• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಷ್ಯಾ ವಿಮಾನ ದುರಂತ ಭೀಕರ ಚಿತ್ರ, ಇನ್ನಷ್ಟು

By Mahesh
|

ಬೆಂಗಳೂರು, ನ.18: ರಷ್ಯಾ ವಿಮಾನ­ವೊಂದು ಭಾನುವಾರ ರಾತ್ರಿ ಅಪಘಾತ­ಕ್ಕೀಡಾಗಿ 50 ಮಂದಿ ಮೃತಪಟ್ಟಿರುವ ಸುದ್ದಿಯನ್ನು ಬೆಳಗ್ಗೆ ಇಲ್ಲಿ ಓದಿರುತ್ತೀರಿ. ಡೊಮೊಡೆ­ಡೊವೊ ನಿಲ್ದಾಣ­ದಿಂದ ಹೊರಟ ರಷ್ಯಾ ಏರ್ ಲೈನ್ಸ್ ನ ಬೋಯಿಂಗ್ 737 ದೇಶೀಯ ವಿಮಾ­ನವು ಟಾಟರ್ಸ್ತಾ­ನ ಗಣರಾಜ್ಯದ ರಾಜ­ಧಾನಿ ಕಜಾನ್ ನಿಲ್ದಾಣದಲ್ಲಿ ಭೂ­ಸ್ಪರ್ಶದ ವೇಳೆ ದುರಂತ ಸಂಭ­ವಿ­ಸಿದ್ದು, ದುರಂತದ ಚಿತ್ರಗಳು ಇಲ್ಲಿವೆ ತಪ್ಪದೇ ನೋಡಿ...

ವಿಮಾನದಲ್ಲಿ 44 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಇದ್ದರು ಎಂದು ರಷ್ಯಾ ತುರ್ತು ಪರಿಸ್ಥಿತಿ ಸಚಿ­ವಾ­ಲಯ ಪ್ರಕಟಿಸಿದೆ. ಸ್ಥಳೀಯ ಕಾಲಮಾನ ಸಂಜೆ 7.25ಕ್ಕೆ (ಭಾರತೀಯ ಕಾಲ­ಮಾನ ರಾತ್ರಿ 8.55ಕ್ಕೆ) ವಿಮಾನವು ರನ್‌ವೇಗೆ ಅಪ್ಪ­ಳಿಸಿ, ಸ್ಫೋಟಗೊಂಡ ನಂತರ ಬೆಂಕಿಗೆ ಆಹುತಿ­ಯಾಗಿದೆ ಎಂದು ರಷ್ಯಾ ತನಿಖಾ ಸಮಿತಿ ಹೇಳಿದೆ.

ರಷ್ಯಾದಲ್ಲಿ ದೇಶಿ ವಿಮಾನ ಸೇವೆಯ ಗುಣ­ಮಟ್ಟ ಹದಗೆಟ್ಟಿದೆ. ಇದ­ರಿಂದ ಆಡಳಿತಕ್ಕೆ ವಾಯುಯಾನ ಸುರ­ಕ್ಷತೆ ಪ್ರಮುಖ ಸಮಸ್ಯೆಯಾಗಿದೆ. ಎರಡು ದಶಕಗಳಿಂದ ಸಣ್ಣ ಏರ್ ­ಲೈನ್ಸ್ ಸಂಸ್ಥೆಗಳ ಸಂಖ್ಯೆ ಹೆಚ್ಚಾಗಿದ್ದು, ಆದರೆ ಅವು ನಿರ್ವ­ಹಣೆ ಕೊರತೆ ಹೊಂದಿವೆ ಮತ್ತು ಕಡಿಮೆ ಅನುಭವದ ಪೈಲಟ್ ­ಗಳನ್ನು ಬಳಸುತ್ತಿವೆ ಎಂಬ ಕೂಗೆದ್ದಿದೆ.

