ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಶ್ರೇಷ್ಠ ವಿವಿಗಳಲ್ಲಿ ಭಾರತದ 5 ವಿವಿ

By Mahesh
|
Google Oneindia Kannada News

ಲಂಡನ್, ಅ.4: ವಿಶ್ವದ 400 ಶ್ರೇಷ್ಠ ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ ಭಾರತದ ವಿವಿಗಳು ಸ್ಥಾನ ಪಡೆದಿವೆ. ಒಟ್ಟು 5 ವಿಶ್ವವಿದ್ಯಾನಿಲಯಗಳು ಅಗ್ರ 400ರ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. 'ಟೈಮ್ಸ್ ಹೈಯರ್ ಎಜುಕೇಶನ್ ವರ್ಲ್ಡ್ ಯೂನಿವರ್ಸಿಟಿ ರ್ಯಾಂಕಿಂಗ್ಸ್ 2013-14' ಪಟ್ಟಿಯಲ್ಲಿ ಪಂಜಾಬ್ ವಿಶ್ವವಿದ್ಯಾನಿಲಯ ಐಐಟಿಗಳನ್ನು ಹಿಂದಿಕ್ಕಿ ಮುಂದೆ ಬಂದಿದೆ.

2012ನೇ ಸಾಲಿನಲ್ಲಿ ಮೂರು ವಿಶ್ವವಿದ್ಯಾನಿಲಯಗಳು ಮಾತ್ರ ಈ ಅಗ್ರಪಟ್ಟಿಯಲ್ಲಿ ಸ್ಥಾನ ಗಳಿಸಿ ಕೊಂಡಿತ್ತು. 'ಟೈಮ್ಸ್ ಹೈಯರ್ ಎಜುಕೇಶನ್ ವರ್ಲ್ಡ್ ಯೂನಿವರ್ಸಿಟಿ ರ್ರ್ಯಾಂಕಿಂಗ್ಸ್ 2013-14' ಪಟ್ಟಿಯಲ್ಲಿ ಪಂಜಾಬ್ ವಿಶ್ವವಿದ್ಯಾನಿಲಯವು 226 ರಿಂದ 250ರ ನಡುವಿನ ವ್ಯಾಪ್ತಿಯಲ್ಲಿ ಚೊಚ್ಚಲ ಬಾರಿಗೆ ಸ್ಥಾನ ಪಡೆದಿದೆ.

ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ) ದಿಲ್ಲಿ ಹಾಗೂ ಕಾನ್ಪುರ್ 351 ರಿಂದ 400ರ ಶ್ರೇಣಿಯಲ್ಲಿ ಸ್ಥಾನ ಪಡೆದಿವೆ. ಐಐಟಿ ಖರಗ್ ಪುರ್ ಹಾಗೂ ಐಐಟಿ ರೂರ್ಕಿ 351 ರಿಂದ 400ರ ವ್ಯಾಪ್ತಿಯಲ್ಲಿ ಸ್ಥಾನವನ್ನು ಪಡೆದುಕೊಂಡಿವೆ.

The World University Rankings 2013-14: Indian universities in top 400

ಭಾರತಕ್ಕೆ ಇದು ಪ್ರೋತ್ಸಾಹದಾಯಕವಾಗಿದೆ. ಆದರೆ ಯಾವುದೇ ಭಾರತೀಯ ಸಂಸ್ಥೆಯು 200ರ ಒಳಗಿನ ಸ್ಥಾನವನ್ನು ಪಡೆದುಕೊಂಡಿಲ್ಲ. ಭಾರತವು ಶ್ರೇಷ್ಠ 400ರಲ್ಲಿ ಸ್ಥಾನ ಗಳಿಸಿದ್ದು,ಇದು ಜಾಗತಿಕ ಶ್ರೇಷ್ಠತೆಯನ್ನು ಸಾಧಿಸುವಲ್ಲಿ ದಾಪುಗಾಲು ಹಾಕುತ್ತಿರುವ ಸಂಕೇತವಾಗಿದೆ ಎಂದು 'ಟೈಮ್ಸ್ ಹೈಯರ್ ಎಜುಕೇಶನ್ ವರ್ಲ್ಡ್ ಯೂನಿವರ್ಸಿಟಿ ರ್ಯಾಂಕಿಂಗ್ಸ್'ನ ಸಂಪಾದಕ ಫಿಲ್ ಬ್ಯಾಟಿ ತಿಳಿಸಿದ್ದಾರೆ.

ಜಗತ್ತಿನ ಅತ್ಯುತ್ಕೃಷ್ಟ ಶಿಕ್ಷಣ ಸಂಸ್ಥೆಗಳೊಂದಿಗೆ ಸ್ಪರ್ಧೆಗಿಳಿಯುವ ಮೂಲಕ ಹೆಚ್ಚುಹೆಚ್ಚು ಗುಣಮಟ್ಟವನ್ನು ಸಾಧಿಸಲು ಭಾರತ ಗಮನ ಹರಿಸಿದೆ. ಭಾರತೀಯ ವಿಶ್ವವಿದ್ಯಾನಿಲಯಗಳು ಶ್ರೇಷ್ಠ 200ರ ವ್ಯಾಪ್ತಿಯಲ್ಲಿ ಸ್ಥಾನ ಪಡೆಯದಿದ್ದರೂ, ಶ್ರೇಷ್ಠ 400ರ ವ್ಯಾಪ್ತಿಯಲ್ಲಿ ಸ್ಥಾನಗಳಿಸುವ ಮೂಲಕ ಉತ್ತಮ ನಿರ್ವಹಣೆಯನ್ನು ತೋರಿಸಿಕೊಟ್ಟಿವೆ' ಎಂದು ಟೈಮ್ಸ್ ಹೈಯರ್ ಎಜುಕೇಶನ್ ‌ನ ರ್ಯಾಂಕಿಂಗ್ ತಜ್ಞೆ ಎಲಿಝಬೆತ್ ಗಿಬ್ನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟೈಮ್ಸ್ ಹೈಯರ್ ಎಜುಕೇಷನ್ ವರದಿ ಭಾರತದ ಶಿಕ್ಷಣ ಗುಣಮಟ್ಟಕ್ಕೆ ಉತ್ತಮ ಅಳತೆಗೋಲಾಗಿದೆ. ಹೆಚ್ಚಿನ ಸ್ಥಾನ ಗಳಿಸುವತ್ತ ಭಾರತದ ವಿವಿಗಳು ಶ್ರಮಿಸಲಿದೆ ಎಂಬ ನಂಬಿಕೆ ಇದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ರಾಜ್ಯ ಸಚಿವ ಶಶಿ ತರೂರ್ ಹೇಳಿದ್ದಾರೆ.

English summary
Five Indian institutions found a place in the top 400 of the world’s best universities in 2013, improving their tally from the previous year, according to the UK-based Times Higher Education World University Rankings report published.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X