• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಣ್ಣು ಕಾಣದ ಅಜ್ಜಿ ವಂಗಾ ಹೇಳಿದ ಭವಿಷ್ಯ ಸುಳ್ಳಾಗಿದೆ

By Mahesh
|

ಈಕೆ ಹೇಳಿದ ಭವಿಷ್ಯಗಳೆಲ್ಲ ನಿಜವಾಗುತ್ತಿದೆ. ಈಕೆ ಸತ್ತು ಈಗಾಗಲೇ 20 ವರ್ಷ ಕಳೆದಿದೆ. ಆದರೆ ಆಕೆ ಹೇಳಿದ್ದ ಮಾತುಗಳೆಲ್ಲ ಒಂದೊಂದೇ ನಿಜವಾಗಿವೆ, ನಿಜವಾಗುತ್ತಲೂ ಇವೆ.

ಆದರೆ, ಆ ಅಜ್ಜಿ ಹೇಳಿದ್ದ ಭವಿಷ್ಯವಾಣಿಯೊಂದು ಸುಳ್ಳಾಗಿದೆ. ಆಕೆಯ ಪ್ರಕಾರ, ಬರಾಕ್ ಒಬಾಮಾ ಅಮೆರಿಕದ ಕಟ್ಟಕಡೆಯ ಅಧ್ಯಕ್ಷರಾಗುತ್ತಾರೆ ಅಂತ ನುಡಿದಿದ್ದಳು. ಅದೀಗ ಸುಳ್ಳಾಗಿದ್ದು, ಡೊನಾಲ್ಡ್ ಟ್ರಂಪ್ 45ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನಮ್ಮ ತಾಳೆಗರಿ ಜ್ಯೋತಿಷಿಗಳು ಹೇಳಿರುವ ಹಲವಾರು ನುಡಿಗಳು ಸುಳ್ಳಾಗಿಲ್ಲವೆ?

ಅಮೆರಿಕದ ಅವಳಿ ಕಟ್ಟಡದ ಮೇಲಿನ ದಾಳಿ, ಅಮೆರಿಕದ ಅಧ್ಯಕ್ಷರಾಗಿ ಒಬಾಮಾ, ಉಗ್ರ ಸಂಘಟನೆಗಳ ಆರ್ಭಟ, ಸುನಾಮಿ ಬಗ್ಗೆ ಹೇಳಿದ್ದ ಮಾತುಗಳೆಲ್ಲ ನಿಜವಾಗಿದೆ. ಮುಂದಿನ ವರ್ಷ ಅಂದರೆ 2016ರಲ್ಲಿ ಮುಸ್ಲಿಂ ಉಗ್ರ ಸಂಘಟನೆಗಳು ಪ್ರಪಂಚವನ್ನೇ ನಲುಗಿಸಲಿವೆ ಎಂಬ ಎಚ್ಚರಿಕೆಯನ್ನು ಅಜ್ಜಿ ನೀಡಿಹೋಗಿದ್ದಾಳೆ

ಈ ವಿಶಿಷ್ಟ ಶಕ್ತಿ ಹೊಂದಿದ್ದ ಅಜ್ಜಿಯ ಹೆಸರು ಬಾಬಾ ವಂಗಾ. ಬಲ್ಗೇರಿಯಾ ಮೂಲದ ಬಾಬಾ ವಂಗಾ 1996ರಲ್ಲಿ ತನ್ನ 85 ವರ್ಷದಲ್ಲಿ ಇಹಲೋಕ ಪ್ರಯಾಣವನ್ನು ಮುಗಿಸಿದ್ದಾಳೆ. ಆದರೆ ಆಕೆ ಹೇಳಿದ ಭವಿಷ್ಯಗಳು ಇಂದಿಗೂ ಜೀವಂತ. ತುರ್ಕಿಯ ಒಟ್ಟಮನ್ ಪ್ರಾಂತ್ಯದ ಪರ್ವತ ಪ್ರದೇಶಗಳೇ ತುಂಬಿರುವ ಸ್ಟ್ರುಮಿಕಾ ಎಂಬ ಹಳ್ಳಿಯೊಂದರಲ್ಲಿ ವಂಗಾ ಜನಿಸಿದ್ದರು. ಭೀಕರ ಗಾಳಿಗೆ ಸಿಕ್ಕಿ ಆಕೆ ತನ್ನ ಕಣ್ಣಿನ ದೃಷ್ಟಿ ಕಳೆದುಕೊಂಡಳು.[ಕೋಡಿಶ್ರೀಗಳೇ ನೀವು ನುಡಿದ ಭವಿಷ್ಯ ಉಲ್ಟಾ ಹೊಡೀತಲ್ವೇ?]

