಕೊವಿಡ್-19 ಸೋಂಕು ಪತ್ತೆಯಾಗಿದ್ದು, ಮಹಾಮಾರಿಗೆ ರಾಷ್ಟ್ರದಲ್ಲಿ 118 ಜನರು ಪ್ರಾಣ ಬಿಟ್ಟಿದ್ದಾರೆ. 5623 ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದು, ದೇಶದಲ್ಲಿ 1266 ಸಕ್ರಿಯ ಪ್ರಕರಣಗಳಿವೆ.

ಮೊನ್ಯಾಕೋ ರಾಷ್ಟ್ರಕ್ಕೆ 2ನೇ ಸ್ಥಾನ

ಮೊನ್ಯಾಕೋ ರಾಷ್ಟ್ರಕ್ಕೆ 2ನೇ ಸ್ಥಾನ

ಮೊನ್ಯಾಕೋ. ಇದು ಹೇಳಿಕೊಳ್ಳುವಷ್ಟು ದೊಡ್ಡ ದೇಶವೇನಲ್ಲ. ಆದರೆ ಕೊರೊನಾವೈರಸ್ ಸೋಂಕಿನ ವಿರುದ್ಧ ಇಲ್ಲಿನ ಸರ್ಕಾರ ತೆಗೆದುಕೊಂಡ ಕ್ರಮವನ್ನು ಮಾತ್ರ ಹೇಳಲೇಬೇಕು. ಏಕೆಂದರೆ ಈ ದೇಶದಲ್ಲಿನ ಜನಸಂಖ್ಯೆ ಕೇವಲ 39269. ಈ ಪೈಕಿ 38209 ಜನರನ್ನು ಈಗಾಗಲೇ ಕೊವಿಡ್-19 ಸೋಂಕಿನ ತಪಾಸಣೆಗೊಳಪಡಿಸಲಾಗಿದೆ. ಎಂದರೆ 10 ಲಕ್ಷದ ಪ್ರಮಾಣದಲ್ಲಿ 9,73,007ರಷ್ಟು ಜನರನ್ನು ತಪಾಸಣೆ ಮಾಡಲಾಗಿದೆ. ದೇಶದಲ್ಲಿ 125 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ನಾಲ್ವರು ಪ್ರಾಣ ಬಿಟ್ಟಿದ್ದಾರೆ. 105 ಸೋಂಕಿತರು ಗುಣಮುಖರಾಗಿದ್ದು, ದೇಶದಲ್ಲಿ 16 ಸಕ್ರಿಯ ಪ್ರಕರಣಗಳಿವೆ.

ಫೇರೋ ದ್ವೀಪಗಳಲ್ಲಿ ಒಂದೇ ಒಂದು ಸಾವಾಗಿಲ್ಲ

ಫೇರೋ ದ್ವೀಪಗಳಲ್ಲಿ ಒಂದೇ ಒಂದು ಸಾವಾಗಿಲ್ಲ

ಫೇರೋ ದ್ವೀಪಗಳು ಕೊರೊನಾವೈರಸ್ ಸೋಂಕಿನ ತಪಾಸಣೆಯಲ್ಲಿ 3ನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ದೇಶದ ಜನಸಂಖ್ಯೆಯೇ 48881ರಷ್ಟಿದ್ದು, ಈ ಪೈಕಿ 41459 ಜನರನ್ನು ಕೊವಿಡ್-19 ಸೋಂಕು ತಪಾಸಣೆಗೆ ಒಳಪಡಿಸಲಾಗಿದೆ. ಫೇರೋ ದ್ವೀಪಗಳಲ್ಲಿ 241 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, 192 ಸೋಂಕಿತರು ಗುಣಮುಖರಾಗಿದ್ದಾರೆ. 49 ಸಕ್ರಿಯ ಪ್ರಕರಣಗಳಿದ್ದು, ಒಬ್ಬರೇ ಒಬ್ಬರು ಮಹಾಮಾರಿಗೆ ಪ್ರಾಣ ಬಿಟ್ಟಿಲ್ಲ.

ನಾಲ್ಕನೇ ಸ್ಥಾನದಲ್ಲಿ ಗುರುತಿಸಿಕೊಂಡ ಗಿಬ್ರಾಲ್ತರ್

ನಾಲ್ಕನೇ ಸ್ಥಾನದಲ್ಲಿ ಗುರುತಿಸಿಕೊಂಡ ಗಿಬ್ರಾಲ್ತರ್

ಕೊರೊನಾವೈರಸ್ ಸೋಂಕು ಕಾಣಿಸಿಕೊಂಡು ಎಂಟು ತಿಂಗಳೇ ಕಳೆದಿವೆ. ಗಿಬ್ರಾಲ್ತರ್ ರಾಷ್ಟ್ರದಲ್ಲಿ ಒಬ್ಬರೇ ಒಬ್ಬರು ಪ್ರಾಣ ಬಿಟ್ಟಿರಲಿಲ್ಲ. ಗುರುವಾರ ಮಹಾಮಾರಿಗೆ ಮೊದಲ ಬಲಿಯಾಗಿದೆ. 33690 ಜನಸಂಖ್ಯೆ ಹೊಂದಿರುವ ಗಿಬ್ರಾಲ್ತರ್ ನಲ್ಲಿ 23063 ಜನರನ್ನು ಕೊವಿಡ್-19 ತಪಾಸಣೆಗೆ ಒಳಪಡಿಸಲಾಗಿದೆ. ಗಿಬ್ರಾಲ್ತರ್ ನಲ್ಲಿ ಒಟ್ಟು 190 ಮಂದಿಗೆ ಸೋಂಕು ಪತ್ತೆಯಾಗಿದ್ದು, ಈ ಪೈಕಿ 184 ಸೋಂಕಿತರು ಗುಣಮುಖರಾಗಿದ್ದಾರೆ. ಗಿಬ್ರಾಲ್ತರ್ ನಲ್ಲಿ 6 ಸಕ್ರಿಯ ಪ್ರಕರಣಗಳಾಗಿವೆ.

ಯುಎಇನಲ್ಲಿ 5 ಲಕ್ಷ ಜನರಿಗೆ ಕೊವಿಡ್-19 ತಪಾಸಣೆ

ಯುಎಇನಲ್ಲಿ 5 ಲಕ್ಷ ಜನರಿಗೆ ಕೊವಿಡ್-19 ತಪಾಸಣೆ

ಯುನೈಟೆಡ್ ಅರಬ್ ಎಮರೇಟ್ಸ್ ನಲ್ಲಿ ಒಟ್ಟು ಜನಸಂಖ್ಯೆ ಇರುವುದೇ 99,01,752. ಈ ಪೈಕಿ 52,62,658 ಜನರನ್ನು ಕೊರೊನಾವೈರಸ್ ಸೋಂಕಿನ ತಪಾಸಣೆಗೆ ಒಳಪಡಿಸಲಾಗಿದ್ದು, ದೇಶದಲ್ಲಿ ಇದುವರೆಗೂ 61006 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಮಹಾಮಾರಿಗೆ 353 ಜನರು ಪ್ರಾಣ ಬಿಟ್ಟಿದ್ದು, 55385 ಸೋಂಕಿತರು ಗುಣಮುಖರಾಗಿದ್ದಾರೆ. ದೇಶದಲ್ಲಿ 5868 ಸಕ್ರಿಯ ಪ್ರಕರಣಗಳಿವೆ.

English summary
Here Is The Lost Of Top 5 Highest Covid-19 Testing Conducted Countries In The World. Take A Look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X