• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿತ್ರಸುದ್ದಿ : ಜನಪ್ರಿಯ ಬೆತ್ತಲೆ ತಾರೆ ಜಿಪ್ಸಿ ಮದುವೆ

By Mahesh
|

ಬೆಂಗಳೂರು, ಡಿ.20: ಸ್ಯಾನ್ ಫ್ರಾನಿಸ್ಕೋದ ಜನಪ್ರಿಯ ಬೆತ್ತಲೆ ಕಾರ್ಯಕರ್ತೆ ಜಿಪ್ಸಿ ಟಾಬ್ ಅವರು ವಿಶಿಷ್ಟವಾಗಿ ಮದುವೆಯಾಗಿದ್ದಾರೆ. ಜೇಮ್ಸ್ ಸ್ಮಿತ್ ಅವರಿಗೆ ನಡು ರಸ್ತೆಯಲ್ಲಿ ಬೆತ್ತಲೆಯಾಗಿ ನಿಂತು ಉಂಗುರ ತೊಡಿಸಿದ್ದಾರೆ.

ಗುರುವಾರ ಸ್ಯಾನ್ ಫ್ರಾನ್ಸಿಸ್ಕೋದ ಸಿಟಿ ಹಾಲ್ ಬಳಿ ಹೀಗೊಂದು ಬೆತ್ತಲೆ ಮದುವೆಗೆ ನೂರಾರು ಮಂದಿ ಸಾಕ್ಷಿಯಾದರು. ಬೆತ್ತಲಾಗಿ ಬೆದರಬೇಡಿ ಎಂದು ಘೋಷಣೆ ಕೂಗಿದ ಜಿಪ್ಸಿ ನನಗೆ ಇಡೀ ಸ್ಯಾನ್ ಫ್ರಾನ್ಸಿಸ್ಕೋ ಜನತೆ ಬೆಂಬಲ ನೀಡುತ್ತದೆ ಎಂಬ ನಂಬಿಕೆ ಇದೆ ಎಂದರು. ಬೆತ್ತಲೆ ದಂಪತಿಗಳ ಮದುವೆಗೆ ಸಾಕ್ಷಿಯಾಗಿ, ಭದ್ರತೆ ಒದಗಿಸಿದ್ದ ಪೊಲೀಸರು ಮದುವೆ ನಂತರ ಇಬ್ಬರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದ್ದಾರೆ. ಮೂರು ಮಕ್ಕಳ ತಾಯಿಯಾಗಿರುವ ಜಿಪ್ಸಿ ಅವರು ಹಲವಾರು ಟಿವಿ ಸಂದರ್ಶನಗಳಲ್ಲೂ ಬೆತ್ತಲೆಯಾಗಿ ಕಾಣಿಸಿಕೊಂಡು ಸುದ್ದಿ ಮಾಡಿದ್ದಾರೆ.

ಉಳಿದಂತೆ ಇಂದಿನ ಚಿತ್ರಗಳಲ್ಲಿ ಕ್ರೀಡಾಲೋಕದ ಸುದ್ದಿಗಳು ತುಂಬಿವೆ. ಸಚಿನ್ ದಾಖಲೆ ಮುರಿದ ಶಿವನಾರಾಯಣ್ ಚಂದ್ರಪಾಲ್, ರಾಂಚಿಯಲ್ಲಿ ವಾಹನಗಳನ್ನು ನಜ್ಜುಗುಜ್ಜು ಮಾಡಿದ ಜನತೆ, ದಕ್ಷಿಣ ಆಫ್ರಿಕಾದಲ್ಲಿ ಟೀಂ ಇಂಡಿಯಾ ಟೆಸ್ಟ್ ಪಂದ್ಯದ ಚಿತ್ರಗಳು, ಮನಮೋಹಕ ನಗೆಯ ಚೆಲುವೆಯರ ಚಿತ್ರಗಳಿವೆ...

