• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟೋಂಗಾ ಸ್ಫೋಟ: ನೂರಾರು ಹಿರೋಷಿಮಾ ಬಾಂಬ್ ಸ್ಪೋಟಕ್ಕೆ ಸಮ: ನಾಸಾ

|
Google Oneindia Kannada News

ನುಕುಅಲೋಫಾ, ಟೊಂಗಾ, ಜನವರಿ 24: ಇತ್ತೀಚಿಗಷ್ಟೆ ಪೆಸಿಫಿಕ್ ಸಾಗರದಾಳದಲ್ಲಿ ಸಂಭವಿಸಿದ್ದ ಜ್ವಾಲಾಮುಖಿ ಸ್ಫೋಟದ ತೀವ್ರತೆಯ ಬಗ್ಗೆ ನಾಸಾ ವಿಜ್ಞಾನಿಗಳು ಭಯಾನಕ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಟೋಂಗಾ ಜ್ವಾಲಾಮುಖಿ ಸ್ಫೋಟ ಆಗಸ್ಟ್ 1945 ರಲ್ಲಿ ಜಪಾನಿನ ನಗರವಾದ ಹಿರೋಷಿಮಾದ ಮೇಲೆ US ಪರಮಾಣು ಬಾಂಬ್ ಸ್ಪೋಟಕ್ಕಿಂತ ನೂರಾರು ಪಟ್ಟು ಪ್ರಬಲವಾಗಿದೆ ಎಂದು NASA ಹೇಳಿದೆ.

ಪೆಸಿಫಿಕ್ ಸಾಗರದ ಟೊಂಗಾ ಬಳಿ ಸಾಗರದಾಳದಲ್ಲಿ ಜನವರಿ 15ರಂದು ಜ್ವಾಲಾಮುಖಿ ಸ್ಫೋಟಗೊಂಡಿತ್ತು. ಭಾರೀ ಸ್ಪೋಟದಿಂದ 20 ಕಿಲೋಮೀಟರ್ ಎತ್ತರಕ್ಕೆ ಬೂದಿ ಹಾರಿ, ಆಕಾಶವನ್ನು ಬೂದು ಮೋಡಗಳನ್ನಾಗಿಸಿತ್ತು. ಸ್ಪೋಟದ ತೀವ್ರತೆ ಎಷ್ಟರ ಮಟ್ಟಿಗೆ ಇತ್ತೆಂದರೆ ಸ್ಪೋಟಗೊಂಡ ಸ್ಥಳದಿಂದ ಸುಮಾರು 800 ಕಿ.ಮಿ ದೂರದಲ್ಲಿರುವ ಫಿಜಿ ದ್ವೀಪದಲ್ಲೂ ಸ್ಪೋಟದ ಶಬ್ದ ಕೇಳಿ ಬಂದಿದೆ. ಸುನಾಮಿ ಎಚ್ಚರಿಕೆಯನ್ನು ನೀಡಲಾಗಿತ್ತು. ಹಲವಾರು ಉಪಗ್ರಹಗಳು ಜ್ವಾಲಾಮುಖಿ ಸ್ಫೋಟವನ್ನು ಚಿತ್ರೀಕರಿಸಿವೆ. ಹಿಮವಾರಿ ಸ್ಯಾಟಲೈಟ್ ಚಿತ್ರೀಕರಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕರಾವಳಿ ಪ್ರದೇಶದ ನಿವಾಸಿಗಳು ತಮ್ಮ ಮನೆಗಳನ್ನು ತೊರೆದು ಎತ್ತರದ ಪ್ರದೇಶಗಳಿಗೆ ತಲುಪಲು ಹಲವು ದೇಶಗಳಲ್ಲಿ ಎಚ್ಚರಿಕೆ ನೀಡಲಾಗಿತ್ತು.

