ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುದ್ದ ಪೂರ್ಣಿಮೆಯ ದಿನ ದೊಡ್ಡ ದಾಳಿಗೆ ಮಹಿಳಾ ಉಗ್ರರ ಸಂಚು?

|
Google Oneindia Kannada News

ನವದೆಹಲಿ, ಮೇ 15: ಬುದ್ದ ಪೂರ್ಣಿಮೆಯ ದಿನ ಬಹುದೊಡ್ಡ ದಾಳಿಗೆ ಉಗ್ರರು ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಉಗ್ರರು ಬಹುದೊಡ್ಡ ದಾಳಿಗೆ ಸಂಚು ರೂಪಿಸುತ್ತಿದ್ದಾರೆ, ಮೂರು ಉಗ್ರರು ಭಾರತದೊಳಗೆ ನುಸುಳಿದ್ದು ನೇಪಾಳದಿಂದ ಜಮ್ಮು ಕಾಶ್ಮೀರ್ ಬಂಡೀಪೂರಾಕ್ಕೆ ತಲುಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಶ್ರೀನಗರದಲ್ಲಿ ಓರ್ವ ಜೈಷ್ ಉಗ್ರನನ್ನು ಸೆರೆ ಹಿಡಿದ ಭಾರತೀಯ ಸೇನೆ ಶ್ರೀನಗರದಲ್ಲಿ ಓರ್ವ ಜೈಷ್ ಉಗ್ರನನ್ನು ಸೆರೆ ಹಿಡಿದ ಭಾರತೀಯ ಸೇನೆ

ಮತ್ತೊಂದು ಕಡೆ ಬಾಂಗ್ಲಾದೇಶ ಮೂಲದ ಉಗ್ರ ಸಂಘಟನೆ ಜಮಾತ್ ಉಲ್ ಮುಜಾಹಿದೀನ್ ಬಾಂಗ್ಲಾದೇಶ್ ಮಹಿಳೆಯರಿಗೆ ಆತ್ಮಾಹುತಿ ಬಾಂಬ್ ದಾಳಿಯ ಕುರಿತು ತರಬೇತಿ ನೀಡುತ್ತಿದೆ.

Terrorists planning for major strikes on Buddha Purnima

ಈ ಮಹಿಳಾ ಉಗ್ರರು ಬಾಂಗ್ಲಾದೇಶ, ಮಯನ್ಮಾರ್, ಭಾರತದಲ್ಲಿರುವ ಬೌದ್ಧ ಮಂದಿರಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಝೀ ನ್ಯೂಸ್‌ಗೆ ಬಂದಿರುವ ಮಾಹಿತಿ ಪ್ರಕಾರ ಸಾಜಿದ್ ಮೀರ್ ಎನ್ನುವ ಉಗ್ರ ತನ್ನೊಂದಿಗೆ ಮೂರು ಉಗ್ರರನ್ನು ಜಮ್ಮು ಮತ್ತು ಕಾಶ್ಮೀರದಿಂದ ನೇಪಾಳಕ್ಕೆ ಕರೆತಂದಿದ್ದ. ಬಂಡಿಪೋರಾವು ವಿದೇಶಿ ಉಗ್ರರಿಗೆ ಭದ್ರವಾಗಿರುವ ಪ್ರದೇಶ ಎಂದು ಅವರು ಊಹಿಸಿದ್ದಾರೆ.

ಮೇ 18ರಂದು ನಡೆಯುವ ಬುದ್ದ ಪೂರ್ಣಿಮೆಯ ಬೌದ್ಧ ಮಂದಿರಗಳ ಮೇಲೆ ದಾಳಿ ನಡೆಸು ಸಾಧ್ಯತೆಗಳಿವೆ. ಜೆಎಂಬಿ ಉಗ್ರ ಸಂಘಟನೆಯನ್ನು ಬಾಂಗ್ಲಾ ದೇಶದಲ್ಲಿ ನಿಷೇಧಿಸಲಾಗಿದೆ. ಸಂಘಟನೆಯ ನಾಲ್ಕು ಉಗ್ರರನ್ನು 2007ರ ಮಾರ್ಚ್ 29ರಂದು ಗಲ್ಲಿಗೇರಿಸಲಾಗಿತ್ತು.

English summary
Intelligence agencies are on high alert after receiving specific inputs that terrorists are planning to carry out multiple attacks inside India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X