ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಕೂಡಲೇ ನಗುವುದನ್ನು ನಿಲ್ಲಿಸುವಂತೆ ಆಗ್ರಹ

By Ashwath
|
Google Oneindia Kannada News

ಟರ್ಕಿ, ಆ.4:ನಗುವುದು, ಅಳುವುದು ಮಾನವನಿಗೆ ಅತ್ಯಂತ ಸಹಜವಾದ ಕ್ರಿಯೆ. ಅದರಲ್ಲೂ ಮಹಿಳೆಯರಿಗೆ ಇದನ್ನು ಹೇಳಿಕೊಡಬೇಕಾಗಿಯೇ ಇಲ್ಲ. ನಗುವು ಮಹಿಳೆಯರ ಅಂದವನ್ನು ಮಾತ್ರವಲ್ಲ ಆರೋಗ್ಯವನ್ನು ಕೂಡ ಹೆಚ್ಚಿಸುತ್ತದೆ. ಸುತ್ತಲೂ ಕಿಲಕಿಲ ನಗುವಿದ್ದಕ್ಕೆ ಮುದುಡಿಕೊಂಡ ಮನವು ಕೂಡ ಅರಳುತ್ತದೆ. ಅಂಥದ್ದರಲ್ಲಿ 'ಮಹಿಳೆಯರೇ, ನಕ್ಕೀರಿ ಜೊಕೆ!' ಅಂತ ಯಾರಾದರೂ ಫರ್ಮಾನು ಹೊರಡಿಸಿದರೆ?

ಈ ರೀತಿಯ ವಿವಾದಾತ್ಮಕ ಹೇಳಿಕೆಯನ್ನು ಟರ್ಕಿ‌‌ಯ ಉಪಪ್ರಧಾನಿಯೊಬ್ಬರು ನೀಡಿದ್ದಾರೆ. ಮಹಿಳೆಯರು ಸಾರ್ವ‌ಜನಿಕ ಸ್ಥಳದಲ್ಲಿ ನಗುವುದರಿಂದಲೇ ಅವರ ಮೇಲೆ ಹೆಚ್ಚಿನ ದೌರ್ಜ‌ನ್ಯವಾಗುತ್ತಿದ್ದು, ಮಹಿಳೆಯರು ಕೂಡಲೇ ಸಾರ್ವ‌ಜನಿಕ ಸ್ಥಳದಲ್ಲಿ ನಗುವುದನ್ನು ನಿಲ್ಲಿಸಬೇಕೆಂದು ಅವರು ಹೇಳಿದ್ದಾರೆ.

ನೈತಿಕ ಭ್ರಷ್ಟಾಚಾರ ವಿಷಯಕ್ಕೆ ಸಂಬಂಧಿಸಿ ಉಪಪ್ರಧಾನಿ ಬುಲೆಂಟ್‌ ಎರ್‌‌ನಿಕ್‌ ಭಾಷಣ ಮಾಡುತ್ತಾ,"ಮಹಿಳೆಯ ವರ್ತ‌ನೆಯೇ ಅವಳ ಮೇಲೆ ಕೃತ್ಯ ನಡೆಸಲು ಪ್ರಚೋದನೆ ನೀಡುತ್ತದೆ. ಈ ಪ್ರಚೋದನೆ ತಡೆಯಲು ಅವಳಿಂದ ಸಾಧ್ಯವಿದೆ. ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರು ನಗುವುದನ್ನು ನಿಲ್ಲಿಸಿದರೆ, ಅವಳ ಮೇಲೆ ಆಗುವ ಅಪಾಯವನ್ನು ತಡೆಯಬಹುದು" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.[ಬೀದಿ ಕಾಮಣ್ಣರಿಗೆ ಬಿಸಿ ಮುಟ್ಟಿಸಿದ ಪೊಲೀಸರು]

women laugh

ಉಪಪ್ರಧಾನಿ ಹೇಳಿಕೆ ನೀಡಿದ್ದೆ ತಡ ಟರ್ಕಿ‌ ಮಹಿಳೆಯರು ಆಕ್ರೋಶಗೊಂಡಿದ್ದು ಉಪಪ್ರಧಾನಿ ಹೇಳಿಕೆಯನ್ನು ಖಂಡಿಸಿ ಸಾರ್ವ‌ಜನಿಕ ಸ್ಥಳಗಳಲ್ಲಿ ಗುಂಪುಗುಂಪಾಗಿ ನಗಲು ಆರಂಭಿಸಿದ್ದಾರೆ. ನಗೆಯ ಜೊತೆಗೆ ತಾವು ನಗಾಡಿದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು ಆರಂಭಿಸಿದ್ದಾರೆ.

ತುರ್ಕಿಶ್‌ ಭಾಷೆಯಲ್ಲಿ "kahkaha" ಅಂದರೆ ನಗು ಎಂದರ್ಥ. ಈ "kahkaha" ಪದವನ್ನು ಹ್ಯಾಶ್‌ ಟ್ಯಾಗ್‌ ಆಗಿ ಬಳಸಿ ತಮ್ಮ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುತ್ತಿದ್ದಾರೆ.

ಮಹಿಳೆಯ ರಕ್ಷಣೆಗೆ ಸಂಬಂಧಿಸಿದಂತೆ ಸರಿಯಾದ ಕಾನೂನು ರೂಪಿಸಲು ಆಗದ ಸರ್ಕಾರ, ಈ ರೀತಿಯ ಹೇಳಿಕೆ ನೀಡಿ ಮಹಿಳೆಯರಿಗೆ ಅವಮಾನ ಮಾಡುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟರ್ಕಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

English summary
A speech made by the Turkish Deputy Prime Minister urging women not to laugh in public in order to "preserve morality" has sparked a backlash on social media from women posting defiant selfies of themselves laughing at his remarks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X