ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಪ್ರಬಲ ಭೂಕಂಪ, 3 ಮಂದಿ ಸಾವು

|
Google Oneindia Kannada News

ಬೀಜಿಂಗ್, ಸೆಪ್ಟೆಂಬರ್ 16: ನೈಋತ್ಯ ಚೀನಾದ ಸಿಚುವಾಂಗ್ ಪ್ರಾಂತ್ಯದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ ಮೂವರು ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಗುರುವಾರ ಬೆಳಗಿನ ಜಾವ 4.33ರ ಹೊತ್ತಿಗೆ 6.0 ತೀವ್ರತೆಯ ಭೂಕಂಪ ಸಂಭವಿಸಿದೆ, ಮೂವರು ಪ್ರಾಣಕಳೆದುಕೊಂಡಿದ್ದು, 60ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.

ಭೂಕಂಪ ಸಂಭವಿಸಿದ ಬಳಿಕ ಲೌಝೊವು ನಗರದಲ್ಲಿ ಮೊದಲ ಹಂತದ ತುರ್ತು ಕಾರ್ಯಾಚರಣೆ ಆರಂಭಿಸಲಾಗಿದೆ. ಭೂಕಂಪ ಸಂಭವಿಸಿದ ಪ್ರದೇಶದಲ್ಲಿ 3 ಸಾವಿರ ಮಂದಿಯನ್ನು ಸ್ಥಳಾಂತರಿಸಲಾಗಿದೆ.

ಚೀನಾದ ಕ್ವಿಂಗೈ ಪ್ರಾಂತ್ಯದಲ್ಲಿ 7.4 ತೀವ್ರತೆಯ ಭೂಕಂಪಚೀನಾದ ಕ್ವಿಂಗೈ ಪ್ರಾಂತ್ಯದಲ್ಲಿ 7.4 ತೀವ್ರತೆಯ ಭೂಕಂಪ

ಲುಕ್ಸಿಯಾನ್ ಎಂಬಲ್ಲಿ 10 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರಬಿಂದುವಿದೆ. ಎಂದು ಸರ್ಕಾರಿ ಸ್ವಾಮ್ಯದ ಕ್ಸುನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

Three Killed, Dozens Injured As Shallow Quake Hits Chinas Sichuan

ಇಷ್ಟು ವರ್ಷಗಳಲ್ಲಿ ಈ ಸ್ಥಳದಲ್ಲಿ ಸಂಭವಿಸಿದ ಭೂಕಂಪಗಳ ಪೈಕಿ ಎರಡನೇ ಅತಿ ಪ್ರಬಲ ಭೂಕಂಪ ಇದಾಗಿದೆ. ಅಮೆರಿಕದ ಜಿಯಾಲಾಜಿಕಲ್ ಸಮೀಕ್ಷೆ ಪ್ರಕಾರ 5.4 ಮ್ಯಾಗ್ನಿಟ್ಯೂಡ್‌ನಷ್ಟಿತ್ತು, ಆದರೆ ಚೀನಾವು 6.0 ಮ್ಯಾಗ್ನಿಟ್ಯೂಡ್‌ನಷ್ಟು ತೀವ್ರತೆ ಇತ್ತು ಎಂದು ಹೇಳಿದೆ.

ಸುತ್ತಮುತ್ತಲ ಪ್ರದೇಶದಲ್ಲಿ 30 ಮಿಲಿಯನ್‌ಗೂ ಅಧಿಕ ಮಂದಿ ವಾಸಿಸುತ್ತಿದ್ದಾರೆ. 2008ರಲ್ಲಿ 7.9 ಮ್ಯಾಗ್ನಿಟ್ಯೂಟ್ ಭೂಕಂಪ ಸಂಭವಿಸಿದ್ದು, 87,000 ಮಂದಿ ಮೃತಪಟ್ಟಿದ್ದರು, ಹಲವರು ಕಾಣೆಯಾಗಿದ್ದರು.

ಚೀನಾದಲ್ಲಿ ಮೇ ತಿಂಗಳಿನಲ್ಲಿ ಭೂಕಂಪ ಸಂಭವಿಸಿತ್ತು.ಚೀನಾದಲ್ಲಿ 7.4 ತೀವ್ರತೆಯ ಭೂಕಂಪ ದಾಖಲಾಗಿತ್ತು. ಅದಕ್ಕೂ ಮುನ್ನ ಯುನ್ನಾನ್‌ನ ನೈಋತ್ಯ ಭಾಗದಲ್ಲಿ 6.0 ತೀವ್ರತೆಯ ಭೂಕಂಪ ದಾಖಲಾಗಿದ್ದು, ಐದು ಗಂಟೆಗಳ ಅಂತರದಲ್ಲೇ ಮತ್ತೊಂದು ಭೂಕಂಪ ಸಂಭವಿಸಿದೆ.

ಎರಡನೇ ಬಾರಿ ದಕ್ಷಿಣ ಕ್ವಿಂಗೈ ಪ್ರಾಂತ್ಯದಲ್ಲಿ ಭೂಕಂಪ ಸಂಭವಿಸಿದೆ. ಪರ್ವತ ಪ್ರದೇಶದಲ್ಲಿ ಭೂಕಂಪದ ಕೇಂದ್ರಬಿಂದುವಿದ್ದು, ನಗರಗಳಿಂದ ದೂರವಿರುವ ಕಾರಣ ಹೆಚ್ಚಿನ ಮಟ್ಟದಲ್ಲಿ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.

ಕ್ವಿಂಗೈನಲ್ಲಿ ಸಂಭವಿಸಿದ ಭೂಕಂಪದ ಕೇಂದ್ರಬಿಂದುವು ಬೆಳಿಗ್ಗೆ 2:04 ಕ್ಕೆ (1804 ಜಿಎಂಟಿ ಶುಕ್ರವಾರ) 10 ಕಿಲೋಮೀಟರ್ (ಆರು ಮೈಲಿಗಳು) ಆಳದಲ್ಲಿ, ಕ್ಸೈನಿಂಗ್ ನಗರದ ನೈರುತ್ಯಕ್ಕೆ 400 ಕಿ.ಮೀ ದೂರದಲ್ಲಿದೆ ಎಂದು ಯುಎಸ್ ಭೂಕಂಪ ಶಾಸ್ತ್ರಜ್ಞರು ತಿಳಿಸಿದ್ದಾರೆ.

ಜಪಾನ್‌ನಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪಜಪಾನ್‌ನಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪ ಈ ಎರಡು ಭೂಕಂಪಗಳ ಕೇಂದ್ರಬಿಂದು ಸುಮಾರು 500 ಮೈಲುಗಳ ದೂರದಲ್ಲಿದ್ದು, ಇವೆರಡೂ ಭೂಕಂಪಗಳು ಹಿಮಾಲಯದ ಪರ್ವತ ಪ್ರದೇಶಗಳಲ್ಲಿ ನಡೆಯುತ್ತಿರುವ ಘರ್ಷಣೆಯ ಫಲವಾಗಿದೆ ಎಂದು ಯುಎಸ್‌ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಈ ಎರಡು ಭೂಕಂಪದಲ್ಲಿ ಇಬ್ಬರು ಸಾವನ್ನಪ್ಪಿರುವುದಾಗಿ ವರದಿಯಾಗಿತ್ತು.

English summary
Three people were killed when a shallow earthquake struck southwestern China in the early hours of Thursday, triggering the second-highest level of emergency response by rescuers in Sichuan province, state media said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X