ಉಳಿದಂತೆ ಇಂದಿನ ಚಿತ್ರ ಸುದ್ದಿಯಲ್ಲಿ ಮುಂಬೈನ ಫ್ಯಾಷನ್ ಶೋ, ಜರ್ಮನಿಯ ಎಫ್ 1 ಚಾಲಕ ವೆಟ್ಟೆಲ್ ಸಂಭ್ರಮ, ಅಮೃತಸರದಲ್ಲಿ ಗುರು ನಾನಕ್ ಜಯಂತಿ, ಕೋಲ್ಕತ್ತಾದಲ್ಲಿ ಬೆಂಗಾಳಿ ಬೆಡಗಿಯರು, ಕೊಯಮತ್ತೂರು, ಮದುರೈ, ಶಬರಿಮಲೆಗಳಲ್ಲಿ ಧಾರ್ಮಿಕ ಆಚರಣೆ, ಬಿಗ್ ಬಾಸ್ ಮನೆಯಲ್ಲಿ ಕರೀನಾ ಕಮಾಲ್ ಮುಂತಾದ ಚಿತ್ರಗಳಿವೆ...

ವಿಮಾನ ದುರಂತ

ವಿಮಾನ ದುರಂತ

ರಷ್ಯಾ ಏರ್ ಲೈನ್ಸ್ ನ ಬೋಯಿಂಗ್ 737 ದೇಶೀಯ ವಿಮಾ­ನವು ಟಾಟರ್ಸ್ತಾ­ನ ಗಣರಾಜ್ಯದ ರಾಜ­ಧಾನಿ ಕಜಾನ್ ನಿಲ್ದಾಣದಲ್ಲಿ ಭೂ­ಸ್ಪರ್ಶದ ವೇಳೆ ದುರಂತ

ವಿಮಾನ ದುರಂತ ಚಿತ್ರ

ವಿಮಾನ ದುರಂತ ಚಿತ್ರ

ರಷ್ಯಾ ಏರ್ ಲೈನ್ಸ್ ನ ಬೋಯಿಂಗ್ 737 ದೇಶೀಯ ವಿಮಾ­ನವು ಟಾಟರ್ಸ್ತಾ­ನ ಗಣರಾಜ್ಯದ ರಾಜ­ಧಾನಿ ಕಜಾನ್ ನಿಲ್ದಾಣದಲ್ಲಿ ಭೂ­ಸ್ಪರ್ಶದ ವೇಳೆ ದುರಂತ

ತಮ್ಮವರಿಗಾಗಿ ಹುಡುಕಾಟ

ತಮ್ಮವರಿಗಾಗಿ ಹುಡುಕಾಟ

ರಷ್ಯಾ ಏರ್ ಲೈನ್ಸ್ ನ ಬೋಯಿಂಗ್ 737 ದೇಶೀಯ ವಿಮಾ­ನವು ಟಾಟರ್ಸ್ತಾ­ನ ಗಣರಾಜ್ಯದ ರಾಜ­ಧಾನಿ ಕಜಾನ್ ನಿಲ್ದಾಣದಲ್ಲಿ ಭೂ­ಸ್ಪರ್ಶದ ವೇಳೆ ದುರಂತ

ತುರ್ತು ವೈದ್ಯಕೀಯ ನೆರವು

ತುರ್ತು ವೈದ್ಯಕೀಯ ನೆರವು

ರಷ್ಯಾ ಏರ್ ಲೈನ್ಸ್ ನ ಬೋಯಿಂಗ್ 737 ದೇಶೀಯ ವಿಮಾ­ನವು ಟಾಟರ್ಸ್ತಾ­ನ ಗಣರಾಜ್ಯದ ರಾಜ­ಧಾನಿ ಕಜಾನ್ ನಿಲ್ದಾಣದಲ್ಲಿ ಭೂ­ಸ್ಪರ್ಶದ ವೇಳೆ ದುರಂತ

ಲೋನಾವಾಲದಲ್ಲಿ ಕರೀನಾ

ಲೋನಾವಾಲದಲ್ಲಿ ಕರೀನಾ

ಗೋರಿ ತೇರಾ ಪ್ಯಾರ್ ಮೇ ಚಿತ್ರ ಪ್ರಚಾರಕ್ಕಾಗಿ ಲೋನಾವಾಲದಲ್ಲಿರುವ ಬಿಗ್ ಬಾಸ್ ಮನೆಗೆ ಬಂದಿದ್ದ ನಟಿ ಕರೀನಾ ಕಪೂರ್ ಹಾಗೂ ಇಮ್ರಾನ್ ಖಾನ್

