ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರದ ಕುರಿತು ಲೇಬರ್ ಪಕ್ಷ ಯೂಟರ್ನ್, ಏನಂತಾರೆ ಐಯಾನ್?

|
Google Oneindia Kannada News

ನವದೆಹಲಿ, ನವೆಂಬರ್ 14: ಕಾಶ್ಮೀರದ ಬಗ್ಗೆ ಲೇಬರ್ ಪಕ್ಷ ಇದೀಗ ಯೂ ಟರ್ನ್ ಹೊಡೆದಿದೆ.

ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆದಾಗ ಕಾಶ್ಮೀರದಲ್ಲಿ ಮಾನವಹಕ್ಕುಗಳ ಉಲ್ಲಂಘನೆಯಾಗಿದೆ ಅದು ಖಂಡನೀಯ. ನಾವು ಈಗಾಗಲೇ ಕಾಶ್ಮೀರದ ಸ್ಥಿತಿಯ ಬಗ್ಗೆ ಚರ್ಚಿಸಿದ್ದೇವೆ ಎಂದು ಹೇಳಿದ್ದ ಪಕ್ಷದ ಅಧ್ಯಕ್ಷ ಐಯಾನ್ ಲೇವರಿ ಇದೀಗ ಅದು ಪಾಕಿಸ್ತಾನ, ಭಾರತದ ಆಂತರಿಕ ವಿಚಾರ ಎಂದು ಹೇಳುತ್ತಿದ್ದಾರೆ.

ಕಾಶ್ಮೀರ ವಿಚಾರ ತುಂಬಾ ಸೂಕ್ಷ್ಮವಾದದ್ದು

ಕಾಶ್ಮೀರ ವಿಚಾರ ತುಂಬಾ ಸೂಕ್ಷ್ಮವಾದದ್ದು

ಕಾಶ್ಮೀರದ ವಿಚಾರ ತುಂಬಾ ಸೂಕ್ಷ್ಮವಾಗಿದೆ. ಇದು ಭಾರತ ಮತ್ತು ಪಾಕಿಸ್ತಾನದ ಆಂತರಿಕ ವಿಚಾರ . ಹೀಗಾಗಿ ಬೇರೆಯವರು ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

370ನೇ ವಿಧಿ ರದ್ಧತಿಯನ್ನು ಪಕ್ಷ ಟೀಕಿಸಿತ್ತು

370ನೇ ವಿಧಿ ರದ್ಧತಿಯನ್ನು ಪಕ್ಷ ಟೀಕಿಸಿತ್ತು

ಈ ಮೊದಲು ಕಾಶ್ಮೀರಕ್ಕೆ ನೀಡಿದ್ದ ವಿಧಿ 370 ರದ್ದುಗೊಳಿಸಿರುವುದನ್ನು ಲೇಬರ್ ಪಕ್ಷ ಟೀಕಿಸಿತ್ತು. ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಹೇಳುವ ಮೂಲಕ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿತ್ತು. ಡಿಸೆಂಬರ್ 12ರಂದು ಲಂಡನ್ ಸಂಸತ್ತಿಗೆ ಚುನಾವಣೆ ನಡೆಯಲಿದೆ. ಇಂಗ್ಲೆಂಡಿನಲ್ಲೂ ಸಾವಿರಾರು ಮಂದಿ ಭಾರತೀಯರಿದ್ದಾರೆ. ಕಾಶ್ಮೀರ ವಿಷಯವಾಗಿ ನೀಡಿದ್ದ ಹೇಳಿಕೆಯಿಂದ ಭಾರತೀಯ ಮತದಾರರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಲೇಬರ್ ಪಕ್ಷ ತನ್ನ ಹೇಳಿಕೆಯಿಂದ ಹಿಂದೆ ಸರಿದಿದೆ. ಲೇಬರ್ ಪಕ್ಷವು ಬೇರೆ ಯಾವುದೇ ದೇಶದ ರಾಜಕೀಯ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿದೆ.

ಜಮ್ಮು-ಕಾಶ್ಮೀರದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆಜಮ್ಮು-ಕಾಶ್ಮೀರದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

ಪಾಕ್‌ನ ಮೂರು ಸೇನಾನೆಲೆ ಧ್ವಂಸ

ಪಾಕ್‌ನ ಮೂರು ಸೇನಾನೆಲೆ ಧ್ವಂಸ

ಅಂತಾರಾಷ್ಟ್ರೀಯ ಗಡಿಯಲ್ಲಿ ಪದೇ ಪದೇ ಕಾಲು ಕೆರೆದು ಜಗಳಕ್ಕೆ ಬರುತ್ತಿರುವ ಪಾಕ್‌ಗೆ ಭಾರತ ಸೇನೆ ತಕ್ಕ ಉತ್ತರ ನೀಡಿದೆ. ಕದನ ವಿರಾಮ ಉಲ್ಲಂಘಿಸಿ ಪಾಕ್ ಸೇನೆ ಕಾಶ್ಮೀರದ ಶಾಹಪುರ, ಕೀರ್ನಿ ಮತ್ತು ಬಾಲಾಕೋಟ್ ಪ್ರದೇಶಗಳಲ್ಲಿ ಮಂಗಳವಾರ ಬೆಳಗಿನ ಜಾವದಿಂದ ಸೇನಾ ನೆಲೆಗಳು ಹಾಗೂ ಜನ ವಸತಿ ಪ್ರದೇಶಗಳನ್ನು ಗುಡಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿತ್ತು.

ಪಾಕ್ ಗುಂಡಿನ ದಾಳಿಗೆ ಭಾರತೀಯ ಸೈನಿಕರ ಉತ್ತರ

ಪಾಕ್ ಗುಂಡಿನ ದಾಳಿಗೆ ಭಾರತೀಯ ಸೈನಿಕರ ಉತ್ತರ

ಪಾಕ್ ಗುಂಡಿನ ದಾಳಿಗೆ ಭಾರತೀಯ ಸೇನೆ ಪ್ರತ್ಯುತ್ತರ ನೀಡಿದೆ. ಪಾಕಿಸ್ತಾನದ ಮೂರು ಸೇನಾ ನೆಲೆಗಳು ನಾಶವಾಗಿದ್ದು, 3-4 ಪಾಕ್ ಸೈನಿಕರು ಹತರಾಗಿದ್ದಾರೆ ಎನ್ನಲಾಗಿದೆ. ಗಡಿರೇಖೆಯ ಹತ್ತಿರದ ಗ್ರಾಮಗಳಾದ ಕಸ್ಬಾ, ಮಂಧಾರ, ಇಸ್ಲಾಮಾಬಾದ್ ಮುಂತಾದ ಪ್ರದೇಶಗಳನ್ನು ಗುರಿಯಾಗಿಟ್ಟುಕೊಂಡು ನಡೆಸುತ್ತಿದ್ದ ದಾಳಿಯನ್ನು ಸಮರ್ಥವಾಗಿ ಭಾರತೀಯ ಸೇನೆ ಎದುರಿಸಿದೆ.

English summary
They say all politics is local, but the upcoming UK general election on Dec. 12 has gone global.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X