• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Video: ಪ್ರತಿಷ್ಠಿತ ಮಾಲ್ ನಲ್ಲಿ 12 ಮಂದಿಗೆ ಗುಂಡಿಕ್ಕಿದ ಸೈನಿಕ

|

ಬೀಜಿಂಗ್, ಫೆಬ್ರವರಿ.08: ಥೈಲ್ಯಾಂಡ್ ನ ಪ್ರತಿಷ್ಠಿತ ಶಾಪಿಂಗ್ ಮಾಲ್ ನಲ್ಲಿ ಹಾಡಹಗಲಿನಲ್ಲೇ ಯೋಧನೊಬ್ಬ 12ಕ್ಕೂ ಹೆಚ್ಚು ಸಾರ್ವಜನಿಕರನ್ನು ಗುಂಡಿಕ್ಕಿ ಹತ್ಯೆಗೈದಿರುವ ಬಗ್ಗೆ ಅಂತಾರಾಷ್ಟ್ರೀಯ ಸುದ್ದಿಸಂಸ್ಥೆಯು ವರದಿ ಮಾಡಿದೆ.

ಸ್ಥಳೀಯ ಪೊಲೀಸರು ನೀಡಿದ ಪ್ರಾಥಮಿಕ ಮಾಹಿತಿಯ ಪ್ರಕಾರ ಸೈನಿಕ ಹಾಗೂ ಇಬ್ಬರು ವ್ಯಕ್ತಿಗಳ ನಡುವಿನಲ್ಲಿ ಭೂಮಿ ವಿಚಾರಕ್ಕೆ ಗಲಾಟೆ ಆಗಿದೆ. ಈ ವೇಳೆ ಕೆರಳಿದ ಸೈನಿಕನು ಇಬ್ಬರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ.

ಇನ್ನು, ಕೋರತ್ ಎಂಬ ಪ್ರದೇಶದಲ್ಲಿ ಇರುವ ಮಾಲ್ ನಲ್ಲಿ ಈ ಘಟನೆ ನಡೆದಿದ್ದು, ಅಧಿಕೃತವಾಗಿ ಎಷ್ಟು ಮಂದಿ ಪ್ರಾಣ ಬಿಟ್ಟಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಹೊರ ಬಿದ್ದಿಲ್ಲ. ಸೈನಿಕ ನಡೆಸಿರುವ ಫೈರಿಂಗ್ ನಲ್ಲಿ ಕನಿಷ್ಠ 12 ಮಂದಿ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.

ಗುಂಡಿನ ದಾಳಿ ನಡೆಸಿದವನ ಬಂಧನಕ್ಕೆ ಬಲೆ:

ಗನ್ ಹಿಡಿದು ರಾಜಾರೋಷವಾಗಿ ಓಡಾಡಿದ ಸೈನಿಕನು ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿರುವ ದೃಶ್ಯವು ಮಾಲ್ ನಲ್ಲಿರುವ ಸಿಸಿ ಕ್ಯಾಮರಾದಲ್ಲೂ ಕೂಡಾ ಸೆರೆಯಾಗಿದೆ. ವಿಡಿಯೋದಲ್ಲಿ ಪತ್ತೆಯಾದ ವಿಡಿಯೋವನ್ನು ಆಧರಿಸಿ ಸೈನಿಕನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇನ್ನು, ಮಾಲ್ ಹೊರ ಭಾಗದಲ್ಲೂ ಕೂಡಾ ಸೈನಿಕನು ಹೇಗೆಲ್ಲ ಗುಂಡಿನ ದಾಳಿ ನಡೆಸಿದ್ದಾನೆ ಎಂಬುದಕ್ಕೆ ಇಲ್ಲಿದೆ ನೋಡಿ ವಿಡಿಯೋ ಸಾಕ್ಷ್ಯ.

English summary
Thailand Soldier Has Killed 12 peoples In A Mass Shooting in Northeastern Korat City.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X