• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೂವರು ವಿಜ್ಞಾನಿಗಳಿಗೆ ಶರೀರಶಾಸ್ತ್ರ ವಿಭಾಗದ ನೊಬೆಲ್ ಗೌರವ

|

ನ್ಯೂಯಾರ್ಕ್, ಅಕ್ಟೋಬರ್ 7: ಶರೀರಶಾಸ್ತ್ರ ಅಥವಾ ಔಷಧ ವಿಭಾಗಕ್ಕೆ ನೀಡಲಾಗುವ ನೊಬೆಲ್ ಪುರಸ್ಕಾರವನ್ನು ಮೂವರು ವಿಜ್ಞಾನಿಗಳು ಹಂಚಿಕೊಂಡಿದ್ದಾರೆ.

ಹಾರ್ವರ್ಡ್ ವಿಶ್ವವಿದ್ಯಾಲಯದ ವಿಲಿಯಂ ಕಯ್ಲಿನ್, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸರ್ ಪೀಟರ್ ರಾಟ್‌ಕ್ಲಿಫ್ ಮತ್ತು ಜಾನ್ಸ್ ಹಾಕಿನ್ಸ್ ವಿಶ್ವವಿದ್ಯಾಲಯದ ಗ್ರೆಗ್ ಸೆಮೆಂಜಾ ಅವರು ಈ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ನೊಬೆಲ್ ಅಸೆಂಬ್ಲಿ ಸೋಮವಾರ ಪ್ರಕಟಿಸಿದೆ.

2019ರ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಚೆಫ್ ಜೋಸ್ ಆಂಡ್ರಸ್ ಆಯ್ಕೆ

ಬದುಕಲು ಅತಿ ಅಗತ್ಯವಾದ ಹೊಂದಿಕೆ ಪ್ರಕ್ರಿಯೆಗಳಲ್ಲಿ ಒಂದಾದ, ದೇಹದಲ್ಲಿ ಆಮ್ಲಜನಕದ ಮಟ್ಟದಲ್ಲಿ ಉಂಟಾಗುವ ಏರಿಳಿತಕ್ಕೆ ಕೋಶಗಳು ಹೇಗೆ ಸ್ಪಂದಿಸುತ್ತವೆ. ಅವು ಆಮ್ಲಜನಕವನ್ನು ಹೇಗೆ ಗ್ರಹಿಸಿ, ಅದರ ಲಭ್ಯತೆಗೆ ಅನುಗುಣವಾಗಿ ಬಳಸಿಕೊಳ್ಳುತ್ತವೆ ಎಂಬುದನ್ನು ಪತ್ತೆಹಚ್ಚಿದ ಕಾರಣಕ್ಕಾಗಿ ಈ ಅತ್ಯುನ್ನತ ಜಾಗತಿಕ ಗೌರವ ಈ ಮೂವರಿಗೆ ದಕ್ಕಿದೆ.

ಶರೀರಶಾಸ್ತ್ರದ ಮೂಲ ಪ್ರಕ್ರಿಯೆಗಳು ಮಾನವನ ದೇಹ ಪ್ರಕೃತಿ ಯಾವ ರೀತಿ ಇರುತ್ತವೆ ಎಂಬುದನ್ನು ವಿವರಿಸುತ್ತವೆ. ಈ ಮೂವರು ವಿಜ್ಞಾನಿಗಳ ಸಂಶೋಧನೆಯು ಅದರಾಚೆಗಿನ ಕೆಲವು ಸೂಕ್ಷ್ಮ ವಿಚಾರಗಳನ್ನು ಹೊರಹಾಕಿದ್ದು, ಅನೀಮಿಯಾ, ಕ್ಯಾನ್ಸರ್ ಮತ್ತು ಇತರೆ ಕೆಲವು ಕಾಯಿಲೆಗಳಿಗೆ ಚಿಕಿತ್ಸೆ ನೀಡುವಲ್ಲಿ ಸಂಶೋಧನಕರಿಗೆ ಈ ಅಧ್ಯಯನ ಹೊಸ ಹೊಳಹುಗಳನ್ನು ನೀಡಲಿದೆ.

ದೇಹಕ್ಕೆ ಆಮ್ಲಜನಕದ ಅಗತ್ಯ ಎಷ್ಟಿದೆ ಎಂಬ ಮೂಲಭೂತ ತಿಳಿವಳಿಕೆ ಶತಮಾನಗಳಿಂದ ಇದೆ. ಆದರೆ ಆಮ್ಲಜನಕದ ಮಟ್ಟದಲ್ಲಿ ಉಂಟಾಗುವ ಬದಲಾವಣೆಗಳಿಗೆ ಕೋಶಗಳು ಹೇಗೆ ಬದಲಾವಣೆಗಳಿಗೆ ಒಡ್ಡಿಕೊಳ್ಳುತ್ತವೆ ಎಂಬುದು ತಿಳಿದಿರಲಿಲ್ಲ. ಈ ಬಾರಿಯ ನೊಬೆಲ್ ಪುರಸ್ಕೃತ ಕಾರ್ಯವು ಆಮ್ಲಜನಕದ ಪೂರೈಕೆಯ ಬದಲಾವಣೆಗಳಿಗೆ ಹೇಗೆ ಕೋಶಗಳು ಒಗ್ಗಿಕೊಳ್ಳುತ್ತವೆ ಎಂಬುದನ್ನು ಕಂಡುಕೊಂಡಿದೆ ಎಂದು ನೊಬೆಲ್ ಸಮಿತಿ ಹೇಳಿದೆ.

English summary
William G Kaelin, Sir Peter Ratcliffe and Gregg L Semenza has shared 2019 Nobel Prize for Physiology or Medicine for discovering how cells respond to varying oxygen levels in the body.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X