ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವುಹಾನ್ ಲ್ಯಾಬ್‌ ಸಿಬ್ಬಂದಿಗಳು ಅನಾರೋಗ್ಯಗೊಂಡಿದ್ದರೆ?: ಇಲ್ಲಿನ ಏಕೈಕ ವಿದೇಶಿ ವಿಜ್ಞಾನಿ ಹೇಳಿದ್ದಿಷ್ಟು

|
Google Oneindia Kannada News

ಬಿಜೀಂಗ್‌, ಜೂ.28: ಮಧ್ಯ ಚೀನಾದಲ್ಲಿ ಕೋವಿಡ್ -19 ರ ಮೊದಲ ಪ್ರಕರಣಗಳು ಹೊರಹೊಮ್ಮುವ ಕೆಲವೇ ವಾರಗಳ ಮೊದಲು ವಿಶ್ವದ ಅತ್ಯಂತ ಕುಖ್ಯಾತ ಪ್ರಯೋಗಾಲಯವಾಗಿ ಮಾರ್ಪಟ್ಟ ಪ್ರಯೋಗಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಆಸ್ಟ್ರೇಲಿಯಾದ ವೈರಾಲಜಿಸ್ಟ್ ಡೇನಿಯಲ್ ಆಂಡರ್ಸನ್‌ ವುಹಾನ್ ಲ್ಯಾಬ್‌ನ ಸಿಬ್ಬಂದಿಗಳು ಅನಾರೋಗ್ಯಕ್ಕೆ ಒಳಗಾಗಿದ್ದರು ಎಂಬ ವರದಿಗಳ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಹಲವಾರು ದೇಶದ ತಜ್ಞರುಗಳು ಇದು ಚೀನಾದ ವುಹಾನ್‌ ಲ್ಯಾಬ್‌ನಿಂದ ಸೋರಿಕೆಯಾಗಿದೆ ಎಂಬ ಆರೋಪವನ್ನು ಮಾಡುತ್ತಿದ್ದಾರೆ. ಹಾಗೆಯೇ ಚೀನಾದ ಪ್ರಯೋಗಾಲಯಗಳಿಂದಲೇ ಕೊರೊನಾ ವೈರಾಣು ಸೋರಿಕೆಯಾಗಿದೆ ಎಂದು ಬ್ರಿಟನ್ ಗುಪ್ತಚರ ಇಲಾಖೆ ಹೇಳಿದೆ. ಚೀನಾದಲ್ಲಿ ಕೊರೊನಾ ವೈರಸ್‌ ಮೊದಲ ಬಾರಿಗೆ ಡಿಸೆಂಬರ್‌ 2019 ರಲ್ಲಿ ವುಹಾನ್‌ನಲ್ಲಿ ಕಾಣಿಸಿಕೊಂಡಿದೆ. ಅದೇ ಪ್ರಾಂತ್ಯದ ಅಂದರೆ ವುಹಾನ್‌ನ ಲ್ಯಾಬ್‌ನ ಮೂವರು ಸಿಬ್ಬಂದಿಗಳಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು ಎಂದು ವರದಿಯಾಗಿದೆ.

ವುಹಾನ್ ಲ್ಯಾಬ್‌ ಸಿಬ್ಬಂದಿಗಳ ವೈದ್ಯಕೀಯ ದಾಖಲೆ ಬಿಡುಗಡೆ ಮಾಡಿ - ಚೀನಾಕ್ಕೆ ಡಾ. ಫೌಸಿ ಆಗ್ರಹ ವುಹಾನ್ ಲ್ಯಾಬ್‌ ಸಿಬ್ಬಂದಿಗಳ ವೈದ್ಯಕೀಯ ದಾಖಲೆ ಬಿಡುಗಡೆ ಮಾಡಿ - ಚೀನಾಕ್ಕೆ ಡಾ. ಫೌಸಿ ಆಗ್ರಹ

