ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಲಿಬಾನ್‌ ಪರ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗಿ!

|
Google Oneindia Kannada News

ಕಾಬೂಲ್‌, ಅಕ್ಟೋಬರ್‌ 03: ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ತಾಲಿಬಾನ್‌ ಪರವಾಗಿ ನಡೆದ ಮೆರವಣಿಗೆಯಲ್ಲಿ ಸುಮಾರು ಒಂದು ಸಾವಿರಕ್ಕೂ ಅಧಿಕ ಮಂದಿ ಭಾನುವಾರ ಭಾಗಿಯಾಗಿದ್ದಾರೆ ಎಂದು ವರದಿಯಾಗಿದೆ. ಈ ರ್‍ಯಾಲಿಯಲ್ಲಿ ಮುಖ್ಯವಾಗಿ ವಯಸ್ಕ ಪುರುಷರು ಹಾಗೂ ಬಾಲಕರು ಮಾತ್ರ ಇದ್ದರು ಎಂಬುವುದು ಗಮನಿಸಬೇಕಾದ ವಿಚಾರ. ಕೊಹ್ಧಮಾನ್‌ನಲ್ಲಿ ತಾಲಿಬಾನ್‌ ಅಧಿಕಾರಿಗಳ ಭಾಷಣವನ್ನು ಈ ಜನರು ಕೇಳಿದ್ದಾರೆ.

ಯುಎಸ್‌ ತನ್ನ ಸೇನೆಯನ್ನು ಅಫ್ಘಾನಿಸ್ತಾನದಿಂದ ವಾಪಸ್‌ ಪಡೆದ ಬಳಿಕ ತಾಲಿಬಾನ್‌ ಅಫ್ಘಾನಿಸ್ತಾನಕ್ಕೆ ದಾಳಿ ನಡೆಸಿದೆ. ಆಗಸ್ಟ್‌ 15 ರಂದು ಸಂಪೂರ್ಣವಾಗಿ ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಆ ಬಳಿಕ ಮೊದಲ ಬಾರಿಗೆ ಈ ರೀತಿಯಾಗಿ ತನ್ನ ಬೆಂಬಲಿಗರ ರ್‍ಯಾಲಿಯನ್ನು ತಾಲಿಬಾನ್‌ ನಡೆಸುತ್ತಿದೆ.

ಕಾಬೂಲ್‌ನಿಂದ ವಿಮಾನ ಸಂಚಾರಕ್ಕೆ ಅನುಮತಿ ನೀಡಲಿದೆ ಭಾರತಕಾಬೂಲ್‌ನಿಂದ ವಿಮಾನ ಸಂಚಾರಕ್ಕೆ ಅನುಮತಿ ನೀಡಲಿದೆ ಭಾರತ

ಅಧಿಕ ಮಂದಿ ಕಪ್ಪು ಹಾಗೂ ಬಿಳಿ ಬಣ್ಣದ ವಸ್ತ್ರವನ್ನು ಧರಿಸಿದ್ದು, ತಾಲಿಬಾನ್‌ ನಿಯಮದಂತೆ ಬಟ್ಟೆಯನ್ನು ಧರಿಸಿದ್ದರು ಎನ್ನಲಾಗಿದೆ. ಹಾಗೆಯೇ ತಾಲಿಬಾನಿಗರು ರೈಫಲ್‌ಗಳನ್ನು ಕೈಯಲ್ಲಿ ಹಿಡಿದು ತಮ್ಮ ಮುಂದೆ ಕುರ್ಚಿಯಲ್ಲಿ ಕುಳಿತಿದ್ದ ಸಭಿಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಇನ್ನು ತಾಲಿಬಾನ್‌ ಸಿಬ್ಬಂದಿಗಳು ರ್‍ಯಾಲಿಯುದ್ದಕ್ಕೂ ತಾಲಿಬಾನ್‌ ಧ್ವಜವನ್ನು ಹಾಗೂ ಶಸ್ತ್ರಾಸ್ತ್ರವನ್ನು ಎತ್ತಿ ಹಿಡಿದಿದ್ದಾರೆ.

