ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಏಳರಲ್ಲೊಬ್ಬ ವಿದೇಶಿ, ಭಾರತೀಯರು ಇಲ್ಲೂ ಮುಂದು!

|
Google Oneindia Kannada News

ವಾಷಿಂಗ್ಟನ್ ಡಿಸಿ, ಸೆಪ್ಟೆಂಬರ್ 17 : ಅಮೆರಿಕ ವಲಸಿಗರ ದೇಶ. ಭವಿಷ್ಯವನ್ನು ಅರಸಿ ಇತರೆಲ್ಲ ದೇಶಗಳಿಂದ ಅಮೆರಿಕಕ್ಕೆ ಬಂದು ಇಲ್ಲಿಯ ಪರ್ಮನೆಂಟ್ ನಿವಾಸಿಗಳಾಗಿಬಿಡುತ್ತಾರೆ. ಅಮೆರಿಕದ ಜನಸಂಖ್ಯೆಯ ಶೇ.14ರಷ್ಟು ಸಕ್ರಮ ಮತ್ತು ಅಕ್ರಮ ವಲಸಿಗರೇ ತುಂಬಿಕೊಂಡಿದ್ದಾರೆ.

ಅಮೆರಿಕದ ಜನಸಂಖ್ಯಾ ಮಂಡಳಿ ನಡೆಸಿದ ಗಣತಿಯ ಪ್ರಕಾರ, ಏಳು ಅಮೆರಿಕದ ನಿವಾಸಿಗಳಲ್ಲಿ ಒಬ್ಬ ವಲಸಿಗನಾಗಿರುತ್ತಾನೆ. ಇತ್ತೀಚೆಗೆ ನಡೆಸಿರುವ ಸರ್ವೇ ಪ್ರಕಾರ, 2016ರಲ್ಲಿ ಅಮೆರಿಕದಲ್ಲಿ ವಿದೇಶಿಗರ ಸಂಖ್ಯೆ 8 ಲಕ್ಷದಷ್ಟು ಹೆಚ್ಚಾಗಿದ್ದರೆ, 2017ರ ಜುಲೈನಲ್ಲಿ 4 ಕೋಟಿ 45 ಲಕ್ಷದಷ್ಟು ಹೆಚ್ಚಾಗಿದೆ. ಇದು ಅಮೆರಿಕದಲ್ಲಿ ಜನಿಸದೆ ಅಮೆರಿಕಕ್ಕೆ ವಲಸೆ ಹೋದವರ ಲೆಕ್ಕ.

ಅಮೆರಿಕಕ್ಕೆ ಭೇಟಿ ನೀಡುವ ಭಾರತೀಯ ಪ್ರವಾಸಿಗರ ಸಂಖ್ಯೆ ಇಳಿಮುಖಅಮೆರಿಕಕ್ಕೆ ಭೇಟಿ ನೀಡುವ ಭಾರತೀಯ ಪ್ರವಾಸಿಗರ ಸಂಖ್ಯೆ ಇಳಿಮುಖ

1980ರ ಸ್ಥಿತಿ ಗಮನಿಸಿದರೆ, ಹದಿನಾರು ಅಮೆರಿಕದ ನಿವಾಸಿಗಳಲ್ಲಿ ಒಬ್ಬ ಮಾತ್ರ ವಿದೇಶಿಗನಾಗಿರುತ್ತಿದ್ದ. ಈಗ ಇದು ಏಳರಲ್ಲಿ ಒಂದಕ್ಕೆ ಬಂದು ಕುಳಿತಿದೆ. ಅದರಲ್ಲಿಯೂ ಜಾತ್ರೆಯಂತೆ ಅಮೆರಿಕಕ್ಕೆ ಅತೀಹೆಚ್ಚು ಜನರನ್ನು ಕಳಿಸುವ ರಾಷ್ಟ್ರಗಳಲ್ಲಿ ಭಾರತ ಅಗ್ರಸ್ಥಾನ ಪಡೆದುಕೊಂಡಿದೆ. 2010 ಮತ್ತು 2017ರ ನಡುವಿನಲ್ಲಿ ಭಾರತ 8.3 ಲಕ್ಷದಷ್ಟು ಜನರನ್ನು ಅಮೆರಿಕಕ್ಕೆ ಕಳಿಸಿದರೆ, ಚೀನಾ 6.77 ಲಕ್ಷ ಮತ್ತು ಡೊಮಿನಿಕನ್ ರಿಪಬ್ಲಿಕ್ 2.83 ಲಕ್ಷ.

