• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೋಗ ಇಸ್ಲಾಂ ವಿರೋಧಿ: ಮಾಲ್ಡೀವ್ಸ್‌ನಲ್ಲಿ ಯೋಗ ಮಾಡುತ್ತಿದ್ದವರ ಮೇಲೆ ದಾಳಿ

|
Google Oneindia Kannada News

ಬೆಂಗಳೂರು, ಜೂನ್ 21: ಮಾಲ್ಡೀವ್ಸ್ ದೇಶದಲ್ಲಿ ನಡೆಸಲಾಗುತ್ತಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ದುಷ್ಕರ್ಮಿಗಳ ಗುಂಪೊಂದು ಅಡ್ಡಿ ಮಾಡಿದ ಘಟನೆ ಇಂದು ಮಂಗಳವಾರ ಸಂಭವಿಸಿದೆ. ಕಾರ್ಯಕ್ರಮದಲ್ಲಿ ಯೋಗಾಸನ ಮಾಡುತ್ತಿದ್ದ ಜನರ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿ ಸ್ಥಳದಲ್ಲಿ ದೊಂಬಿ ಗಲಾಟೆ ನಡೆಸಿದ್ದಾರೆ. ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಮಾಲ್ಡೀವ್ಸ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮತ್ತು ಮಾಲ್ಡೀವ್ಸ್‌ನ ಯುವಜನ, ಕ್ರೀಡೆ ಮತ್ತು ಸಮುದಾಯ ಸಬಲೀಕರಣ ಸಚಿವಾಲಯ ಮತ್ತು ವಿಶ್ವಸಂಸ್ಥೆ (ಮಾಲ್ಡೀವ್ಸ್) ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಮಾಲ್ಡೀವ್ಸ್‌ನ ಸಚಿವರು, ವಿದೇಶಾಂಗ ಕಾರ್ಯದರ್ಶಿ, ಭಾರತೀಯ ರಾಯಭಾರಿ, ರಾಜತಾಂತ್ರಿಕ ಅಧಿಕಾರಿಗಳು, ವಿಶ್ವಸಂಸ್ಥೆಯ ಮಾಲ್ಡೀವ್ಸ್ ನಿವಾಸಿ ಸಂಘಟಕರು ಸೇರಿ 150 ಜನರು ಈ ಕಾರ್ಯಕ್ರಮದಲ್ಲಿ ಯೋಗ ಪ್ರದರ್ಶನ ಮಾಡುತ್ತಿದ್ದರೆನ್ನಲಾಗಿದೆ. ಪ್ರತಿಭಟನಾಕಾರರು ಸ್ಥಳಕ್ಕೆ ಲಗ್ಗೆ ಇಟ್ಟು ಹಲ್ಲೆಗೆ ಮುಂದಾಗುತ್ತಿದ್ದಂತೆಯೇ ಯೋಗ ನಿರತರು ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದು ವಿಡಿಯೋದಲ್ಲಿ ಕಾಣಸಿಗುತ್ತದೆ.

ಯೋಗ ದಿನಾಚರಣೆ 2022; ಯೋಗ ಮಾಡಿದ ರಾಜ್ಯದ ರಾಜಕೀಯ ನಾಯಕರುಯೋಗ ದಿನಾಚರಣೆ 2022; ಯೋಗ ಮಾಡಿದ ರಾಜ್ಯದ ರಾಜಕೀಯ ನಾಯಕರು

ಪ್ರತಿಭಟನಾಕಾರರ ಆಕ್ರೋಶ ಏನು?

ಸೋಷಿಯಲ್ ಮೀಡಿಯಾದಲ್ಲಿ ದಾಳಿಯ ವಿಡಿಯೋ ವೈರಲ್ ಆಗಿದೆ. ಅದರಲ್ಲಿ ಯೋಗಾಸನದಲ್ಲಿ ತಲ್ಲೀನರಾಗಿದ್ದ ಜನರಿದ್ದ ಸ್ಥಳಕ್ಕೆ ಪ್ರತಿಭಟನಾಕಾರರ ಗುಂಪೊಂದು ದಾಳಿ ನಡೆಸಿ ಸ್ಥಳದಲ್ಲಿದ್ದ ಬಾವುಟ ಇತ್ಯಾದಿ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದು ಕಾಣುತ್ತದೆ.

