ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕು ಮೆದುಳಿನ ಮೇಲೂ ಪರಿಣಾಮ ಬೀರಬಲ್ಲದು

|
Google Oneindia Kannada News

ಕೊರೊನಾ ಸೋಂಕು ಕೇವಲ ಶ್ವಾಸಕೋಶ, ಹೃದಯದ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ ಎಂಬುದನ್ನು ಅಧ್ಯಯನದ ವರದಿಯೊಂದು ತಿಳಿಸಿದೆ.

ಕೊರೊನಾ ಸೋಂಕು ಶ್ವಾಸಕೋಶ, ಹೃದಯ ಹಾಗೂ ಮೆದುಳಿನ ಮೇಲೆ ಕೂಡ ಪರಣಾಮ ಬೀರಬಲ್ಲದು ಎಂಬುದು ತಿಳಿದುಬಂದಿದೆ.

24 ಗಂಟೆಯಲ್ಲಿ ಭಾರತದಲ್ಲಿ 92,071 ಹೊಸ ಕೋವಿಡ್ ಪ್ರಕರಣ24 ಗಂಟೆಯಲ್ಲಿ ಭಾರತದಲ್ಲಿ 92,071 ಹೊಸ ಕೋವಿಡ್ ಪ್ರಕರಣ

ಸೋಂಕು ಮೆದುಳನ್ನು ಕೂಡ ಹೈಜಾಕ್ ಮಾಡುತ್ತದೆ. ಸೆಪ್ಟೆಂಬರ್ 8 ರಂದು ಪಬ್ಲಿಷ್ ಆದ ವರದಿಯಲ್ಲಿ ಸಾರ್ಸ್ ಕೋವ್ 2 ನೇರವಾಗಿ ಮೆದುಳಿನ ಕೋಶಗಳು ಹಾಗೂ ನರಕೋಶಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಅಷ್ಟೇ ಅಲ್ಲದೆ ಬೇರೆ ಬೇರೆ ರೀತಿಯಲ್ಲಿ ಮೆದುಳನ್ನು ನಿಷ್ಕ್ರಿಯಗೊಳಿಸುತ್ತದೆ.

The New Coronavirus Can Infect Brain Cells, Study Finds

ಸಾಕಷ್ಟು ಮಂದಿ ರೋಗಿಗಳನ್ನು ಪರೀಕ್ಷಿಸಲಾಗುತ್ತಿದ್ದು, ಯಾವ ಹಂತದಲ್ಲಿರುವ ರೋಗಿಗಳ ಮೆದುಳಿನ ಮೇಲೆ ಹೆಚ್ಚು ಪರಿಣಾಮವನ್ನು ಬೀರುತ್ತದೆ. ಹಾಗೆಯೇ ಸೋಂಕು ತಗುಲಿ ಎಷ್ಟು ದಿನದ ಬಳಿಕ ಮೆದುಳಿನ ಮೇಲ ಇದು ದುಷ್ಪರಿಣಾಮ ಬೀರಬಲ್ಲದು ಎಂಬ ಅಧ್ಯಯನ ಇನ್ನೂ ನಡೆಯುತ್ತಿದೆ.

ಕೊರೊನಾ ಸೋಂಕಿನಿಂದ ಮೃತಪಟ್ಟ ಮೂವರ ಮೆದುಳಿನಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಕೊರೊಣಾ ಸೋಂಕಿಗೆ ತುತ್ತಾಗಿರುವ ಇಲಿಯ ಮೇಲೆ ಪ್ರಯೋಗ ನಡೆಸಲಾಗಿದೆ. ಇದು ಮೆದುಳಿನ ಅಂಗಾಂಶಗಳ ಮೇಲೆ ಪರಿಣಾಮ ಬೀರುವುದು ಸಾಬೀತಾಗಿದೆ.

ಇಲಿಗಳ ಮೇಲೆ ನಡೆದ ಸಂಶೋಧನೆಯಲ್ಲಿ ಸೋಂಕು ಮೆದುಳಿಗೆ ತಗುಲುವುದು ಸಾಬೀತಾಗಿದೆ. ಆದರೆ ಎಲ್ಲಾ ಮಾನವನ ಕೊರೊನಾ ಪ್ರಕರಣಗಳಲ್ಲೂ ಇದೇ ರೀತಿ ಆಗಬಹುದು ಎಂಬುದಿನ್ನೂ ಸಾಬೀತಾಗಿಲ್ಲ.

Recommended Video

India Nepal : ನೇಪಾಳ ಹೊಸ ವರಸೆ ಶುರು | Oneindia Kannada

ಮನುಷ್ಯನಿಗೆ ವಾಸನೆ ಗ್ರಹಿಕೆ ಮತ್ತು ರುಚಿಯನ್ನು ಕಳೆದುಕೊಳ್ಳುವ ರೀತಿಯಲ್ಲಿಯೇ ಶ್ವಾಸಕೋಶದ ಮೂಲಕ ವೈರಸ್ ಮೆದುಳನ್ನೂ ತಲುಪಬಹುದು ಎಂದು ಲೈವ್‌ಸೈನ್ಸ್ ವರದಿ ಮಾಡಿದೆ.

English summary
The coronavirus that causes COVID-19 can sometimes hijack brain cells, using the cells' internal machinery to copy itself, according to a new study.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X