ಈ ಸ್ಫೋಟದಿಂದ ಬಿಡುಗಡೆಯಾದ ಶಕ್ತಿಯ ಪ್ರಮಾಣ ಐದರಿಂದ 30 ಮೆಗಾಟನ್‌ಗಳ (ಐದು ರಿಂದ 30 ಮಿಲಿಯನ್ ಟನ್‌ಗಳು) ಟಿಎನ್‌ಟಿಗೆ ಸಮನಾಗಿದೆ ಎಂದು ನಾಸಾ ವಿಜ್ಞಾನಿ ಜಿಮ್ ಗಾರ್ವಿನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜೊತೆಗೆ ಆಗಸ್ಟ್ 1945 ರಲ್ಲಿ ಜಪಾನಿನ ನಗರವಾದ ಹಿರೋಷಿಮಾದ ಮೇಲೆ US ಪರಮಾಣು ಬಾಂಬ್ ಸ್ಪೋಟಕ್ಕಿಂತ ನೂರಾರು ಪಟ್ಟು ಪ್ರಬಲವಾಗಿದೆ ಎಂದು NASA ಹೇಳಿದೆ.

ಎಲ್ಲೆಡೆ ಆವರಿಸಿದ ವಿಷಕಾರಿ ಬೂದಿ

ಮತ್ತೊಂದು ಭಯಾನಕ ವಿಚಾರ ಅಂದರೆ ಟೊಂಗಾ ಜ್ವಾಲಾಮುಖಿ ಸ್ಪೋಟವು ಟೊಂಗಾ ರಾಜಧಾನಿ ನುಕುಅಲೋಫಾದಿಂದ ಉತ್ತರಕ್ಕೆ 65 ಕಿಲೋಮೀಟರ್ (41 ಮೈಲುಗಳು) ದೂರದಲ್ಲಿರುವ ದ್ವೀಪದ ವಾತಾವರಣವನ್ನೇ ಬದಲಾಯಿಸಿಬಿಟ್ಟಿದೆ. ಸ್ಪೋಟದಿಂದಾಗಿ ಸುಮಾರು 100,000 ದ್ವೀಪ ಸಾಮ್ರಾಜ್ಯವನ್ನು ವಿಷಕಾರಿ ಬೂದಿಯಿಂದ ಆವರಿಸಿದೆ. ಕುಡಿಯುವ ನೀರು ವಿಷಪೂರಿತವಾಗಿದೆ. ಜೊತೆಗೆ ಬೆಳೆಗಳನ್ನು ನಾಶವಾಗಿವೆ ಮತ್ತು ಎರಡು ಹಳ್ಳಿಗಳನ್ನು ಸಂಪೂರ್ಣವಾಗಿ ನಾಶಗೊಂಡಿವೆ.

ಮಾತ್ರವಲ್ಲದೆ ಈ ಸ್ಪೋಟ ಟೊಂಗಾದಲ್ಲಿ ಮೂರು ಜೀವಗಳನ್ನು ಬಲಿತೆಗೆದುಕೊಂಡಿದೆ. ಸ್ಪೋಟದ ತೀವ್ರತೆಗೆ ದಕ್ಷಿಣ ಅಮೆರಿಕಾದ ಪೆರುವಿನ ಸಮುದ್ರತೀರದಲ್ಲಿ ಸುನಾಮಿ ಸಂಭವಿಸಿ ಇಬ್ಬರು ಮುಳುಗಿ ಸಾವನ್ನಪ್ಪಿದರು. ಲಿಮಾ ಬಳಿ ತೈಲ ಟ್ಯಾಂಕರ್‌ಗೆ ಅಲೆಗಳು ಅಪ್ಪಳಿಸಿ, ಕರಾವಳಿಯುದ್ದಕ್ಕೂ ದೊಡ್ಡ ವಿಷಪೂರಿತ ವಾತಾವರಣ ನಿರ್ಮಾಣವಾಗಿದೆ. ಇದನ್ನು ಪೆರುವಿಯನ್ ಅಧಿಕಾರಿಗಳು ಪರಿಸರ ವಿಪತ್ತು ಎಂದು ಘೋಷಿಸಿದ್ದಾರೆ.

