ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ: ದೀಪಾವಳಿ ಸಂಭ್ರಮದಲ್ಲಿ ಬ್ರಿಟನ್ ಪ್ರಧಾನಿ

By Mahesh
|
Google Oneindia Kannada News

ಬೆಂಗಳೂರು, ನ.5: ಬೆಳಕಿನ ಹಬ್ಬ ದೀಪಾವಳಿ ಭಾರತದಲ್ಲಷ್ಟೇ ಅಲ್ಲದೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲೂ ತನ್ನ ಪ್ರಭಾವಳಿಯನ್ನು ಹರಡುತ್ತಿದೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ದೀಪಾವಳಿ ಆಚರಣೆ ಶುರು ಮಾಡಿಕೊಂಡ ಮೇಲೆ ಇದೀಗ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಕೂಡಾ ದೀಪಾವಳಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಭಾರತದಲ್ಲಿ ಸಾಂಪ್ರದಾಯಿಕ ಶೈಲಿಯ ಹಣತೆಗಳ ಜತೆಗೆ ಆಧುನಿಕ ಶೈಲಿಯ ಗೂಡುದೀಪಗಳು ಈ ಬಾರಿ ಹಬ್ಬದ ವಿಶೇಷವಾಗಿತ್ತು. ಗ್ಲಾಸ್ ಪೇಪರ್, ಬಟ್ಟೆ , ಪ್ಲಾಸ್ಟಿಕ್, ಫೈಬರ್ ಮುಂತಾದ ವಸ್ತುಗಳಿಂದ ತಯಾಸಲಾಗಿರುವ ಗೂಡುದೀಪಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ಬೆಂಗಳೂರಿನಲ್ಲಿ ಪಟಾಕಿ ಖರೀದಿ ಶೇ 20-30 ರಷ್ಟು ಇಳಿಮುಖ ಕಂಡಿದೆ ಅದರೆ, ಪಟಾಕಿ ಹೊಡೆಯುವವರು ಸಮಯದ ಮಿತಿ ಇಲ್ಲದ್ದಂತೆ ಪಟಾಕಿ ಸಿಡಿಸಿದ್ದಾರೆ.
ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ದೀಪಾವಳಿ ಸಂಭ್ರಮಾಚರಣೆ ಚಿತ್ರಗಳು ಇಲ್ಲಿವೆ ತಪ್ಪದೇ ನೋಡಿ

ಫಲ ಪುಷ್ಪ ಅರ್ಪಣೆ

ಫಲ ಪುಷ್ಪ ಅರ್ಪಣೆ

ಲಂಡನ್ : ಶ್ರೀನಾರಾಯಣ ಮಂದಿರಕ್ಕೆ ಭೇಟಿ ನೀಡಿದ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ದೇವರಿಗೆ ಫಲ ಪುಷ್ಪ ಅರ್ಪಿಸಿದರು.

ದೇವರಿಗೆ ಆರತಿ

ದೇವರಿಗೆ ಆರತಿ

ಲಂಡನ್ : ಶ್ರೀನಾರಾಯಣ ಮಂದಿರಕ್ಕೆ ಭೇಟಿ ನೀಡಿ ದೀಪಾವಳಿ ಸಂಭ್ರಮಾಚರಣೆಯಲ್ಲಿ ತೊಡಗಿದ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ದೇವರಿಗೆ ಆರತಿ ಬೆಳಗಿದರು.

ಪ್ರಧಾನಿ ಪ್ರದಕ್ಷಿಣೆ

ಪ್ರಧಾನಿ ಪ್ರದಕ್ಷಿಣೆ

ಡೇವಿಡ್ ಕ್ಯಾಮರೂನ್ ದೇಗುಲ ಟ್ರಸ್ಟಿ ವಿನು ಭಟ್ಟೆಸಾ ಜತೆ ಸಮಂತಾ ಕ್ಯಾಮರೂನ್, ರೀನಾ ಅಮಿನ್ ಅವರು ದೇಗುಲ ಪ್ರದಕ್ಷಿಣೆಯಲ್ಲಿ ತೊಡಗಿದ್ದಾರೆ.

ಪ್ರಧಾನಿಗೆ ತಿಲಕ

ಪ್ರಧಾನಿಗೆ ತಿಲಕ

ಲಂಡನ್ : ಶ್ರೀನಾರಾಯಣ ಮಂದಿರಕ್ಕೆ ಭೇಟಿ ನೀಡಿ ದೀಪಾವಳಿ ಸಂಭ್ರಮಾಚರಣೆಗೆ ಬಂದ ಡೇವಿಡ್ ಅವರಿಗೆ ತಿಲಕ ಇಟ್ಟು ಸ್ವಾಗತಿಸಲಾಯಿತು

ಪ್ರಧಾನಿ ಪತ್ನಿ

ಪ್ರಧಾನಿ ಪತ್ನಿ

ಲಂಡನ್ : ಶ್ರೀನಾರಾಯಣ ಮಂದಿರಕ್ಕೆ ಭೇಟಿ ನೀಡಿ ದೀಪಾವಳಿ ಸಂಭ್ರಮಾಚರಣೆಗೆ ಬಂದ ಡೇವಿಡ್ ಅವರ ಜತೆಗೂಡಿದ ಪತ್ನಿ ಸಮಂತಾ

ನಮಸ್ತೆ

ನಮಸ್ತೆ

ಲಂಡನ್ : ಶ್ರೀನಾರಾಯಣ ಮಂದಿರಕ್ಕೆ ಭೇಟಿ ನೀಡಿದ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್

English summary
Todays news stories in pics : London : Britain's Prime Minister David Cameron makes an offering of fruit to the Hindu temple Shri Swaminarayan Mandir in London, during Diwali. Diwali, the Hindu Festival of Lights, celebrates the triumph of good over evil. and many more pics
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X