ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾದಿಂದ ಬಚಾವಾಗಲು ವಿಶ್ವದ ಶ್ರೀಮಂತರ ಪ್ಲ್ಯಾನ್ ಇದು

|
Google Oneindia Kannada News

ನವದೆಹಲಿ, ಜುಲೈ 21: ವಿಶ್ವದ ಅತಿ ಶ್ರೀಮಂತರು ಕೊರೊನಾ ಸೋಂಕು ಇಲ್ಲದ ದೇಶಗಳಲ್ಲಿ ಹೋಗಿ ನೆಲೆಸಲು ಸಿದ್ಧತೆ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮುಂದಿನ ಬಾರಿ ಒಂದೊಮ್ಮೆ ವಿಶ್ವದ ಶ್ರೀಮಂತರನ್ನು ಲಾಕ್‌ಡೌನ್‌ನಲ್ಲಿ ಕಟ್ಟಿ ಹಾಕಲು ಮುಂದಾದರೆ ಅದರಿಂದ ತಪ್ಪಿಸಿಕೊಳ್ಳಲು, ನಿರ್ಜನ ಹಾಗೂ ಬೀಚ್‌ಗಳನ್ನು ಆರಿಸಿಕೊಂಡಿದ್ದಾರೆ. ಅಥವಾ ನ್ಯೂಜಿಲೆಂಡ್‌ಗೆ ಹಾರಲು ಬಯಸಿದ್ದು ಅಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಕಡಿಮೆ ಇವೆ.

ಕೋವಿಡ್ ಶುಭಶುದ್ದಿ: ಕರ್ನಾಟಕದಲ್ಲಿ ಶುರುವಾಗಲಿವೆ ಪ್ಲಾಸ್ಮಾ ಬ್ಯಾಂಕ್‌!ಕೋವಿಡ್ ಶುಭಶುದ್ದಿ: ಕರ್ನಾಟಕದಲ್ಲಿ ಶುರುವಾಗಲಿವೆ ಪ್ಲಾಸ್ಮಾ ಬ್ಯಾಂಕ್‌!

ಹಾಗೆಯೇ ಆ ದೇಶವು ಕೂಡ ಇವರುಗಳಿಗೆ ಸವಲತ್ತನ್ನು ನೀಡಲು ಸಿದ್ಧವಿದೆ. ಆ ದೇಶಗಳಲ್ಲಿ ಹಣ ಹೂಡಿಕೆಗೆ ಪರ್ಯಾಯವಾಗಿ ಪೌರತ್ವ ಖಾತರಿ, ಉಳಿದುಕೊಳ್ಳಲು ವ್ಯವಸ್ಥೆ ಮಾಡಲಿವೆ. ಕೊರೊನಾದಂತಹ ಸೋಂಕುಗಳು ಆವರಿಸಿದಾಗ , ಏಕಾಏಕಿ ಲಾಕ್‌ಡೌನ್ ಆದಾಗ ತಾವು ಬಚಾವ್ ಆಗಲು ಈ ಒಂದು ಮಾರ್ಗವನ್ನು ರೆಡಿ ಇಟ್ಟುಕೊಂಡಿದ್ದಾರೆ. ವೈರಸ್ ಸಂಬಂಧಿತ ಲಾಕ್‌ಡೌನ್ ಇರುವುದರಿಂದ ಜನರು ಅಪಾಯದಿಂದ ತಪ್ಪಿಸಿಕೊಳ್ಳಳು ಎಲ್ಲೋ ಹೋಗಿ ಬದುಕಲು ಮುಂದಾಗಿದ್ದಾರೆ.

ವಿಶ್ವದ ಅತಿ ದೊಡ್ಡ ಪೌರತ್ವ ಮತ್ತು ವಾಸ್ತವ್ಯ ಸಲಹಾ ಸಮಿತಿ ಹೆನ್ಲಿ ಹೂಡಿಕೆ ಬದಲಾಗಿ ಪೌರತ್ವ ಅಥವಾ ವಾಸ್ತವ್ಯ ಕಲ್ಪಿಸುವ ಕಾರ್ಯಕ್ರಮಕ್ಕೆ ಮುಂದಾಗಿದೆ. ಕೊರೊನಾ ಲಾಕ್‌ಡೌನ್ ಹಾಗೂ ಸೋಂಕಿನ ಅಪಾಯದಿಂದಾಗಿ ಆತಂಕದಲ್ಲಿರುವ ಶ್ರೀಮಂತರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲು ಸಹಾಯ ಮಾಡುತ್ತದೆ.

ನ್ಯೂಜಿಲೆಂಡ್‌ನಲ್ಲಿ ಪೌರತ್ವಕ್ಕೆ ಬೇಡಿಕೆಯಿಟ್ಟವರೆಷ್ಟು?

ನ್ಯೂಜಿಲೆಂಡ್‌ನಲ್ಲಿ ಪೌರತ್ವಕ್ಕೆ ಬೇಡಿಕೆಯಿಟ್ಟವರೆಷ್ಟು?

