• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಾಜಾಪಟ್ಟಿ ಮೇಲೆ ಇಸ್ರೇಲ್ ಸೇನೆಯಿಂದ ವಾಯುದಾಳಿ

|

ಅರಬ್ ರಾಷ್ಟ್ರಗಳ ಜೊತೆ ಸ್ನೇಹ ಹಸ್ತ ಚಾಚುತ್ತಿರುವ ಬೆನ್ನಲ್ಲೇ ಇಸ್ರೇಲ್ ಗಾಜಾಪಟ್ಟಿ ಮೇಲೆ ದಾಳಿಯನ್ನೂ ಮುಂದುವರಿಸಿದೆ. ಇಸ್ರೇಲ್ ವಾಯುಪಡೆ ಗಾಜಾ ಪಟ್ಟಿ ಮೇಲೆ ಸರಣಿ ರಾಕೆಟ್ ದಾಳಿ ನಡೆಸಿದ್ದು, ಸಾಕಷ್ಟು ಆಸ್ತಿಪಾಸ್ತಿಗೆ ಹಾನಿ ಆಗಿರುವ ಬಗ್ಗೆ ವರದಿಯಾಗಿದೆ. ಹಲವು ದಶಕಗಳಿಂದ ಗಾಜಾಪಟ್ಟಿ ರಕ್ತಪಾತದ ತಾಣವಾಗಿ ಬದಲಾಗಿದ್ದು, ಶಾಂತಿ ಎಂಬುದೇ ಮರೀಚಿಕೆಯಾಗಿದೆ.

ಇದರ ಬೆನ್ನಲ್ಲೇ ನಿನ್ನೆಯಷ್ಟೇ ಅಮೆರಿಕ ಅಧ್ಯಕ್ಷ ಟ್ರಂಪ್‌ ನೇತೃತ್ವದಲ್ಲಿ ಇಸ್ರೇಲ್‌, ಬಹ್ರೇನ್‌ ಹಾಗೂ ಯುಎಇ ನಡುವೆ ಶಾಂತಿ ಒಪ್ಪಂದವಾಗಿತ್ತು. ವೈಟ್‌ಹೌಸ್‌ನಲ್ಲಿ ಒಪ್ಪಂದಕ್ಕೆ ಮೂರೂ ದೇಶಗಳು ಸಹಿ ಹಾಕಿದ್ದವು. ಇಷ್ಟೆಲ್ಲಾ ನಡೆಯುತ್ತಿರುವಾಗಲೇ ಇಸ್ರೇಲ್ ಗಾಜಾಪಟ್ಟಿ ಮೇಲೆ ದಾಳಿ ಮುಂದುವರಿಸಿರೋದು ಇತರ ಅರಬ್ ರಾಷ್ಟ್ರಗಳನ್ನು ಕೆರಳಿ ಕೆಂಡವಾಗುವಂತೆ ಮಾಡಿದೆ.

ಪ್ಯಾಲೆಸ್ಟೈನ್ ನ ಗಾಜಾಪಟ್ಟಿ ಮೇಲೆ ಇಸ್ರೇಲ್ ನಿಂದ ಮಿಸೈಲ್ ದಾಳಿಪ್ಯಾಲೆಸ್ಟೈನ್ ನ ಗಾಜಾಪಟ್ಟಿ ಮೇಲೆ ಇಸ್ರೇಲ್ ನಿಂದ ಮಿಸೈಲ್ ದಾಳಿ

