ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೆಸ್ಲಾ ವಿರುದ್ದ ವಂಚನೆ ಮೊಕದ್ದಮೆ ದಾಖಲಿಸಿ ಕೋರ್ಟ್‌ನಲ್ಲಿ ಜಯಗಳಿಸಿದ ಚೀನಾದ ಚಾಲಕ

|
Google Oneindia Kannada News

ಬೇಜಿಂಗ್, ಅಕ್ಟೋಬರ್‌ 01: ಟೆಸ್ಲಾ ವಿರುದ್ದ ಚೀನಾದ ಚಾಲಕನೋರ್ವ ಯಶಸ್ವಿಯಾಗಿ ವಂಚನೆ ಮೊಕದ್ದಮೆ ದಾಖಲು ಮಾಡಿದ್ದಾನೆ. ಟೆಸ್ಲಾದ ಸೆಕೆಂಡ್‌ ಹ್ಯಾಂಡ್‌ ಮಾಡಲ್‌ ಎಸ್‌ ಅನ್ನು ಖರೀದಿ ಮಾಡಿದಾಗ ವಂಚನೆ ನಡೆದಿದೆ ಎಂದು ಚಾಲಕ ಆರೋಪ ಮಾಡಿದ್ದಾನೆ. ಇದು ಎಲಾನ್ ಮಸ್ಕ್‌ರ ಈ ಕಂಪನಿಗೆ ಪ್ರಮುಖ ಮಾರುಕಟ್ಟೆಯಲ್ಲಿ ಭಾರಿ ಹಿನ್ನೆಡೆಗೆ ಕಾರಣವಾಗಿದೆ.

ಹಾನ್‌ ಚಲೋ ಎಂಬ ವ್ಯಕ್ತಿಯು 379,700 ಯುವಾನ್ (58,700 ಡಾಲರ್‌) ಕೊಟ್ಟು ಈ ಟೆಸ್ಲಾದ ಅಧಿಕೃತ ಸೆಕೆಂಡ್‌ ಹ್ಯಾಂಡ್‌ ವೆಬ್‌ಸೈಟ್‌ ಮೂಲಕ ಕಾರನ್ನು ಖರೀದಿ ಮಾಡಿದ್ದು, ಆದರೆ ಈ ಸೈಟ್‌ನಲ್ಲಿ ಕಾರಿನ ಪ್ರಸ್ತುತ ಕಂಡೀಷನ್‌ ಬಗ್ಗೆ ತಪ್ಪಾಗಿ ಉಲ್ಲೇಖ ಮಾಡಲಾಗಿದೆ ಎಂದು ಕೋರ್ಟ್ ಗಮನಿಸಿದೆ. ಈ ಬಗ್ಗೆ ಹಾನ್‌ ಚಲೋ ತನ್ನ ವಿಬೋ ಅಕೌಂಟ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ ತಿಳಿದು ಬಂದಿದೆ.

ಏನಿದು ಮರ್ಸಿಡಿಸ್-ಬೆಂಜ್ ಇಂಡಿಯಾ'ಡ್ರೀಮ್‍ಫೆಸ್ಟ್' ಅಭಿಯಾನ?ಏನಿದು ಮರ್ಸಿಡಿಸ್-ಬೆಂಜ್ ಇಂಡಿಯಾ'ಡ್ರೀಮ್‍ಫೆಸ್ಟ್' ಅಭಿಯಾನ?

ಈ ಹಿಂದೆ ಅಪಘಾತ ನಡೆದು ಕಾರು ಬಹಳ ಹಾನಿಯಾಗಿತ್ತು. ಬಳಿಕ ರಿಪೇರಿ ಮಾಡಲಾಗಿದೆ. ಆದರೆ ಟೆಸ್ಲಾ ಈ ಬಗ್ಗೆ ಉಲ್ಲೇಖ ಮಾಡಿಲ್ಲ ಎಂದು ಹೇಳಲಾಗಿದೆ. "ಕಾರಿನಲ್ಲಿ ವೆಲ್ಡಿಂಗ್‌ ಮಾಡಿರುವ ಗುರುತುಗಳು ಸ್ಪಷ್ಟವಾಗಿ ಇದೆ," ಎಂದು ಹೇಳಿರುವ ಕೋರ್ಟ್ "ನಾನು ಯಾವುದೇ ರಚನಾತ್ಮಕ ಬದಲಾವಣೆಯನ್ನು ಮಾಡಿಲ್ಲ," ಎಂಬ ಟೆಸ್ಲಾದ ವಾದವನ್ನು ನಿರಾಕರಿಸಿದೆ.

Tesla loses fraud case in yet another image setback in China

ಇನ್ನು ಕೋರ್ಟ್ ಟೆಸ್ಲಾಗೆ ಕಾರಿಗೆ ಈ ಚಾಲಕ ತೆತ್ತ ಹಣವನ್ನು ವಾಪಾಸ್‌ ನೀಡುವಂತೆ ತಿಳಿಸಿದೆ. ಹಾಗೆಯೇ ಪರಿಹಾರವಾಗಿ ಮೂರು ಪಟ್ಟು ಅಧಿಕ ಹಣವನ್ನು ನೀಡಲು ಆದೇಶಿಸಿದೆ. ಅಂದರೆ 379,700 ಯುವಾನ್ ನೀಡಿ ಕಾರು ಖರೀದಿ ಮಾಡಿದ್ದ ಚಾಲಕನಿಗೆ, 1.5 ಮಿಲಿಯನ್‌ ಯುವಾನ್‌ ದೊರೆಯಲಿದೆ.

