ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ: ಮೂವರು ಸಾವು

|
Google Oneindia Kannada News

ವಾಷಿಂಗ್ಟನ್, ಜೂನ್ 10: ಅಮೆರಿಕದಲ್ಲಿ ಗುಂಡಿನ ದಾಳಿಯಿಂದ ನಡೆಯುತ್ತಿರುವ ಹತ್ಯೆಗಳಿಗೆ ಕೊನೆಯೇ ಇಲ್ಲ ಎನ್ನುವಂತಾಗಿದೆ. ಟೆಕ್ಸಾಸ್‌ ಶಾಲೆಯಲ್ಲಿ ನಡೆದ ಶೂಟೌಟ್‌ನಲ್ಲಿ 21 ಜನ ದುರ್ಮರಣ ಹೊಂದಿದ್ದರು. ಅಮೆರಿಕದಲ್ಲಿ ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಿವೆ.

ಸ್ಮಿತ್‌ಬರ್ಗ್‌ನ ಮೇರಿಲ್ಯಾಂಡ್ ಪಟ್ಟಣದ ಉತ್ಪಾದನಾ ಘಟಕದಲ್ಲಿ ಗುರುವಾರ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಅಮೆರಿಕದ ನೈಟ್ ಕ್ಲಬ್ ಮೇಲೆ ಗುಂಡಿನ ದಾಳಿ, 3 ಸಾವುಅಮೆರಿಕದ ನೈಟ್ ಕ್ಲಬ್ ಮೇಲೆ ಗುಂಡಿನ ದಾಳಿ, 3 ಸಾವು

ಉತ್ತರ ಮೇರಿಲ್ಯಾಂಡ್‌ನಲ್ಲಿರುವ ಸೋಲಂಬಿಯಾ ಮೆಷಿನ್ ಫ್ಯಾಕ್ಟರಿ ಎಂದು ಹೇಳಲಾಗುವ ಉತ್ಪಾದನಾ ಘಟಕದಲ್ಲಿ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದಾನೆ ಎಂದು ವರದಿಯಲ್ಲಿ ತಿಳಿಸಿದೆ. ನಾಲ್ವರಿಗೆ ಗುಂಡು ತಗುಲಿದ್ದು ಅವರಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ಘಟನೆ ಬಗ್ಗೆ ಮಾಹಿತಿ ನೀಡಿರುವ ಮೇರಿಲ್ಯಾಂಡ್ ಗವರ್ನರ್ ಲ್ಯಾರಿ ಹೊಗನ್, "ಸ್ಮಿತ್ಸ್‌ಬರ್ಗ್‌ನ ಉತ್ಪಾದನಾ ಘಟಕದಲ್ಲಿ ಗುರುವಾರ ನಡೆದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಮತ್ತು ರಾಜ್ಯದ ಸೈನಿಕರ ಭುಜಕ್ಕೂ ಗುಂಡು ತಗುಲಿದೆ" ಎಂದು ಹೇಳಿದ್ದಾರೆ.

ಅಮೆರಿಕದ ನೈಟ್ ಕ್ಲಬ್ ಮೇಲೆ ಗುಂಡಿನ ದಾಳಿ, 3 ಸಾವುಅಮೆರಿಕದ ನೈಟ್ ಕ್ಲಬ್ ಮೇಲೆ ಗುಂಡಿನ ದಾಳಿ, 3 ಸಾವು

ಬಾಲ್ಟಿಮೋರ್ ನಗರದಿಂದ 75 ಮೈಲಿ ದೂರದಲ್ಲಿರುವ ಸ್ಮಿತ್ಸ್‌ಬರ್ಗ್‌ನಲ್ಲಿರುವ ಕೊಲಂಬಿಯಾ ಮೆಷಿನ್‌ನಲ್ಲಿ ಗುರುವಾರ ಮಧ್ಯಾಹ್ನದ ವೇಳೆಗೆ ದಾಳಿ ನಡೆದಿದೆ ಎಂದು ವಾಷಿಂಗ್ಟನ್ ಕೌಂಟಿ ಶೆರಿಫ್ ಕಚೇರಿ ತಿಳಿಸಿದೆ.

