ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಥಾಯ್ಲೆಂಡ್: ಗುಹೆಯಲ್ಲಿ ಅನುಭವಿಸಿದ ಸಂಕಷ್ಟಗಳನ್ನು ಬಿಚ್ಚಿಟ್ಟ ಬಾಲಕರು

|
Google Oneindia Kannada News

ರಿಯಾಂಗ್ ರೈ, ಜುಲೈ 18: ಥಾಯ್ಲೆಂಡ್‌ನ ಗುಹೆಯಲ್ಲಿ ಸಿಲುಕಿ ಪವಾಡಸದೃಶ ರೀತಿಯಲ್ಲಿ ಪಾರಾಗಿ ಬಂದ ಶಾಲಾ ಫುಟ್ಬಾಲ್ ತಂಡದ 12 ಬಾಲಕರು ಮತ್ತು ಕೋಚ್ ಬುಧವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು.

ಆಸ್ಪತ್ರೆಯಿಂದ ಹೊರಬಂದ ಬಾಲಕರು ಹೊರಭಾಗದಲ್ಲಿ ನೆರೆದಿದ್ದ ಜನರತ್ತ ಕೈಬೀಸಿ ನಗು ಚೆಲ್ಲಿದರು. ಬಳಿಕ ಸಾಂಪ್ರದಾಯಿಕ 'ವಾಯ್' ಕೃತಜ್ಞತೆ ಸಲ್ಲಿಸಿದರು.

ಥಾಯ್ಲೆಂಡ್‌ನ ಮಾಯಾವಿ ಗುಹೆಯ ರೋಚಕ ಕಥೆಗಳನ್ನು ಕೇಳಿದ್ದೀರಾ?ಥಾಯ್ಲೆಂಡ್‌ನ ಮಾಯಾವಿ ಗುಹೆಯ ರೋಚಕ ಕಥೆಗಳನ್ನು ಕೇಳಿದ್ದೀರಾ?

ವೈದ್ಯರು, ದಾದಿಯರು, ಬಾಲಕರ ಸ್ನೇಹಿತರು ಮತ್ತು ಸಂಬಂಧಿಗಳು ಬಾಲಕರನ್ನು ಅಭಿನಂದಿಸಿದರು. ಫುಟ್ಬಾಲ್ ಮೈದಾನದ ವಿನ್ಯಾಸದಲ್ಲಿ 'ವೈಲ್ಡ್ ಬೋರ್ಸ್ಅನ್ನು ತವರಿಗೆ ತರುತ್ತಿದ್ದೇವೆ' ಎಂದು ಥಾಯ್ ಭಾಷೆಯಲ್ಲಿ ಬರೆದ ಬ್ಯಾನರ್‌ಗಳನ್ನು ಪ್ರದರ್ಶಿಸಿದರು.

ಸಣ್ಣನೆ ಕೇಶ ಕತ್ತರಿಸಿಕೊಂಡಿದ್ದ ಬಾಲಕರು, ರಕ್ಷಣೆಯಾಗಿ ಆಸ್ಪತ್ರೆ ಸೇರಿದ ಒಂದು ವಾರದಲ್ಲಿ 3 ಕೆ.ಜಿ. ತೂಕ ಹೆಚ್ಚಿಸಿಕೊಂಡಿದ್ದಾರೆ.

ಬಂಡೆ ಸಂದಿ ನೀರು ಕುಡಿದು ಬದುಕಿದರು

ಬಂಡೆ ಸಂದಿ ನೀರು ಕುಡಿದು ಬದುಕಿದರು

ಅಲ್ಲಿಂದ ಬದುಕಿ ಬಂದಿದ್ದು ನಿಜಕ್ಕೂ ಪವಾಡ ಎಂದು 14 ವರ್ಷದ ಅದುಲ್ ಸಾಮ್ ಹೇಳಿಕೊಂಡನು.

ಬ್ರಿಟನ್‌ನ ಇಬ್ಬರು ಮುಳಗುತಜ್ಞರು ತಮ್ಮನ್ನು ಪತ್ತೆ ಮಾಡುವವರೆಗೂ ಬಂಡೆಗಳ ಸಂದಿಯಿಂದ ಬೀಳುತ್ತಿದ್ದ ನೀರನ್ನು ಹಿಡಿದು ಕುಡಿಯುತ್ತಿದ್ದದ್ದಾಗಿ ಮತ್ತೊಬ್ಬ ಬಾಲಕ ತಿಳಿಸಿದ್ದಾನೆ.