Thousands Attend Rally Outside Kabul To Show Support For Taliban

ಇನ್ನು ಯಾವುದೇ ಶಸ್ತ್ರಾಸ್ತ್ರವನ್ನು ಹೊಂದಿರದ ತಾಲಿಬಾನ್‌ ಬೆಂಬಲಿಗರು ತಾವು ಮನೆಯಲ್ಲೇ ಸಿದ್ಧಪಡಿಸಿದ ಪೋಸ್ಟರ್‌ಗಳನ್ನು ಹಿಡಿದಿದ್ದರು ಎಂದು ಹೇಳಲಾಗಿದೆ. ಇನ್ನು ಕೆಲವರು ಕೆಂಪು ಅಥವಾ ಬಿಳಿ ಬಣ್ಣದ ಬ್ಯಾಂಡ್‌ ಅನ್ನು ತಲೆಗೆ ಹಾಕಿದ್ದರು ಎಂದು ವರದಿಯಾಗಿದೆ. ಇನ್ನು ಕೆಲವು ಹಿರಿಯ ನಾಗರಿಕರು ಮನೆಯಿಂದ ಹೊರ ಬಂದು ರ್‍ಯಾಲಿಯನ್ನು ವೀಕ್ಷಿಸಿದ್ದಾರೆ ಎಂದು ವರದಿಯಾಗಿದೆ.

"ಅಮೆರಿಕವನ್ನು ನಾವು ಸೋಲಿಸಿದ್ದೇವೆ. ಇದು ಅಸಾಧ್ಯ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಸಾಧ್ಯವಾಗಿದೆ," ಎಂದು ಹಾಡನ್ನು ಕೂಡಾ ಈ ರ್‍ಯಾಲಿಯಲ್ಲಿ ಹಾಡಲಾಗಿದೆ ಎಂದು ಹೇಳಲಾಗಿದೆ. ಕೆಲವರು ತಾಲಿಬಾನ್‌ ಪರವಾಗಿ ಘೋಷಣೆಯನ್ನು ಕೂಗಿದ್ದಾರೆ. ಇನ್ನೂ ಕೆಲವರು "ಅಲ್ಲಾಹು ಅಕ್ಬರ್‌" ಎಂದು ಕೂಗಿದ್ದಾರೆ.

ಪ್ರತಿದಿನ ಗಡಿಯತ್ತ 8-9 ಸಾವಿರ ಅಫ್ಘಾನಿಗಳು: ಪಾಕ್‌ಗೆ ಹೋಗುವವರನ್ನು ತಡೆದ ತಾಲಿಬಾನ್‌ಪ್ರತಿದಿನ ಗಡಿಯತ್ತ 8-9 ಸಾವಿರ ಅಫ್ಘಾನಿಗಳು: ಪಾಕ್‌ಗೆ ಹೋಗುವವರನ್ನು ತಡೆದ ತಾಲಿಬಾನ್‌

