ಸಾಯುವುದಕ್ಕೂ ಮುನ್ನ ಶಕೀಲ್ ಹೇಗಿದ್ದ, ಇಲ್ಲಿದೆ ಫೋಟೋ!

Posted By: ವಿಕಾಸ್ ನಂಜಪ್ಪ
Subscribe to Oneindia Kannada

ಕರಾಚಿ, ಜನವರಿ 05: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಲಗೈ ಬಂಟ ಛೋಟಾ ಶಕೀಲ್ ಇನ್ನಿಲ್ಲ ಎಂಬ ಸುದ್ದಿ ಖಚಿತವಾಗಿದ್ದನ್ನು ಒನ್ಇಂಡಿಯಾದಲ್ಲಿ ಓದಿರುತ್ತೀರಿ. ಶಕೀಲ್ ಹಾಗೂ ದಾವೂದ್ ಇಬ್ಬರು ಕೊನೆಯ ಬಾರಿ ಭೇಟಿಯಾದ ಬಂಗಲೆ, ಸಾಯುವುದಕ್ಕೂ ಮುನ್ನ ಶಕೀಲ್ ಹೇಗಿದ್ದ ಎಂಬುದರ ಚಿತ್ರಣ ಇಲ್ಲಿದೆ.

ಸಾವಿಗೂ ಮೊದಲು ಶಕೀಲ್ - ದಾವೂದ್ ಭೇಟಿಯಾದ ಗೌಪ್ಯ ಮನೆ

ಛೋಟಾ ಶಕೀಲ್ ಮೃತನಾದ ಬಳಿಕ ಆತನ ಪತ್ನಿ ಆಯೇಷಾಳನ್ನು ಕರಾಚಿಯಿಂದ ಲಾಹೋರ್ ನ ಕಂಟೋನ್ಮೆಂಟ್ ಪ್ರದೇಶಕ್ಕೆ ಐಎಸ್ಐ ಕರೆದುಕೊಂಡು ಬಿಟ್ಟಿದೆ.

ಛೋಟಾ ಶಕೀಲ್ ಕತೆ ಮುಗೀತು, ಐಎಸ್ಐ ವಶದಲ್ಲಿ ಡಿ ಗ್ಯಾಂಗ್ ಆಸ್ತಿ!

ಶಕೀಲ್ ಸಾವಿನ ದಿನಾಂಕದ ಬಗ್ಗೆ ನಿಖರ ಮಾಹಿತಿ ಇದ್ದರೂ ಶಕೀಲ್ ಸತ್ತಿದ್ದು ಹೇಗೆ ಎಂಬುದು ಇನ್ನೂ ನಿಗೂಢವಾಗಿದೆ. ದಾವೂದ್ ಗ್ಯಾಂಗಿನ ಜತೆ ಜಗಳ, ಡಿ ಗ್ಯಾಂಗಿಗೆ ಹೊಸ ಉತ್ತರಾಧಿಕಾರಿ ನೇಮಕ ಎಲ್ಲವನ್ನು ಐಎಸ್ಐ ವಹಿಸಿಕೊಂಡಿದ್ದು ಒಂದೆಡೆಯಾದರೆ, ಶಕೀಲ್ ನನ್ನು ಐಎಸ್ಐ ಮುಗಿಸಿತೇ? ಅಥವಾ ಡ್ರಗ್ಸ್ ಓವರ್ ಡೋಸ್ ನಿಂದ ಸತ್ತನೇ ಇನ್ನೂ ಸ್ಪಷ್ಟವಾಗಿಲ್ಲ.

ಶಕೀಲ್ ಹೇಗಿದ್ದ,ಆಡಿಯೋ ಸಾಕ್ಷಿ ಇಲ್ಲಿದೆ

ಶಕೀಲ್ ಹೇಗಿದ್ದ,ಆಡಿಯೋ ಸಾಕ್ಷಿ ಇಲ್ಲಿದೆ

ಶಕೀಲ್ ನ ಮಾಜಿ ಬಲಗೈ ಬಂಟ ಬಿಲಾಲ್ ಹಾಗೂ ಸಲೀಲ್ ಫ್ರೂಟ್ ನಡುವಿನ ಸಂಭಾಷಣೆಯ ಅಡಿಯೋ ತುಣುಕು ಆಲಿಸಿದರೆ, ಶಕೀಲ್ ಬಹುಶಃ ಹೃದಯಾಘಾತಕ್ಕೊಳಗಾಗಿ ಸತ್ತಿರುವ ಶಂಕೆ ವ್ಯಕ್ತವಾಗುತ್ತದೆ. ಸಾವಿನ ಬಗ್ಗೆ ನನಗೆ ತಿಳಿದಿದೆ ಎಂದು ಖಚಿತಪಡಿಸುವ ಸಲೀಂ, ಆಯೇಷಾ ಈಗ ಲಾಹೋರ್ ನಲ್ಲಿರುವುದು ಗೊತ್ತು ಎನ್ನುತ್ತಾನೆ. ಚಿತ್ರದಲ್ಲಿ ನೋಡಿ ಶಕೀಲ್, ಆಡಿಯೋ ಇಲ್ಲಿ ಕೇಳಿಸಿಕೊಳ್ಳಿ