ಈ ಎಲ್ಲಾ ಬೆಳವಣಿಗೆಯ ಬೆನ್ನಲ್ಲೇ ಬ್ಲೂಮ್‌ಬರ್ಗ್ ನ್ಯೂಸ್‌ಗೆ ಸಂದರ್ಶನ ನೀಡಿದ ವುಹಾನ್‌ ಪ್ರಯೋಗಾಲಯದಲ್ಲಿ ಕಾರ್ಯನಿರ್ವಹಿಸಿದ ಏಕೈಕ ವಿದೇಶಿ ವಿಜ್ಞಾನಿ, ಆಸ್ಟ್ರೇಲಿಯಾದ ವೈರಾಲಜಿಸ್ಟ್ ಡೇನಿಯಲ್ ಆಂಡರ್ಸನ್‌ ಪ್ರಯೋಗಾಲಯದಲ್ಲಿ ಕೆಲಸ ಮಾಡುವ ಬಗ್ಗೆ ವಿವರಗಳನ್ನು ಹಂಚಿಕೊಂಡಿದ್ದಾರೆ. ''ಅರ್ಧ-ಸತ್ಯ ಹಾಗೂ ತಿರುಚಿದ ಮಾಹಿತಿ ಪ್ರಯೋಗಾಲಯದ ಕಾರ್ಯಗಳು ಮತ್ತು ಚಟುವಟಿಕೆಗಳ ನಿಖರವಾದ ಮಾಹಿತಿಗೆ ತೆರೆ ಎಳೆದಿದೆ,'' ಎಂದು ಡೇನಿಯಲ್ ಆಂಡರ್ಸನ್‌ ಹೇಳಿದ್ದಾರೆ. "ಈ ಲ್ಯಾಬ್‌ ನೀರಸವಾಗಿತ್ತು ಎಂದು ಅಲ್ಲ, ಆದರೆ ಇದು ಸಾಮಾನ್ಯ ಲ್ಯಾಬ್ ಆಗಿದ್ದು ಅದು ಇತರ ಉನ್ನತ-ಸಾಮರ್ಥ್ಯದ ಲ್ಯಾಬ್‌ನಂತೆಯೇ ಕಾರ್ಯನಿರ್ವಹಿಸುತ್ತದೆ. ಈಗ ಜನರು ಈ ಲ್ಯಾಬ್‌ ಬಗ್ಗೆ ಏನು ಮಾತನಾಡುತ್ತಿದ್ದಾರೆ, ಅದು ನಿಜವಲ್ಲ," ಎಂದು ತಿಳಿಸಿದ್ದಾರೆ.

