ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಲಿಬಾನ್ ಆಕ್ರಮಿತ ಅಫ್ಘಾನ್ ನೆಲದಲ್ಲಿ ಬದಲಾದ 10 ಸಂಗತಿಗಳಿವು...

|
Google Oneindia Kannada News

ಕಾಬೂಲ್, ಸೆಪ್ಟೆಂಬರ್ 16: ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದು ತಿಂಗಳು ಕಳೆದಿದೆ. ಈ ಅವಧಿಯಲ್ಲಿ ಅಫ್ಘಾನ್ ಚಿತ್ರಣವೇ ಬದಲಾಗಿದೆ. ಈ ನಡುವೆ ಮಧ್ಯಂತರ ಸರ್ಕಾರ ಘೋಷಣೆಯನ್ನು ತಾಲಿಬಾನ್ ಮಾಡಿದ್ದು, ಇನ್ನೂ ಅಸ್ಥಿರ ಸ್ಥಿತಿ, ಬಿಕ್ಕಟ್ಟು ಅಫ್ಘಾನಿಸ್ತಾನದಲ್ಲಿದೆ.

ಈ ಬಾರಿ ತಾಲಿಬಾನ್ ಸರ್ಕಾರ ತಾಲಿಬಾನ್ 1.0ರಂತೆ ಇರುವುದಿಲ್ಲ. ಎಲ್ಲರನ್ನೊಳಗೊಂಡ ಸರ್ಕಾರ ರಚನೆ ಮಾಡುತ್ತೇವೆ ಎಂಬ ಭರವಸೆಯನ್ನು ನೀಡಿದೆ. ಆದರೆ ಇದರಂತೆ ತಾಲಿಬಾನ್ ನಡೆದುಕೊಳ್ಳುತ್ತಿಲ್ಲ ಎಂಬುದಕ್ಕೆ ದಿನೇ ದಿನೇ ಅಲ್ಲಿ ಸಾಕಷ್ಟು ಉದಾಹರಣೆಗಳು ಸಿಗುತ್ತಿವೆ.

 ಅಫ್ಘಾನ್ ಬಿಕ್ಕಟ್ಟು; ತುರ್ತಾಗಿ ಒಪ್ಪಂದಕ್ಕೆ ಬರಲೇಬೇಕಿದೆ ಎಂದ ಯುಎನ್ ನಿರಾಶ್ರಿತ ಸಂಸ್ಥೆ ಅಫ್ಘಾನ್ ಬಿಕ್ಕಟ್ಟು; ತುರ್ತಾಗಿ ಒಪ್ಪಂದಕ್ಕೆ ಬರಲೇಬೇಕಿದೆ ಎಂದ ಯುಎನ್ ನಿರಾಶ್ರಿತ ಸಂಸ್ಥೆ

ಈ ಕಾರಣವಾಗಿಯೇ ಅಂತರರಾಷ್ಟ್ರೀಯ ಸಮುದಾಯಗಳಿಂದ ಬೆಂಬಲ ಪಡೆಯುವುದು ಕೂಡ ತಾಲಿಬಾನ್‌ಗೆ ಸಾಧ್ಯವಾಗಿಲ್ಲ. ಇದಕ್ಕೆ ಜೊತೆಯಾಗಿ ಅಫ್ಘಾನ್‌ನಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ.

Things Changed A Month After Taliban Take Over Afghanistan

ಅಧಿಕಾರ ವಹಿಸಿಕೊಂಡ 30 ದಿನಗಳಲ್ಲಿ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಏನೆಲ್ಲಾ ಪ್ರಮುಖ ಬದಲಾವಣೆಗಳನ್ನು ಮಾಡಿದೆ ಎಂಬುದರ ಕುರಿತು ಮೆಲುಕು ನೋಟ ಇಲ್ಲಿದೆ...

1. ಸಂಗೀತದ ಮೇಲೆ ನಿಷೇಧ; ತಾಲಿಬಾನ್ ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಳ್ಳುತ್ತಿದಂತೆ ರೇಡಿಯೋ ಸ್ಟೇಷನ್‌ಗಳಲ್ಲಿ ಸಂಗೀತ ಹಾಕದಂತೆ ಆದೇಶ ಹೊರಡಿಸಿದೆ. ಕೇವಲ ದೇಶಭಕ್ತಿ ಗೀತೆಗಳನ್ನು ಹಾಕುವಂತೆ ತಿಳಿಸಿದೆ. ರಾಷ್ಟ್ರೀಯ ಸಂಗೀತ ಇನ್‌ಸ್ಟಿಟ್ಯೂಟ್‌ಗೆ ತೆರಳಿದ್ದ ಕೆಲವು ತಾಲಿಬಾನಿಗಳು ಪಿಯಾನೋ, ಡ್ರಮ್ ಸೆಟ್ ಸೇರಿದಂತೆ ಹಲವು ವಾದ್ಯಗಳನ್ನು ನಾಶಪಡಿಸಿದ್ದರು. ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡ ಬಳಿಕ ತಾಲಿಬಾನ್ ಸಂಗೀತಗಾರರು ಹಾಗೂ ಕಲಾವಿದರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದು ವರದಿಯಾಗಿದೆ.

