ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದಲ್ಲಿ ಕೊರೊನಾ ಸೋಂಕಿತರ ಪತ್ತೆಗೆ ಗುಪ್ತಚರ ಸೇವೆ ಬಳಕೆ

|
Google Oneindia Kannada News

ಇಸ್ಲಾಮಾಬಾದ್, ಏಪ್ರಿಲ್ 24: ಪಾಕಿಸ್ತಾನದಲ್ಲಿ ಭಯೋತ್ಪಾದಕರನ್ನು ಸೆರೆ ಹಿಡಿಯಲು ಗುಪ್ತಚರ ಸಿದ್ಧಪಡಿಸಿರುವ ಟ್ರೇಸಿಂಗ್ ಸಿಸ್ಟಂ ಬಳಕೆ ಮಾಡುತ್ತಿದ್ದು ಇದೀಗ ಕೊರೊನಾ ಸೋಂಕಿತರನ್ನು ಕಂಡು ಹಿಡಿಯಲು ಕೂಡ ಗುಪ್ತಚರ ಸೇವೆಯನ್ನು ಬಳಸಿಕೊಳ್ಳಲಾಗುತ್ತಿದೆ.

ಪಾಕಿಸ್ತಾನ ಇಂಟರ್ ಇಂಟಲಿಜೆನ್ಸ್ ಸರ್ವೀಸ್(ಐಎಸ್‌ಐ) ಕೊವಿಡ್ 19 ರೋಗಿಗಳನ್ನು ಪತ್ತೆ ಹಚ್ಚಲು ಸರ್ಕಾರಕ್ಕೆ ಸಹಾಯ ಮಾಡುತ್ತಿದೆ. ಯಾರ್ಯಾರು ಕೊರೊನಾ ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದಾರೆ ಎನ್ನುವ ಮಾಹಿತಿಯನ್ನು ಕಲೆ ಹಾಕುತ್ತಿದೆ.

ಪಾಕಿಸ್ತಾನದಲ್ಲಿ 11,115 ಮಂದಿ ಕೊರೊನಾ ಸೋಂಕಿತರಿದ್ದಾರೆ 237 ಮಂದಿ ಮೃತಪಟ್ಟಿದ್ದಾರೆ. 2,527 ಮಂದಿ ಗುಣಮುಖರಾಗುತ್ತಿದ್ದಾರೆ.

ಉಗ್ರರ ಮತ್ತೆ ಹಚ್ಚುವ ಸಾಧನದಿಂದ ಕೊರೊನಾ ಪತ್ತೆ

ಉಗ್ರರ ಮತ್ತೆ ಹಚ್ಚುವ ಸಾಧನದಿಂದ ಕೊರೊನಾ ಪತ್ತೆ

ಸಾಮಾನ್ಯವಾಗಿ ಉಗ್ರರ ಪತ್ತೆಗೆ ಬಳಕೆ ಮಾಡುತ್ತಿದ್ದ ಸಾಧನವನ್ನು ಇದೀಗ ಕೊರೊನಾ ಸೋಂಕಿತರ ಪತ್ತೆಗೆ ಬಳಕೆ ಮಾಡಲಾಗುತ್ತಿದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಟ್ರ್ಯಾಕ್ ಆಂಡ್ ಟ್ರೇಸ್ ಕೊರೊನಾ ವಿರುದ್ಧದ ಹೋರಾಟದ ಅಸ್ತ್ರ

ಟ್ರ್ಯಾಕ್ ಆಂಡ್ ಟ್ರೇಸ್ ಕೊರೊನಾ ವಿರುದ್ಧದ ಹೋರಾಟದ ಅಸ್ತ್ರ

ಟ್ರ್ಯಾಕ್ ಆಂಡ್ ಟ್ರೇಸ್ ಸಾಧನವು ಕೊರೊನಾ ವೈರಸ್ ಹೋಗಲಾಡಿಸಲುಅಸ್ತ್ರವಾಗಿದೆ. ಇಲ್ಲಿ ವಾಣಿಜ್ಯ ವ್ಯವಹಾರಗಳನ್ನು ಪುನರಾರಂಭಿಸಬೇಕು ಎಂದರೆ ಈ ಸಾಧನವನ್ನು ಅನಿವಾರ್ಯವಾಗಿ ಬಳಕೆ ಮಾಡಲೇಬೇಕಿದೆ.

ಪಾಕಿಸ್ತಾನದಲ್ಲಿ 11,115 ಸೋಂಕಿತರು

ಪಾಕಿಸ್ತಾನದಲ್ಲಿ 11,115 ಸೋಂಕಿತರು

ಪಾಕಿಸ್ತಾನದಲ್ಲಿ 11,115 ಮಂದಿ ಕೊರೊನಾ ಸೋಂಕಿತರಿದ್ದಾರೆ 237 ಮಂದಿ ಮೃತಪಟ್ಟಿದ್ದಾರೆ. 2,527 ಮಂದಿ ಗುಣಮುಖರಾಗುತ್ತಿದ್ದಾರೆ.

ಮಸೀದಿಗಳನ್ನು ತೆರೆಯಲು ಒಪ್ಪಿಗೆ

ಮಸೀದಿಗಳನ್ನು ತೆರೆಯಲು ಒಪ್ಪಿಗೆ

ರಂಜಾನ್ ಆರಂಭವಾಗಿದ್ದು, ಪಾಕಿಸ್ತಾನದಲ್ಲಿ ಮಸೀದಿಗಳನ್ನು ತೆರೆಯಲು ಕಳೆದ ವಾರವೇ ಅನುಮತಿ ನೀಡಲಾಗಿದೆ. ಮಸೀದಿಗಳಲ್ಲಿ ಪ್ರಾರ್ಥನೆ ಮಾಡುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ತಿಳಿಸಲಾಗಿದೆ. ಆದರೆ ವೈದ್ಯರು ಒಂದೊಮ್ಮೆ ಮಸೀದಿಗಳನ್ನು ತೆರೆದರೆ ಅಲ್ಲಿಂದಲೇ ಸಾವಿರಾರು ಮಂದಿಗೆ ಕೊರೊನಾ ಸೋಂಕು ತಗುಲುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.

English summary
Pakistan is using a contact tracing system - developed by its intelligence services to combat terrorism - to fight the coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X