ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ಪ್ರಬಲ ಪಾಸ್‌ಪೋರ್ಟ್ ಪಟ್ಟಿಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ?

|
Google Oneindia Kannada News

ವಿಶ್ವದಲ್ಲಿ ಅತ್ಯಂತ ಪ್ರಬಲ ಪಾಸ್‌ಪೋರ್ಟ್ ಹೊಂದಿರುವ ದೇಶದಗಳಲ್ಲಿ ಜಪಾನ್ ಮೊದಲಿದೆ.

ಹೆನ್ಲೆ ಪಾಸ್​ಪೋರ್ಟ್ ಸೂಚ್ಯಂಕ ಎಂಬುದು ಆ ರೀತಿ ವಿಶ್ವದ ಎಲ್ಲ ಪಾಸ್​​ಪೋರ್ಟ್​ಗಳನ್ನು ಅಳೆದು, ಅದಕ್ಕೊಂದು ಶ್ರೇಯಾಂಕ ನೀಡುವಂಥ ಒರಿಜಿನಲ್, ಅಧಿಕಾರಯುತ ಸೂಚ್ಯಂಕವಾಗಿದೆ.

ಜಗತ್ತಿನ ಶಕ್ತಿಶಾಲಿ ಪಾಸ್‌ಪೋರ್ಟ್ ಹೊಂದಿರುವ ದೇಶ ಯಾವುದು ಗೊತ್ತೇ?ಜಗತ್ತಿನ ಶಕ್ತಿಶಾಲಿ ಪಾಸ್‌ಪೋರ್ಟ್ ಹೊಂದಿರುವ ದೇಶ ಯಾವುದು ಗೊತ್ತೇ?

ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆಯಿಂದ (ಐಎಟಿಎ) ಪಡೆದ ಮಾಹಿತಿಗಳ ಆಧಾರದಲ್ಲಿ ಹೆನ್ಲಿ & ಪಾರ್ಟ್ನರ್ಸ್ ಈ ಪಾಸ್‌ಪೋರ್ಟ್ ಸೂಚ್ಯಂಕ ಸಿದ್ಧಪಡಿಸಿದೆ. ಪ್ರತಿ ದೇಶಗಳ ಪಾಸ್‌ಪೋರ್ಟ್ ಹೊಂದಿರುವವರು ಯಾವುದೇ ಪೂರ್ವ ವೀಸಾ ಇಲ್ಲದೆ ಎಷ್ಟು ದೇಶಗಳಿಗೆ ಭೇಟಿ ನೀಡಬಹುದು ಎಂಬ ಲೆಕ್ಕದ ಆಧಾರದಲ್ಲಿ ಈ ಸೂಚ್ಯಂಕ ರೂಪಿಸಲಾಗಿದೆ.

The World’s Most Powerful Passports In 2021

ಜಗತ್ತಿನ ಕಳಪೆ ಪಾಸ್‌ಪೋರ್ಟ್‌ಗಳು ಯಾವುವು?

ಅಫ್ಘಾನಿಸ್ತಾನ- 26 ಇರಾಕ್- 28 ಸಿರಿಯಾ- 29 ಪಾಕಿಸ್ತಾನ 31, ಯೆಮನ್- 33, ಸೊಮೇಲಿಯಾ- 34 ಲಿಬಿಯಾ- 37 ನೇಪಾಳ ಪ್ಯಾಲೆಸ್ಟೀನ್ ಪ್ರದೇಶ- 37, ಉತ್ತರ ಕೊರಿಯಾ- 39 ಕೊಸೋವೊ, ಬಾಂಗ್ಲಾದೇಶ-40.

ಈ ಸೂಚ್ಯಂಕವು ಅಂತರರಾಷ್ಟ್ರೀಯ ವಾಯು ಸಾರಿಗೆ ಒಕ್ಕೂಟದ (IATA) ಎಕ್ಸ್​ಕ್ಲೂಸಿವ್ ಆದ ಡೇಟಾ ಆಧಾರದಲ್ಲಿ ನಿಂತಿದೆ. ಇತ್ತೀಚಿನ ಶ್ರೇಯಾಂಕವು ಗ್ಲೋಬಲ್ ಮೊಬಿಲಿಟಿ ರಿಪೋರ್ಟ್ 2021 Q4ದಲ್ಲಿ ದೊರೆಯುತ್ತದೆ. ಇದು 199 ಪಾಸ್​ಪೋರ್ಟ್​ಗಳು ಮತ್ತು 227 ಸ್ಥಳಗಳಲ್ಲಿ ಕಾಣುತ್ತದೆ.