ಗುರ್ ಗಾಂವ್ ನಲ್ಲಿ

ಗುರ್ ಗಾಂವ್ ನಲ್ಲಿ

ಬಾಲಿವುಡ್ ನಟಿ ಚಿತ್ರಾಂಗದಾ ಸಿಂಗ್ ಇತ್ತೀಚಿಗೆ ನಡೆದ ಫ್ಯಾಷನ್ ಶೋವೊಂದರಲ್ಲಿ ಕಾಣಿಸಿಕೊಂಡಿದ್ದು ಹೀಗೆ

ಶಬರಿಮಲೆಯಲ್ಲಿ

ಶಬರಿಮಲೆಯಲ್ಲಿ

ಶಬರಿಮಲೆಯಲ್ಲಿ ಭಕ್ತರು ಮಾಲೆ ಧರಿಸಲು ಸರತಿ ಸಾಲಿನಲ್ಲಿ

ವೆಟ್ಟೆಲ್ ಸಂಭ್ರಮ

ವೆಟ್ಟೆಲ್ ಸಂಭ್ರಮ

ಯುನೈಟೆಡ್ ಸ್ಟೇಟ್ಸ್ ಗ್ರಾಂಡ್ ಪ್ರಿಕ್ಸ್ ಗೆದ್ದ ಜರ್ಮನಿಯ ಎಫ್ 1 ಕಾರು ಚಾಲಕ ವೆಟ್ಟೆಲ್

ಕಾರ್ತಿಕ ಮಾಸ ಸಂಭ್ರಮ

ಕಾರ್ತಿಕ ಮಾಸ ಸಂಭ್ರಮ

ಕಾರ್ತಿಕ ಮಾಸದ ವಿಶೇಷ ಪೂಜಾ ಸಂಭ್ರಮದಲ್ಲಿ ಭಕ್ತರು

ತಮಿಳುನಾಡಿನಲ್ಲಿ

ತಮಿಳುನಾಡಿನಲ್ಲಿ

ಕೊಯಮತ್ತೂರಿನಲ್ಲಿ ಸುವಾಸಿನಿಯರು ವಿಶೇಷ ಸಾಮೂಹಿಕ ಪೂಜಾ ಕಾರ್ಯದಲ್ಲಿ ತೊಡಗಿದ್ದಾರೆ

ದೀಪ ಹಚ್ಚುತ್ತಿರುವ ಮುತ್ತೈದೆ

ದೀಪ ಹಚ್ಚುತ್ತಿರುವ ಮುತ್ತೈದೆ

ತಮಿಳುನಾಡಿನ ಮದುರೈನಲ್ಲಿ ಕಾರ್ತಿಕ ಮಾಸದ ದೀಪ ಹಚ್ಚುತ್ತಿರುವ ಮುತ್ತೈದೆ

ಇತ್ತೀಚಿನ ಸುದ್ದಿಗಳು

ಇತ್ತೀಚಿನ ಸುದ್ದಿಗಳು

ಕೋಲ್ಕತ್ತಾ :ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರಂಭದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜತೆ ರಾಣಿ ಮುಖರ್ಜಿ, ಸುಷ್ಮಿತಾ ಸೇನ್, ಬಿಪಾಶಾ ಬಸು

ಅಮೃತಸರದಲ್ಲಿ

ಅಮೃತಸರದಲ್ಲಿ

ಅಮೃತಸರದಲ್ಲಿ ಗುರುನಾನಕ್ ಜಯಂತಿ ಅಂಗವಾಗಿ ಸಿಖ್ಖರ ಪವಿತ್ರ ದೇಗುಲ ಸ್ವರ್ಣ ಮಂದಿರ ದೀಪಾಲಂಕರದಿಂದ ಕಂಗೊಳಿಸಿತು

English summary
Todays news stories in pics : A Boeing 737 belonging to a domestic Russian airline crashed on Sunday while attempting to land at an airport in western Tatarstan, killing all 50 people on board, Russia's emergency situations ministry said. and and many more pics
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more