• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Breaking news: ಟಿಬೇಟ್ ಏರ್‌ಲೈನ್ಸ್ ವಿಮಾನಕ್ಕೆ ಬೆಂಕಿ

|
Google Oneindia Kannada News

ಲ್ಹಾಸಾ, ಮೇ 12: ಟಿಬೇಟ್ ಏರ್‌ಲೈನ್ಸ್ ವಿಮಾನವೊಂದಕ್ಕೆ ಬೆಂಕಿ ತಗುಲಿದ ಘಟನೆ ನಡೆದಿದೆ. ಗುರುವಾರ ಬೆಳಗ್ಗೆ ಚೀನಾದ ಚಾಂಗ್‌ಕಿಂಗ್ ವಿಮಾನ ನಿಲ್ದಾಣದ ರನ್ ವೇನಲ್ಲಿ ಸಾಗುತ್ತಿದ್ದ ವಿಮಾನದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.

ರನ್‌ವೇಯಿಂದ ಹೊರಟ ವಿಮಾನದಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ಸರ್ಕಾರಿ ಮಾಧ್ಯಮ ಸಂಸ್ಥೆಗಳು ವರದಿ ಮಾಡಿದೆ. ವಿಮಾನದಲ್ಲಿದ ಪ್ರಯಾಣಿಕರಲ್ಲಿ ಕೆಲವು ಗಾಯಗಳಾಗಿವೆ.

"ಚಾಂಗ್‌ಕಿಂಗ್ ಜಿಯಾಂಗ್‌ಬೀ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಾಂಗ್‌ಕಿಂಗ್‌ನಿಂದ ಲಾಸಾಗೆ ವಿಮಾನವು ರನ್‌ವೇಯನ್ನು ಅತಿಕ್ರಮಿಸಿತು, ಇದರಿಂದಾಗಿ ವಿಮಾನವು ಬೆಂಕಿಗೆ ಆಹುತಿಯಾಗಿದೆ" ಎಂದು ಸರ್ಕಾರ ಪ್ರಸಾರಕ ಸಿಸಿಟಿವಿ ಹೇಳಿದೆ.

122 ಜನರಿದ್ದ ಚೀನಾದ ಟಿಬೇಟ್ ಏರ್‌ಲೈನ್ಸ್‌ನ ಪ್ರಯಾಣಿಕ ವಿಮಾನವು ನೈಋತ್ಯದಲ್ಲಿರುವ ಚಾಂಗ್‌ಕಿಂಗ್ ನಗರದಲ್ಲಿ ರನ್‌ವೇಯಿಂದ ಟೇಕಾಫ್ ಆಗುತ್ತಿರುವಾಗ ಬೆಂಕಿ ಹೊತ್ತಿಕೊಂಡಿದೆ. ಟಿಬೇಟ್ ಗೆ ಹೋಗುವ ವಿಮಾನವು 113 ಪ್ರಯಾಣಿಕರು ಮತ್ತು ಒಂಬತ್ತು ಸಿಬ್ಬಂದಿಗಳನ್ನು ಹೊತ್ತೊಯ್ಯುತ್ತಿತ್ತು ಎಂದು ಸರ್ಕಾರಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ವಿಮಾನದಲ್ಲಿದ್ದ ಎಲ್ಲಾ ಜನರನ್ನು ಸ್ಥಳಾಂತರಿಸಲಾಗಿದೆ ಮತ್ತು ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಸಾವುನೋವುಗಳ ಸಂಖ್ಯೆ ತಕ್ಷಣವೇ ತಿಳಿದುಬಂದಿಲ್ಲ ಎಂದು ಸರ್ಕಾರಿ ಚೀನಾ ಗ್ಲೋಬಲ್ ಟೆಲಿವಿಷನ್ ನೆಟ್‌ವರ್ಕ್ (ಸಿಜಿಟಿಎನ್) ವರದಿ ಮಾಡಿದೆ.

ಸ್ಕಿಡ್ ಆಗಿ ಬೆಂಕಿ ಹೊತ್ತಿಕೊಂಡಿದೆ.
ಗುರುವಾರ ಚೀನಾದ ಚಾಂಗ್‌ಕಿಂಗ್ ವಿಮಾನ ನಿಲ್ದಾಣದಲ್ಲಿ ಟಿಬೆಟ್ ಏರ್‌ಲೈನ್ಸ್‌ನ ವಿಮಾನವೊಂದು ರನ್‌ವೇಯಲ್ಲಿ ಸ್ಕಿಡ್ ಆಗಿ ಬೆಂಕಿ ಹೊತ್ತಿಕೊಂಡಿದೆ. ಏರ್‌ಲೈನ್ಸ್‌ನ ಒಂಬತ್ತು ಸಿಬ್ಬಂದಿ ಮತ್ತು ವಿಮಾನದಲ್ಲಿದ್ದ 113 ಪ್ರಯಾಣಿಕರನ್ನು ಈಗ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಟಿಬೆಟ್ ಏರ್‌ಲೈನ್ಸ್ ಹೇಳಿಕೆಯಲ್ಲಿ ಘಟನೆಯನ್ನು ದೃಢಪಡಿಸಿದೆ.

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಘಟನೆಯ ವಿಡಿಯೊ ತುಣುಕನ್ನು ಟಿಬೆಟ್ ಏರ್‌ಲೈನ್ಸ್ ವಿಮಾನ ನಿಲ್ದಾಣದಲ್ಲಿ ಬೆಂಕಿ ಮತ್ತು ಕಪ್ಪು ಹೊಗೆ ಹೊರಹೊಮ್ಮುವುದನ್ನು ತೋರಿಸಿದೆ. ಉರಿಯುತ್ತಿರುವ ವಿಮಾನದಿಂದ ಪ್ರಯಾಣಿಕರನ್ನು ಹೊರತೆಗೆಯುತ್ತಿದ್ದಂತೆ ಜನರು ಓಡಿಹೋಗುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಪ್ರಯಾಣಿಕರಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಏರ್‌ಬಸ್ A319-115 ಜೆಟ್‌ನಲ್ಲಿ 113 ಪ್ರಯಾಣಿಕರು ಮತ್ತು ಒಂಬತ್ತು ವಿಮಾನ ಸಿಬ್ಬಂದಿ ಇದ್ದರು, ಅವರೆಲ್ಲರನ್ನೂ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು ಮತ್ತು ಕೆಲವರಿಗೆ ಸಣ್ಣಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಏರ್‌ಲೈನ್ ಹೇಳಿಕೆಯಲ್ಲಿ ತಿಳಿಸಿದೆ.

English summary
A Tibet Airlines plane caught fire Thursday morning at China's Chongqing airport after going off the runway, state media reported, adding there had been some injuries among the passengers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X