 ಅಫ್ಘಾನಿಸ್ತಾನದ ಗ್ರಾಮೀಣ ಭಾಗಗಳಲ್ಲಿ ಆಹಾರ ತುರ್ತು ಪರಿಸ್ಥಿತಿ: ವಿಶ್ವಸಂಸ್ಥೆ ಅಫ್ಘಾನಿಸ್ತಾನದ ಗ್ರಾಮೀಣ ಭಾಗಗಳಲ್ಲಿ ಆಹಾರ ತುರ್ತು ಪರಿಸ್ಥಿತಿ: ವಿಶ್ವಸಂಸ್ಥೆ

2. ಪಂಜ್‌ಶೀರ್ ವಶಕ್ಕೆ ಪಡೆದ ತಾಲಿಬಾನ್; ಇಡೀ ಅಫ್ಘಾನಿಸ್ತಾನ ಆಕ್ರಮಿಸಿಕೊಂಡರೂ ತಾಲಿಬಾನ್‌ಗೆ ಪಂಜ್‌ಶೀರ್ ಆಕ್ರಮಿಸಿಕೊಳ್ಳುವುದು ಸುಲಭದ ಕೆಲಸವಾಗಿರಲಿಲ್ಲ. ಆದರೆ ಕೊನೆಗೂ ಪಂಜ್‌ಶೀರ್ ಪ್ರಾಂತ್ಯವನ್ನು ತಾಲಿಬಾನ್ ವಶಪಡಿಸಿಕೊಂಡಿದೆ.

Things Changed A Month After Taliban Take Over Afghanistan

3. ವಾಂಟೆಡ್ ಲಿಸ್ಟ್‌: ತಾಲಿಬಾನ್ ತನ್ನ ನೂತನ ಸರ್ಕಾರ ರಚನೆ ಘೋಷಣೆಯನ್ನು ಮಾಡಿತ್ತು. ಎಲ್ಲರನ್ನೂ ಒಳಗೊಂಡ ಸರ್ಕಾರ ರಚಿಸುವುದಾಗಿ ಭರವಸೆಯನ್ನೂ ನೀಡಿತ್ತು. ಆದರೆ ತಾಲಿಬಾನ್ ಸರ್ಕಾರ ಎಫ್‌ಬಿಐ ಪಟ್ಟಿಯಲ್ಲಿದ್ದ ವಾಂಟೆಡ್‌ ಲಿಸ್ಟ್‌ನಲ್ಲಿದ್ದವರನ್ನೂ ಒಳಗೊಂಡಿತ್ತು. ಇದಕ್ಕೆ ಟೀಕೆಗಳು ಕೇಳಿಬಂದಿದ್ದು, ಮಧ್ಯಂತರ ಸರ್ಕಾರ ಘೋಷಣೆ ಮಾಡಿದೆ.

4. ಮಹಿಳೆಯರ ಹಕ್ಕು; ಮಹಿಳೆಯರ ಹಕ್ಕು ರಕ್ಷಣೆ ಮಾಡುವುದಾಗಿ ಭರವಸೆ ನೀಡಿದ್ದ ತಾಲಿಬಾನ್, ಮಹಿಳೆಯರಿಗೆ ಉದ್ಯೋಗ ನಿಷೇಧಿಸಿತು. ಸ್ವಲ್ಪ ಕಾಲ ಮಹಿಳೆಯರು ಮನೆಯಲ್ಲಿಯೇ ಉಳಿಯಿರಿ ಎಂದು ಹೇಳಿದ ತಾಲಿಬಾನ್ ಸರ್ಕಾರ ಅವರನ್ನು ಸಂಪೂರ್ಣವಾಗಿ ಉದ್ಯೋಗದಿಂದ ದೂರವುಳಿಯುವಂತೆ ಮಾಡಿತು. ಮಹಿಳೆಯರನ್ನು ಕ್ರೀಡೆಗಳಿಂದಲೂ ನಿಷೇಧ ಮಾಡಿತು.

5. ರಾಜಕೀಯದಲ್ಲಿ ಮಹಿಳೆ: ಪುರುಷಕೇಂದ್ರಿತ ಸರ್ಕಾರವನ್ನು ತಾಲಿಬಾನ್ ನೇಮಿಸಿತು. ಅಷ್ಟೇ ಅಲ್ಲ, ಮಹಿಳೆಯರಿಗೆ ರಾಜಕೀಯದಲ್ಲಿ ಅವಕಾಶ ನೀಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿತು.

