ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸುಳಿಯಿಂದ ಹೊರಬಂದ ನಾಲ್ಕು ಹಾಟ್‌ಸ್ಪಾಟ್‌ ದೇಶಗಳು

|
Google Oneindia Kannada News

ದೆಹಲಿ, ಜುಲೈ 23: ಜಗತ್ತಿಗೆ ಕೊರೊನಾ ಹರಡಿಸಿದ ಚೀನಾ ಸಂಪೂರ್ಣವಾಗಿ ನಿಯಂತ್ರಣ ಸಾಧಿಸಿದೆ ಎನ್ನಲಾಗುತ್ತಿದೆ. ಚೀನಾ ಬಿಟ್ಟರೆ ವಿಶ್ವದ ಬಹುತೇಕ ಎಲ್ಲಾ ದೇಶಗಳು ಕೊವಿಡ್ ಸೋಂಕು ಹರಡುವುದನ್ನು ತಡೆಯಲು ಸಾಧ್ಯವಾಗದೇ ಒದ್ದಾಡುವಂತಾಗಿದೆ.

Recommended Video

ಹೊಸ Oneplus ವಿಶೇಷತೆಗಳು Oneplus Nord , ಕೈಗೆಟಕುವ ಬೆಲೆಯಲ್ಲಿ ಬೆಸ್ಟ್ ಫೋನ್ | Oneindia Kannada

ಪ್ರಸ್ತುತ, ಅಮೆರಿಕ, ಬ್ರೆಜಿಲ್, ಭಾರತ, ಮೆಕ್ಸಿಕೋ, ದಕ್ಷಿಣ ಆಫ್ರಿಕಾ ದೇಶಗಳಲ್ಲಿ ಕೊರೊನಾ ವೈರಸ್ ಆವರಿಸಿದೆ. ಆದರೆ, ಮಾರ್ಚ್ ಮತ್ತು ಏಪ್ರಿಲ್‌ ತಿಂಗಳಲ್ಲಿ ಜಗತ್ತಿನ ಕೊವಿಡ್ ಹಾಟ್‌ಸ್ಪಾಟ್‌ ದೇಶಗಳು ಎನಿಸಿಕೊಂಡಿದ್ದ ರಾಷ್ಟ್ರಗಳಲ್ಲಿ ಈಗ ಕೊವಿಡ್ ನಿಯಂತ್ರಣಕ್ಕೆ ಬಂದಿದೆ.

ಭಾರತ; ಒಂದೇ ದಿನ ದಾಖಲೆ ಬರೆದ ಕೋವಿಡ್ ಪ್ರಕರಣಗಳ ಸಂಖ್ಯೆಭಾರತ; ಒಂದೇ ದಿನ ದಾಖಲೆ ಬರೆದ ಕೋವಿಡ್ ಪ್ರಕರಣಗಳ ಸಂಖ್ಯೆ

ಒಂದು ಸಮಯದಲ್ಲಿ ಕೊರೊನಾ ವೈರಸ್‌ನಿಂದ ನಲುಗಿ ಹೋಗಿದ್ದ ದೇಶಗಳಲ್ಲಿ ಈಗ ಪರಿಸ್ಥಿತಿ ಸುಧಾರಿಸಿದೆ. ಹೊಸ ಪ್ರಕರಣ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡಿದೆ. ಸಾವಿನ ಸಂಖ್ಯೆಯಲ್ಲಿ ಸಂಪೂರ್ಣವಾಗಿ ಹಿಡಿತ ಸಾಧಿಸಿದೆ. ಅಷ್ಟಕ್ಕೂ, ಕೊರೊನಾ ಸುಳಿಯಿಂದ ಹೊರಬಂದಿರುವ ಆ ರಾಷ್ಟ್ರಗಳು ಯಾವುದು? ಮುಂದೆ ಓದಿ...