ನ್ಯೂಯಾರ್ಕ್, ಟೆಕ್ಸಾಸ್ ಮತ್ತು ಒಕ್ಲಹೋಮಾದಲ್ಲಿ ಕಳೆದ ಕೆಲವು ವಾರಗಳಲ್ಲಿ ನಡೆದ ಹಲವಾರು ಗುಂಡಿನ ದಾಳಿಗಳು ನಡೆದಿದೆ. ಗನ್ ಹಿಂಸಾಚಾರದ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವಂತೆ ನಾಗರಿಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಒಕ್ಲಹೊಮಾದಲ್ಲಿ 4 ಜನ ಸಾವನ್ನಪ್ಪಿದ್ದರು

ಒಕ್ಲಹೊಮಾದಲ್ಲಿ 4 ಜನ ಸಾವನ್ನಪ್ಪಿದ್ದರು

ಜೂನ್ 2ರಂದು ಒಕ್ಲಹೊಮಾದ ಆಸ್ಪತ್ರೆಯಲ್ಲಿ ಗುಂಡಿನ ದಾಳಿ ನಡೆಸಲಾಗಿತ್ತು. ದಾಳಿಯಲ್ಲಿ 4 ಜನ ಸಾವನ್ನಪ್ಪಿದ್ದರು. ಸೇಂಟ್ ಫ್ರಾನ್ಸಿಸ್ ಆಸ್ಪತ್ರೆ ಕ್ಯಾಂಪಸ್‌ನಲ್ಲಿರುವ ನಟಾಲಿ ಬಿಲ್ಡಿಂಗ್‌ನಿಂದ ಶೂಟರ್ ಗುಂಡಿನ ದಾಳಿ ನಡೆಸಿದ್ದ ಶೂಟರ್ 4 ಜನರನ್ನು ಸಾವಿಗೆ ಕಾರಣನಾಗಿದ್ದ.

ತಕ್ಷಣ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಆಗಬಹುದಾಗಿದ್ದ ಹೆಚ್ಚಿನ ದುರಂತವನ್ನು ತಪ್ಪಿಸಿದ್ದರು. ನಾಲ್ಕು ಜನರನ್ನು ಕೊಂದಿದ್ದ ಶೂಟರ್ ಪೊಲೀಸರ ಗುಂಡಿಗೆ ಬಲಿಯಾಗಿದ್ದ.

ನೈಟ್ ಕ್ಲಬ್ ದಾಳಿಯಲ್ಲಿ ಮೂವರು ಸಾವು

ನೈಟ್ ಕ್ಲಬ್ ದಾಳಿಯಲ್ಲಿ ಮೂವರು ಸಾವು

ಜೂನ್ 6ರಂದು ಅಮೆರಿಕ ಟೆನ್ನಿಸ್ಲಿ ಸಮೀಪದ ನೈಟ್ ಕ್ಲಬ್‌ನಲ್ಲಿ ಬಂದೂಕುಧಾರಿಗಳು ದಾಳಿ ಮಾಡಿದ್ದರು. ಘಟನೆಯಲ್ಲಿ ಮೂವರು ನಾಗರಿಕರು ಸಾವನ್ನಪ್ಪಿ, 14 ಮಂದಿ ಗಾಯಗೊಂಡಿದ್ದರು. ಗುಂಡಿನ ದಾಳಿಯಿಂದ ಇಬ್ಬರು ನಾಗರಿಕರು ಸ್ಥಳದಲ್ಲೇ ಮೃತಪಟ್ಟಿದ್ದರು. ಬಂದೂಕುಧಾರಿಗಳ ವಾಹನ ಡಿಕ್ಕಿಯೊಡೆದು ಒಬ್ಬ ವ್ಯಕ್ತಿ ಮೃತಪಟ್ಟಿದ್ದನು.

14 ಮಂದಿ ಬಂದೂಕು ದಾಳಿಯಲ್ಲಿ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ ಕೆಲವರೂ ಇನ್ನೂ ಚೇತರಿಸಿಕೊಳ್ಳುತ್ತಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಗೊಂಡವರಲ್ಲಿ ಹೆಚ್ಚಿನವರು ವಯಸ್ಕರಾಗಿದ್ದಾರೆ. ಘಟನೆಯಲ್ಲಿ ಒಬ್ಬ ಬಾಲಕ ಕೂಡ ಗಾಯಗೊಂಡಿದ್ದಾನೆ.

