ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact-Check ಪ್ರೇಮಕಥೆ: ನ್ಯಾನ್ಸಿ ಪೆಲೋಸಿ ಮತ್ತು ಹು ಕ್ಸಿಜಿನ್ ನಡುವಿನ ನಂಟು!

|
Google Oneindia Kannada News

ನ್ಯೂಯಾರ್ಕ್, ಆಗಸ್ಟ್ 4: ಯುಎಸ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ನೀಡಿರುವ ತೈವಾನ್ ಭೇಟಿಯು ರಾಜಕೀಯವಾಗಿ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಈಗಾಗಲೇ ಕೋಲಾಹಲವನ್ನು ಸೃಷ್ಟಿಸಿದೆ. ಚೀನಾ ಸರ್ಕಾರ ಕಠಿಣ ಪ್ರತಿಕ್ರಿಯೆಗಳ ಎಚ್ಚರಿಕೆ ನೀಡಿದ್ದಾಗಿದೆ. ಇದರ ಮಧ್ಯೆ ಪ್ರೇಮ ಕಥೆಯೊಂದು ಹುಟ್ಟಿಕೊಂಡಿದೆ.
ತೈವಾನ್‌ಗೆ ಅಮೆರಿಕ ನಿಯೋಗದ ಭೇಟಿಯು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅದರ ಜೊತೆಗೆ ಯುಎಸ್ ಪರ ಮತ್ತು ವಿರೋಧದ ಕುರಿತು ನಕಲಿ ಹಾಗೂ ಸುಳ್ಳು ಸುದ್ದಿಗಳನ್ನು ಹರಿ ಬಿಡಲಾಗುತ್ತಿದೆ. ಇಂಥದ್ದೇ ಸಂದರ್ಭದಲ್ಲಿ ಸದ್ದು ಮಾಡಿರುವ ಸುದ್ದಿಯ ಬಗ್ಗೆ ಸತ್ಯಾಶ್ವೇಷಣೆ ಮಾಡಬೇಕಿದೆ.

ಯುಎಸ್ ಸ್ಪೀಕರ್ ಪಲೋಸಿ ಬರುತ್ತಿದ್ದಂತೆ ತೈವಾನ್‌ಗೆ ನುಗ್ಗಿದ ಚೀನಾ ಸೇನಾ ವಿಮಾನಯುಎಸ್ ಸ್ಪೀಕರ್ ಪಲೋಸಿ ಬರುತ್ತಿದ್ದಂತೆ ತೈವಾನ್‌ಗೆ ನುಗ್ಗಿದ ಚೀನಾ ಸೇನಾ ವಿಮಾನ

"ಇವರು ಚಿಕ್ಕವರಿದ್ದಾಗ: ನ್ಯಾನ್ಸಿ ಪೆಲೋಸಿ ಮತ್ತು ಹು ಕ್ಸಿಜಿನ್" ಎಂದು ಟ್ವಿಟರ್ ಬಳಕೆದಾರರು ಬರೆದಿರುವ ಫೋಟೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ನ್ಯಾನ್ಸಿ ಪೆಲೋಸಿ ಮತ್ತು ಚೀನಾದ ಗ್ಲೋಬಲ್ ಟೈಮ್ಸ್ ಪತ್ರಿಕೆಯ ಮಾಜಿ ಸಂಪಾದಕ-ಮುಖ್ಯಸ್ಥರನ್ನು ತೋರಿಸುವ ಫೋಟೋ ಅಡಿಯಲ್ಲಿ ಹೀಗೆ ಬರೆದಿರುವುದರ ಅಸಲಿ ಕಥೆಯನ್ನು ವರದಿಯಲ್ಲಿ ತಿಳಿದುಕೊಳ್ಳೋಣ.