ಹತ್ತು ತಾಲಿಬಾನಿಗರು ಮೃತರಾಗಿರುವುದಕ್ಕೆ ಅವರನ್ನು ಹುತಾತ್ಮರು ಎಂದು ಹೇಳಿ ಬ್ಯಾನರ್‌ ಅನ್ನು ಹಿಡಿದು ಸಂತಾಪವನ್ನು ಕೂಡಾ ಸೂಚಿಸಲಾಗಿದೆ. ಕಳೆದ ಗುರುವಾರ, ಪೂರ್ವ ಕಾಬೂಲ್‌ನಲ್ಲಿ ಸಣ್ಣ ಮಹಿಳಾ ಹಕ್ಕುಗಳ ಬ್ಯಾನರ್‌ ಪ್ರದರ್ಶನವೂ ನಡೆದಿದೆ. ಆದರೆ ತಾಲಿಬಾನ್ ಕೂಡಲೇ ಇದನ್ನು ತಡೆದಿದೆ ಎಂದು ಹೇಳಲಾಗಿದೆ. ಹಾಗೆಯೇ ಪ್ರತಿಭಟನಾಕಾರರನ್ನು ಚದುರಿಸಲು ಗಾಳಿಯಲ್ಲಿ ಗುಂಡು ಹಾರಿಸಿದೆ. ಈ ಸಂದರ್ಭದಲ್ಲಿ ಪ್ರತಿಭಟನೆ ಮುಂದುವರಿಸಲು ಹೋದ ಮಹಿಳಾ ಹೋರಾಟಗಾರರನ್ನು ತಾಲಿಬಾನ್‌ ಶಸ್ತ್ರಾಸ್ತ್ರದಾರರು ತಳ್ಳಿದ್ದಾರೆ ಎಂದು ವರದಿಯಾಗಿದೆ. ಈ ಸಂದರ್ಭದಲ್ಲಿ ವಿದೇಶಿ ಪತ್ರಕರ್ತರ ಮೇಲೆ ರೈಫಲ್‌ನಿಂದ ಹಲ್ಲೆ ನಡೆದಿದೆ. ಈ ಘಟನೆಯ ವಿಡಿಯೋ ಮಾಡುವುದನ್ನು ತಡೆಯಲಾಗಿದೆ ಎಂದು ವರದಿ ಹೇಳಿದೆ.

ಈ ನಡುವೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಆಡಳಿತದಿಂದಾಗಿ ಆತಂಕಕ್ಕೆ ಒಳಗಾಗಿರುವ ಸಾವಿರಾರು ಅಫ್ಘಾನಿಸ್ತಾನಿಗಳು ದೇಶವನ್ನು ಬಿಟ್ಟು ಹೋಗಲು ಪ್ರಯತ್ನ ಮಾಡುತ್ತಿದ್ದಾರೆ. ತಮ್ಮ ದೇಶದ ದಕ್ಷಿಣ ಗಡಿಯಾದ ಸಾವಿರಾರು ಅಫ್ಘಾನಿಸ್ತಾನಿಗಳು ಪಾಕಿಸ್ತಾನದತ್ತ ಧಾವಿಸಿದ್ದಾರೆ. ಆದರೆ ತಾಲಿಬಾನ್‌ ಮಾತ್ರ ಯಾವುದೇ ಅಫ್ಘಾನಿಸ್ತಾನಿಗಳನ್ನು ಗಡಿ ದಾಟಲು ಬಿಟ್ಟಿಲ್ಲ, ತಡೆದು ನಿಲ್ಲಿಸಿದೆ ಎಂದು ವರದಿಯಾಗಿದೆ.

ಪಾಕಿಸ್ತಾನದಿಂದ ಕೆಲವು ಕಿಲೋ ಮೀಟರ್‌ ದೂರದಲ್ಲಿ ಇರುವ ಸ್ಪಿನ್‌ ಬೋಡಾಕ್‌ನ ವ್ಯಾಪಾರಿ ಪಟ್ಟಣದಲ್ಲಿ ದಾರಿಯಲ್ಲಿ ಕೂತಿರುವ ಝಕ್ಕೀರುದ್ದೀನ್‌ ಎಂಬಾ ಅಫ್ಘಾನಿಸ್ತಾನಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ನಾನು ಅದೇಷ್ಟೋ ಬಾರಿ ಪಾಕಿಸ್ತಾನ ಗಡಿಯನ್ನು ದಾಟಲು ಸಾಧ್ಯವಾಗದೆ ಹಿಂದಕ್ಕೆ ಬಂದಿದ್ದೇನೆ, ಕೆಲವೊಮ್ಮೆ ಹಿಂಸಾತ್ಮಕವಾಗಿ ನನ್ನನ್ನು ಹಿಂದೆ ಕಳುಹಿಸಿದ್ದಾರೆ," ಎಂದು ತಿಳಿಸಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Thousand people Attend Rally Outside Kabul To Show Support For Taliban.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X