 ಆಸ್ಟ್ರೇಲಿಯಾದ ವೈರಾಲಜಿಸ್ಟ್ ಡೇನಿಯಲ್ ಆಂಡರ್ಸನ್‌ ಬಗ್ಗೆ

ಆಸ್ಟ್ರೇಲಿಯಾದ ವೈರಾಲಜಿಸ್ಟ್ ಡೇನಿಯಲ್ ಆಂಡರ್ಸನ್‌ ಬಗ್ಗೆ

2016 ರಲ್ಲಿ ವುಹಾನ್ ಸಂಶೋಧಕರೊಂದಿಗೆ ಕಾರ್ಯನಿರ್ವಹಿಸಲು ಆರಂಭಿಸಿದ ಡೇನಿಯಲ್ ಆಂಡರ್ಸನ್‌, 42 ವರ್ಷ ಪ್ರಾಯದವರು. ವೈರಾಲಜಿ ಸಮುದಾಯದಲ್ಲಿ ಉದಯೋನ್ಮುಖ ತಾರೆ ಆಂಡರ್ಸನ್. ವುಹಾನ್‌ನಲ್ಲಿ ಎಬೊಲ ಕುರಿತಾದ ಆಕೆಯ ಉತ್ತಮ ಕಾರ್ಯವಾಗಿದೆ. ಆಂಡರ್ಸನ್ ವೃತ್ತಿಜೀವನದ ಬಗ್ಗೆ ನಾವು ತಿಳಿಯುವಾಗ ನಮ್ಮನ್ನು ಅದು ಪ್ರಪಂಚದಾದ್ಯಂತ ಕರೆದೊಯುತ್ತದೆ. ಆಸ್ಟ್ರೇಲಿಯಾದ ಗೀಲಾಂಗ್‌ನಲ್ಲಿರುವ ಡೀಕಿನ್ ವಿಶ್ವವಿದ್ಯಾಲಯದಿಂದ ಪದವಿಪೂರ್ವ ಪದವಿ ಪಡೆದ ನಂತರ, ಆಂಡರ್ಸನ್‌ ಬೋಸ್ಟನ್‌ನ ಡಾನಾ-ಫಾರ್ಬರ್ ಕ್ಯಾನ್ಸರ್ ಸಂಸ್ಥೆಯಲ್ಲಿ ಲ್ಯಾಬ್ ತಂತ್ರಜ್ಞರಾಗಿ ಕೆಲಸ ಮಾಡಿದರು. ನಂತರ ಆಸ್ಟ್ರೇಲಿಯಾಕ್ಕೆ ಹಿಂದಿರುಗಿ ಪ್ರಖ್ಯಾತ ವೈರಾಲಜಿಸ್ಟ್‌ಗಳಾದ ಜಾನ್ ಮೆಕೆಂಜಿ ಮತ್ತು ಲಿನ್ಫಾ ವಾಂಗ್ ಮೇಲ್ವಿಚಾರಣೆಯಲ್ಲಿ ಪಿಎಚ್‌ಡಿ ಮುಗಿಸಿದರು. ಆ ಬಳಿಕ ಸಿಂಗಾಪುರಕ್ಕೆ ತೆರಳುವ ಮೊದಲು ಹಾಗೂ ವಾಂಗ್ ಜೊತೆ ಮತ್ತೆ ಕೆಲಸ ಮಾಡುವ ಮೊದಲು ಮಾಂಟ್ರಿಯಲ್‌ನಲ್ಲಿ ಪೋಸ್ಟ್-ಡಾಕ್ಟರೇಟ್ ಕೆಲಸ ಮಾಡಿದರು. ಆಂಡರ್ಸನ್‌ "ಬಹಳ ಬದ್ಧತೆ ಉಳ್ಳವರು ಮತ್ತು ಸಮರ್ಪಿತರು" ಎಂದು ಅವರ ಪಿಎಚ್‌ಡಿ ಮೇಲ್ವಿಚಾರಕರು ಹೇಳುತ್ತಾರೆ. "ಡೇನಿಯಲ್ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ," ಎನ್ನುತ್ತಾರೆ ಲಿನ್ಫಾ ವಾಂಗ್.