2019ರ ಇದೇ ಅವಧಿಗೆ ಹೋಲಿಸಿದರೆ ವೀಸಾ, ಪೌರತ್ವ ಇತರೆ ವಿಷಯಗಳ ಕುರಿತು ಹೆಚ್ಚುವರಿ ಶೇ.49ರಷ್ಟು ಮಂದಿ ವಿಚಾರಣೆ ನಡೆಸಿದ್ದಾರೆ. ಹೊಸ ಪೌರತ್ವ ಹಾಗೂ ರೆಸಿಡೆನ್ಸಿ ಹಕ್ಕುಗಳಿಗಾಗಿ ಅರ್ಜಿಯೊಂದಿಗೆ ಮುಂದುವರೆಯಲು ಬಯಸುವವರಲ್ಲಿ ಶೇ.22ರಷ್ಟು ಹೆಚ್ಚಳ ಕಂಡುಬಂದಿದೆ.

ಕೇವಲ ಕೆರೆಬಿಯನ್ ದ್ವೀಪದ ಮೇಲೆ ಆಸಕ್ತಿ ಹೊಂದಿಲ್ಲ

ಕೇವಲ ಕೆರೆಬಿಯನ್ ದ್ವೀಪದ ಮೇಲೆ ಆಸಕ್ತಿ ಹೊಂದಿಲ್ಲ

ಶ್ರೀಮಂತರು ಕೇವಲ ಕೆರೆಬಿಯನ್ ದ್ವೀಪದ ಮೇಲೆ ಆಸಕ್ತಿ ಹೊಂದಿಲ್ಲ ಬದಲಾಗಿ ಅಲ್ಲಿರುವ ಬೀಜ್‌ಗಳಲ್ಲಿಯೇ ಉಳಿದುಕೊಳ್ಳಲು ತಮ್ಮನ್ನು ತಾವು ಬಂಧನಕ್ಕೊಳಪಡಿಸಲು ಮುಂದಾಗಿದ್ದಾರೆ. ಹಾಗೆಯೇ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಕಡಲತೀರವನ್ನು ಹುಡುಕುತ್ತಿದ್ದಾರೆ.

ಶ್ರೀಮಂತರು ಕ್ವಾರಂಟೈನ್‌ನಿಂದ ತಪ್ಪಿಸಿಕೊಳ್ಳುವುದು ಸುಲಭವಲ್ಲ

ಶ್ರೀಮಂತರು ಕ್ವಾರಂಟೈನ್‌ನಿಂದ ತಪ್ಪಿಸಿಕೊಳ್ಳುವುದು ಸುಲಭವಲ್ಲ

ವಿಶ್ವದ ಅತಿ ಶ್ರೀಮಂತರು ಕೂಡ ಅಷ್ಟು ಸುಲಭವಾಗಿ ಕ್ವಾರಂಟೈನ್ ಅಥವಾ ಪ್ರಯಾಣ ನಿಷೇಧದಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ.ಪಾಸ್‌ಪೋರ್ಟ್‌ಗಳನ್ನು ಅಥವಾ ವಾಸ್ತವ್ಯದ ಹಕ್ಕುಗಳನ್ನು ಪಡೆದುಕೊಳ್ಳಲು ಸಮಯ ಬೇಕಾಗುತ್ತದೆ. ಕೆರೆಬಿಯನ್ ದ್ವೀಪಕ್ಕೆ ತೆರಳಲು ಅನುಮತಿ ಪಡೆಯಲು ಮೂರು ತಿಂಗಳುಗಳ ಕಾಲಾವಕಾಶ ಬೇಕು.

ಜನರು ವೀಸಾ ರಹಿತ ಪ್ರಯಾಣವನ್ನು ಬಯಸುತ್ತಿದ್ದಾರೆ

ಜನರು ವೀಸಾ ರಹಿತ ಪ್ರಯಾಣವನ್ನು ಬಯಸುತ್ತಿದ್ದಾರೆ

ಜನರು ವೀಸಾ ರಹಿತ ಪ್ರಯಾಣವನ್ನು ಬಯಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪೋರ್ಚುಗಲ್‌ನಲ್ಲಿ ಹಣ ಹೂಡಿಕೆ ಪ್ರಮಾಣ ಹೆಚ್ಚಾಗಿದೆ. ಹಾಗೂ ಅಲ್ಲಿ ಕೊರೊನಾ ಪ್ರಕರಣಗಳು ಕೂಡ ಕಡಿಮೆ ಇದೆ. ಇದರ ಲಾಭವನ್ನು ಪಡೆಯಲು ಪ್ರಯತ್ನ ನಡೆಯುತ್ತಿದೆ.

English summary
The next time the world's rich are forced into lockdown, they would like to have an escape ready to a remote and sunny beach. Or perhaps to New Zealand, one of the few countries that has eliminated Covid-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X