ಅರಬ್ ರಾಷ್ಟ್ರಗಳ ಪೈಕಿ ಈವರೆಗೂ ಈಜಿಪ್ಟ್‌ ಹಾಗೂ ಜೋರ್ಡಾನ್‌ ಮಾತ್ರ ಇಸ್ರೇಲ್ ಒಂದು ದೇಶವೆಂದು ಒಪ್ಪಿಕೊಂಡಿದ್ದವು. ಹಾಗೇ ಇಸ್ರೇಲ್ ಜೊತೆ ಶಾಂತಿ ಒಪ್ಪಂದ ಮಾಡಿಕೊಂಡಿದ್ದವು. 1971 ರಲ್ಲಿ ಈಜಿಪ್ಟ್‌ ಹಾಗೂ 1994 ರಲ್ಲಿ ಜೋರ್ಡಾನ್‌ ಇಸ್ರೇಲ್ ಜೊತೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದವು. ಇದು ನಡೆದು ಬರೋಬ್ಬರಿ 26 ವರ್ಷಗಳ ನಂತರ ಬಹ್ರೇನ್‌ ಹಾಗೂ ಯುಎಇ ಇಸ್ರೇಲ್ ಜೊತೆ ಸಂಬಂಧ ಬೆಳೆಸಿವೆ. ಇಷ್ಟರಮಟ್ಟಿಗೆ ಸಂಬಂಧ ಸುಧಾರಿಸುತ್ತಿದ್ದರೂ ಗಾಜಾಪಟ್ಟಿಯಲ್ಲಿ ಮಾತ್ರ ಹಿಂಸಾಚಾರ ನಿಂತಿಲ್ಲ.

ಅರಬ್ ರಾಷ್ಟ್ರಗಳಿಂದ ಆಕ್ರೋಶ

ಅರಬ್ ರಾಷ್ಟ್ರಗಳಿಂದ ಆಕ್ರೋಶ

ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆ ನೆಪದಲ್ಲಿ ಇಸ್ರೇಲ್ ಜೊತೆ ಇತರ ರಾಷ್ಟ್ರಗಳು ಸ್ನೇಹ ಬೆಸೆಯುವಂತೆ ಅಮೆರಿಕ ಮಾಸ್ಟರ್ ಪ್ಲಾನ್ ರೂಪಿಸಿದೆ. ಇದೇ ಕಾರಣಕ್ಕೆ ಬಹ್ರೇನ್‌ ಹಾಗೂ ಯುಎಇ ಜೊತೆಗೂ ಸ್ನೇಹ ಪೂರ್ವಕ ಮಾತುಕತೆ ನಡೆಯುವಂತೆ ಅಮೆರಿಕ ಯೋಜನೆ ರೂಪಿಸಿತ್ತು. ಅದರಲ್ಲಿ ಯಶಸ್ವಿಯೂ ಆಗಿದೆ. ಆದರೆ ಬಹ್ರೇನ್‌ ಹಾಗೂ ಯುಎಇ ಇಸ್ರೇಲ್ ಜೊತೆ ಸ್ನೇಹ ಮಾಡಿಕೊಂಡಿರುವುದು ಇತರೇ ಅರಬ್ ರಾಷ್ಟ್ರಗಳಿಗೆ ಬಿಲ್‌ಕುಲ್ ಇಷ್ಟವಿಲ್ಲ. ಹೀಗಾಗಿ ಒಪ್ಪಂದ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಮಧ್ಯಪ್ರಾಚ್ಯ ಹೊತ್ತಿ ಉರಿದಿತ್ತು. ಅರಬ್ ದೇಶಗಳಲ್ಲೇ ಬಹ್ರೇನ್‌ ಹಾಗೂ ಯುಎಇ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈಗ ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ಇಸ್ರೇಲ್ ಗಾಜಾಪಟ್ಟಿ ಮೇಲೆ ಮತ್ತೆ ಭೀಕರ ದಾಳಿ ನಡೆಸಿದೆ.

ಟ್ರಂಪ್‌ಗೆ ಚುನಾವಣೆ ಚಿಂತೆ..!

ಟ್ರಂಪ್‌ಗೆ ಚುನಾವಣೆ ಚಿಂತೆ..!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಏನೇ ಮಾಡಿದರೂ ಅಧ್ಯಕ್ಷೀಯ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡೇ ಹೆಜ್ಜೆ ಇಡುತ್ತಿದ್ದಾರೆ. ಅರಬ್ ರಾಷ್ಟ್ರಗಳು ಹಾಗೂ ಇಸ್ರೇಲ್ ಜೊತೆಗೆ ಸ್ನೇಹ ಬೆಸೆಯುವಂತೆ ಮಾಡುವುದರ ಹಿಂದೆಯೂ ಇದೇ ಸ್ಟ್ರಾಟಜಿ ಇತ್ತು. ಆದರೆ ಟ್ರಂಪ್‌ರ ಈ ಪ್ರಯತ್ನಕ್ಕೆ ಅಮೆರಿಕದಲ್ಲೇ ಭಾರಿ ವಿರೋಧ ವ್ಯಕ್ತವಾಗಿತ್ತು. ಜೊತೆಗೆ ಅರಬ್‌ನಲ್ಲೂ ಕಿಚ್ಚು ಹೊತ್ತಿತ್ತು. ಟ್ರಂಪ್ ತಮ್ಮ ಬೇಳೆ ಬೇಯಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದೀಗ ಇಸ್ರೇಲ್ ಗಾಜಾಪಟ್ಟಿ ಮೇಲೆ ಅಟ್ಯಾಕ್ ಮಾಡಿರುವ ಹಿನ್ನೆಲೆಯಲ್ಲಿ ಟ್ರಂಪ್ ವಿರೋಧಿಗಳು ಮತ್ತಷ್ಟು ವಾಗ್ದಾಳಿ ನಡೆಸುವ ಸಾಧ್ಯತೆ ಇದೆ.