6. ಸಾಂಸ್ಕೃತಿಕ ಕಾರ್ಯಕ್ರಮಗಳ ನಿಷೇಧ: ಅಫ್ಘಾನಿಸ್ತಾನದಲ್ಲಿ ಷರಿಯಾ ಕಾನೂನಿನ ಅಡಿಯಲ್ಲಿ ಬರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವಂತೆ ಮಾತ್ರ ಅವಕಾಶ ನೀಡಿದೆ. ಜೀನ್ಸ್‌ ತೊಡುವುದನ್ನು ನಿಷೇಧ ಮಾಡಲಾಯಿತು.

7. ಪತ್ರಕರ್ತರ ಹಕ್ಕುಗಳು: ಮಹಿಳೆಯರ ಹಕ್ಕುಗಳ ಬಗ್ಗೆ ವರದಿ ಮಾಡಿದ್ದ ಪತ್ರಕರ್ತರಿಗೆ ಹಿಂಸೆ ನೀಡಲಾಯಿತು. ಕೆಲವರನ್ನು ಕೊಂದು ಹಾಕಲಾಯಿತು. ಇದು ತಾಲಿಬಾನ್ ಸರ್ವಾಧಿಕಾರ ಸರ್ಕಾರದ ದಬ್ಬಾಳಿಕೆಯನ್ನು ಎತ್ತಿತೋರಿತು.

8. ಕುಸಿಯುತ್ತಿದೆ ಆರ್ಥಿಕತೆ; ದೇಶದಲ್ಲಿ ರಾಜಕೀಯ ಬಿಕ್ಕಟ್ಟಿನ ನಡುವೆ ಬರ ಹಾಗೂ ಕ್ಷಾಮ ಆರ್ಥಿಕ ಬಿಕ್ಕಟ್ಟನ್ನು ಸೃಷ್ಟಿ ಮಾಡಿದೆ. ಇದೇ ತಿಂಗಳ ಕೊನೆಗೆ ಅಘ್ಫಾನಿಸ್ತಾನದಲ್ಲಿ ಆಹಾರ ಕೊರತೆಯ ತೀವ್ರ ರೂಪ ಕಾಣಿಸಿಕೊಳ್ಳಲಿದೆ. 14 ಮಿಲಿಯನ್ ಜನರು ಹಸಿವಿನಿಂದ ನರಳಲಿದ್ದಾರೆ ಯುಎನ್‌ ಆಹಾರ ಕಾರ್ಯಕ್ರಮ ಸಂಸ್ಥೆ ಎಚ್ಚರಿಕೆ ನೀಡಿದೆ.

9. ಪ್ರತಿಭಟನೆಗಳು; ತಾಲಿಬಾನ್‌ನ ಈ ಕಠಿಣ ನೀತಿ ನಿಯಮಗಳನ್ನು ವಿರೋಧಿಸಿ ಹಲವರು ಪ್ರತಿಭಟನೆ ಕೈಗೊಂಡರು. ಆದರೆ ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಲಾಯಿತು. ಸರ್ಕಾರದ ಅನುಮತಿ ಇಲ್ಲದೇ ಯಾವುದೇ ಪ್ರತಿಭಟನೆ ನಡೆಸುವಂತಿಲ್ಲ ಎಂದು ನಿಯಮ ಹೇರಲಾಯಿತು. ಪ್ರತಿಭಟನೆಯ ಉದ್ದೇಶದ ಪ್ರತಿ ವಿವರಗಳನ್ನು ಸರ್ಕಾರದೊಂದಿಗೆ ಹಂಚಿಕೊಳ್ಳುವಂತೆ ಆದೇಶಿಸಲಾಗಿದೆ.

10: ವಲಸಿಗರ ಬಿಕ್ಕಟ್ಟು; ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಳ್ಳುತ್ತಿದ್ದಂತೆ ಬಹುಪಾಲು ಜನಸಂಖ್ಯೆ ಬೇರೆ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ತಾಲಿಬಾನ್ ಆಡಳಿತಕ್ಕೆ ಹೆದರಿ ಬೃಹತ್ ಜನಸಂಖ್ಯೆ ದೇಶ ತೊರೆಯುತ್ತಿದ್ದು, ಅತಿ ದೊಡ್ಡ ವಲಸಿಗರ ಬಿಕ್ಕಟ್ಟು ಎದುರಾಗಿದೆ.

English summary
It has been a month since the Taliban took over Afghanistan. Ten things that changed, a month since the Taliban take-over is here,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X