ಯೋಗಾಭ್ಯಾಸ ಮಾಡುವುದು ಇಸ್ಲಾಂ ತತ್ವಗಳಿಗೆ ವಿರುದ್ಧವಾಗಿದೆ ಎಂಬರ್ಥದಲ್ಲಿ ಬರೆಯಲಾಗಿದ್ದ ಬೋರ್ಡ್‌ಗಳನ್ನು ಪ್ರತಿಭಟನಾಕಾರರು ಹಿಡಿದುಕೊಂಡಿದ್ದರು ಎಂದು ವರದಿಗಳು ಹೇಳುತ್ತವೆ.

PM Modi Yoga Day Speech : ವಿಶ್ವ ಯೋಗ ದಿನದಂದು ದೇಶದ ಜನರಿಗೆ ಪ್ರಧಾನಿ ಸಂದೇಶPM Modi Yoga Day Speech : ವಿಶ್ವ ಯೋಗ ದಿನದಂದು ದೇಶದ ಜನರಿಗೆ ಪ್ರಧಾನಿ ಸಂದೇಶ

ಆರು ಮಂದಿ ಬಂಧನ

ಆರು ಮಂದಿ ಬಂಧನ

ಮಂಗಳವಾರ ಬೆಳಗ್ಗೆ ರಾಜಧಾನಿ ಮಾಲೆಯಲ್ಲಿ ನಡೆದ ಈ ಘಟನೆ ಸಂಬಂಧ ಮಾಲ್ಡೀವ್ಸ್ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ಮಾಲೆ ನಗರದ ಎಸ್‌ಪಿ ಫಾತಮಾದ್ ನಶ್ವಾ ಈ ಮಾಹಿತಿ ನೀಡಿದರೆಂದು ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಪೊಲೀಸರು ಸದ್ಯ ತನಿಖೆ ನಡೆಸುತ್ತಿದ್ದ ಇನ್ನೂ ಹಲವು ಆರೋಪಿಗಳನ್ನು ಹಿಡಿಯಲು ಬಲೆ ಬೀಸಿದ್ದಾರೆ.

ಮಾಲ್ಡೀವ್ಸ್ ಅಧ್ಯಕ್ಷರ ಖಂಡನೆ

ಯೋಗ ದಿನಾಚರಣೆ ಮಾಡುತ್ತಿದ್ದವರ ಮೇಲೆ ದುಷ್ಕರ್ಮಿಗಳು ನಡೆಸಿರುವ ದಾಳಿಗೆ ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ವಿಷಾದ ವ್ಯಕ್ತಪಡಿಸಿದ್ಧಾರೆ. ಪೊಲೀಸರು ತನಿಖೆ ನಡೆಸುತ್ತಿದ್ದು ದುಷ್ಕರ್ಮಿಗಳಿಗೆ ಕಾನೂನು ರೀತ್ಯಾ ಶಿಕ್ಷೆಯಾಗುತ್ತದೆ ಎಂದು ಭರವಸೆ ನೀಡಿದ್ಧಾರೆ.

"ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇದಕ್ಕೆ ಜವಾಬ್ದಾರರಾದವರನ್ನು ಆದಷ್ಟು ಬೇಗ ಕಾನೂನು ಮುಂದಕ್ಕೆ ಕರೆತರಲಾಗುವುದು" ಎಂದು ಸೋಲಿಹ್ ಟ್ವೀಟ್ ಮಾಡಿದ್ದಾರೆ.