ಬೆತ್ತಲೆ ತಾರೆ ಜಿಪ್ಸಿ ಮದುವೆ

ಬೆತ್ತಲೆ ತಾರೆ ಜಿಪ್ಸಿ ಮದುವೆ

ಮೂರು ಮಕ್ಕಳ ತಾಯಿಯಾಗಿರುವ ಜಿಪ್ಸಿ ಅವರು ಹಲವಾರು ಟಿವಿ ಸಂದರ್ಶನಗಳಲ್ಲೂ ಬೆತ್ತಲೆಯಾಗಿ ಕಾಣಿಸಿಕೊಂಡು ಸುದ್ದಿ ಮಾಡಿದ್ದರು

ಚಂದ್ರಪಾಲ್ ದಾಖಲೆ

ಚಂದ್ರಪಾಲ್ ದಾಖಲೆ

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 29ನೇ ಟೆಸ್ಟ್ ಶತಕ ದಾಖಲಿಸಿದ ವೆಸ್ಟ್ ಇಂಡೀಸ್ ಬ್ಯಾಟ್ಸ್ ಮನ್ ಶಿವನಾರಾಯಣ್ ಚಂದ್ರಪಾಲ್ ಅವರು ಪಿಚ್ ಗೆ ಮುತ್ತಿಕ್ಕಿ ಸಂಭ್ರಮಿಸಿದರು. ಸಚಿನ್ ದಾಖಲೆ ಮುರಿದ ಚಂದ್ರಪಾಲ್ ಬ್ರಾಡ್ಮನ್ ದಾಖಲೆ ಸಮಗಟ್ಟಿದ್ದರು.

ರಾಂಚಿಯಲ್ಲಿ

ರಾಂಚಿಯಲ್ಲಿ

ಇತ್ತೀಚೆಗೆ ನಡೆದ ಅತ್ಯಾಚಾರ ಪ್ರಕರಣವೊಂದರ ಆರೋಪಿ ಬಂಧನಕ್ಕೆ ಆಗ್ರಹಿಸಿ ವಾಹನಗಳ ಗಾಜನ್ನು ಕುಟ್ಟಿ ಪುಡಿ ಮಾಡಿ ಪ್ರತಿಭಟನೆ ನಡೆಸಿದ ಆಕ್ರೋಶಿತ ಸಾರ್ವಜನಿಕರು

ಎಂದೂ ಮಾಸದ ನಗೆ

ಎಂದೂ ಮಾಸದ ನಗೆ

ಮುಂಬೈ : ನಟಿ ಐಶ್ವರ್ಯಾ ರೈ ಬಚ್ಚನ್ ಅವರು ಲಾರೆಯಲ್ ಪ್ಯಾರೀಸ್ ಕಾಜಲ್ Magique ಬಿಡುಗಡೆ ಸಮಾರಂಭದಲ್ಲಿ ಚೆಲ್ಲಿದ ನಗೆ. PTI Photo by Mitesh Bhuvad

ಮಾಧುರಿ ನಗೆ

ಮಾಧುರಿ ನಗೆ

ಮುಂಬೈನಲ್ಲಿ ದೇಡ್ ಇಷ್ಕಿಯಾ ಚಿತ್ರದ ಪ್ರಚಾರದಲ್ಲಿ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಹಾಗೂ ಹ್ಯೂಮಾ ಖುರೇಷಿ

ಜೋಹಾನ್ಸ್ ಬರ್ಗ್ ನಲ್ಲಿ

ಜೋಹಾನ್ಸ್ ಬರ್ಗ್ ನಲ್ಲಿ

ಭಾರತೀಯ ಬೌಲರ್ ಜಹೀರ್ ಖಾನ್ ಹಾಗೂ ವಿರಾಟ್ ಕೊಹ್ಲಿ ಅಪೀಲ್ ಮಾಡುತ್ತಿದ್ದಾರೆ. ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 36 ರನ್ ಗಳ ಮುನ್ನಡೆ ಪಡೆದಿದೆ.

English summary
Todays news stories in pics : Gypsy Taub, left, places a ring on the finger of Jaymz Smith, right, during their nude wedding outside City Hall Thursday, Dec. 19, 2013, in San Francisco. Taub, the face of San Francisco's nude rights movement, tied the knot outside City Hall and was later cited and released by police and many more pics
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X