• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಪಾನ್‌: ಮೃತ ಮುಸ್ಲಿಂ ವ್ಯಕ್ತಿಯ ಸಂಸ್ಕಾರದ ರೀತಿಗೆ ಪಾಕ್ ಜನತೆ ಗರಂ

|
Google Oneindia Kannada News

ಟೋಕಿಯೋ, ಜನವರಿ 06: ಜಪಾನ್‌ನಲ್ಲಿ ಮೃತ ಮುಸ್ಲಿಂ ವ್ಯಕ್ತಿಯನ್ನು ಹೂಳುವ ಬದಲು ಸುಡುವ ಮೂಲಕ ಅಂತ್ಯಸಂಸ್ಕಾರ ನೆರವೇರಿಸಿದ್ದಕ್ಕೆ ಪಾಕಿಸ್ತಾನದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಪಾಕಿಸ್ತಾನದ ಲಾಹೋರ್ ಮೂಲದ ವ್ಯಕ್ತಿ ಜಪಾನಿ ಮಹಿಳೆಯನ್ನು ವಿವಾಹವಾಗಿದ್ದ. ಪಾಕ್ ಮಾಧ್ಯಮಗಳ ವರದಿ ಪ್ರಕಾರ ಈತನ ಹೆಸರು ರಶೀದ್ ಮೆಹಮೂದ್ ಖಾನ್. ಅವರು ಅನಾರೋಗ್ಯದಿಂದಾಗಿ ಜಪಾನ್‌ನಲ್ಲಿ ನಿಧನನಾಗಿದ್ದಾರೆ.

ಅವರ ಜಪಾನಿನ ಪತ್ನಿ, ಯಾವುದೇ ಮುಸ್ಲಿಂ ಆಚಾರ-ವಿಚಾರ ಹಾಗೂ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯ ಅಧಿಕಾರಿಗಳು ರಶೀದ್ ಮೆಹಮೂದ್ ಖಾನ್ ಅವರ ಶವವನ್ನು ಹೂಳುವ ಬದಲು ಸುಟ್ಟಿದ್ದಾರೆ.
ಇದಾದ ಕೆಲವು ದಿನಗಳ ಬಳಿಕ, ರಶೀದ್ ಮೆಹಮೂದ್ ಸ್ನೇಹಿತ ಮಲಿಕ್ ನೂರ್ ಅವಾನ್ ಎಂಬಾತ ಜಪಾನ್ ಆಸ್ಪತ್ರೆಗೆ ಸಂಪರ್ಕಿಸಿ ತನ್ನ ಗೆಳೆಯನ ಬಗ್ಗೆ ವಿಚಾರಿಸಿದ್ದಾನೆ.

ಹೆಣ್ಮಕ್ಕಳಿಗೆ ಶಿಕ್ಷಣ ನೀಡದಿರುವುದು ಅಫ್ಘಾನ್ ಸಂಸ್ಕೃತಿಯ ಭಾಗ:ಇಮ್ರಾನ್ ಹೆಣ್ಮಕ್ಕಳಿಗೆ ಶಿಕ್ಷಣ ನೀಡದಿರುವುದು ಅಫ್ಘಾನ್ ಸಂಸ್ಕೃತಿಯ ಭಾಗ:ಇಮ್ರಾನ್

ಇಸ್ಲಾಮಿಕ್ ಸಂಪ್ರದಾಯದಲ್ಲಿ, ವ್ಯಕ್ತಿಯ ಮರಣದ ನಂತರ ಅವನ ದೇಹವನ್ನು ಸಮಾಧಿ ಮಾಡಲಾಗುತ್ತದೆ. ಆದರೆ, ಜಪಾನೀ ಸಂಪ್ರದಾಯದಲ್ಲಿ ವ್ಯಕ್ತಿಯ ಮರಣದ ನಂತರ, ಅವನ ದೇಹವನ್ನು ಸುಡಲಾಗುತ್ತದೆ. ಇದಲ್ಲದೆ, ಜಪಾನ್‌ನಲ್ಲಿ ಸ್ಥಳಾವಕಾಶದ ಕೊರತೆಯಿದೆ. ಇದರಿಂದಾಗಿ ಮೃತ ದೇಹಗಳನ್ನು ಸುಡುವ ಮೂಲಕ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ. ಇದರಿಂದ ಅಲ್ಲಿ ನೆಲೆಸಿರುವ ಮುಸ್ಲಿಂ ಸಮುದಾಯ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿದೆ.

6 ತಿಂಗಳ ಅವಧಿಯಲ್ಲಿ ಪಾಕಿಸ್ತಾನಿಯೊಬ್ಬರ ಶವವನ್ನು ಹೂಳುವ ಬದಲು ಸುಟ್ಟು ಹಾಕಿರುವ ಎರಡನೇ ಘಟನೆ ಇದಾಗಿದೆ. ಈ ಸುದ್ದಿ ಮುನ್ನೆಲೆಗೆ ಬಂದ ಬೆನ್ನಲ್ಲೇ ಪಾಕಿಸ್ತಾನದಲ್ಲಿ ವಿವಾದ ಶುರುವಾಗಿದೆ. ಈ ವಿಷಯವಾಗಿ ಜಪಾನ್ ಸರ್ಕಾರದೊಂದಿಗೆ ಯಾವಾಗ ಚರ್ಚೆ ಮಾಡುತ್ತಿರಿ ಎಂದು ಪಾಕಿಸ್ತಾನಿಗಳು ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಗಲಾಟೆ ಮಾಡುತ್ತಿದ್ದಾರೆ.

ಈ ವೇಳೆ ಅಲ್ಲಿನ ಆಸ್ಪತ್ರೆ ಸಿಬ್ಬಂದಿ, ರಶೀದ್ ಮೆಹಮೂದ್ ಅವರ ಅಂತ್ಯ ಸಂಸ್ಕಾರವನ್ನು ಜಪಾನ್ ಸಂಪ್ರದಾಯದಂತೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈ ಸುದ್ದಿ ಯಾವಾಗ ಸ್ನೇಹಿತನ ಮೂಲಕ ಜಪಾನ್ ಆಸ್ಪತ್ರೆಯಿಂದ ಹೊರಬಿತ್ತೋ.. ಅಲ್ಲಿಂದ ಪಾಕಿಸ್ತಾನದಲ್ಲಿ ಗಲಾಟೆ ಶುರುವಾಗಿದೆ.

English summary
There has been a ruckus in Pakistan after the cremation of a Pakistani man living in Japan. According to a report, the person was actually a resident of Lahore and a few days ago he died in Japan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X