ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮಸ್ಯೆ ಅಮೆರಿಕದ ಗನ್ ನಿಯಮದ್ದಲ್ಲ, ಮಾನಸಿಕ ಅಸಮತೋಲನದ್ದು: ಟ್ರಂಪ್

|
Google Oneindia Kannada News

ಟೋಕಿಯೋ, ನವೆಂಬರ್ 07: ಸಮಸ್ಯೆ ಇರುವುದು ಅಮೆರಿಕದ ಗನ್ ನಿಯಮದ್ದಲ್ಲ, ಆದರೆ ಅಂಥ ವ್ಯಕ್ತಿಗಳ ಮಾನಸಿಕೆ ಅಸಮತೋಲನವೇ ಇಂಥ ಘಟನೆಗಳಿಗೆ ಕಾರಣ ಎಂದು ಟೆಕ್ಸಾಸ್ ನಲ್ಲಿ ನಡೆದ ಶೂಟೌಟ್ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಫ್ ಪ್ರತಿಕ್ರಿಯಿಸಿದ್ದಾರೆ.

ವಿಶ್ವದ ದೊಡ್ಡಣ್ಣ ಅಮೆರಿಕವನ್ನು ನಡುಗಿಸಿದ ಆ 10 ಭೀಕರ ಶೂಟೌಟ್!ವಿಶ್ವದ ದೊಡ್ಡಣ್ಣ ಅಮೆರಿಕವನ್ನು ನಡುಗಿಸಿದ ಆ 10 ಭೀಕರ ಶೂಟೌಟ್!

ಏಷ್ಯಾದ 5 ದೇಶಗಳ ಪ್ರವಾಸದ ಭಾಗವಾಗಿ ಜಪಾನಿಗೆ ಭೇಟಿ ನೀಡಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. "ಅಮೆರಿಕದ ಗನ್ ನಿಯಮಗಳು ಸಡಿಲವಾಗಿಲ್ಲ, ಅಥವಾ ನಿಯಮದಲ್ಲಿ ಯಾವುದೇ ದೋಷವಿಲ್ಲ. ಆದರೆ ಕೆಲವು ವ್ಯಕ್ತಿಗಳ ಮಾನಸಿಕ ಆರೋಗ್ಯ ಸಮಸ್ಯೆ ಪರಾಕಾಷ್ಠೆಯ ಸ್ಥಿತಿ ತಲುಪಿರುವುದೇ ಈ ಎಲ್ಲ ಸಮಸ್ಯೆಗಳಿಗೆ ಕಾರಣ. ಇದು ನಿಜಕ್ಕೂ ಅತ್ಯಂತ ಬೇಸರದ ಸಂಗತಿ, ಹೀನಾಯ ಹೀನ ಘಟನೆ" ಎಂದು ಅವರು ಭಾವುಕರಾಗಿ ನುಡಿದರು.

ಟೆಕ್ಸಾಸ್ ಚರ್ಚ್ ನಲ್ಲಿ ಶೂಟೌಟ್ : ಕನಿಷ್ಠ 20 ಜನರ ಹತ್ಯೆ ಟೆಕ್ಸಾಸ್ ಚರ್ಚ್ ನಲ್ಲಿ ಶೂಟೌಟ್ : ಕನಿಷ್ಠ 20 ಜನರ ಹತ್ಯೆ

This isn't a guns situation. This is a mental health problem: Trump

ಇಂಥ ಘಟನೆಗಳನ್ನು ತಡೆಯಲು ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕಿದೆ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.

ನ.5 ರಂದು ಅಮೆರಿಕದ ಟೆಕ್ಸಾಸ್ ನ ಚರ್ಚೆ ವೊಂದರಲ್ಲಿ ವ್ಯಕ್ತಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ 25 ಕ್ಕೂ ಹೆಚ್ಚು ಮಂದಿ ಮೃತರಾಗಿದ್ದರು. ನೂರಾರು ಜನ ಗಾಯಗೊಂಡಿದ್ದರು.

English summary
United States President Donald Trump has called the mass shooting at a Texas church on Sunday a "mental health problem at the highest level" and not an issue with gun laws in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X