ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಕ್ಷಣಾ ಕಾರ್ಯಾಚರಣೆಯಲ್ಲಿ ಮೃತಪಟ್ಟ ಸಮನ್ ಗುನನ್ ಈಗ ನ್ಯಾಷನಲ್ ಹೀರೋ

|
Google Oneindia Kannada News

ಥಾಯ್ಲೆಂಡ್ ಗುಹೆಯಲ್ಲಿ ಬಾಲಕರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಅಲ್ಲಿನ ನೌಕಾದಳದ ಮಾಜಿ ಡೈವರ್ ಮೃತಪಟ್ಟಿದ್ದಾರೆ. ಥಾಯ್ಲೆಂಡ್ ನ ಉತ್ತರಕ್ಕಿರುವ ಥಾಮ್ ಲೌಂಗ್ ಗುಹೆಯಲ್ಲಿ ಬಾಲಕರು ಸಿಕ್ಕಿಕೊಂಡಿದ್ದು, ಅದರ ಸುತ್ತ ಆಮ್ಲಜನಕದ ಟ್ಯಾಂಕ್ ಗಳನ್ನು ಇಡುವ ವೇಳೆ ಮೃತಪಟ್ಟಿದ್ದಾರೆ.

ಸಮನ್ ಗುನನ್ ಮೃತರು. ಗುಹೆಯಲ್ಲಿ ಅಗತ್ಯ ಪ್ರಮಾಣ ಆಮ್ಲಜನಕ ಇಲ್ಲದ ಕಾರಣ ಅವರು ಮೃತಪಟ್ಟಿದ್ದಾರೆ. ಥಾಮ್ ಲೌಂಗ್ ಗುಹೆಯಲ್ಲಿ ಬಾಲಕರ ಫುಟ್ ಬಾಲ್ ತಂಡವು ಸಿಲುಕಿಕೊಂಡಿದ್ದು, ಅವರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಸಮನ್ ಗುನನ್ ಗುಹೆಯಿಂದ ಹೊರಗೆ ಬರುವಾಗ ಪ್ರಜ್ಞೆ ಕಳೆದುಕೊಂಡಿದ್ದಾರೆ.

9 ದಿನದಿಂದ ಗುಹೆಯಲ್ಲಿ ಸಿಲುಕಿದ್ದ ಫುಟ್ಬಾಲ್ ಆಟಗಾರರ ರಕ್ಷಣೆ9 ದಿನದಿಂದ ಗುಹೆಯಲ್ಲಿ ಸಿಲುಕಿದ್ದ ಫುಟ್ಬಾಲ್ ಆಟಗಾರರ ರಕ್ಷಣೆ

ಅಂದಹಾಗೆ ಮೂವತ್ತೆಂಟು ವರ್ಷದ ಗುನನ್ ನೌಕಾಪಡೆಯನ್ನು ತೊರೆದಿದ್ದರು. ಆದರೆ ಈ ಕಾರ್ಯಾಚರಣೆ ಸಲುವಾಗಿಯೇ ಬಂದಿದ್ದರು. ಗುಹೆಯೊಳಗೆ ಆಮ್ಲಜನಕದ ಪ್ರಮಾಣ ಹೆಚ್ಚಿಸಲು ಟ್ಯಾಂಕ್ ಗಳನ್ನು ಗುಹೆಯೊಳಗೆ ಇಟ್ಟು ವಾಪಸಾಗುವಾಗ ಪ್ರಜ್ಞೆ ಹೋಗಿತ್ತು. "ಅವರು ಆಮ್ಲಜನಕದ ಟ್ಯಾಂಕ್ ಇಟ್ಟು ವಾಪಸಾಗುವ ಹಾದಿಯಲ್ಲಿ ಅಗತ್ಯ ಪ್ರಮಾಣದ ಆಕ್ಸಿಜನ್ ಇರಲಿಲ್ಲ" ಎಂದು ಅಲ್ಲಿನ ಡೆಪ್ಯೂಟಿ ಗವರ್ನರ್ ಚಿಯಾಂಗ್ ರೇ ಹೇಳಿದ್ದಾರೆ.

Thailand cave rescue: former navy diver dies during operation

ಗುನನ್ ಅವರನ್ನು ಥಾಯ್ಲೆಂಡ್ ನ್ಯಾಷನಲ್ ಹೀರೋ ಎಂದು ಬಣ್ಣಿಸಲಾಗಿದೆ. ಗುಹೆಯೊಳಗೆ ಸಿಲುಕಿರುವ ಬಾಲಕರು ಕೆಲ ಕಾಲ ಸುರಕ್ಷಿತವಾಗಿ ಇರಬಲ್ಲರು ಎಂಬುದು ಲೆಕ್ಕಾಚಾರವಾಗಿತ್ತು. ಆದರೆ ಪರಿಸ್ಥಿತಿ ಬಿಗಡಾಯಿಸಿದ್ದರಿಂದ ಕೆಲ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ ಆಯಿತು ಎಂದು ನೌಕಾಪಡೆಯ ಕಮ್ಯಾಂಡರ್ ಹೇಳಿದ್ದಾರೆ.

English summary
Saman Kunan, a former Thai navy Seal, has died while placing air tanks around the Tham Luang caves in northern Thailand where boys are trapped.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X