ಇದಾದ ಮೇಲೆ ನಾನು ಪ್ರಪಂಚದ ಮುಂದಿನ ಆಗುಹೋಗುಗಳನ್ನು ಕಾಣುತ್ತಿದ್ದೇನೆ ಎನ್ನಲು ಆರಂಭಿಸಿದ್ದಳು. ಮೊದಲಿಗೆ ಜನ ನಂಬದಿದ್ದರೂ ಆಕೆ ಹೇಳಿದ್ದೆಲ್ಲ ನಿಜವಾಗುತ್ತ ಬಂದಿತು. ಆಕೆಗೆ ಬೆಂಬಲಿಗರು ಹುಟ್ಟಿಕೊಂಡರು. ಆಕೆಯನ್ನು ಆರಾಧಿಸಲು ಆರಂಭಿಸಿದರು. ಶ್ರೀಮಂತ ವ್ಯಕ್ತಿಗಳು, ರಾಜಕಾರಣಿಗಳು ಆಕೆಯನ್ನು ನೆಚ್ಚಿಕೊಂಡರು. ಆಕೆ ಹೇಳುವ ಭವಿಷ್ಯಕ್ಕೆ ದುಂಬಾಲು ಬೀಳಲು ಆರಂಭಿಸಿದರು.[ಡಿಸೆಂಬರ್ 2015 ತಿಂಗಳ ರಾಶಿ ಭವಿಷ್ಯ ನೋಡಿ]

ಕಣ್ಣು ಕಾಣದ ಅಜ್ಜಿ ಪ್ರಪಂಚದ ಮುಂದಿನ ಎಲ್ಲ ಆಗು ಹೋಗುಗಳನ್ನು ಲೆಕ್ಕಹಾಕಿ ಹೇಳಿ ಹೋಗಿದ್ದಾರೆ. ಈಕೆಯ ಮಾತುಗಳು ಶೇ. 85 ರಷ್ಟು ನಿಜವಾಗಿದೆ. ಹಾಗಾದರೆ ಆಕೆ ಯಾವ ಯಾವ ಆಗುಹೋಗುಗಳ ಬಗ್ಗೆ ಹೇಳಿದ್ದಳು? ಮುಂದೆ ಪ್ರಪಂಚದಲ್ಲಿ ಘಟಿಸಬಹುದಾದ ಅನಾಹುತಗಳೇನು? ಇಲ್ಲಿದೆ ಉತ್ತರ..

ಟಿವಿ ವಾಹಿನಿಗಳ ಭವಿಷ್ಯ ಸಮಾಜದಲ್ಲಿ ಮೌಢ್ಯ ಬಿತ್ತುತಿದೆಯಾ...?

ಸೆಪ್ಟೆಂಬರ್ 11ರ ದಾಳಿ ಎಚ್ಚರಿಕೆ

ಸೆಪ್ಟೆಂಬರ್ 11ರ ದಾಳಿ ಎಚ್ಚರಿಕೆ

ಅಮೆರಿಕದ ಅವಳಿ ಗೋಪುರಗಳ ಮೇಲೆ ಸೆಪ್ಟೆಂಬರ್ 11, 2001ರಂದು ನಡೆದ ವಿಧ್ವಂಸಕ ಕೃತ್ಯದ ಬಗ್ಗೆ ವಂಗಾ ಮೊದಲೇ ಹೇಳಿದ್ದಳು.

 ಅಮೆರಿಕದ ಸಹೋದರರ ಮೇಲೆ ದಾಳಿ

ಅಮೆರಿಕದ ಸಹೋದರರ ಮೇಲೆ ದಾಳಿ

ಅಮೆರಿಕದ ಇಬ್ಬರು ಸಹೋದರರ ಮೇಲೆ ಲೋಹದ ಹಕ್ಕಿಗಳು ದಾಳಿ ಮಾಡಲಿವೆ. ಅಮಾಯಕರ ರಕ್ತ ಹರಿಯಲಿದೆ ಎಂದು ಹೇಳಿದ್ದಳು.