ರಕ್ಷಣಾ ತಂಡವು ಬಂದು ತಮ್ಮನ್ನು ಕಾಪಾಡುವವರೆಗೂ ಕಾಯುವುದು ಸಾಧ್ಯವಿಲ್ಲ ಎಂದು ಅಲ್ಲಿಂದ ಹೊರಬರಲು ಸಾಕಷ್ಟು ಪ್ರಯತ್ನ ನಡೆಸಿದ್ದಾಗಿ ಕೋಚ್ ಎಕ್ಕೊಪಲ್ ಚಂಟಾವೊಂಗ್ ತಿಳಿಸಿದರು. ಆ ತಂಡ ಹೊರಬರಲು ಗುಹೆಯ ಒಂದು ಭಾಗವನ್ನು ಕಲ್ಲಿನಿಂದ ಒಡೆಯುವ ಪ್ರಯತ್ನಕ್ಕೆ ಕೈಹಾಕಿತ್ತು.

9 ದಿನಗಳ ಬಳಿಕ ರಕ್ಷಣಾ ತಂಡ ಅವರನ್ನು ಪತ್ತೆ ಮಾಡುವವರೆಗೂ ಬಂಡೆಗಳ ಸಂದಿಯ ನೀರು ಕುಡಿದೇ ಅವರು ಜೀವ ಉಳಿಸಿಕೊಂಡಿದ್ದರು. ತಮ್ಮನ್ನು ಉಳಿಸಲು ಬಂದ ರಕ್ಷಣಾ ತಂಡದ ಇಬ್ಬರು ಬಂದಾಗ ಖುಷಿಗಿಂತಲೂ ಅಚ್ಚರಿಯ ಆಘಾತವೇ ಆಗಿತ್ತು ಎಂದು ಮಕ್ಕಳು ಹೇಳಿದ್ದಾರೆ.

ಒಬ್ಬರನ್ನೊಬ್ಬರು ಬಿಡದ ಆತ್ಮೀಯತೆ

ರಕ್ಷಣಾ ತಂಡಗಳು ಒಬ್ಬೊಬ್ಬರಾಗಿ ತಮ್ಮೊಂದಿಗೆ ಬರುವಂತೆ ಕರೆದಾಗ ಯಾರೂ ಮುಂದೆ ಹೋಗಲು ಒಪ್ಪಲಿಲ್ಲ. ಏಕೆಂದರೆ ನಾವೆಲ್ಲರೂ ಒಂದು ತಂಡವಾಗಿದ್ದೆವು. ಜೀವ ಉಳಿಸಿಕೊಳ್ಳಲು ಗುಹೆಯಿಂದ ಮೊದಲು ಹೊರಬರಲು ಯಾರೂ ಆತುರ ತೋರಲಿಲ್ಲ.

ಈ ಹನ್ನೆರಡು ಬಾಲಕರಲ್ಲಿ ನಾಲ್ವರಿಗೆ ಯಾವುದೇ ದೇಶದ ಪೌರತ್ವ ಇಲ್ಲ. ಅವರಿಗೆ ಥಾಯ್ ಪೌರತ್ವ ಸಿಗಲಿದೆ. ಇದಕ್ಕಾಗಿ ಈಗಾಗಲೇ ಕಾರ್ಯ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಥಾಯ್ಲೆಂಡ್ ಗುಹೆ ಸಾಹಸ: ಘಟನೆಯ ಸುತ್ತಲಿನ ವಾಸ್ತವಗಳುಥಾಯ್ಲೆಂಡ್ ಗುಹೆ ಸಾಹಸ: ಘಟನೆಯ ಸುತ್ತಲಿನ ವಾಸ್ತವಗಳು

ಪೋಷಕರ ಕ್ಷಮೆ ಕೋರಿದ ಬಾಲಕ

ನನ್ನ ನಡತೆ ಕುರಿತು ನನ್ನ ಪೋಷಕರಲ್ಲಿ ಕ್ಷಮೆ ಕೋರಲು ಬಯಸುತ್ತೇನೆ. ಫುಟ್ಬಾಲ್ ಅಭ್ಯಾಸಕ್ಕಾಗಿ ತೆರಳುತ್ತಿದ್ದೇನೆ ಎಂದು ಅವರಿಗೆ ಹೇಳಿದ್ದೆ. ಆದರೆ ಗುಹೆಗೆ ಹೋಗುವ ಯೋಚನೆ ಬಗ್ಗೆ ಅವರಿಗೆ ತಿಳಿಸಿರಲಿಲ್ಲ ಎಂದು ಬಾಲಕನೊಬ್ಬ ತಿಳಿಸಿದ್ದಾನೆ.

Array

ರೈತರ ನೆರವಿಗೆ ಜನರು

ಮಕ್ಕಳನ್ನು ರಕ್ಷಿಸುವ ಕಾರ್ಯಾಚರಣೆ ಯಶಸ್ವಿಯಾಗಿದ್ದೇನೋ ಸರಿ. ಆದರೆ, ಗುಹೆಯ ಸಮೀಪದಲ್ಲಿದ್ದ ಹೊಲಗಳಲ್ಲಿನ ರೈತರು ಕಾರ್ಯಾಚರಣೆ ಕಾರಣಕ್ಕಾಗಿ ಸುಮಾರು 30 ಎಕರೆ ಪ್ರದೇಶದಲ್ಲಿ ಭತ್ತದ ಬೆಳೆಗಳನ್ನು ಕಳೆದುಕೊಂಡಿದ್ದರು.

