ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ಮುಂದೆ ಬಿಕ್ಕುತ್ತಿರುವ ಪುಟ್ಟ ಕಂದನ ನೋಡಿ ತೇವವಾದ ಕಣ್ಣಾಲಿ!

|
Google Oneindia Kannada News

ನ್ಯೂಯಾರ್ಕ್, ಜೂನ್ 22: ಗುಲಾಬಿ ಬಣ್ಣದ ಶರ್ಟ್ ತೊಟ್ಟು ದೈನ್ಯತೆಯಿಂದ ಅಳುತ್ತಿರುವ ಪುಟ್ಟ ಕಂದ... ಎದುರಲ್ಲಿ ನಿಶ್ಚಲವಾಗಿ ನಿಂತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಗುವಿನ ಬಿಕ್ಕುವಿಕೆಯನ್ನು ತೂರಿ ಬಂದ 'ವೆಲ್ ಕಮ್ ಟು ಅಮೆರಿಕ' ಎಂಬ ಸ್ವಾಗತ ವಾಕ್ಯ! ಇದು ಜುಲೈ 2ರ ಟೈಮ್ಸ್ ನಿಯತಕಾಲಿಕದ ಮುಖಪುಟ!

ಈ ಚಿತ್ರವನ್ನು ನೋಡಿದ ಎಂಥವರಿಗೂ ಒಮ್ಮೆ ಕಣ್ಣಾಲಿಗಳು ತೇವವಾದಾವು! ಏನೂ ಅರಿಯದ ಮುಗ್ಧ ಕಂದಮ್ಮಗಳನ್ನು ಹೊಲಸು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವ ಬಗ್ಗೆ ಮನಸ್ಸಲ್ಲಿ ಹೇಸಿಗೆ ಮೂಡೀತು!

ಸಿರಿಯಾ ಕ್ರೌರ್ಯಕ್ಕೆ ಸಾಕ್ಷಿಯಾದ ಮುಗ್ಧ ಮಕ್ಕಳ ರಕ್ತಸಿಕ್ತ ಚಿತ್ರ! ಸಿರಿಯಾ ಕ್ರೌರ್ಯಕ್ಕೆ ಸಾಕ್ಷಿಯಾದ ಮುಗ್ಧ ಮಕ್ಕಳ ರಕ್ತಸಿಕ್ತ ಚಿತ್ರ!

ಅಮೆರಿಕದಲ್ಲಿ ವಲಸಿಗರ ಮಕ್ಕಳನ್ನು ಪೋಷಕರಿಂದ ಬೇರ್ಪಡಿಸುವ ಅಮಾನವೀಯ ಕೆಲಸಕ್ಕೆ ಕೈಹಾಕಿದ ಡೊನಾಲ್ಡ್ ಟ್ರಂಪ್ ಅವರಿಗೆ ಇದೊಂದೇ ಚಿತ್ರದ ಮೂಲಕ ಅಮೆರಿಕದ ಮಾಧ್ಯಮ ನೀಡಿದ ಛಾಟಿಯೇಟು ಇದು!

TIMEs Trump cover captures Zero Tolerance policy row

ಅಕ್ರಮ ನುಸುಳುಕೋರರನ್ನು ಶಿಕ್ಷಿಸುವ, ಆ ಮೂಲಕ ದೇಶಕ್ಕೆ ಅಗತ್ಯ ಭದ್ರತೆ ಕಲ್ಪಿಸುವ ಟ್ರಂಪ್ ಕ್ರಮ ಸರಿ ಇದ್ದಿರಬಹುದು. ಆದರೆ ಆ ಕಾರಣಕ್ಕೆ ಈ ಮುಗ್ಧ ಮಕ್ಕಳನ್ನು ಪೋಷಕರಿಂದ ಬೇರ್ಪಡಿಸುವ ಹಕ್ಕನ್ನು ಟ್ರಂಪ್ ಗೆ ಕೊಟ್ಟವರ್ಯಾರು ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ಪ್ರಶ್ನಿಸುತ್ತಿವೆ!

ಕಳೆದ ಮೇ ತಿಂಗಳಿನಿಂದ ಅಮೆರಿಕದಲ್ಲಿ ವಲಸೆ ನೀತಿ ಬದಲಾಗಿದೆ. ಈ ನೀತಿಯ ಅನ್ವಯ ಅಮೆರಿಕಕ್ಕೆ ಅಕ್ರಮವಾಗಿ ವಲಸೆ ಬರುವವರನ್ನು ಬಂಧಿಸಿ, ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬಹುದಾಗಿದೆ. ಹೀಗೆ ವಲಸೆ ಬಂದವರನ್ನು ಬಂಧಿಸಿ, ಅವರ ಮಕ್ಕಳನ್ನು ಅವರಿಂದ ಪ್ರತ್ಯೇಕಿಸಲಾಗುತ್ತದೆ. ಈವರೆಗೆ ಸುಮಾರು 2 ಸಾವಿರಕ್ಕೂ ಹೆಚ್ಚು ಮಕ್ಕಳನ್ನು ಇದೇ ನಿಯಮದ ಅಡಿಯಲ್ಲಿ ಪ್ರತ್ಯೇಕಿಸಲಾಗಿದೆ.

ಈ ನಡೆ ವಿಶ್ವದಾದ್ಯಂತ ಟೀಕೆಗೆ ಗುರಿಯಾಗಿತ್ತು. ವಿಶ್ವಸಂಸ್ಥೆ ಸಹ ಅಮೆರಿಕದ ನಡೆಯನ್ನು ಟೀಕಿಸಿತ್ತು.

English summary
The latest cover of TIME's magazine, featuring US President Donald Trump and a wailing child has captured the controversial 'Zero Tolerance' policy of the US administration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X