ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Video: ಶನಿವಾರ 26 ಜನರನ್ನು ಕೊಂದವನು ಭಾನುವಾರವೇ ಹೆಣ!

|
Google Oneindia Kannada News

ಬ್ಯಾಂಕಾಕ್, ಫೆಬ್ರವರಿ.09: ಥೈಲ್ಯಾಂಡ್ ನಲ್ಲಿ ಶನಿವಾರ 26 ಜನರನ್ನು ಸಾಮೂಹಿಕ ಗುಂಡಿನ ದಾಳಿಯಲ್ಲಿ ಕೊಂದ ಸೈನಿಕನನ್ನು 24 ಗಂಟೆಗಳಲ್ಲೇ ಪೊಲೀಸರು ಹತ್ಯೆಗೈದಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಗುಂಡಿನ ದಾಳಿ ನಡೆಸಿದ್ದ ವ್ಯಕ್ತಿ ಇದೀಗ ಮೃತಪಟ್ಟಿದ್ದಾನೆ ಎಂದು ಥೈಲ್ಯಾಂಡ್ ನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಥೈಲ್ಯಾಂಡ್ ನ ನಾಖೋನ್ ರಚ್ಸೀಮಾ ಪ್ರದೇಶದಲ್ಲಿರುವ ಶಾಪಿಂಗ್ ಮಾಲ್ ನಲ್ಲಿ ಯೋಧನೊಬ್ಬ ಮನಸೋಯಿಚ್ಛೆ ಗುಂಡಿನ ದಾಳಿ ನಡೆಸಿದ್ದು, 26 ಜನರು ಘಟನೆಯಲ್ಲಿ ಮೃತಪಟ್ಟಿದ್ದಾರೆ. ಇನ್ನು, 57ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Video: ಪ್ರತಿಷ್ಠಿತ ಮಾಲ್ ನಲ್ಲಿ 12 ಮಂದಿಗೆ ಗುಂಡಿಕ್ಕಿದ ಸೈನಿಕVideo: ಪ್ರತಿಷ್ಠಿತ ಮಾಲ್ ನಲ್ಲಿ 12 ಮಂದಿಗೆ ಗುಂಡಿಕ್ಕಿದ ಸೈನಿಕ

ಇನ್ನು, ಗುಂಡಿನ ದಾಳಿ ನಡೆಸಿದ 32 ವರ್ಷದ ಸೈನಿಕನನ್ನು ಜಕ್ರಪಂತ್ ತೊಮ್ಮಾ ಎಂದು ಗುರುತಿಸಲಾಗಿದೆ. ಈ ಬಗ್ಗೆ ಥೈಲ್ಯಾಂಡ್ ಭದ್ರತಾ ಸಿಬ್ಬಂದಿಯೇ ಸ್ಪಷ್ಟನೆ ನೀಡಿರುವ ಬಗ್ಗೆ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ರಾಯ್ಟರ್ಸ್ ವರದಿ ಮಾಡಿದೆ.

ಒತ್ತೆಯಾಳುಗಳ ರಕ್ಷಿಸಿದ ಭದ್ರತಾ ಸಿಬ್ಬಂದಿ

ಒತ್ತೆಯಾಳುಗಳ ರಕ್ಷಿಸಿದ ಭದ್ರತಾ ಸಿಬ್ಬಂದಿ

ಶಾಪಿಂಗ್ ಮಾಲ್ ನಲ್ಲೇ ಅಡಗಿ ಕುಳಿತಿದ್ದ ವ್ಯಕ್ತಿಯನ್ನು ಥೈಲ್ಯಾಂಡ್ ಭದ್ರತಾ ಸಿಬ್ಬಂದಿಯು ಹತ್ಯೆಗೈದಿದ್ದು, ಆತ ಒತ್ತೆಯಾಳಾಗಿ ಇರಿಸಿಕೊಂಡಿದ್ದ 8ಕ್ಕೂ ಹೆಚ್ಚು ಜನರನ್ನು ಭಾನುವಾರ ರಕ್ಷಣೆ ಮಾಡಲಾಗಿದೆ. ಈ ಪೈಕಿ ಕೆಲವರು ಗಾಯಗೊಂಡಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಭದ್ರತಾ ಸಿಬ್ಬಂದಿಯೊಬ್ಬರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.

