ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಗೋಧಿಗೆ ನಿಷೇಧ ಹೇರಿದ ಯುಎಇ

|
Google Oneindia Kannada News

ದುಬೈ, ಜೂ. 15: ಯುಎಇಯ ಆರ್ಥಿಕ ಸಚಿವಾಲಯವು ಭಾರತದಿಂದ ಬರುವ ಗೋಧಿ ಮತ್ತು ಗೋಧಿ ಹಿಟ್ಟಿನ ರಫ್ತು ಮತ್ತು ಮರು ರಫ್ತಿನ ಮೇಲೆ ನಿಷೇಧವನ್ನು ವಿಧಿಸುವ ನಿರ್ಣಯ ಕೈಗೊಂಡಿದೆ.

ಮುಕ್ತ ವಲಯಗಳನ್ನು ಒಳಗೊಂಡಿರುವ ಈ ನಿಷೇಧವು ಮೇ 13 ರಿಂದ ಪ್ರಾರಂಭವಾಗುವ ನಾಲ್ಕು ತಿಂಗಳ ಅವಧಿಗೆ ಇರುತ್ತದೆ. ಈ ಕ್ಯಾಬಿನೆಟ್‌ ನಿರ್ಣಯವು ಸಾಮಾನ್ಯ ಮತ್ತು ಮೃದುವಾದ ಗೋಧಿ ಹಾಗೆಯೇ ಗೋಧಿ ಹಿಟ್ಟು ಸೇರಿದಂತೆ ಎಲ್ಲಾ ಗೋಧಿ ಉತ್ಪನ್ನಗಳಿಗೆ ಅನ್ವಯಿಸುತ್ತದೆ.

ಅಕ್ಕಿ ರಫ್ತಿನ ಮೇಲೆ ನಿಷೇಧ: ಕೇಂದ್ರ ಸರ್ಕಾರ ಕೊಟ್ಟ ಸ್ಪಷ್ಟನೆ ಏನು?ಅಕ್ಕಿ ರಫ್ತಿನ ಮೇಲೆ ನಿಷೇಧ: ಕೇಂದ್ರ ಸರ್ಕಾರ ಕೊಟ್ಟ ಸ್ಪಷ್ಟನೆ ಏನು?

ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಯುಎಇಯಲ್ಲಿ ಬಳಕೆಗಾಗಿ ಗೋಧಿಯನ್ನು ರಫ್ತು ಮಾಡಲು ಭಾರತ ಸರ್ಕಾರದ ಅನುಮೋದನೆ ಸಿಕ್ಕಿತ್ತು. ವ್ಯಾಪಾರದ ಮೇಲೆ ಪರಿಣಾಮ ಬೀರುವ ಅಂತಾರಾಷ್ಟ್ರೀಯ ಬೆಳವಣಿಗೆಗಳ ಮತ್ತು ಭಾರತ ಮತ್ತು ಯುಎಇ ನಡುವಿನ ಕಾರ್ಯತಂತ್ರದ ಸಂಬಂಧಗಳ ಮೆಚ್ಚುಗೆಯ ನಡುವೆ ಈ ನಿರ್ಧಾರವು ಬಂದಿದೆ.

The UAE Has Banned Indian Wheat

ಮೇ 13 ರ ಮೊದಲು ಯುಎಇಯಿಂದ ಹೊರಗೆ ಆಮದು ಮಾಡಿಕೊಳ್ಳಲಾದ ಭಾರತೀಯ ಮೂಲದ ಗೋಧಿ ಮತ್ತು ಗೋಧಿ ಹಿಟ್ಟಿನ ತಳಿಗಳನ್ನು ರಫ್ತು ಮಾಡಲು ಮತ್ತು ಮರು-ರಫ್ತು ಮಾಡಲು ಬಯಸುವ ಕಂಪನಿಗಳು ರಫ್ತು ಮಾಡಲು ಅನುಮತಿಗಾಗಿ ಸಚಿವಾಲಯಕ್ಕೆ ವಿನಂತಿಯನ್ನು ಸಲ್ಲಿಸಬೇಕು ಎಂದು ಸಚಿವಾಲಯ ತಿಳಿಸಿದೆ.

ಭಾರತ ಮೂಲದ ನಿಯಮಗಳು, ವಹಿವಾಟಿನ ದಿನಾಂಕ ಇತ್ಯಾದಿಗಳಿಗೆ ಸಂಬಂಧಿಸಿದ ದತ್ತಾಂಶವನ್ನು ಪರಿಶೀಲಿಸಲು ಸಹಾಯ ಮಾಡುವ ಎಲ್ಲಾ ದಾಖಲೆಗಳನ್ನು ಸಚಿವಾಲಯಕ್ಕೆ ಸಲ್ಲಿಸಬೇಕು ಎಂದು ಹೇಳಿದೆ.