ಟೆಕ್ಸಾಸ್ ಶಾಲೆಯಲ್ಲಿ ನಡೆದಿತ್ತು ಭೀಕರ ದುರಂತ

ಟೆಕ್ಸಾಸ್ ಶಾಲೆಯಲ್ಲಿ ನಡೆದಿತ್ತು ಭೀಕರ ದುರಂತ

ಮೇ 24ರಂದು ಟೆಕ್ಸಾಸ್‌ನ ಉವಾಲ್ಡೆಯಲ್ಲಿರುವ ಪ್ರಾಥಮಿಕ ಶಾಲೆಯಲ್ಲಿ ನರಮೇಧವೇ ನಡೆದುಹೋಗಿತ್ತು. 18ರ ಹರೆಯದ ಯುವಕನೊಬ್ಬನ ಹುಚ್ಚಾಟಕ್ಕೆ 19 ಪುಟ್ಟ ಮಕ್ಕಳು ಸೇರಿ 21 ಜನ ಜೀವ ತೆತ್ತಿದ್ದರು. ತನ್ನ ಅಜ್ಜಿಗೆ ಶೂಟ್ ಮಾಡಿ ಬಂದಿದ್ದ ಯುವಕನೊಬ್ಬ ಶಾಲೆಯೊಳಕ್ಕೆ ನುಗ್ಗಿ ಮನಸೋ ಇಚ್ಛೆ ಗುಂಡು ಹಾರಿಸಿದ್ದ. ಈ ಘಟನೆಯಿಂದ ಅಮೆರಿಕದ ಜನ ಬೆಚ್ಚಿಬಿದ್ದಿದ್ದರು.

ಶಾಲೆಯಲ್ಲಿ ಮೃತಪಟ್ಟ ಮಕ್ಕಳಿಗೆ ಸಂತಾಪ ಸೂಚಿಸಲು ಶ್ವೇತ ಭವನ ಸೇರಿದಂತೆ ಇತರ ಸಾರ್ವಜನಿಕ ಸ್ಥಳದಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗಿತ್ತು.

ಮೇ 24ರ ನಂತರ 39 ಶೂಟೌಟ್ 45 ಸಾವು

ಮೇ 24ರ ನಂತರ 39 ಶೂಟೌಟ್ 45 ಸಾವು

ಮೇ 24ರ ಶಾಲೆಯಲ್ಲಿ ಶೂಟೌಟ್ ದುರಂತದ ನಂತರ ಅಧ್ಯಕ್ಷ ಜೋ ಬೈಡೆನ್ ಬಂದೂಕು ಬಳಕೆ ಕಾನೂನಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ದೇಶದಲ್ಲಿ ಬಂದೂಕು ಬಳಕೆ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಆದರೆ ಅಮೆರಿಕದಲ್ಲಿ ಮಾತ್ರ ಬಂದೂಕು ದಾಳಿ ಕಡಿಮೆಯಾಗಿಲ್ಲ.

ಮೇ 24 ರ ಶಾಲೆಯಲ್ಲಿ ಗುಂಡಿನ ದಾಳಿ ನಂತರ ಅಮೆರಿಕದಲ್ಲಿ ಇದುವರೆಗೆ 39 ಶೂಟೌಟ್ ಪ್ರಕರಣ ವರದಿಯಾಗಿವೆ. ಬಂದೂಕು ದಾಳಿ ಪ್ರಕರಣದಲ್ಲಿ 45 ಜನ ಜೀವ ಕಳೆದುಕೊಂಡಿದ್ದಾರೆ.

ವಿಶ್ವದ ದೊಡ್ಡಣ್ಣ ಎಂದೇ ಕರೆಸಿಕೊಳ್ಳುವ ಅಮೆರಿಕ, ಜಗತ್ತಿಗೆ ಶಾಂತಿ ಮಂತ್ರದ ಪಾಠ ಮಾಡುವ ಅಮೆರಿಕ, ಶಾಂತಿಯ ಹೆಸರಲ್ಲಿ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಮಿಲಿಟರಿ ಕಾರ್ಯಾಚರಣೆ ಮಾಡಿದ್ದ ಅಮೆರಿಕ, ತನ್ನದೇ ನೆಲದಲ್ಲಿ ತನ್ನದೇ ಜನರ ಬಂದೂಕಿಗೆ ಬಲಿಯಾಗುತ್ತಿರುವ ಜೀವಗಳನ್ನು ಉಳಿಸಕೊಳ್ಳಲಾಗುತ್ತಿಲ್ಲ ಎನ್ನುವುದೇ ದುರಂತ.

Recommended Video

Sunny Leone ತನ್ನ ಮ್ಯಾನೇಜರ್ಗೆ ಚಪ್ಪಲಿಯಿಂದ ಹೊಡೆದಿದ್ದಕ್ಕೆ ಫ್ಯಾನ್ಸ್ ಏನಂದ್ರು? | Oneindia Kannada

English summary
The US Local Media Reported, Three people have been killed in a mass shooting incident at a manufacturing plant in Maryland town of Smithsburg.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X