ನಷ್ಟವಾದರೂ ಬಡ ರೈತರು ಮಕ್ಕಳ ಜೀವ ಉಳಿಯಿತಲ್ಲ ಎಂದು ಖುಷಿಪಟ್ಟಿದ್ದರು. ಈಗ ಥಾಯ್ಲೆಂಡ್‌ನ ಸ್ಥಳೀಯ ವಿಶ್ವವಿದ್ಯಾಲಯಗಳ ಸ್ವಯಂ ಕಾರ್ಯಕರ್ತರು 21 ರೈತರ ಗದ್ದೆಗಳಲ್ಲಿ ಭತ್ತದ ಸಸಿಗಳನ್ನು ನಾಟಿ ಮಾಡುವ ಮೂಲಕ ರೈತರಿಗೆ ನೆರವಾಗಿದ್ದಾರೆ.

ಮಕ್ಕಳನ್ನು ಉಳಿಸಿ ಬಂದ ವೈದ್ಯನಿಗೆ ಸಿಕ್ಕಿದ್ದು ಆಘಾತಕಾರಿ ಸುದ್ದಿಮಕ್ಕಳನ್ನು ಉಳಿಸಿ ಬಂದ ವೈದ್ಯನಿಗೆ ಸಿಕ್ಕಿದ್ದು ಆಘಾತಕಾರಿ ಸುದ್ದಿ

ಮತ್ತೆ ಗುಹೆಯತ್ತ ಹೋಗಲಾರೆವು

ಆ ಗುಹೆಯತ್ತ ಮತ್ತೆ ಹೋಗುವ ಸಾಹಸ ಎಂದಿಗೂ ಮಾಡುವುದಿಲ್ಲ. ಆದರೆ, ನಾವೆಲ್ಲರೂ ಒಂದೋ ನೌಕಾದಳವನ್ನು ಸೇರಲು ಬಯಸುತ್ತೇವೆ ಅಥವಾ ವೃತ್ತಿಪರ ಫುಟ್ಬಾಲ್ ಆಟಗಾರರಾಗುತ್ತೇವೆ ಎಂದು ಎಲ್ಲ ಬಾಲಕರು ಹೇಳಿಕೊಂಡರು.

ಸಮನ್‌ಗೆ ಶ್ರದ್ಧಾಂಜಲಿ

ಕಾರ್ಯಾಚರಣೆ ವೇಳೆ ಮೃತಪಟ್ಟ ನೌಕಾದಳದ ಮಾಜಿ ಅಧಿಕಾರಿ ಸುಮನ್ ಕುನಾನ್ ಅವರಿಗೆ ಬಾಲಕರು ಮತ್ತು ಕೋಚ್ ಶ್ರದ್ಧಾಂಜಲಿ ಸಲ್ಲಿಸಿದರು.

'ಸಮನ್ ಅವರು ನಮ್ಮನ್ನು ಉಳಿಸುವ ಸಲುವಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಅವರಿಂದಾಗಿ ನಾವು ಹೊರಬಂದು ಜೀವ ಉಳಿಸಿಕೊಂಡಿದ್ದೇವೆ. ಈ ಸುದ್ದಿ ಕೇಳಿದಾಗ ನಮಗೆ ಆಘಾತವಾಯಿತು. ತುಂಬಾ ದುಃಖವಾಯಿತು. ಅವರ ಕುಟುಂಬದ ನೋವಿಗೆ ನಾವು ಕಾರಣಕರ್ತರಾದೆವು' ಎಂದು ಎಕ್ಕೊಪಲ್ ದುಃಖದಿಂದ ಹೇಳಿದರು.

ಗುಹೆಯಲ್ಲಿ ಸಿಲುಕಿರುವ ಕೋಚ್‌ನ ಬದುಕು ಇನ್ನೂ ದುರಂತಮಯಗುಹೆಯಲ್ಲಿ ಸಿಲುಕಿರುವ ಕೋಚ್‌ನ ಬದುಕು ಇನ್ನೂ ದುರಂತಮಯ

ಖಾಸಗಿತನಕ್ಕೆ ಅವಕಾಶ ನೀಡಿ

ಖಾಸಗಿತನಕ್ಕೆ ಅವಕಾಶ ನೀಡಿ

ಆ ಬಾಲಕರ ಹೃದಯದಲ್ಲಿ ಯಾವ ಪ್ರಮಾಣದ ಗಾಯಗಳಿವೆಯೋ ನಮಗೆ ಗೊತ್ತಿಲ್ಲ. ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಅಪಾಯವಿರುವುದರಿಂದ ಅವರ ಖಾಸಗಿತನಕ್ಕೆ ಅವಕಾಶ ನೀಡಿ ಎಂದು ನ್ಯಾಯಾಂಗ ಸಚಿವಾಲಯದ ಅಧಿಕಾರಿ ತವಾಚೈ ಥೈಕಾವ್ ಮನವಿ ಮಾಡಿದ್ದಾರೆ.

