ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇನಾ ಶಿಬಿರದ ಮೇಲೆ ಉಗ್ರರ ದಾಳಿ: 71 ಯೋಧರ ಹತ್ಯೆ

|
Google Oneindia Kannada News

ನಿಯಮೆ, ಡಿಸೆಂಬರ್ 12: ಮಾಲಿ ದೇಶದ ಗಡಿಭಾಗದಲ್ಲಿರುವ ನೈಜೀರಿಯಾದ ಸೇನಾ ಶಿಬಿರದ ಮೇಲೆ ನೂರಾರು ಶಸ್ತ್ರಸಜ್ಜಿತ ಭಯೋತ್ಪಾದಕರು ದಾಳಿ ನಡೆಸಿ 71 ಸೈನಿಕರನ್ನು ಹತ್ಯೆ ಮಾಡಿದ್ದಾರೆ.

ನೈಜರ್ ಸೇನಾ ಶಿಬಿರದ ಮೇಲೆ ಶೆಲ್, ಮೋರ್ಟಾರ್ ಮತ್ತು ಅತ್ಯಾಧುನಿಕ ರೈಫಲ್‌ಗಳಿಂದ ದಾಳಿ ನಡೆಸಿ ಯೋಧರನ್ನು ಕೊಲ್ಲಲಾಗಿದೆ ಎಂದು ನೈಜೀರಿಯಾದ ರಕ್ಷಣಾ ಸಚಿವಾಲಯ ಬುಧವಾರ ತಿಳಿಸಿದೆ.

ಲಂಡನ್ ಬ್ರಿಡ್ಜ್ ದಾಳಿ: 2012ರಲ್ಲೂ ಭಯೋತ್ಪಾದನೆಯಲ್ಲಿ ಭಾಗಿಯಾಗಿದ್ದ ಆರೋಪಿಲಂಡನ್ ಬ್ರಿಡ್ಜ್ ದಾಳಿ: 2012ರಲ್ಲೂ ಭಯೋತ್ಪಾದನೆಯಲ್ಲಿ ಭಾಗಿಯಾಗಿದ್ದ ಆರೋಪಿ

2015ರಿಂದಲೂ ನೈಜೀರಿಯಾದಲ್ಲಿ ಇಸ್ಲಾಮಿಕ್ ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ಎದುರಿಸುತ್ತಿರುವ ನೈಜೀರಿಯಾದ ಪಶ್ಚಿಮ ತಿಲ್ಲಬೆರಿ ಶಿಬಿರದ ಮೇಲೆ ಮಂಗಳವಾರ ಅತ್ಯಂತ ಭೀಕರ ದಾಳಿ ನಡೆದಿದೆ. ಈ ದಾಳಿಗೆ ಯಾವುದೇ ಉಗ್ರ ಸಂಘಟನೆ ಇದುವರೆಗೂ ಹೊಣೆ ಹೊತ್ತುಕೊಂಡಿಲ್ಲ. ಇತ್ತೀಚಿನ ದಿನಗಳಲ್ಲಿ ಭಯೋತ್ಪಾದಕರ ಆಕ್ರಮಣಗಳಿಗೆ ತುತ್ತಾಗುತ್ತಿರುವ ನೈಜೀರಿಯಾ ಉಗ್ರ ವಿರುದ್ಧದ ಹೋರಾಟಕ್ಕೆ ಆದ್ಯತೆ ನೀಡಿತ್ತು. ಆದರೆ ಸೇನಾ ಶಿಬಿರದ ಮೇಲಿನ ಉಗ್ರರ ದಾಳಿ, ಈ ಹೋರಾಟಕ್ಕೆ ತೀವ್ರ ಹಿನ್ನಡೆ ಉಂಟುಮಾಡಿದೆ.

71 ಸಾವು, 12 ಮಂದಿಗೆ ಗಾಯ

71 ಸಾವು, 12 ಮಂದಿಗೆ ಗಾಯ

'ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆಯನ್ನು ಪ್ರಕಟಿಸಲು ವಿಷಾದಿಸುತ್ತೇವೆ. ಭಯೋತ್ಪಾದಕರ ದಾಳಿಯಲ್ಲಿ 71 ಸೇನಾ ಸಿಬ್ಬಂದಿ ಮೃತಪಟ್ಟಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಇತರರು ನಾಪತ್ತೆಯಾಗಿದ್ದಾರೆ' ಎಂದು ರಕ್ಷಣಾ ಸಚಿವಾಲಯದ ಹೇಳಿಕೆ ತಿಳಿಸಿದೆ. ಶಿಬಿರದಲ್ಲಿ ಎಷ್ಟು ಸೈನಿಕರಿದ್ದರು ಎಂಬ ನಿಖರ ಮಾಹಿತಿ ಲಭ್ಯವಾಗಿಲ್ಲ.