ದಾವೂದ್ ಸ್ಥಿತಿಗತಿ

ದಾವೂದ್ ಸ್ಥಿತಿಗತಿ

ಈ ಹಿಂದಿನ ಲೇಖನಗಳಲ್ಲಿ ಹೇಳಿದಂತೆ ಛೋಟಾನನ್ನು ಕಳೆದುಕೊಂಡ ಬಳಿಕ ದಾವೂದ್ ಇನ್ನಷ್ಟು ಹಣ್ಣಾಗಿದ್ದಾನೆ. ಐಎಸ್ಐ ಎಲ್ಲಾ ಆಡಳಿತವನ್ನು ನೋಡಿಕೊಳ್ಳುತ್ತಿದ್ದು, 'ಶೋಕಿಲಾಲ' ರಹೀಂ ಮರ್ಚಂಟ್ ಇದರ ಉಸ್ತುವಾರಿಕೆ ವಹಿಸಿಕೊಂಡಿದ್ದಾನೆ. ಆದರೆ, ರಹೀಂ ಜತೆ ದಾವೂದ್ ನೇರವಾಗಿ ಸಂಭಾಷಿಸುತ್ತಿಲ್ಲ.
ರಹೀಂ ಜತೆ ಡೀಲ್ ಮಾಡುತ್ತಿರುವುದು ಸಬಿಯಾ ಸಯೇದ್. ಬ್ರಿಟಿಷ್ ನಾಗರೀಕಳಾದ ಸಬಿಯಾ ಮೂಲಕ ರಹೀಂ ಜತೆ ದಾವೂದ್ ಸಂಪರ್ಕ ಇಟ್ಟುಕೊಂಡಿದ್ದಾನೆ ಎಂದು ಒನ್ಇಂಡಿಯಾಕ್ಕೆ ಗೊತ್ತಾಗಿದೆ. ಚಿತ್ರದಲ್ಲಿ ಶಕೀಲ್ ಇದ್ದ ಬಂಗಲೆ.

ಡಿ ಗ್ಯಾಂಗಿನ ಖಾತೆ ಯಾರ ಹೆಸರಿನಲ್ಲಿದೆ

ಡಿ ಗ್ಯಾಂಗಿನ ಖಾತೆ ಯಾರ ಹೆಸರಿನಲ್ಲಿದೆ

ಡಿ ಗ್ಯಾಂಗಿನ ವ್ಯವಹಾರಗಳನ್ನು ಖಾಸಗಿ ಅಕೌಂಟಟ್ ನಾದಿಯಾ ಮಲೀಕ್ ನೋಡಿಕೊಳ್ಳುತ್ತಿದ್ದಾರೆ. ಮಗ ಮುಬಾಶೀರ್ ಅಹ್ಮದ್ ಕೂಡಾ ವ್ಯವಹಾರದಲ್ಲಿ ಕೈ ಜೋಡಿಸಿದ್ದಾನೆ.

ಕರಾಚಿಯ ಮೂರು ಕಡೆ ಬಂಗಲೆಗಳಿವೆ, ನ್ಯೂಜಿಲೆಂಡಿನ ಅಕ್ಲೆಂಡ್, ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್,ಯುನೈಟೆಡ್ ಕಿಂಗ್ಡಮ್ ನ ನಿಕೋಸಿಯಾ, ಎಸೆಕ್ಸ್ ಅಲ್ಲದೆ ಐಲ್ ಫೊರ್ಡ್,ಡಾರ್ಟ್ ಫೋರ್ಡ್ ಗಳಲ್ಲಿ ಡಿ ಗ್ಯಾಂಗಿನ ಆಸ್ತಿ ಇದೆ. ಚಿತ್ರದಲ್ಲಿ ಶಕೀಲ್ ಪತ್ನಿ ಆಯೇಷಾ

ದಾವೂದ್-ಕರಾಚಿ ಬಿಟ್ಟು ಕದಲಿಲ್ಲ

ದಾವೂದ್-ಕರಾಚಿ ಬಿಟ್ಟು ಕದಲಿಲ್ಲ

ದಾವೂದ್ ಇಬ್ರಾಹಿಂ ಆರೋಗ್ಯ ತೀವ್ರ ಹದಗೆಟ್ಟಿದ್ದು ಮಾರುಕಟ್ಟೆಯಲ್ಲಿನ ಸ್ಥಿತಿಗತಿಗಳನ್ನು ಪರೋಕ್ಷವಾಗಿ ನಿಭಾಯಿಸುತ್ತಿದ್ದ ಐಎಸ್ಐ ಈಗ ನೇರವಾಗಿ ಕಣಕ್ಕಿಳಿದಿದೆ. ದಾವೂದ್ ಬಳಿ ಸೈಂಟ್ ಕಿಟ್ಸ್, ಮಲಾವಿ, ಡೊಮಿನಿಕನ್ ರಿಪಬ್ಲಿಕ್, ಕೋಸ್ಟರಿಕಾ, ಸೌದಿ ಅರೇಬಿಯಾ ಹಾಗೂ ಯೆಮನ್ ಪಾಸ್ ಪೋರ್ಟ್ ಗಳಿವೆ. ಆದರೆ, ಇತ್ತೀಚೆಗೆ ಪಾಕಿಸ್ತಾನದಿಂದ ಹೊರಗೆ ಹೋಗಿಲ್ಲ. ಮೆಕ್ಕಾಕ್ಕೆ ಹಜ್ ಯಾತ್ರೆ ಮಾಡಿದ್ದು ಬಿಟ್ಟರೆ ಕರಾಚಿ ಬಿಟ್ಟು ಕದಲಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chhota Shakeel's wife Ayesha was moved out of Karachi to the Lahore Cantonment following his death. Shakeel's death happened under mysterious circumstances and sources say that he died of a drug overdose which is suspected to be an ISI hit

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