ಆರೋಗ್ಯ ಸಚಿವರಿಂದ ಭದ್ರತಾ ಸಿಬ್ಬಂದಿಗೆ ಧನ್ಯವಾದ

ಥೈಲ್ಯಾಂಡ್ ನಲ್ಲಿ ಶಾಂತಿ ಕದಡಿ ಆತಂಕದ ವಾತಾವಣವನ್ನು ಸೃಷ್ಟಿಸಿದ ವ್ಯಕ್ತಿಯನ್ನು ಹತ್ಯೆಗೈಯುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿಗೆ ಥೈಲ್ಯಾಂಡ್ ನ ಸಾರ್ವಜನಿಕ ಆರೋಗ್ಯ ಸಚಿವ ಅಂಟಿನ್ ಚರ್ನವಿರಕುಲ್ ಧನ್ಯವಾದ ತಿಳಿಸಿದ್ದಾರೆ.

ಗಾಯಾಳುಗಳ ಆರೋಗ್ಯ ವಿಚಾರಿಸಿದ ಥೈಲ್ಯಾಂಡ್ ಪ್ರಧಾನಿ

ಗಾಯಾಳುಗಳ ಆರೋಗ್ಯ ವಿಚಾರಿಸಿದ ಥೈಲ್ಯಾಂಡ್ ಪ್ರಧಾನಿ

ಇನ್ನು, ಜಕ್ರಪಂತ್ ತೊಪ್ಪಾ ನಡೆಸಿದ ಗುಂಡಿನ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದು, 57 ಜನರು ಗಂಭೀರವಾಗಿ ಗಾಯಗೊಂಡಿರುವ ಬಗ್ಗೆ ಥೈಲ್ಯಾಂಡ್ ಪ್ರಧಾನಮಂತ್ರಿ ಪ್ರಯುತ್ ಚಾನ್ ಓಚಾ ಸ್ಪಷ್ಟಪಡಿಸಿದ್ದಾರೆ. ಭಾನುವಾರ ಆಸ್ಪತ್ರೆಗೆ ಭೇಟಿ ನೀಡಿದ ಪ್ರಧಾನಮಂತ್ರಿ ಗಾಯಗೊಂಡವರ ಆರೋಗ್ಯ ವಿಚಾರಿಸಿದರು. ತದನಂತರ ಮಾತನಾಡಿದ ಪ್ರಧಾನಮಂತ್ರಿ ಥೈಲ್ಯಾಂಡ್ ಹಿಂದೆಂದೂ ಕಂಡು ಕೇಳರಿಯದಂತಾ ಘಟನೆ ಇದಾಗಿದ್ದು, ಆಘಾತವನ್ನು ಉಂಟು ಮಾಡಿದೆ ಎಂದರು. ಅಲ್ಲದೇ, ಇಂಥ ಘಟನೆಯು ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಹೇಳಿದರು.

ಮಾಲ್ ನಲ್ಲಿ ಗನ್ ಹಿಡಿದೇ ಸಂಚಾರ

ಮಾಲ್ ನಲ್ಲಿ ಗನ್ ಹಿಡಿದೇ ಸಂಚಾರ

ನಾಖೋನ್ ರಚ್ಸೀಮಾ ಪ್ರದೇಶದಲ್ಲಿರುವ ಶಾಪಿಂಗ್ ಮಾಲ್ ನ 21ನೇ ಟರ್ಮಿನಲ್ ಬಳಿ ಸೈನಿಕರು ಗನ್ ಹಿಡಿದು ರಾಜಾರೋಷವಾಗಿ ಓಡಾಡಿದ್ದಾನೆ. ನಂತರದಲ್ಲಿ ಸೈನಿಕನು ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿರುವ ದೃಶ್ಯವು ಮಾಲ್ ನಲ್ಲಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

English summary
Thailand Commandos Shot A Soldier Jakrapanth Thomma, Who Killed 26 Peoples In Mass Shooting Inside Shopping Mall.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X