ಚೀನಾದಲ್ಲಿ ಮೊದಲ ಬಾರಿಗೆ ಈ ಕ್ಯಾಲಿಪೋರ್ನಿಯಾ ಮೂಲದ ಟೆಸ್ಲಾ ಈ ಭಾರೀ ಮೊತ್ತದ ದಂಡವನ್ನು ತೆರಬೇಕಾಗಿ ಬಂದಿದೆ ಎಂದು ಸ್ಥಳೀಯ ಮಾಧ್ಯಮ ಕ್ಯಾಜಿಂಗ್‌ ವರದಿ ಮಾಡಿದೆ. ಇನ್ನು ಈ ನಡುವೆ ಟೆಸ್ಲಾದ ಷೇರು ನ್ಯೂಯಾರ್ಕ್‌ನಲ್ಲಿ ಕುಸಿತ ಕಂಡಿದೆ. ನ್ಯೂಯಾರ್ಕ್‌ನಲ್ಲಿ ಟೆಸ್ಲಾದ ಷೇರು ಶೇಕಡ 0.6 ಕ್ಕೆ ಕುಸಿತವಾಗಿದೆ. ಅಂದರೆ 776.84 ಡಾಲರ್‌ಗೆ ಕುಸಿತವಾಗಿದೆ ಎಂದು ಹೇಳಲಾಗಿದೆ.

ಆಡಿಯಿಂದ ಮೂರು ಎಲೆಕ್ಟ್ರಿಕ್ ಎಸ್‍ಯುವಿಗಳ ಬಿಡುಗಡೆಆಡಿಯಿಂದ ಮೂರು ಎಲೆಕ್ಟ್ರಿಕ್ ಎಸ್‍ಯುವಿಗಳ ಬಿಡುಗಡೆ

ವಿಶ್ವದಾದ್ಯಂತ ಅಧಿಕ ಅಭಿಮಾನಿಗಳನ್ನು ಹೊಂದಿರುವ ಟೆಸ್ಲಾ ಈಗ ಚೀನಾದಲ್ಲಿ ಈಗ ಅಸಮಾಧಾನಗೊಂಡಿರುವ ಹಲವಾರು ಗ್ರಾಹಕರೊಂದಿಗೆ ಸಿಲುಕಿದೆ. ಆದ್ದರಿಂದ ಈಗ ಟೆಸ್ಲಾ ಈಗ ಸಾಮಾಜಿಕ ಮಾಧ್ಯಮದಲ್ಲಿ ಬೆಂಬಲವನ್ನು ಪಡೆಯಲು ಭಾರೀ ಪ್ರಯತ್ನವನ್ನು ನಡೆಸಿದೆ. ಇನ್ನು ಈ ಹಿಂದೆ ಎಪ್ರಿಲ್‌ನಲ್ಲಿ ಮಹಿಳಾ ಗ್ರಾಹಕರು ಶಾಂಘೈ ಆಟೋ ಪ್ರದರ್ಶನದಲ್ಲಿ ಟೆಸ್ಲಾ ಪ್ರದರ್ಶನದ ವಿರುದ್ದ ನಡೆಸಿದ ಪ್ರತಿಭಟನೆಯು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್‌ ಆಗಿತ್ತು.

ಸುರಕ್ಷತೆ, ಭದ್ರತೆ ಮತ್ತು ಗ್ರಾಹಕ ಸೇವಾ ಸಮಸ್ಯೆಗಳ ಪರಿಶೀಲನೆ ವಿಚಾರದಲ್ಲಿ ಟೆಸ್ಲಾವು ಚೀನಾದಲ್ಲಿ ಹಲವಾರು ಸಮಸ್ಯೆಗಳನ್ನು ಹೊಂದಿ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿದೆ ಎಂದು ಹೇಳಲಾಗಿದೆ. ಇನ್ನು ಈ ಬಗ್ಗೆ ಹೇಳಿಕೆ ನೀಡಿರುವ ಬೇಜಿಂಗ್‌ ಮೂಲದ ಹೊಡಾಂಗ್ ಕಾನೂನು ಸಂಸ್ಥೆಯ ಜಾಂಗ್ ಕ್ಸಿಯಾಲಿಂಗ್, "ದೊಡ್ಡ ಕಂಪನಿಗಳು ಮಾಡುವ ವಂಚನೆಯ ವಿರುದ್ದವೂ ಗ್ರಾಹರಕರನ್ನು ರಕ್ಷಿಸುವಲ್ಲಿ ಈ ತೀರ್ಪು ಅತ್ಯುನ್ನತ ಮೈಲಿಗಲ್ಲು ಆಗಿದೆ," ಎಂದು ಹೇಳಿದ್ದಾರೆ. "ಇದೇ ರೀತಿಯ ಪರಿಸ್ಥಿತಿಯನ್ನು ಅನುಭವಿಸುತ್ತಿರುವ ಜನರಿಗೆ ಈ ತೀರ್ಪು ದೈರ್ಯವನ್ನು ತುಂಬಲಿದೆ," ಎಂದು ಕೂಡಾ ತಿಳಿಸಿದ್ದಾರೆ. "ನ್ಯಾಯಾಲಯವು ಕಾನೂನಿನ ಅನುಸಾರವಾಗಿ ಅಂತಿಮವಾಗಿ ತೀರ್ಪು ನೀಡುತ್ತದೆ ಎಂದು ನಾವು ಎದುರು ನೋಡುತ್ತೇವೆ ಮತ್ತು ನಂಬುತ್ತೇವೆ," ಎಂದು ಟೆಸ್ಲಾ ಹೇಳಿಕೊಂಡಿದೆ.

(ಒನ್‌ಇಂಡಿಯಾ ಸುದ್ದಿ)

English summary
Tesla loses fraud case in yet another image setback in China. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X