ಆಸ್ಪತ್ರೆಯಿಂದ ವಾಹನದಲ್ಲಿ ಬಂದ ಮಕ್ಕಳನ್ನು ಮಾತನಾಡಿಸಲು ಸಾವಿರಾರು ಮಂದಿ ಮಾಧ್ಯಮ ಹಾಗೂ ಜನಸಾಮಾನ್ಯರು ನೆರೆದಿದ್ದರು. ಅವರನ್ನು ನಿಯಂತ್ರಿಸಲು ಪೊಲೀಸರು ಬ್ಯಾರಿಕೇಡ್‌ಗಳನ್ನು ನಿರ್ಮಿಸಿದ್ದರು.

ಕ್ಷಮೆ ಕೋರಿದ ಎಲಾನ್ ಮಸ್ಕ್

ಬ್ರಿಟನ್‌ನ ಮುಳುಗುತಜ್ಞ ವರ್ನ್ ಅನ್‌ಸ್ವರ್ಥ್ ಅವರನ್ನು 'ಶಿಶುಕಾಮಿ' ಎಂದು ಕರೆದಿದ್ದ ಅಮೆರಿಕದ ತಾಂತ್ರಿಕ ಉದ್ಯಮಿ ಎಲಾನ್ ಮಸ್ಕ್ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದಾರೆ.

ಗುಹೆಯಲ್ಲಿ ಸಿಲುಕಿರುವ ಮಕ್ಕಳನ್ನು ರಕ್ಷಿಸಲು ತಮ್ಮ ಬಳಿ ಇರುವ ಮಿನಿ ಸಬ್‌ಮೆರಿನ್‌ಗಳನ್ನು ಒದಗಿಸುವುದಾಗಿ ಎಲಾನ್ ಮಸ್ಕ್ ಹೇಳಿದ್ದರು.

ಇದನ್ನು ಲೇವಡಿ ಮಾಡಿದ್ದ ಅನ್‌ಸ್ವರ್ಥ್, ಅದನ್ನು ಪ್ರಚಾರದ ತಂತ್ರ ಎಂದು ಟೀಕಿಸಿದ್ದರು. ಇದಕ್ಕೆ ಕೋಪದಿಂದ ಈ ರೀತಿ ಪ್ರತಿಕ್ರಿಯೆ ನೀಡಿದ್ದಾಗಿ ಮಸ್ಕ್ ಸ್ಪಷ್ಟೀಕರಣ ನೀಡಿದ್ದಾರೆ.

ಮಸ್ಕ್ ವಿರುದ್ಧ ಕಾನೂನು ಹೋರಾಟ ನಡೆಸಲು ಅನ್‌ಸ್ವರ್ಥ್ ಮುಂದಾಗಿದ್ದಾರೆ. ಈ ವಿಚಾರದಲ್ಲಿ ತಪ್ಪು ಮಾಡಿದ್ದೇನೆ ಎಂದಿರುವ ಮಸ್ಕ್, ಕಾರ್ಯಾಚರಣೆಯಲ್ಲಿ ಬಳಕೆಯಾಗದ ತಮ್ಮ ಸಬ್‌ಮೆರಿನ್‌ಗಳ ಕುರಿತು ಅನ್‌ಸ್ವರ್ಥ್ ಸುಳ್ಳುಗಳನ್ನು ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ.

'ಥಾಯ್ಲೆಂಡ್‌ನಲ್ಲಿ ನೆಲೆಸಿರುವ ಬ್ರಿಟಿನ್ ಅನಿವಾಸಿಯೇ' ಎಂದು ಟ್ವೀಟ್ ಆರಂಭಿಸಿದ್ದ ಮಸ್ಕ್, 'ಕ್ಷಮಿಸು ಶಿಶುಕಾಮಿ, ನೀವು ಅದಕ್ಕೆ ಏನಾದರೂ ಕೇಳಿದ್ದೀರಾ' ಎಂದು ಬರೆದಿದ್ದರು. ಕೆಲ ಹೊತ್ತಿನಲ್ಲಿಯೇ ಅದನ್ನು ಅಳಿಸಿ ಹಾಕಿದ್ದರು.

English summary
All 12 boys and their coach who were trapped in a cave in Thailand released and made their public appearance on Wednesday after they treated in hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X