ಮೂರು ಗಂಟೆಗಳ ಕಾಲ ದಾಳಿ

ಮೂರು ಗಂಟೆಗಳ ಕಾಲ ದಾಳಿ

'ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ನೂರಕ್ಕೂ ಅಧಿಕ ಭಯೋತ್ಪಾದಕರು ಏಕಾಏಕಿ ದಾಳಿ ನಡೆಸಿದ್ದಾರೆ. ಸುಮಾರು ಮೂರು ಗಂಟೆಗಳ ಕಾಲ ದಾಳಿ ನಡೆಸಲಾಗಿದೆ. ಶಸ್ತ್ರಸಜ್ಜಿತ ವಾಹನಗಳು, ಫಿರಂಗಿಗಳನ್ನು ದಾಳಿಗೆ ಬಳಸಲಾಗಿದೆ. ಸೇನಾ ಶಿಬಿರದ ಶಸ್ತ್ರಾಸ್ತ್ರ ಸಂಗ್ರಹಗಾರ ಮತ್ತು ಇಂಧನ ಸಂಗ್ರಹಗಾರಗಳನ್ನು ಗುರಿಯನ್ನಾಗಿರಿಸಿಕೊಂಡು ಆರಂಭದಲ್ಲಿ ಬಾಂಬ್ ಮತ್ತು ಮೋರ್ಟಾರ್ ದಾಳಿ ನಡೆಸಿದರು. ಮದ್ದುಗುಂಡುಗಳು ಹಾಗೂ ಇಂಧನದ ಸ್ಫೋಟಗಳಿಂದಾಗಿ ಮೃತಪಟ್ಟವರ ಸಂಖ್ಯೆ ಹೆಚ್ಚಾಗಿದೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ' ಎಂದು ಹೇಳಿದೆ.

2016ರ ಢಾಕಾ ಕೆಫೆ ದಾಳಿ: 7 ಆರೋಪಿಗಳಿಗೆ ಮರಣದಂಡನೆ2016ರ ಢಾಕಾ ಕೆಫೆ ದಾಳಿ: 7 ಆರೋಪಿಗಳಿಗೆ ಮರಣದಂಡನೆ

ತುರ್ತು ಪರಿಸ್ಥಿತಿ ವಿಸ್ತರಣೆ

ತುರ್ತು ಪರಿಸ್ಥಿತಿ ವಿಸ್ತರಣೆ

ನೈಜೀರಿಯಾವು ತನ್ನ ಈಶಾನ್ಯ ಭಾಗದಲ್ಲಿ ಬೊಕೊ ಹರಾಮ್ ಮತ್ತು ಪಶ್ಚಿಮ ಭಾಗದಲ್ಲಿ ಐಸಿಸ್ ಉಗ್ರರ ಹಾವಳಿಯನ್ನು ಎದುರಿಸುತ್ತಿದೆ. ಭಯೋತ್ಪಾದಕರ ದಾಳಿಗಳನ್ನು ನಿಯಂತ್ರಿಸಲು 2017ರಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿರುವ ನೈಜೀರಿಯಾ ಸೇನೆಗೆ ವಿಶೇಷ ಅಧಿಕಾರ ನೀಡಿದೆ. ಫ್ರಾನ್ಸ್‌ನ 4,500 ಸೈನಿಕರಯ ನೈಜೀರಿಯಾಕ್ಕೆ ನೆರವು ನೀಡುತ್ತಿದೆ. ನೈಜೀರಿಯಾ ಸಚಿವ ಸಂಪುಟವು ತುರ್ತು ಪರಿಸ್ಥಿತಿಯನ್ನು ಇನ್ನೂ ಮೂರು ತಿಂಗಳವರೆಗೆ ವಿಸ್ತರಿಸಲು ಅನುಮತಿ ನೀಡಿದೆ.

ಐದು ದೇಶಗಳ ಕಾರ್ಯಪಡೆ

ಐದು ದೇಶಗಳ ಕಾರ್ಯಪಡೆ

ನೈಜರ್ ಸೇನಾ ಶಿಬಿರವು ಬುರ್ಕಿನಾ ಫಾಸೊ, ಮಾಲಿ, ಮೌರಿಟಾನಿಯಾ, ಚಾಡ್ ಮತ್ತು ನೈಜೀರಿಯಾಗಳು ಸೇರಿ 2014ರಲ್ಲಿ ರಚಿಸಿಕೊಂಡ ಐದು ದೇಶಗಳ 'ಜಿ5' ಭಯೋತ್ಪಾದನಾ ನಿಗ್ರಹ ಕಾರ್ಯಪಡೆಯ ಭಾಗವಾಗಿದೆ. ಸೋಮವಾರ ಪಶ್ಚಿಮ ಟಾಹೊವಾ ಪ್ರದೇಶದ ಅಗಾಂಡೊ ಎಂಬಲ್ಲಿನ ಸೇನಾ ನೆಲೆಯ ಮೇಲೆ ಕೂಡ ಸೋಮವಾರ ದಾಳಿ ನಡೆದಿತ್ತು. ಇದರಲ್ಲಿ ಮೂವರು ನೈಜರ್ ಸೈನಿಕರು ಮೃತಪಟ್ಟಿದ್ದರೆ, 14 ಉಗ್ರರನ್ನು ಹೊಡೆದುರುಳಿಸಲಾಗಿತ್ತು.

ಪಾಕಿಸ್ತಾನ್ ಉಗ್ರರಿಗೆ ಇವನೇ ಅನ್ನ-ನೀರು ಕೊಡುವುದುಪಾಕಿಸ್ತಾನ್ ಉಗ್ರರಿಗೆ ಇವನೇ ಅನ್ನ-ನೀರು ಕೊಡುವುದು

English summary
71 soldiers were killed in an attack by hundreds of terrorists on Nigeria's military camp near the border of Mali.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X