ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರೆಕ್ಸಿಟ್ ನಂತರ ಬ್ರಿಟನ್ ಪ್ರಧಾನಿಯಾಗಿ ತೆರೇಸಾ ಮೇ

By Mahesh
|
Google Oneindia Kannada News

ಲಂಡನ್, ಜುಲೈ 12: ಬ್ರೆಕ್ಸಿಟ್ ಜನಾದೇಶದ ನಂತರ ಬ್ರಿಟನ್ನಿನ ಪ್ರಧಾನಿ ಹುದ್ದೆಗೆ ಡೇವಿಡ್‌ ಕ್ಯಾಮರೂನ್‌ ರಾಜೀನಾಮೆ ಸಲ್ಲಿಸಿದ್ದರು. ಅವರಿಂದ ತೆರವಾದ ಸ್ಥಾನವನ್ನು ತೆರೆಸಾ ಮೇ ತುಂಬಿದ್ದಾರೆ. ಬುಧವಾರದಂದು ಅಧಿಕೃತವಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಬ್ರಿಟನ್ನಿನ ಗೃಹ ಸಚಿವೆಯಾಗಿದ್ದ ತೆರೆಸಾ ಮೇ ಅವರು ಪ್ರಧಾನಿ ಸ್ಥಾನಕ್ಕೇರುವ ಮೂಲ್ಕಾ ಮಾರ್ಗರೇಟ್ ಥ್ಯಾಚರ್ ನಂತರ ಬ್ರಿಟನ್ನಿನ 2ನೇ ಮಹಿಳಾ ಪ್ರಧಾನಿ ಎನಿಸಿಕೊಂಡಿದ್ದಾರೆ. [ಬ್ರೆಕ್ಸಿಟ್ ಫಲಿತಾಂಶ: ಐರೋಪ್ಯ ಒಕ್ಕೂಟಕ್ಕೆ ಬ್ರಿಟನ್ ವಿಚ್ಛೇದನ]

Theresa May to be announced the next British PM

ಪ್ರಧಾನಿ ಹುದ್ದೆಗೆ ಬೋರಿಸ್ ಜಾನ್ಸನ್‌ ಹಾಗೂ ಆಂಡ್ರಿಯಾ ಲೀಡ್ಸಮ್ ಅವರು ಸ್ಪರ್ಧಿಸಿದ್ದರು. ಆದರೆ, ಕೊನೆ ಕ್ಷಣದಲ್ಲಿ ಸ್ಪರ್ಧೆಯಿಂದ ಇಬ್ಬರು ಹಿಂದಕ್ಕೆ ಸರಿಯುವುದಾಗಿ ಘೋಷಿಸಿದರು. ಬ್ರೆಕ್ಸಿಟ್‌ ಬಳಿಕ ಒಡಕು ಉಂಟಾಗಿರುವ ಕನ್ಸರ್ವೇಟಿವ್ ಪಕ್ಷದಲ್ಲಿ ಮೇ ಅವರು ನೆಚ್ಚಿನ ಅಭ್ಯರ್ಥಿಯಾಗಿ ಮೇ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ.

ಬ್ರೆಕ್ಸಿಟ್‌ ಪ್ರಕ್ರಿಯೆಯಿಂದ ಬ್ರೆಕ್ಸಿಟ್ ಆದೇಶ ಜಾರಿಗೊಳಿಸಲು ವಿಳಂಬವಾಗಿರಬಹುದು.ಬ್ರೆಕ್ಸಿಟ್‌ ಆದೇಶವನ್ನು ರದ್ದುಗೊಳಿಸಲು ಅಥವಾ ವಿಳಂಬ ಮಾಡಲು ಸಾಧ್ಯವಿಲ್ಲ ಎಂದು ಫ್ರಾನ್ಸ್‌ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್‌ ಅವರು ಪ್ರತಿಕ್ರಿಯಿಸಿದ್ದಾರೆ.

English summary
Theresa May to be announced the next British PM. The 2nd female PM of the country, after Margaret Thatcher, May came a long way from her initial days in the Oxford to becoming a Leader of the Conservative Party in 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X