Provided by Deutsche Welle

ಫೋಟೋಶಾಪ್ ಮಾಡಲಾದ ಚಿತ್ರವಿದು:
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಚಿತ್ರ ಅಸಲಿಯಲ್ಲ. ಬದಲಿಗೆ ಅದನ್ನು ಫೋಟೋಶಾಪ್ ಮಾಡಲಾಗಿದೆ. ಎರಡು ಹಳೆಯ ಚಿತ್ರಗಳನ್ನು ಒಟ್ಟಾಗಿ ಸೇರಿಸಿರುವುದನ್ನು ಇದು ತೋರಿಸುತ್ತದೆ. ನ್ಯಾನ್ಸಿ ಪಲೋಸಿ ಫೋಟೋದ ಹಿನ್ನೆಲೆ ಬೇರೆಯೇ ಆಗಿದೆ. ಅವರು ಚಿಕ್ಕವಳಾಗಿದ್ದ ಸಂದರ್ಭದಲ್ಲಿ ತಮ್ಮ ಕುಟುಂಬದೊಂದಿಗೆ ನಿಂತು ತೆಗೆಸಿಕೊಂಡಿರುವ ಫೋಟೋ ಅದಾಗಿದೆ. ಈಗ ತೋರಿಸುವಂತೆ ಆ ಫೋಟೋದ ಪಕ್ಕದಲ್ಲಿ ಇರುವುದು ಕ್ಸಿಜಿನ್ ಅಲ್ಲ. ಬದಲಿಗೆ ನ್ಯಾನ್ಸಿ ತಂದೆ ಹಾಗೂ ಯುಎಸ್ ರಾಜಕಾರಣಿ ಡಿ'ಅಲೆಸಾಂಡ್ರೊ ಜೂನಿಯರ್ ಆಗಿದ್ದಾರೆ. ಎಡದಿಂದ ಮೂರನೇಯವರಾಗಿ ನಿಂತಿರುವವರೇ ನ್ಯಾನ್ಸಿ. "ಚಿಕ್ಕ ಹುಡುಗಿಯಾಗಿ ಕುಟುಂಬದೊಂದಿಗೆ" ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಫ್ಲಿಕರ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು. ಇದು ಅವರ ಪ್ರಚಾರ ಪುಟಗಳಲ್ಲಿ ಒಂದರಲ್ಲಿ ಕಾಣಿಸಿಕೊಂಡಿದೆ.

ಕ್ಸಿಜಿನ್ ಚಿತ್ರದ ಮೂಲ ಯಾವುದು?:
ಈಗ ಅಪಾದಿತ ಮದುವೆಯ ಚಿತ್ರದಲ್ಲಿ ಕಂಡು ಬಂದಿರುವ ಫೋಟೋದ ಹಿನ್ನೆಲೆಯೂ ಬೇರೆಯಾಗಿದೆ. ಹು ಕ್ಸಿಜಿನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಫೋಟೋವನ್ನು ಪೋಸ್ಟ್ ಮಾಡಿದ್ದು, ಚೀನೀ ಮಿರಿಟರಿಯಲ್ಲಿನ ಮರೆಲಾಗದ ವರ್ಷಗಳು ಎಂದು ಬರೆದುಕೊಂಡಿದ್ದರು, ಅದೇ ಚಿತ್ರವನ್ನು ಬಳಸಿಕೊಂಡು ನಕಲಿ ಚಿತ್ರವನ್ನು ರಚಿಸಲಾಗಿದೆ.

ಕ್ಸಿಜಿನ್‌ಗಿಂತ ಹಿರಿಯರಾಗಿರುವ ಪೆಲೋಸಿ:
ಕ್ಸಿಜಿನ್‌ಗಿಂತ ಪೆಲೋಸಿ ಹಿರಿಯರಾಗಿದ್ದಾರೆ, ಆದ್ದರಿಂದ ಆಪಾದಿತ ವಿವಾಹದ ಚಿತ್ರದ ಎರಡೂ ಭಾಗಗಳನ್ನು ಆರ್ಕೈವ್ ಸಂಶೋಧನೆ ಮತ್ತು ರಿವರ್ಸ್ ಇಮೇಜ್ ಹುಡುಕಾಟದ ಮೂಲಕ ಪತ್ತೆ ಹಚ್ಚಬಹುದು.
ನಾವು ಫೋರೆನ್ಸಿಕ್ ಇಮೇಜ್ ವಿಶ್ಲೇಷಣೆಯನ್ನು ಸಹ ಮಾಡಿದ್ದೇವೆ. ವಿಭಿನ್ನ ಬಣ್ಣ ಸಂಯೋಜನೆಗಳನ್ನು ಕಂಡುಹಿಡಿದಿದ್ದೇವೆ, ಇದು ವಿಭಿನ್ನ ಪಿಕ್ಸೆಲ್ ಸಂಯೋಜನೆಯನ್ನು ಸೂಚಿಸುತ್ತದೆ. ಹೀಗಾಗಿ ಅದರ ಕುಶಲತೆಯನ್ನು ಸೂಚಿಸುತ್ತದೆ. ಇದು ಚಿತ್ರವನ್ನು ನಕಲಿ ಎಂದು ಬಹಿರಂಗಪಡಿಸುತ್ತದೆ, ಇದನ್ನು ಕೆಲವು ಬಳಕೆದಾರರು ವಿಡಂಬನೆ ಎಂದು ಅರ್ಥಮಾಡಿಕೊಂಡರು, ಆದರೆ ಇತರರು ನಿಜವೆಂದು ಭಾವಿಸಿದ್ದಾರೆ.