 ಕೊರೊನಾ ಮೊದಲು ಹರಡಲು ಆರಂಭಿಸಿದ ಸಂದರ್ಭ ವುಹಾನ್‌ ಲ್ಯಾಬ್‌

ಕೊರೊನಾ ಮೊದಲು ಹರಡಲು ಆರಂಭಿಸಿದ ಸಂದರ್ಭ ವುಹಾನ್‌ ಲ್ಯಾಬ್‌

ಈಗ SARS-CoV-2 ಎಂದು ಕರೆಯಲ್ಪಡುವ ವೈರಸ್ ಹರಡಲು ಪ್ರಾರಂಭಿಸಿದೆ ಎಂದು ತಜ್ಞರಿಗೆ ತಿಳಿದ ಸಂದರ್ಭ ಆಂಡರ್ಸನ್ ವುಹಾನ್‌ನಲ್ಲಿ ಇದ್ದರು. 2019 ರ ಕೊನೆಯಲ್ಲಿ ಒಂದು ಅವಧಿಗೆ ದೈನಂದಿನ ಭೇಟಿಯು 65 ವರ್ಷದ ಸಂಶೋಧನಾ ಕೇಂದ್ರದಲ್ಲಿ ಕೆಲಸ ಮಾಡುವ ಇತರರೊಂದಿಗೆ ಆಂಡರ್ಸನ್‌ ನಂಟು ಬೆಳೆಯಲು ಕಾರಣವಾಗಿದೆ. ಚೀನೀ ಅಕಾಡೆಮಿ ಆಫ್ ಸೈನ್ಸಸ್‌ನಲ್ಲಿ ಪ್ರತಿದಿನ ಬೆಳಿಗ್ಗೆ ಒಟ್ಟುಗೂಡುತ್ತಿದ್ದ ಒಂದು ಗುಂಪಿನ ಭಾಗವಾಗಿದ್ದರು ಆಂಡರ್ಸನ್‌. ಏಕೈಕ ವಿದೇಶಿಗರಾಗಿದ್ದ ಆಂಡರ್ಸನ್, "ನಾವು ಒಟ್ಟಿಗೆ ಔತಣಕೂಟಕ್ಕೆ ಹೋದೆವು, ಊಟ-ತಿಂಡಿ ಜೊತೆಯಾಗಿ ಮಾಡಿದೆವು. ನಾವು ಲ್ಯಾಬ್‌ನ ಹೊರಗೂ ಭೇಟಿಯಾದೆವು," ಎಂದು ಹೇಳಿದ್ದಾರೆ. "ಲ್ಯಾಬ್‌ನಲ್ಲಿ ರೋಗಕಾರಕಗಳ ಅಧ್ಯಯನ ಮಾಡಲು ಕಟ್ಟುನಿಟ್ಟಾದ ಮಾರ್ಗಸೂಚಿಯಿತ್ತು. ನಾನು ಸ್ವತಂತ್ರವಾಗಿ ಕೆಲಸ ಮಾಡುವ ಮೊದಲು 45 ಗಂಟೆಗಳ ತರಬೇತಿ ಪಡೆದಿದ್ದೇನೆ. ಈ ಲ್ಯಾಬ್‌ನಲ್ಲಿ ಗಾಳಿಯ ಒತ್ತಡದ ಸೂಟ್‌ಗಳನ್ನು ಧರಿಸಬೇಕು. ಬಹಳ ಎಚ್ಚರಿಕೆಯಿಂದ ಇರಬೇಕಾಗಿದೆ," ಎಂದು ಹೇಳಿದ್ದಾರೆ.

ಚೀನಾ ವೈರಸ್‌ ವುಹಾನ್‌ ಲ್ಯಾಬ್‌ನಿಂದ ಬರುತ್ತಿದೆ ಎಂದು ನಾನು ಹೇಳಿದ್ದು ಸರಿ ಎಂದ ಟ್ರಂಪ್‌ಚೀನಾ ವೈರಸ್‌ ವುಹಾನ್‌ ಲ್ಯಾಬ್‌ನಿಂದ ಬರುತ್ತಿದೆ ಎಂದು ನಾನು ಹೇಳಿದ್ದು ಸರಿ ಎಂದ ಟ್ರಂಪ್‌

 ಸೋಂಕುನಿವಾರಕಗಳ ತಯಾರಿಗೆ ಬೆಸ್ಪೋಕ್ ವಿಧಾನ

ಸೋಂಕುನಿವಾರಕಗಳ ತಯಾರಿಗೆ ಬೆಸ್ಪೋಕ್ ವಿಧಾನ

"ಇಲ್ಲಿ ನಿಯಮಗಳು ಇದ್ದು ಎಲ್ಲ ನಿಯಮಗಳ ಪಾಲನೆ ಕಡ್ಡಾಯವಾಗಿದೆ. ಯುರೋಪ್, ಸಿಂಗಾಪುರ್ ಮತ್ತು ಆಸ್ಟ್ರೇಲಿಯಾದಲ್ಲಿ ಇದೇ ರೀತಿಯ ಲ್ಯಾಬ್‌ಗೆ ಹೋಲಿಸಿದರೆ ವ್ಯತ್ಯಾಸಗಳಿವೆ. ವುಹಾನ್ ಲ್ಯಾಬ್ ತನ್ನ ಸೋಂಕುನಿವಾರಕಗಳನ್ನು ತಯಾರಿಸಲು ಮತ್ತು ಮೇಲ್ವಿಚಾರಣೆ ಮಾಡಲು ಬೆಸ್ಪೋಕ್ ವಿಧಾನವನ್ನು ಬಳಸುತ್ತದೆ," ಎಂದು ಆಂಡರ್ಸನ್ ತಿಳಿಸಿದ್ದಾರೆ. ನಿರಂತರ ಸಂವಹನ ಮತ್ತು ಸುರಕ್ಷತಾವಾಗಿರಲು ಲ್ಯಾಬ್‌ನ ಕಮಾಂಡ್ ಸೆಂಟರ್‌ನಲ್ಲಿರುವ ಸಹೋದ್ಯೋಗಿಗಳಿಗೆ ಹೆಡ್‌ಸೆಟ್ ಮೂಲಕ ಸಂಪರ್ಕ ಹೊಂದಿರಬೇಕು. ಯಾವ ಚಿಂತೆಯೂ ಇಲ್ಲ ಎಂದು ಖಚಿತಪಡಿಸಿಕೊಳ್ಳಲಾಗುತ್ತದೆ.