ಯುಕೆಯಲ್ಲಿ ಕೊರೊನಾ ಸೈಲೆಂಟ್

ಯುಕೆಯಲ್ಲಿ ಕೊರೊನಾ ಸೈಲೆಂಟ್

ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಕೊರೊನಾ ಹೊಸ ಕೇಸ್‌ಗಳ ಸಂಖ್ಯೆ ಇಳಿಕೆ ಕಂಡಿದೆ. ಪ್ರತಿನಿತ್ಯ 450-500 ಕೇಸ್ ವರದಿಯಾಗುತ್ತಿದೆ. ಸಾವಿನ ಸಂಖ್ಯೆಯೂ 80-100ಕ್ಕೆ ಬಂದು ನಿಂತಿದೆ. ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಯುಕೆ ಸ್ಥಿತಿ ಬಹಳ ಕೆಟ್ಟದಾಗಿತ್ತು. ಇದುವರೆಗು ಯುಕೆಯಲ್ಲಿ 296,377 ಕೇಸ್ ವರದಿಯಾಗಿದೆ. 45,501 ಜನರು ಸಾವನ್ನಪ್ಪಿದ್ದಾರೆ. ಈಗಿನ ಅಂಕಿ ಅಂಶ ಗಮನಿಸಿದರೆ ನಿಧಾನವಾಗಿ ಯುಕೆ ಮೊದಲಿನ ಸ್ಥಿತಿ ಕಡೆ ಹೆಜ್ಜೆ ಹಾಕಿದೆ ಎಂದೆನಿಸುತ್ತಿದೆ. ಯುಕೆಯಲ್ಲಿ ಮಾರ್ಚ್-ಏಪ್ರಿಲ್‌ನಲ್ಲಿ ದಿನವೊಂದರಲ್ಲಿ 5 ಸಾವಿರದಿಂದ 7 ಸಾವಿರ ಕೇಸ್ ದಾಖಲಾಗಿದೆ.

ಇಟಲಿಯಲ್ಲಿ ಕೊರೊನಾ ಇಳಿಮುಖ

ಇಟಲಿಯಲ್ಲಿ ಕೊರೊನಾ ಇಳಿಮುಖ

ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಅತಿ ಹೆಚ್ಚು ಸಾವು ಹಾಗೂ ಕೊರೊನಾ ಕೇಸ್‌ ವರದಿಯಾಗಿದ್ದ ದೇಶಗಳ ಪೈಕಿ ಇಟಲಿ ಅಗ್ರಪಟ್ಟಿಯಲ್ಲಿತ್ತು. ಆದ್ರೀಗ, ಇಟಲಿಯಲ್ಲಿ ಪರಿಸ್ಥಿತಿ ಬದಲಾಗಿದೆ. ಪ್ರತಿದಿನ ಸುಮಾರು 120 ಕೇಸ್‌ಗಳು ಮಾತ್ರ ದಾಖಲಾಗುತ್ತಿದೆ. ಸಾವಿನ ಸಂಖ್ಯೆಯೂ 10-15ಕ್ಕೆ ಇಳಿದಿದೆ. ಈ ನಂಬರ್ಸ್ ನೋಡಿದ್ರೆ ಇಟಲಿ ದೇಶವೂ ಸಹ ಕೊರೊನಾದಿಂದ ಬಹುತೇಕ ಹೊರಬಂದಿದೆ. ಇಟಲಿಯಲ್ಲಿ ಒಟ್ಟು 244,752 ಕೇಸ್ ಇದೆ, 35,073 ಸಾವು ಸಂಭವಿಸಿದೆ. ಮಾರ್ಚ್-ಏಪ್ರಿಲ್‌ನಲ್ಲಿ ಇಟಲಿ ದಿನವೊಂದಕ್ಕೆ ಗರಿಷ್ಠ 6500 ಕೇಸ್ ವರದಿ ಮಾಡಿದೆ.