ಭಾರತೇತರ ಮೂಲದ ಗೋಧಿ ಮತ್ತು ಗೋಧಿ ಹಿಟ್ಟಿನ ರಫ್ತಿನ ಸಂದರ್ಭದಲ್ಲಿ ಕಂಪನಿಗಳು ರಫ್ತು ಮಾಡಲು ಮತ್ತು ಮರು-ರಫ್ತು ಮಾಡಲು ಬಯಸುತ್ತಾರೆ ಇದಕ್ಕೆ ಸಚಿವಾಲಯದ ಅನುಮತಿ ಅಗತ್ಯವಿರುತ್ತದೆ. ರಫ್ತಿನ ಹಕ್ಕುಗಳನ್ನು ಪಡೆಯಲು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಈ ಸಂದರ್ಭದಲ್ಲಿಯೂ ಸಲ್ಲಿಸಬೇಕು ಎಂದು ಹೇಳಿದೆ. ನೀಡಲಾಗುವ ರಫ್ತು ಪರವಾನಗಿಯು ವಿತರಣೆಯ ದಿನಾಂಕದಿಂದ 30 ದಿನಗಳವರೆಗೆ ಮಾನ್ಯವಾಗಿರುತ್ತದೆ. ಅಲ್ಲದೆ ಇದು ಸಂಬಂಧಿತ ಕಸ್ಟಮ್ಸ್ ಇಲಾಖೆಯಲ್ಲಿ ಒದಗಿಸಲಾಗುತ್ತದೆ.

1.2 ಮಿಲಿಯನ್ ಟನ್ ಗೋಧಿ ರಫ್ತಿಗೆ ಭಾರತ ಅನುಮತಿ ಸಾಧ್ಯತೆ 1.2 ಮಿಲಿಯನ್ ಟನ್ ಗೋಧಿ ರಫ್ತಿಗೆ ಭಾರತ ಅನುಮತಿ ಸಾಧ್ಯತೆ

ಫೆಬ್ರವರಿಯಲ್ಲಿ ಭಾರತ ಮತ್ತು ಯುಎಇ ಹೂಡಿಕೆ ಮತ್ತು ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದು, ವಸ್ತುಗಳು ಮತ್ತು ಗುರಿಗಳನ್ನು ಹೆಚ್ಚಿಸಿ ವಾರ್ಷಿಕವಾಗಿ 100 ಬಿಲಿಯನ್‌ ವ್ಯಾಪಾರದ ಗುರಿಯನ್ನು ಹೊಂದಲಾಗಿದೆ. ಸಮಗ್ರ ಆರ್ಥಿಕ ಸಹಕಾರ ಮತ್ತು ವ್ಯಾಪರ ಒಪ್ಪಂದವು ಮೇ 1ರಿಂದ ಜಾರಿಗೆ ಬಂದಿದೆ.

The UAE Has Banned Indian Wheat

ಈ ಹಿನ್ನೆಲೆಯಲ್ಲಿ 1970ರಲ್ಲಿ 180 ಮಿಲಿಯನ್ ಇದ್ದ ವ್ಯಾಪಾರ ವಹಿವಾಟು 2019-20ರ ವೇಳೆಗೆ 60 ಬಿಲಿಯನ್‌ಗೆ ಬಂದು ನಿಂತಿದೆ. ಇದು ಚೀನಾ ಹಾಗೂ ಅಮೆರಿಕ ನಂತರ ಸ್ಥಾನವನ್ನು ಪಡೆದಿದೆ. ಯುಎಇ ಭಾರತದ ಎರಡನೇ ಅತಿ ದೊಡ್ಡ ರಫ್ತು ತಾಣವಾಗಿದ್ದು, 2.21 ಲಕ್ಷ ಕೋಟಿಯ ರಫ್ತು ವ್ಯಾಪಾರ ಹೊಂದಿದೆ. ಯುಎಇ ಭಾರತಕ್ಕೆ ಎಂಟನೇ ಅತಿ ದೊಡ್ಡ ಹೂಡಿಕೆ ದೇಶವಾಗಿದೆ.

English summary
The UAE's Ministry of Finance has issued a cabinet decision to impose a ban on the export and re-export of wheat and wheat flour from India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X