 ''ಲ್ಯಾಬ್‌ನಲ್ಲಿ ಯಾರೂ ಅನಾರೋಗ್ಯಕ್ಕೆ ಒಳಗಾಗಿರಲಿಲ್ಲ'' ಎಂದ ಆಂಡರ್ಸನ್

''ಲ್ಯಾಬ್‌ನಲ್ಲಿ ಯಾರೂ ಅನಾರೋಗ್ಯಕ್ಕೆ ಒಳಗಾಗಿರಲಿಲ್ಲ'' ಎಂದ ಆಂಡರ್ಸನ್

ಇತ್ತೀಚಿನ ಕೆಲವು ವರದಿಗಳು 2019 ರ ನವೆಂಬರ್‌ನಲ್ಲಿ ಲ್ಯಾಬ್‌ನ ಮೂವರು ಸಂಶೋಧಕರು ಜ್ವರ ತರಹದ ರೋಗಲಕ್ಷಣಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಆಂಡರ್ಸನ್, ''ವುಹಾನ್ ಸಂಸ್ಥೆಯಲ್ಲಿ ನನಗೆ ತಿಳಿದಿರುವ ಯಾರೊಬ್ಬರೂ 2019 ರ ಅಂತ್ಯದ ವೇಳೆಗೆ ಅನಾರೋಗ್ಯದಿಂದ ಬಳಲಿಲ್ಲ,'' ಎಂದಿದ್ದಾರೆ. "ಜನರು ಅನಾರೋಗ್ಯದಿಂದ ಬಳಲುತ್ತಿದ್ದರೆ, ನಾನು ಅನಾರೋಗ್ಯಕ್ಕೆ ಒಳಗಾಗಬಹುದೆಂದು ನಾನು ಭಾವಿಸುತ್ತೇನೆ. ಆದರೆ ನಾನು ಅನಾರೋಗ್ಯಕ್ಕೆ ಒಳಗಾಗಿಲ್ಲ. ಹಾಗೆಯೇ ಬೇರೆ ಯಾರೂ ಕೂಡಾ ಅನಾರೋಗ್ಯಕ್ಕೆ ಒಳಗಾಗಿಲ್ಲ," ಎಂದು ತಿಳಿಸಿದ್ದಾರೆ. "ನಾನು ಲಸಿಕೆ ಹಾಕುವ ಮೊದಲು ಸಿಂಗಾಪುರದಲ್ಲಿ ಕೊರೊನಾ ಸೋಂಕಿಗೆ ಒಳಗಾದೆ. ಇಲ್ಲಿರುವಾಗ ಕೊರೊನಾ ಸೋಂಕು ಇರಲಿಲ್ಲ," ಎಂದು ಹೇಳಿದ್ದಾರೆ. "ವುಹಾನ್‌ನಲ್ಲಿರುವ ಆಂಡರ್ಸನ್‌ನ ಅನೇಕ ಸಹಯೋಗಿಗಳು ಡಿಸೆಂಬರ್ ಅಂತ್ಯದಲ್ಲಿ ನಿಪಾ ವೈರಸ್‌ನ ಚರ್ಚೆಗಾಗಿ ಸಿಂಗಾಪುರಕ್ಕೆ ಬಂದಿದ್ದಾರೆ. ಇಲ್ಲಿ ಯಾರಿಗೂ ಆ ಸಂದರ್ಭದಲ್ಲಿ ಅನಾರೋಗ್ಯ ಕಾಣಿಸಿಕೊಂಡಿಲ್ಲ," ಎಂದೂ ತಿಳಿಸಿದ್ದಾರೆ.