The foreign-born population is on the rise in America

ಶೇಕಡಾವಾರು ಲೆಕ್ಕದಲ್ಲಿ ನೋಡುವುದಾದರೆ ನೇಪಾಳ 2010ರಿಂದೀಚೆಗೆ ಭಾರೀ ಸಂಖ್ಯೆಯನ್ನು ಜನರನ್ನು ಅಮೆರಿಕಕ್ಕೆ ರವಾನಿಸುತ್ತಿದೆ. 2017ರಲ್ಲಿ ಅಮೆರಿಕದಲ್ಲಿ 1.52 ಲಕ್ಷದಷ್ಟು ನೇಪಾಳಿಗಳಿದ್ದಾರೆ. 2010ರಿಂದೀಚೆಗೆ ಈ ಸಂಖ್ಯೆ ಶೇ.120ರಷ್ಟು ಹೆಚ್ಚಾಗಿದೆ. ಪಾಕಿಸ್ತಾನ ಕೂಡ ಹಿಂದೆ ಬಿದ್ದಿಲ್ಲ. ಪಾಕಿಸ್ತಾನದ ವಲಸಿಗರ ಸಂಖ್ಯೆ ಕೂಡ ಶೇ.31ರಷ್ಟು ಹೆಚ್ಚಾಗಿದ್ದು, ಇದೀಗ 4 ಲಕ್ಷದಷ್ಟು ಪಾಕ್ ನಾಗರಿಕರು ಅಮೆರಿಕದಲ್ಲಿದ್ದಾರೆ.

ಅಮೆರಿಕದಲ್ಲಿ ಜನಿಸದೆ ಅಲ್ಲಿ ವಲಸೆ ಹೋಗಿ ಅಲ್ಲಿಯ ನಾಗರಿಕತ್ವ ಪಡೆದುಕೊಂಡವರು, ಹಸಿರು ಕಾರ್ಡ್ ಗಿಟ್ಟಿಸಿದವರು, ತಾತ್ಕಾಲಿಕ ಕಾರ್ಮಿಕರು (ಎಚ್1ಬಿ ವೀಸಾ) ಮತ್ತು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಸೇರಿದ್ದಾರೆ. 2010ರಿಂದ 2017ರ ನಡುವಿನಲ್ಲಿ 95 ಲಕ್ಷದಷ್ಟು ವಲಸಿಗರು ಅಮೆರಿಕದಲ್ಲಿ ಸೆಟ್ಲ್ ಆಗಿದ್ದಾರೆ. 2010ರಿಂದ 46 ಲಕ್ಷದಷ್ಟು ವಲಸಿಗರ ಸಂಖ್ಯೆ ಹೆಚ್ಚಾಗಿದೆ.

ವಿಶ್ವ ಜನಸಂಖ್ಯಾ ದಿನ: ಚಿತ್ರ ಸಹಿತ ಮಾಹಿತಿವಿಶ್ವ ಜನಸಂಖ್ಯಾ ದಿನ: ಚಿತ್ರ ಸಹಿತ ಮಾಹಿತಿ

ಆದರೆ, ಅಮೆರಿಕ ತನ್ನ ನೀತಿಯನ್ನು ಇತ್ತೀಚಿಗೆ ಬದಲಿಸಿರುವುದರಿಂದ ವಲಸಿಗರ ಸಂಖ್ಯೆ ಇಳಿಮುಖವಾಗುತ್ತಿದೆ. ಇದಕ್ಕೆ ಕಾರಣಗಳು ಕೂಡ ಹಲವಾರು. ಕೆಲಸದ ವೀಸಾ ನಿರಾಕರಿಸುತ್ತಿರುವುದು, ತಾತ್ಕಾಲಿಕ ಕೆಲಸಗಾರರ ವಿಸ್ತರಣೆಯನ್ನು ವಿಸ್ತರಿಸದಿರುವುದು, ವಲಸಿಗರ ನೇಮಕಾತಿಯನ್ನು ಕುಗ್ಗಿಸಿರುವುದು, ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಮುಖವಾಗಿರುವುದು ಮತ್ತು ಅಕ್ರಮ ವಲಸಿಗರನ್ನು ಅವರ ದೇಶಕ್ಕೆ ರವಾನಿಸುತ್ತಿರುವದು ವಲಸಿಗರ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ.

English summary
The foreign-born population is on the rise in America. US census board has release latest statistics about the foreign-born population in USA. India has again topped the chart.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X