ಮಾಲಾ ದ್ವೀಪ ಎಂಬ ಸಂಸ್ಕೃತ ಅಪಭ್ರಂಶದ ಹೆಸರಿನ ಮಾಲ್ಡೀವ್ಸ್ ದೇಶ ಭಾರತ ಮತ್ತು ಶ್ರೀಲಂಕಾದಿಂದ ನೃಋತ್ಯ ದಿಕ್ಕಿನಲ್ಲಿ 750 ಕಿಮೀ ದೂರದಲ್ಲಿರುವ ದ್ವೀಪ ರಾಷ್ಟ್ರವಾಗಿದೆ. ಬೌದ್ಧ ಧರ್ಮದ ನಾಡಾಗಿದ್ದ ಮಾಲ್ಡೀವ್ಸ್ 12ನೇ ಶತಮಾನದಲ್ಲಿ ಇಸ್ಲಾಂ ಆಕ್ರಮಣಕ್ಕೆ ಒಳಪಟ್ಟು ಈಗ ಸಂಪೂರ್ಣ ಇಸ್ಲಾಮಿಕ್ ರಾಷ್ಟ್ರವಾಗಿದೆ. ಇಲ್ಲಿ ಆರು ಲಕ್ಷ ಸಮೀಪದ ಜನಸಂಖ್ಯೆ ಇದೆ.

ಯೋಗಾಭ್ಯಾಸ ವಿರುದ್ಧ ಕೆಲ ಮುಸ್ಲಿಮರ ವಿರೋಧ

ಯೋಗಾಸನ ಪದ್ಧತಿಯು ದೇವರೊಂದಿಗೆ ಲೀನವಾಗುವ ತತ್ವ ಹೇಳುತ್ತದೆ. ಇದು ಇಸ್ಲಾಮಿಕ್ ತತ್ವಕ್ಕೆ ವಿರುದ್ಧವಾಗಿದೆ. ಇದು ಇಸ್ಲಾಮ್‌ಗೆ 'ಶಿರ್ಕ್' ಎನಿಸಿದೆ. ಶಿರ್ಕ್ ಎಂದರೆ ಯಾವುದೇ ರೀತಿಯ ವಿಗ್ರಹಾರಾಧನೆ ಅಥವಾ ಬಹು ದೇವತಾರಾಧನೆಯ ಧರ್ಮದ ಆಚರಣೆ ಇಸ್ಲಾಂನಲ್ಲಿ ನಿಷಿದ್ಧವಾಗಿದೆ. ಇಂಥವಕ್ಕೆ ಶಿರ್ಕ್ ಎನ್ನುತ್ತಾರೆ. ಯೋಗವೂ ಕೂಡ ಶಿರ್ಕ್ ಆಗಿದ್ದು, ಅದನ್ನು ಆಚರಿಸುವುದು ಇಸ್ಲಾಂ ಧರ್ಮ ವಿರೋಧಿಯಾಗುತ್ತದೆ ಎಂಬುದು ಕೆಲವರ ವಾದ.

ಮೇಲಾಗಿ ಹಿಂದೂ ಧರ್ಮಗ್ರಂಥಗಳಲ್ಲಿ ಯೋಗದ ಪ್ರಸ್ತಾಪ ಇದೆ. ಶಿವನು ಯೋಗ ಭಂಗಿಯಲ್ಲಿ ನಿಂತಿದ್ದಾರೆ. ಸೂರ್ಯನನ್ನು ದೇವರಂತೆ ಕಂಡು ಕೈ ಮುಗಿಯುವ ಭಂಗಿ ಇದೆ. ಇದರಲ್ಲಿರುವ ಪ್ರಾಣಾಯಾಮ ಇತ್ಯಾದಿ ಕ್ರಿಯೆಗಳು ಹಿಂದೂ ಧರ್ಮಕ್ಕೆ ಅಂಟಿಕೊಂಡಿವೆ ಎಂದು ಇನ್ನೂ ಕೆಲ ಯೋಗ ವಿರೋಧಿ ಮುಸ್ಲಿಮರ ಅನಿಸಿಕೆ.

English summary
International Yoga Day event in Maldives was disrupted by violent protest by a mob who were holding placards that said Yoga is anti-islamic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X