ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತೂ ಜಗತ್ತು ನೋಡುವಂತಾದ 258 ಗ್ರಾಮ್ ತೂಕವಿದ್ದ ಜಪಾನ್ ಮಗು

|
Google Oneindia Kannada News

ಟೋಕಿಯೋ, ಏಪ್ರಿಲ್ 19: ಇದು ಜಗತ್ತಿನ ಅತ್ಯಂತ ಪುಟಾಣಿ ಮಗು. ಅಕ್ಟೋಬರ್ ನಲ್ಲಿ ಜಪಾನ್ ನಲ್ಲಿ ಹುಟ್ಟಿದ ಈ ಗಂಡು ಮಗು ಒಂದು ಸೇಬು ಹಣ್ಣಿನಷ್ಟು ತೂಕವಿತ್ತು. ಇದೀಗ ಹೊರ ಜಗತ್ತಿನಲ್ಲಿ ಮಗು ಇರಬಹುದು ಎಂದು ವೈದ್ಯರು ಶುಕ್ರವಾರ ಹೇಳಿದ್ದಾರೆ. ಜಪಾನ್ ನ ರುಸುಕೆ ಸೆಕಿಯಾ ಎಂಬುದು ಮಗುವಿನ ಹೆಸರು. ತುರ್ತು ಸಿಸೇರಿಯನ್ ವಿಭಾಗದಲ್ಲಿ, ಇಪ್ಪತ್ನಾಲ್ಕು ವಾರ ಮತ್ತು ಐದು ದಿನಕ್ಕೆ ಮಗುವಿಗೆ ತಾಯಿ ಜನ್ಮ ನೀಡಿದ್ದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಆ ವೇಳೆ ಅವರಿಗೆ ಹೈಪರ್ ಟೆನ್ಷನ್ ಕಾಣಿಸಿಕೊಂಡಿತ್ತು. ಅನಿವಾರ್ಯವಾಗಿ ಹೆರಿಗೆ ಮಾಡಿಸಲಾಯಿತು. ಆ ಮಗು 258 ಗ್ರಾಮ್ ತೂಕವಿತ್ತು. ಅದಕ್ಕೂ ಹಿಂದಿನ ದಾಖಲೆ ಜಪಾನ್ ನ ಮಗುವಿನ ಹೆಸರಲ್ಲೇ ಇತ್ತು. ಕಳೆದ ವರ್ಷ ಹುಟ್ಟಿದ್ದ ಅದರ ತೂಕ 268 ಗ್ರಾಮ್ ಇತ್ತು. ಆ ಮಗುವನ್ನು ಫೆಬ್ರವರಿಯಲ್ಲಿ ಟೋಕಿಯೋ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

This is worlds smallest baby boy, Weighing 258 grams

ರುಸುಕೆ ಜನಿಸಿದ್ದು ಅಕ್ಟೋಬರ್ 1, 2018ರಲ್ಲಿ. ಆಗ 22 ಸೆಂ.ಮೀ. ಇದ್ದ ಮಗುವನ್ನು ವೈದ್ಯಕೀಯ ಸಿಬ್ಬಂದಿ ಮಕ್ಕಳ ತೀವ್ರ ನಿಗಾ ಘಟಕದಲ್ಲಿ ಜೋಪಾನ ಮಾಡಿದ್ದಾರೆ. ಮಗುವಿಗೆ ನಳಿಕೆ ಮೂಲಕ ಆಹಾರ ನೀಡಿದ್ದಾರೆ. ಹಲವು ಮಂದಿ ಕಿವಿಯನ್ನು ಸ್ವಚ್ಛ ಮಾಡುವ ಸಲುವಾಗಿ ಬಳಸುತ್ತಾರಲ್ಲ, ಹತ್ತಿಯ ಕಡ್ಡಿಯಂಥದ್ದು ಅದರಲ್ಲಿ ಎಷ್ಟೋ ಸಲ ತಾಯಿಯ ಹಾಲನ್ನು ಕುಡಿಸಿದ್ದಾರೆ.

This is worlds smallest baby boy, Weighing 258 grams

ಆರು ತಿಂಗಳ ನಂತರ ಇದೀಗ ಮಗುವಿನ ತೂಕ ಹದಿಮೂರು ಪಟ್ಟು ಹೆಚ್ಚಾಗಿದೆ. ಮೂರು ಕೇಜಿಗಿಂತ ಹೆಚ್ಚು ತೂಕವಿದೆ. ನಗಾನೋ ಮಕ್ಕಳ ಆಸ್ಪತ್ರೆಯಿಂದ ವಾರಾಂತ್ಯದಲ್ಲಿ ಮಗುವಿನ ಡಿಸ್ಚಾರ್ಜ್ ಮಾಡಲಾಗುತ್ತದೆ.

English summary
The world's smallest baby boy, who was born in October in Japan weighing as much as an apple, is now ready for the outside world, his doctor said Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X