ಕೊರೊನಾ ಸಾವಿನ ಸಂಖ್ಯೆಯಲ್ಲಿ ಸ್ಪೇನ್ ದೇಶವನ್ನು ಹಿಂದಿಕ್ಕಿದ ಭಾರತಕೊರೊನಾ ಸಾವಿನ ಸಂಖ್ಯೆಯಲ್ಲಿ ಸ್ಪೇನ್ ದೇಶವನ್ನು ಹಿಂದಿಕ್ಕಿದ ಭಾರತ

ಕೊವಿಡ್ ನಿಯಂತ್ರಿಸಿದ ಫ್ರಾನ್ಸ್

ಕೊವಿಡ್ ನಿಯಂತ್ರಿಸಿದ ಫ್ರಾನ್ಸ್

ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಿಂದ ಫ್ರಾನ್ಸ್ ಕೊರೊನಾ ಹಾಟ್‌ಸ್ಪಾಟ್ ಎನಿಸಿಕೊಂಡಿತ್ತು. ಪ್ರತಿನಿತ್ಯ ಸಾವಿರಾರು ಕೇಸ್ ಹಾಗು ಸಾವು ಸಂಭವಿಸಿತ್ತು. ಆದ್ರೀಗ, ಫ್ರಾನ್ಸ್ ದೇಶದಲ್ಲಿ ಕೊರೊನಾ ಕಡಿಮೆ ಆಗಿದೆ. ಇತ್ತೀಚಿನ ದಿನಗಳಲ್ಲಿ ದಿನಕ್ಕೆ 500-550 ಕೇಸ್ ಮಾತ್ರ ವರದಿಯಾಗುತ್ತಿದೆ. ಸಾವಿನ ಸಂಖ್ಯೆಯಲ್ಲೂ ಇಳಿಮುಖ ಕಂಡಿರುವ ಫ್ರಾನ್ಸ್ ದೇಶದಲ್ಲಿ 10-15 ಜನ ಮಾತ್ರ ಪ್ರಾಣ ಕಳೆದುಕೊಂಡಿದ್ದಾರೆ. ಇದುವರೆಗೂ ಫ್ರಾನ್ಸ್ ನಲ್ಲಿ ಒಟ್ಟು 177,338 ಕೇಸ್ ವರದಿಯಾಗಿದೆ, 30,165 ಸಾವು ಕಂಡಿದೆ.

ಫ್ರಾನ್ಸ್‌ನಲ್ಲಿ ಮಾರ್ಚ್-ಏಪ್ರಿಲ್‌ ತಿಂಗಳಲ್ಲಿ ದಿನವೊಂದಲ್ಲಿ ಗರಿಷ್ಠ 7 ಸಾವಿರ ಕೇಸ್ ದಾಖಲಾಗಿದೆ.
ಜರ್ಮನಿಯಲ್ಲಿ ಹೇಗಿದೆ ಪರಿಸ್ಥಿತಿ?

ಜರ್ಮನಿಯಲ್ಲಿ ಹೇಗಿದೆ ಪರಿಸ್ಥಿತಿ?

ಜರ್ಮನಿಯಲ್ಲೂ ಕೊರೊನಾ ವೈರಸ್ ಪ್ರಮಾಣ ಕಡಿಮೆ ಆಗಿದೆ. ಪ್ರಸ್ತುತ ಜರ್ಮನಿಯಲ್ಲಿ ಪ್ರತಿನಿತ್ಯ 400 ಕೇಸ್ ವರದಿಯಾಗುತ್ತಿದೆ. ಸಾವಿನ ಸಂಖ್ಯೆಯೂ 10ಕ್ಕಿಂತ ಕಡಿಮೆ ಆಗಿದೆ. ಇದುವರೆಗೂ ಜರ್ಮನಿಯಲ್ಲಿ 203,890 ಪ್ರಕರಣ ದಾಖಲಾಗಿದೆ, 9,180 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಜರ್ಮನಿಯಲ್ಲಿ ಮಾರ್ಚ್-ಏಪ್ರಿಲ್‌ನಲ್ಲಿ ದಿನವೊಂದರಲ್ಲಿ 6.9 ಸಾವಿರ ಕೇಸ್ ಪತ್ತೆಯಾಗಿದೆ.

English summary
America, brazil and india records highest covid 19 cases reported in daily. but, now italy, france, germany and UK report Low COVID 19 Cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X