ಕಳೆದ ವರ್ಷ 84 ಸ್ಥಾನದಲ್ಲಿದ್ದ ಭಾರತ ಈ ವರ್ಷ 90ನೇ ಸ್ಥಾನಕ್ಕೆ ಕುಸಿದಿದೆ.

*ಜಪಾನ್ ಮತ್ತು ಸಿಂಗಾಪೂರ್ ತಲಾ 192 ಪಾಯಿಂಟ್​ಗಳೊಂದಿಗೆ ಮೊದಲ ಸ್ಥಾನದಲ್ಲಿದೆ.
*ಜರ್ಮನಿ ಮತ್ತು ದಕ್ಷಿಣ ಕೊರಿಯಾ 190 ಪಾಯಿಂಟ್ಸ್​ನೊಂದಿಗೆ ಎರಡನೇ ಸ್ಥಾನ
*ಫಿನ್​ಲ್ಯಾಂಡ್, ಇಟಲಿ, ಲಕ್ಸೆಂಬರ್ಗ್ ಮತ್ತು ಸ್ಪೇನ್ ತಲಾ 189 ಪಾಯಿಂಟ್ಸ್​ನೊಂದಿಗೆ ಮೂರನೇ ಸ್ಥಾನ
* ಆಸ್ಟ್ರಿಯಾ, ಡೆನ್ಮಾರ್ಕ್ ತಲಾ 188 ಪಾಯಿಂಟ್ಸ್​ನೊದಿಗೆ ನಾಲ್ಕನೇ ಸ್ಥಾನ
*ಫ್ರಾನ್ಸ್, ಐರ್ಲೆಂಡ್, ನೆದರ್​ಲ್ಯಾಂಡ್ಸ್, ಪೋರ್ಚುಗಲ್ ಮತ್ತು ಸ್ವೀಡನ್ ತಲಾ 187 ಪಾಯಿಂಟ್ಸ್​ನೊಂದಿಗೆ ಐದನೇ ಸ್ಥಾನ
* ಬೆಲ್ಜಿಯಂ, ನ್ಯೂಜಿಲ್ಯಾಂಡ್, ಸ್ವಿಟ್ಜರ್ಲೆಂಡ್ ತಲಾ 186 ಪಾಯಿಂಟ್ಸ್​ - ಆರನೇ ಸ್ಥಾನ
* ಜೆಕ್ ರಿಪಬ್ಲಿಕ್, ಗ್ರೀಸ್, ಮಾಲ್ಟಾ, ನಾರ್ವೆ, ಯುನೈಟೆಡ್ ಕಿಂಗ್​ಡಮ್ ಮತ್ತು ಯುನೈಟೆಡ್​ ಸ್ಟೇಟ್ಸ್ ಆಫ್​ ಅಮೆರಿಕಾ 185 ಪಾಯಿಂಟ್ಸ್- ಏಳನೇ ಸ್ಥಾನ
* ಆಸ್ಟ್ರೇಲಿಯಾ, ಕೆನಡಾ ತಲಾ 184 ಪಾಯಿಂಟ್ಸ್ ಜತೆ ಎಂಟನೇ ಸ್ಥಾನ
* 183 ಪಾಯಿಂಟ್ಸ್​ನೊಂದಿಗೆ ಹಂಗೇರಿ 9ನೇ ಸ್ಥಾನ
*ಲಿಥುವೇನಿಯಾ, ಪೋಲೆಂಡ್, ಸ್ಲೊವಾಕಿಯಾ ಹತ್ತನೇ ಸ್ಥಾನದಲ್ಲಿದ್ದು, ತಲಾ 182 ಪಾಯಿಂಟ್ಸ್ ಇದೆ
* ಕಳೆದ ವರ್ಷ 84 ಸ್ಥಾನದಲ್ಲಿ ಇದ್ದ ಭಾರತ ಈ ವರ್ಷ 90ನೇ ಸ್ಥಾನಕ್ಕೆ ಇಳಿದಿದೆ. 58 ಪಾಯಿಂಟ್ಸ್​ನೊಂದಿಗೆ ಬುರ್ಕಿನಾ ಫಾಸೋ, ತಜಕಿಸ್ತಾನ್​ ಜತೆ ಹಂಚಿಕೊಂಡಿದೆ.

English summary
India’s rank has slipped by six places from last year to 90 on the Henley Passport Index, which lists the world’s most travel-friendly passports.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X