ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಲೋಚಿಸ್ತಾನದ 5 ಸ್ಟಾರ್ ಹೋಟೆಲಿನ ಮೇಲೆ ಉಗ್ರರ ದಾಳಿ

|
Google Oneindia Kannada News

ನವದೆಹಲಿ, ಮೇ 11 : ಪಾಕಿಸ್ತಾನದ ಬಲೋಚಿಸ್ತಾನದ ಗ್ವಾದಾರ್ ನಲ್ಲಿ ಭಯೋತ್ಪಾದಕರು 5 ಸ್ಟಾರ್ ಹೋಟೆಲಿನ ಮೇಲೆ ದಾಳಿ ಮಾಡಿದ್ದು, ಅಲ್ಲಿ ಗುಂಡಿನ ಮೊರೆತ ಕೇಳಿಬಂದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಹೋಟೆಲಿಗೆ ಶನಿವಾರ ಮೂವರು ಉಗ್ರರು ನುಗ್ಗಿದ್ದಾರೆ.

ಪಾಕಿಸ್ತಾನದ ಮಾಧ್ಯಮಗಳ ಪ್ರಕಾರ, ಬಲೋಚ್ ಲಿಬರೇಷನ್ ಆರ್ಮಿ ಈ ದಾಳಿಯ ಹೊಣೆಯನ್ನು ಹೊತ್ತಿದೆ. ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಹೊಂದಿದ್ದ ಉಗ್ರರು ಪರ್ಲ್ ಕಾಂಟಿನೆಂಟಲ್ ಹೋಟೆಲಿನ ಮೇಲೆ ದಾಳಿ ಮಾಡಿದ್ದಾರೆ. ಉಗ್ರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದೆ.

ಈ ದಾಳಿಯ ಹೊಣೆ ಹೊತ್ತಿರುವ ಬಗ್ಗೆ ಬಲೋಚ್ ಲಿಬರೇಷನ್ ಆರ್ಮಿ ಈಮೇಲ್ ಸಂದೇಶವನ್ನು ಕಳುಹಿಸಿದೆ. ಆದರೆ, ಈ ಕುರಿತು ಪಾಕಿಸ್ತಾನ ಸರಕಾರ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಈ ದಾಳಿಕೋರರು ಮಜೀದ್ ಬ್ರಿಗೇಡ್ ನ ಸ್ವಾತಂತ್ರ್ಯ ಹೋರಾಟಗಾರರು ಎಂದು ಕರೆದುಕೊಳ್ಳುತ್ತಾರೆ. ಬಲೋಚಿಸ್ತಾನವನ್ನು ಪಾಕಿಸ್ತಾನದಿಂದ ಸ್ವತಂತ್ರ ಮಾಡಬೇಕೆಂದು ಹೋರಾಟ ಮಾಡುತ್ತಿದ್ದಾರೆ.

Terrorists storm 5 star hotel in Balochistan

ನಮ್ಮ ಹೋರಾಟಗಾರರು ಚೀನಾ ಮತ್ತು ವಿದೇಶಿ ಹೂಡಿಕೆದಾರರ ಮೇಲೆ ಎಂದು ಬಲೋಚ್ ಲಿಬರೇಷನ್ ಆರ್ಮಿ ಹೇಳಿದೆ. ಈ ಚೀನಿ ಹೂಡಿಕೆದಾರರು ಪರ್ಲ್ ಕಾಂಟಿನೆಂಟರ್ ಹೋಟೆಲಿನಲ್ಲಿ ವಾಸ್ತವ್ಯ ಹೂಡಿದ್ದಾರೆ.

ದಾಳಿಕೋರರ ಹತ್ಯೆ : ದಾಳಿ ಮಾಡಿದ ಎಲ್ಲ ಉಗ್ರರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಆದರೆ, ಇವರು ಹೋಟೆಲನ್ನು ಪ್ರವೇಶಿಸುವ ಮುನ್ನ ಅವರನ್ನು ತಡೆಯಲು ಯತ್ನಿಸಿದ ಸೆಕ್ಯುರಿಟಿ ಗಾರ್ಡ್ ನನ್ನು ಉಗ್ರರು ಹತ್ಯೆ ಮಾಡಿದ್ದಾರೆ. ಹೋಟೆಲಿನಲ್ಲಿರುವ ಎಲ್ಲ ಚೀನಿ ಅತಿಥಿಗಳು ಸುರಕ್ಷಿತವಾಗಿದ್ದಾರೆ.

English summary
Terrorists have stormed a 5 star hotel in Gawadar, Balochistan. Preliminary reports suggest 3 armed gunmen inside hotel, gunshots heard. More details awaited.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X