 2004 ಸುನಾಮಿಗೆ ಜಪಾನ್ ತತ್ತರ

2004 ಸುನಾಮಿಗೆ ಜಪಾನ್ ತತ್ತರ

ಲಕ್ಷಾಂತರ ಜನರ ಪ್ರಾಣ ತೆಗೆದುಕೊಂಡ ಸುನಾಮಿ ಬಗ್ಗೆಯೂ ಈಕೆ ಹೇಳಿದ್ದಳು. 1950ರಲ್ಲೇ ಅಲೆಯೊಂದು ಭೂಮಿಯನ್ನು ಅಲ್ಲೋಲ ಕಲ್ಲೋಲ ಮಾಡಲಿದೆ ಎಂದು ಹೇಳಿದ್ದಳು. ಇಂಡೋನೆಷಿಯಾ, ಜಪಾನ್ ನಲ್ಲಿ ಅಪಾರ ನಷ್ಟ ಸಂಭವಿಸಿತ್ತು.

 ನೀರಿನಲ್ಲಿ ಮುಳುಗಲಿದೆ

ನೀರಿನಲ್ಲಿ ಮುಳುಗಲಿದೆ

ದೊಡ್ಡದೊಂದು ಅಲೆ ಅಪ್ಪಳಿಸಲಿದ್ದು ಭೂಮಿ ನೀರಿನಲ್ಲಿ ಮುಳುಗಿ ಅಪಾರ ಹಾನಿ ಸಂಭವಿಸಲಿದೆ ಎಂದು ವಂಗಾ ತನ್ನ ಬೆಂಬಲಿಗರ ಬಳಿ ಹೇಳಿದ್ದಳು.

ಮುಸ್ಲಿಂ ಯುದ್ಧ ಆರಂಭ

ಮುಸ್ಲಿಂ ಯುದ್ಧ ಆರಂಭ

2010ರಲ್ಲಿ ಮುಸ್ಲಿಂ ಯುದ್ಧ ಆರಂಭವಾಗಲಿದೆ. ಅದು ಸಿರಿಯಾದ ಮೂಲಕ ಪ್ರಪಂಚದ ವಿವಿಧೆಡೆ ಹರಡಲಿದೆ ಎಂದು ಹೇಳಿದ್ದಳು. ಇದು ನಿಜವಾದ ಬಗ್ಗೆ ಬೇರೆ ದಾಖಲೆಗಳು ಬೇಕಿಲ್ಲ.

2043ಕ್ಕೆ ಮುಸ್ಲಿಂ ಯುದ್ಧ ಕೊನೆ

2043ಕ್ಕೆ ಮುಸ್ಲಿಂ ಯುದ್ಧ ಕೊನೆ

2043ಕ್ಕೆ ಮುಸ್ಲಿಂ ಯುದ್ಧ ಕೊನೆಯಾಗಲಿದೆ. ರೋಮ್ ನೊಂದಿಗೆ ಮುಸ್ಲಿಂ ಧರ್ಮಗುರುಗಳು ಹೊಂದಾಣಿಕೆ ಮಾಡಿಕೊಂಡು ಗೊಂದಲಗಳಿಗೆ ಅಂತ್ಯ ಹಾಡಲಿದ್ದಾರೆ.

ಯುರೋಪ್ ಅಸ್ತಿತ್ವ ಕಳೆದುಕೊಳ್ಳಲಿದೆ.

ಯುರೋಪ್ ಅಸ್ತಿತ್ವ ಕಳೆದುಕೊಳ್ಳಲಿದೆ.

ಮುಂದಿನ ವರ್ಷಾಂತ್ಯಕ್ಕೆ ಯುರೋಪ್ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ. ಜನರು ಮನೆ ಬಿಟ್ಟು ತೆರಳಲಿದ್ದು ಯುರೋಪ್ ಖಾಲಿ ಖಂಡವಾಗಲಿದೆ.