ಸುಳ್ಳು ಪತ್ತೆಗೆ ಮೊದಲ ಸುಳಿವೇ ವಯಸ್ಸು:
ಪೆಲೋಸಿ ಮತ್ತು ಕ್ಸಿಜಿನ್ ನಡುವಿನ ವಯಸ್ಸಿನ ವ್ಯತ್ಯಾಸವೇ ಇದು ಸುಳ್ಳು ಎಂದು ತೋರಿಸುವ ಮೊದಲ ಸುಳಿವಾಗಿತ್ತು. ಏಕೆಂದರೆ ಪೆಲೋಸಿಗೆ 82 ವರ್ಷವಾಗಿದ್ದರೆ, ಹು ಕ್ಸಿಜಿನ್ 20 ವರ್ಷ ಚಿಕ್ಕವರಾಗಿದ್ದಾರೆ. 1960ರ ಈ ಫೋಟೋದಲ್ಲಿ ನಂತರದ ಯುಎಸ್ ಅಧ್ಯಕ್ಷ ಜಾನ್ ಎಫ್ ಕೆನಡಿ, ಪೆಲೋಸಿ ಆಪಾದಿತ ಮದುವೆಯ ಚಿತ್ರಕ್ಕೆ ಹೋಲುತ್ತದೆ. 1960ರಲ್ಲಿ, ಕ್ಸಿಜಿನ್ ಆಗಷ್ಟೇ ಜನಿಸಿದ್ದರು.

A forensic image analysis shows different color compositions for both people in the image - an indication of manipulation

ಹಾಗಾದರೆ ಈ ನಕಲಿ ಚಿತ್ರವನ್ನು ಏಕೆ ಮಾಡಲಾಗಿದೆ?:
ಇದು ಇಂಟರ್ನೆಟ್ ಬಳಕೆದಾರರಿಂದ ತಮಾಷೆಯಾಗಿ ಮಾತ್ರ ಅರ್ಥೈಸಲ್ಪಟ್ಟಿದೆ. ಹು ಕ್ಸಿಜಿನ್ ಅವರು ತೈವಾನ್‌ಗೆ ನ್ಯಾನ್ಸಿ ಪೆಲೋಸಿಯ ಭೇಟಿಯ ತೀವ್ರ ವಿಮರ್ಶಕರಾಗಿದ್ದಾರೆ. ಚೀನಾದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ವೀಬೊದಲ್ಲಿ ಅವರು ಪೆಲೋಸಿ ತೈವಾನ್‌ಗೆ ಭೇಟಿ ನೀಡಿದರೆ "ಮಿಲಿಟರಿ ಪ್ರತಿಕ್ರಮ"ಕ್ಕಾಗಿ ಮನವಿ ಮಾಡಿದರು. ಏಕೆಂದರೆ ಇದು "ಯುಎಸ್ ಮತ್ತು ತೈವಾನ್ ಅರ್ಥಮಾಡಿಕೊಳ್ಳುವ ಏಕೈಕ ಭಾಷೆಯಾಗಿದೆ."
ಟ್ವಿಟರ್‌ನಲ್ಲಿ, ಅವರು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಪೆಲೋಸಿಯ ವಿಮಾನವನ್ನು ತೈವಾನ್‌ಗೆ ಹೋಗುವ ದಾರಿಯಲ್ಲಿ "ಶೂಟ್ ಡೌನ್" ಮಾಡಬೇಕು ಎಂದು ಬರೆದಿದ್ದಾರೆ. ಇದರ ಹಿನ್ನೆಲೆ ಅವರ ಟ್ವಿಟರ್ ಖಾತೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಇದರ ಬೆನ್ನಲ್ಲೇ ಕ್ಸಿಜಿನ್ ಟ್ವೀಟ್ ಅನ್ನು ತೆಗೆದು ಹಾಕಿದ್ದಾರೆ.
ಈ ಹಿನ್ನೆಲೆಯಲ್ಲಿ ಪೆಲೋಸಿ ಮತ್ತು ಕ್ಸಿಜಿನ್ ಅವರ ವಿವಾಹದ ಚಿತ್ರವು ತುಂಬಾ ಅಸಂಬದ್ಧವೆಂದು ತೋರುತ್ತದೆ, ಅನೇಕ ಬಳಕೆದಾರರು ಅವರಿಬ್ಬರನ್ನೂ ಒಂದೇ ಚಿತ್ರದಲ್ಲಿ ಮತ್ತು ದಂಪತಿಗಳಾಗಿ ನೋಡುವುದು ತಮಾಷೆಯಾಗಿದೆ ಎಂದು ಬರೆದುಕೊಂಡಿದ್ದಾರೆ.

English summary
An alleged wedding photo of Nancy Pelosi is currently circulating on the web. It is supposed to show the speaker of the US House of Representatives with Chinese journalist Hu Xijin. But the entire story is a fake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X