• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿತ್ರಸುದ್ದಿ : ಜಗತ್ತಿನ ಜನಪ್ರಿಯ ಭೀಕರ ಗನ್ ಜನಕ ಇನ್ನಿಲ್ಲ

By Mahesh
|

ಬೆಂಗಳೂರು, ಡಿ.24: ವಿಶ್ವದ ಅತ್ಯಂತ ಜನಪ್ರಿಯ ಹಾಗೂ ಹೆಚ್ಚು ಮಾರಾಟವಾದ ಅತ್ಯಂತ ಭೀಕರ ಗನ್ 'ಎ.ಕೆ.47'ನ ಸಂಶೋಧಕ, ವಿನ್ಯಾಸಗಾರ ರಷ್ಯಾದ ಮಿಖಾಯಿಲ್ ಕಲಾಶ್ನಿಕೋವ್ (94) ನಿಧನರಾಗಿದ್ದಾರೆ. ಕಳೆದ ಕೆಲ ತಿಂಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಕಲಾಶ್ನಿಕೋವ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫ‌ಲಕಾರಿಯಾಗದೆ ಸೋಮವಾರ ಅವರು ಸಾವನ್ನಪ್ಪಿದ್ದಾರೆ ಎಂದು ಪ್ರಕಟಿಸಲಾಗಿದೆ.

ಕೃಷಿ ಸಂಬಂಧಿ ಉಪಕರಣಗಳನ್ನು ತಯಾರಿಸುವದಲ್ಲಿ ಆಸಕ್ತಿ ಹೊಂದಿದ್ದ ಕಲಾಶ್ನಿಕೋವ್, ಆಕಸ್ಮಿಕವಾಗಿ ಈ ಭೀಕರ ಆಯುಧ ಕಂಡು ಹಿಡಿದಿದ್ದಂತೆ. 1946ರಲ್ಲಿ ಮೊದಲ ಬಾರಿಗೆ ಈ ಗನ್ ಗಳ ಅವಿಷ್ಕಾರವಾಗಿದ್ದು, ನಂತರದ ದಶಕಗಳಲ್ಲಿ ಇವು ಜಗತ್ತಿನಾದ್ಯಂತ ಜನಪ್ರಿಯಗೊಂಡಿತು. ಇದುವರೆಗೆ ಅಧಿಕೃತವಾಗಿಯೇ 10 ಕೋಟಿಗೂ ಹೆಚ್ಚು ಎ.ಕೆ.47 ಸರಣಿಯ ಗನ್ ಗಳು ಮಾರಾಟವಾಗಿವೆ

ಉಳಿದಂತೆ ಇಂದಿನ ಚಿತ್ರಗಳಲ್ಲಿ ಇತ್ತೀಚೆಗೆ ನಿಧನರಾದ ಮೈಸೂರು ಮಹಾರಾಜ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ವೈಕುಂಠ ಸಮಾರಾಧನೆ ಚಿತ್ರ, ಚೀನಾದವರ ಸಾಹಸ ಭಂಗಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಮ ವಾತಾವರಣ, ಅಗ್ನಿ ಕ್ಷಿಪಣಿ ಯಶಸ್ವಿ, ಸಿನಿ ಕಲಾವಿದರಿಗೂ ವಿಮೆ ಸೌಲಭ್ಯ ಮುಂತಾದ ಚಿತ್ರಗಳಿವೆ...

ಎಕೆ 47 ಜನಕ ಇನ್ನಿಲ್ಲ

ಎಕೆ 47 ಜನಕ ಇನ್ನಿಲ್ಲ

ಜರ್ಮನಿಯ ಈ ಹಿಂದೆ ನಡೆದಿದ್ದ Kalashnikov - legend and curse of a weapon ಪ್ರದರ್ಶನ ಸಂದರ್ಭದಲ್ಲಿ ಕಲಾಶ್ನಿಕೋವ್ ಕಂಡು ಬಂದಿದ್ದು ಹೀಗೆ

ಮೈಸೂರಿನಲ್ಲಿ

ಮೈಸೂರಿನಲ್ಲಿ

ಸೋಮವಾರ(ಡಿ.23) ಮಹಾರಾಜ ಶ್ರೀಕಂಠದತ್ತ ಒಡೆಯರ್ ಅವರ ವೈಕುಂಠ ಸಮಾರಾಧನೆ ಸಾಂಗವಾಗಿ ನೆರವೇರಿತು. ವಿವಿಧ ದೇಗುಲಗಳಿಂದ ಬಂದಿದ್ದ ಪ್ರಸಾದವನ್ನು ಮಹಾರಾಜರ ಕುಟುಂಬಕ್ಕೆ ಹಂಚಲಾಯಿತು. ಸಮಾರಂಭಕ್ಕೆ ಮಾಜಿ ಪ್ರಧಾನಿ ದೇವೇಗೌಡ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡಿದ್ದರು.

ಕೋಲ್ಕತ್ತಾದಲ್ಲಿ

ಕೋಲ್ಕತ್ತಾದಲ್ಲಿ

ಕ್ರಿಸ್ ಮಸ್ ಹಾಗೂ ಹೊಸ ವರ್ಷಾಚರಣೆ ಅಂಗವಾಗಿ ಚೀನಿ ಕಲಾವಿದರು ನೀಡುತ್ತಿರುವ ಪ್ರದರ್ಶನ PTI Photo by Swapan Mahapatra

ಇದು ರಾಷ್ಟ್ರೀಯ ಹೆದ್ದಾರಿ

ಇದು ರಾಷ್ಟ್ರೀಯ ಹೆದ್ದಾರಿ

ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಖ್ವಾಜಿಗುಂಡ್ ಬಳಿ ಜಮ್ಮು ಕಡೆಗೆ ಹೊರಟ ಟ್ರಕ್ ಗಳು ಕಂಡು ಬಂದಿದ್ದು ಹೀಗೆ

ಅಗ್ನಿ 3 ಪರೀಕ್ಷೆ

ಅಗ್ನಿ 3 ಪರೀಕ್ಷೆ

ವೀಲರ್ ದ್ವೀಪ: ಒಡಿಶಾ ಕರಾವಳಿಯಲ್ಲಿ ಅಗ್ನಿ 3 ಕ್ಷಿಪಣಿ ಯಶಸ್ವಿಯಾಗಿ ಉಡಾವಣೆಗೊಂಡು ಪರೀಕ್ಷೆಯಲ್ಲಿ ಪಾಸ್ ಆಗಿದೆ.

ಸಿನಿ ಕಲಾವಿದರಿಗೆ ವಿಮೆ

ಸಿನಿ ಕಲಾವಿದರಿಗೆ ವಿಮೆ

ಎಂಎನ್ ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಹಾಗೂ ಬಾಲಿವುಡ್ ನಟ ಅಮಿತಾ ಬಚ್ಚನ್, ನಟ ಸಚಿನ್ ಅವರು ಸಿನಿ ಕಲಾವಿದರಿಗೆ ವಿಮೆ ಸೌಲಭ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಹಾರಾಷ್ಟ್ರ ನವನಿರ್ಮಾನ ಚಿತ್ರಪತ್ ಸೇನಾ ಈ ಸೌಲಭ್ಯವನ್ನು ಆರಂಭಿಸಿದೆ. PTI Photo by Mitesh Bhuvad

English summary
Todays news stories in pics : Mikhail Kalashnikov, whose work as a weapons designer for the Soviet Union is immortalized in the name of the world’s most popular firearm, has died at the age of 94 and many more pics
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more