ಶಾಂತಿ ನೆಲೆಸಲು ಸಾಧ್ಯವೇ ಇಲ್ಲವಾ..?

ಶಾಂತಿ ನೆಲೆಸಲು ಸಾಧ್ಯವೇ ಇಲ್ಲವಾ..?

ಇಸ್ರೇಲ್ ಹಾಗೂ ಗಾಜಾಪಟ್ಟಿ ಕಥೆ ಸಿರಿಯಾಗಿಂತ ಭಯಾನಕವಾಗಿದೆ. ಒಂದುಕಡೆ ಹಮಾಸ್ ಉಗ್ರರು ಅದು ನಮ್ಮ ನೆಲ ಅಂತಾ ಇಸ್ರೇಲ್ ಭೂಮಿ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ತಮ್ಮ ದೇಶದ ಭೂಮಿ ಉಳಿಸಿಕೊಳ್ಳಲು ಇಸ್ರೇಲ್ ಈ ಹೋರಾಟ ಅಗತ್ಯ ಎಂದು ಉಗ್ರರ ಮೇಲೆ ನಡೆಸುತ್ತಲೇ ಬಂದಿದೆ. ಇವರಿಬ್ಬರ ಕಿತ್ತಾಟದಲ್ಲಿ ಸಾಮಾನ್ಯ ಜನರು ಬೀದಿಪಾಲಾಗಿದ್ದಾರೆ.

  RCB ಈ ಸಲ ಕಪ್ ಗೆದ್ದೇ ಗೆಲ್ತಾರೆ , ಯಾಕೆ ಗೊತ್ತಾ | Oneindia Kannada
  ಲಕ್ಷಾಂತರ ಮಂದಿ ಮನೆ ಕಳೆದುಕೊಂಡು ಬೀದಿಗೆ

  ಲಕ್ಷಾಂತರ ಮಂದಿ ಮನೆ ಕಳೆದುಕೊಂಡು ಬೀದಿಗೆ

  ಗಾಜಾಪಟ್ಟಿಯಲ್ಲಿ ಲಕ್ಷಾಂತರ ಮಂದಿ ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಹಾಗೇ ಲೆಕ್ಕವಿಲ್ಲದಷ್ಟು ಯುವಕರು ಪ್ರಾಣ ಕಳೆದುಕೊಂಡಿದ್ದರೆ, ಇನ್ನೂ ಹಲವರು ಹೋರಾಟದಲ್ಲಿ ಭಾಗವಹಿಸಲು ಹೋಗಿ ಶಾಶ್ವತವಾಗಿ ಅಂಗವೈಕಲ್ಯಕ್ಕೆ ತುತ್ತಾಗಿದ್ದಿದೆ. ವಿಶ್ವಸಂಸ್ಥೆ ಕೂಡ ಹಲವು ದಶಕಗಳಿಂದ ಇಲ್ಲಿ ಶಾಂತಿ ನೆಲೆಸುವಂತೆ ಮಾಡಲು ಶತಪ್ರಯತ್ನಪಡುತ್ತಿದ್ದರೂ ಅದ್ಯಾವುದೂ ವರ್ಕೌಟ್ ಆಗುತ್ತಿಲ್ಲ.

  English summary
  Israeli military has carried out series of air raids on the besieged Gaza Strip. And this attack is causing damage to property, there is no casualties reported.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X