ಇನ್ನೂ ಟೊಂಗಾದಲ್ಲಿ ದೂರದ ದ್ವೀಪಗಳಿಗೆ ಸಂಪರ್ಕ ಕಡಿತಗೊಂಡಿದ್ದರಿಂದ ವಿನಾಶದ ಪ್ರಮಾಣವು ಅಸ್ಪಷ್ಟವಾಗಿದೆ. ಆದರೂ ನುಕುಅಲೋಫಾ ಮೂಲದ ಪತ್ರಕರ್ತೆ ಮೇರಿ ಲಿನ್ ಫೋನುವಾ ಅವರು ಸ್ಥಳೀಯರು ಇನ್ನೂ ದುರಂತದ ಪ್ರಮಾಣವನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಿದ್ದಾರೆ. 'ಇದು ಹಿಂದೆಂದೂ ಕಾಣದ ಸ್ಪೋಟ. ಇದರಿಂದ ನಾವು ಈಗಲೂ ಹೊರಬರಲಾಗುತ್ತಿಲ್ಲ. ಸ್ಫೋಟದ ಆಘಾತವು ನಮ್ಮ ಮೆದುಳನ್ನು ಅಸ್ತವ್ಯಸ್ತಗೊಳಿಸಿದೆ. ನಾವು ಈಗ ಸಾಮಾನ್ಯ ಸ್ಥಿತಿಗೆ ಮರಳಲು ಪ್ರಾರಂಭಿಸುತ್ತಿದ್ದೇವೆ' ಎಂದು ಅವರು ಎಎಫ್‌ಪಿಗೆ ತಿಳಿಸಿದರು.

ಫೋನುವಾ ಹೇಳುವಂತೆ, ವಿಷಕಾರಿ ಬೂದಿ ತುಂಬಿದ ಗಾಳಿಯಿಂದ ಬದುಕಲು ಕಷ್ಟವಾಗುತ್ತಿದೆ. ಮಾತ್ರವಲ್ಲದೆ ಇದು ದೀರ್ಘಾವಧಿಯ ಆರೋಗ್ಯ ಸಮಸ್ಯೆಗಳ ಬಗ್ಗೆ ಕಳವಳವನ್ನು ಉಂಟುಮಾಡುತ್ತದೆ. ಕಣ್ಣುಗಳು ಉರಿಯುತ್ತವೆ. ಬಾಯಿಯಲ್ಲಿ ಹುಣ್ಣುಗಳಾಗುತ್ತಿವೆ. ಎಲ್ಲರ ಬೆರಳಿನ ಉಗುರುಗಳು ಕಪ್ಪಾಗುತ್ತಿವೆ. ನಮ್ಮನ್ನು ಇದು ರೋಗಗ್ರಸ್ತರನ್ನಾಗಿ ಮಾಡುತ್ತಿದೆ ಎಂದಿದ್ದಾರೆ.

ಇನ್ನೂ ಜಪಾನೀಸ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯನ್ ರಕ್ಷಣಾ ಪಡೆಗಳು ಟೊಂಗಾವನ್ನು ಕೊರೊನಾ ವೈರಸ್-ಮುಕ್ತವಾಗಿಸಲು ಕಟ್ಟುನಿಟ್ಟಾದ ಕೋವಿಡ್ -19 ಪ್ರೋಟೋಕಾಲ್‌ಗಳನ್ನು ಜಾರಿಗೊಳಿಸಿದೆ. ವಿಶೇಷವಾಗಿ ಜನ ನೀರೊಳಗೆ ಪ್ರವೇಶಿಸದಂತೆ ಎಚ್ಚರಿಕೆ ನೀಡಲಾಗಿದೆ.

English summary
The Tonga volcanic eruption unleashed explosive forces that dwarfed the power of the Hiroshima atomic bomb, NASA scientists have said, as survivors on Monday described how the devastating Pacific blast "messed up our brains".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X