 ''ಅಲ್ಲಿಂದ ವೈರಸ್ ಸೋರಿಕೆಯಾಗುವುದು ಅಸಾಧ್ಯವೇನಲ್ಲ''

''ಅಲ್ಲಿಂದ ವೈರಸ್ ಸೋರಿಕೆಯಾಗುವುದು ಅಸಾಧ್ಯವೇನಲ್ಲ''

"ಪ್ರಯೋಗಾಲಯದಿಂದ ವೈರಸ್ ಸೋರಿಕೆಯಾಗುವುದು ಅಸಾಧ್ಯವಲ್ಲ. 2002 ರಲ್ಲಿ ಏಷ್ಯಾದಲ್ಲಿ ಹೊರಹೊಮ್ಮಿದ ಹಾಗೂ 700 ಕ್ಕೂ ಹೆಚ್ಚು ಜನರನ್ನು ಕೊಂದ SARS, ಅಂದರೆ ಕೊರೊನಾ ವೈರಸ್‌ ನಂತರ ಕೆಲವು ಬಾರಿ ಸುರಕ್ಷಿತ ಸೌಲಭ್ಯಗಳಿಂದ ಹೊರಬಂದಿತ್ತು. ಅಂತಹ ಅಪಘಾತವು ಕೋವಿಡ್ -19 ಅನ್ನು ಹುಟ್ಟುಹಾಕಿದೆ ಎಂಬುದಕ್ಕೆ ಪುರಾವೆಗಳನ್ನು ನೀಡಿದರೆ, ಹೇಗೆ ಸಂಭವಿಸಬಹುದು ಎಂದು ಊಹಿಸಬಹುದು. ನಾನು ಇದದ್ದನ್ನು ಇದ್ದ ಹಾಗೆ ಹೇಳುತ್ತೇನೆ ಎಂದು ಅರ್ಥವಲ್ಲ," ಎಂದಿದ್ದಾರೆ ಆಂಡರ್ಸನ್. ''ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಸಾಕಷ್ಟು ದೊಡ್ಡದಾಗಿದೆ, 2019 ರ ಕೊನೆಯಲ್ಲಿ ಪ್ರತಿಯೊಬ್ಬರೂ ಏನು ಕೆಲಸ ಮಾಡುತ್ತಿದ್ದಾರೆಂದು ನನಗೆ ತಿಳಿದಿಲ್ಲ. ಮಾನವ ಜೀವಕೋಶಗಳಿಗೆ ಸೋಂಕು ತಗುಲಿಸುವ ಪ್ರವೃತ್ತಿಗಾಗಿ ವೈರಲ್ ಘಟಕಗಳನ್ನು ಪರೀಕ್ಷಿಸುವ ಪ್ರಯೋಗಾಲಯದಿಂದ ಪ್ರಕಟವಾದ ಸಂಶೋಧನೆಯ ಬಗ್ಗೆ ನನಗೆ ತಿಳಿದಿಲ್ಲ. ಜನರಿಗೆ ಸೋಂಕು ತಗಲಿಸುವ ಉದ್ದೇಶದಿಂದ ಯಾವುದೇ ವೈರಸ್ ಸೃಷ್ಟಿ ಮಾಡಿಲ್ಲ, ಉದ್ದೇಶಪೂರ್ವಕವಾಗಿ ಬಿಡುಗಡೆ ಮಾಡಿಲ್ಲ ಎಂಬುದು ಮಾತ್ರ ನಿಜ,'' ಎಂದು ಹೇಳಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
The Only–Foreign Scientist in the Wuhan Lab Speaks Out about Covid-19. To know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X