 ಉಗ್ರ ಸಂಘಟನೆಗಳ ಆರ್ಭಟ

ಉಗ್ರ ಸಂಘಟನೆಗಳ ಆರ್ಭಟ

ಲಿಬಿಯಾ ಮೂಲದ ಉಗ್ರ ಸಂಘಟನೆಗಳು ಯುರೋಪಿನ ಮೇಲೆ ನಿರಂತರ ದಾಳಿ ಮಾಡಲಿವೆ. ಅದರ ಮೂಲ ಬೇರನ್ನು ಸುಲಭವಾಗಿ ಕಿತ್ತು ಹಾಕಲು ಸಾಧ್ಯವಾಗುವುದಿಲ್ಲ.

ಒಬಾಮಾ ಅಮೆರಿಕ ಅಧ್ಯಕ್ಷ

ಒಬಾಮಾ ಅಮೆರಿಕ ಅಧ್ಯಕ್ಷ

ಅಮೆರಿಕದ 44ನೇ ಅಧ್ಯಕ್ಷರಾಗಿ ಆಫ್ರಿಕನ್-ಅಮೆರಿಕನ್ ವ್ಯಕ್ತಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದಿದ್ದಳು. ಅಂತೆಯೇ ಬರಾಕ್ ಒಬಾಮಾ ಅಧ್ಯಕ್ಷರಾದರು.

 ಮಂಗಳನಲ್ಲಿ ಯುದ್ಧ ನಡೆಯಲಿದೆ!

ಮಂಗಳನಲ್ಲಿ ಯುದ್ಧ ನಡೆಯಲಿದೆ!

ಮುಂದಿನ ಶತಮಾನಗಳ ಬಗ್ಗೆಯೂ ಭವಿಷ್ಯ ಹೇಳಿರುವ ಅಜ್ಜಿ 2130ರ ವೇಳೆಗೆ ನೀರಿನ ಒಳಗೆ ಏಲಿಯನ್ ಗಳು ನಾಗರಿಕತೆ ಸೃಷ್ಟಿ ಮಾಡಲಿವೆ. 3005ರಲ್ಲಿ ಮಂಗಳ ಗ್ರಹದ ಮೇಲೆ ಯುದ್ಧ ನಡೆಯಲಿದೆ ಎಂದು ಹೇಳಿದ್ದಾಳೆ.

ಜಾಗತಿಕ ತಾಪಮಾನ ಎಚ್ಚರಿಕೆ

ಜಾಗತಿಕ ತಾಪಮಾನ ಎಚ್ಚರಿಕೆ

ಸಾವಿಗೂ ಮುನ್ನವೇ ಜಾಗತಿಕ ತಾಪಮಾನದ ಎಚ್ಚರಿಕೆ ನೀಡಿದ್ದ ವಂಗಾ ಉತ್ತರ ಧ್ರುವ ಮತ್ತು ದಕ್ಷಿಣ ಧ್ರುವ ಕರಗಿ ಮನುಕುಲಕ್ಕೆ ಕಂಟಕ ಕಾದಿದೆ ಎಂದು ಹೇಳಿದ್ದರು. ಇಂದು ಜಾಗತಿಕ ತಾಪಮಾನ ನಿಯಂತ್ರಣದ ಬಗ್ಗೆ ಪ್ರತಿಯೊಂದು ಲಕಡೆ ಚರ್ಚೆ ಆರಂಭವಾಗಿರುವುದನ್ನು ಉಲ್ಲೇಖ ಮಾಡಬಹುದು.

ಭೂಮಿ ಅಂತ್ಯ ಯಾವಾಗ?

ಭೂಮಿ ಅಂತ್ಯ ಯಾವಾಗ?

ಅಜ್ಜಿ ಹೇಳಿರುವಂತೆ 3797ಕ್ಕೆ ಭೂಮಿ ಅಂತ್ಯವಾಗಲಿದೆ. ಆದರೆ ಆ ವೇಳೆಗೆ ಮಾನವ ಇನ್ನೊಂದು ಗ್ರಹದಲ್ಲಿ ವಾಸ ಮಾಡುವ ಶಕ್ತಿ ಕಂಡುಕೊಂಡಿರುತ್ತಾನೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A Bulgarian clairvoyant who died 20 years ago warned of the rise of ISIS by claiming there would be a 'great Muslim war' in 2016, it has been reported. Baba Vanga died in 1996 at the age of 85 and was known as the 'Nostradamus of the Balkans' because of her success rate which was supposedly as high as 85 per cent.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more