ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳ್ಳಿ ಹೈದರ ಕೀಕೀ ಡ್ಯಾನ್ಸ್‌,ಅಮೆರಿಕ ಪತ್ರಿಕೆಯಲ್ಲಿ ಪ್ರಮುಖ ಸುದ್ದಿ!

By Manjunatha
|
Google Oneindia Kannada News

Recommended Video

ಕೀ ಕೀ ನೃತ್ಯ ಹೇಗೆ ಮಾಡೋದು ಗೊತ್ತಾ ? | Oneindia Kannada

ನ್ಯೂಯಾರ್ಕ್‌, ಆಗಸ್ಟ್ 22: ದಕ್ಷಿಣ ಭಾರತದ ರಾಜ್ಯದ ಮೂಲೆಯೊಂದರ ಹಳ್ಳಿಯಲ್ಲಿ ತಮ್ಮ ಇಷ್ಟಕ್ಕೆ ಇಂಗ್ಲಿಷ್ ಹಾಡಿಗೆ ಕುಣಿದ ಇಬ್ಬರು ಹಳ್ಳಿ ಹೈದರು ಈಗ ವರ್ಲ್ಡ್‌ ಫೇಮಸ್‌ ಆಗಿಬಿಟ್ಟಿದ್ದಾರೆ.

ಹೌದು, ವಿಶ್ವ ಪ್ರಸಿದ್ಧ ಕೀ-ಕೀ ಡ್ಯಾನ್ಸ್‌ಗೆ ಬಾಲಿವುಡ್, ಹಾಲಿವುಡ್ ಸೆಲೆಬ್ರಿಟಿಗಳೆಲ್ಲಾ ರಸ್ತೆಯಲ್ಲಿ ಕುಣಿದಿದ್ದು ನೋಡಿಯೇ ಇರುತ್ತೀರಿ. ಅಂತೆಯೇ ಇದೇ ಸಮಯದಲ್ಲಿ ಹಳ್ಳಿ ಹುಡುಗರಿಬ್ಬರು ತಮ್ಮ ಗದ್ದೆಯಲ್ಲಿ ಎತ್ತುಗಳ ಜೊತೆಯಲ್ಲಿ 'ಕಿ-ಕೀ ಡು ಯು ಲವ್ ಮೀ' ಎಂದು ಹಾಡಿ ಕುಣಿದಿದ್ದರು. ಅದು ಬಹಳ ವೈರಲ್ ಆಗಿತ್ತು.

ರಸ್ತೆಯಲ್ಲಿ ಕಿಕಿ ಡ್ಯಾನ್ಸ್‌ ಮಾಡೋರಿಗೆ ಖಾಕಿ ಹೇಳಿದ್ದೇನು?ರಸ್ತೆಯಲ್ಲಿ ಕಿಕಿ ಡ್ಯಾನ್ಸ್‌ ಮಾಡೋರಿಗೆ ಖಾಕಿ ಹೇಳಿದ್ದೇನು?

ಈಗ ಆ ವಿಡಿಯೋ ಅಮೆರಿಕದ ಪ್ರತಿಷ್ಠಿತ ದಿನ ಪತ್ರಿಕೆ ನ್ಯೂಯಾರ್ಕ್‌ ಟೈಮ್ಸ್‌ನ ಗಮನ ಸೆಳೆದಿದೆ. ಈ ಇಬ್ಬರು ಹುಡುಗರ ನೃತ್ಯ ಜಗತ್ತನ್ನೇ ಸೆಳೆದಿದೆ, ಈ ಹುಡುಗರು ಕೀ-ಕೀ ಹಾಡಿಗೆ ಕುಣಿಯುವುದು ಹೇಗೆ ಎಂದು ವಿಶ್ವಕ್ಕೆ ತೋರಿಸಿದ್ದಾರೆ ಎಂದೆಲ್ಲಾ ಪತ್ರಿಕೆ ಹೊಗಳಿ ವಿಶೇಷ ವರದಿ ಪ್ರಕಟಿಸಿದೆ.

Telangana villagers ki-ki dance draw atention of international news paper

ಆಗಸ್ಟ್‌ 6ರಂದು ನ್ಯೂಯಾರ್ಕ್‌ ಟೈಮ್ಸ್‌ ಈ ವರದಿಯನ್ನು ಪ್ರಕಟಿಸಿತ್ತು. ಕೀ-ಕೀ ಚಾಲೆಂಜ್‌ನ ಚಾಂಪಿಯನ್‌ಗಳು ಇವರೇ ಎಂದು ಯುವಕರ ನೃತ್ಯವನ್ನು ಹೊಗಳಿ, ಹಳ್ಳಿ ಹುಡುಗರ ಕಿ-ಕೀ ನೃತ್ಯವನ್ನು ಜಗತ್ತಿನಾದ್ಯಂತ ಫೇಮಸ್ ಆಗುವಂತೆ ನ್ಯೂ ಯಾರ್ಕ್‌ ಟೈಮ್ಸ್‌ ಪತ್ರಿಕೆ ಮಾಡಿದೆ.

ಕಿಕಿ ಚಾಲೆಂಜಿನ ನಕ್ಕುನಗಿಸುವ ವೈರಲ್ ವಿಡಿಯೋಗಳನ್ನು ನೋಡಿ ಕಿಕಿ ಚಾಲೆಂಜಿನ ನಕ್ಕುನಗಿಸುವ ವೈರಲ್ ವಿಡಿಯೋಗಳನ್ನು ನೋಡಿ

ಅಂದಹಾಗೆ ಈ ಹುಡುಗರು ತೆಲಂಗಾಣ ರಾಜ್ಯದ ಲಂಬಾಡಿಪಲ್ಲಿಯವರು. ಅನಿಲ್ ಗೀಲಾ ಮತ್ತು ಪಿಲ್ಲಿ ತಿರುಪತಿ ಎಂಬ ಈ ಇಬ್ಬರು ಯುವಕರು ತಮ್ಮ ಅಸಡಾ-ಬಸಡಾ ನೃತ್ಯದಿಂದ ವಿಶ್ವದ ಗಮನ ಸೆಳೆದಿದ್ದಾರೆ. ಭತ್ತ ನಾಟಿ ಮಾಡುವ ಸಮಯದಲ್ಲಿ ತಮ್ಮದೇ ಊರಿನ ಆದರೆ ಪಟ್ಟಣದಲ್ಲಿ ಕಲಿಯುತ್ತಿರುವ ಗೆಳೆಯನ ಒತ್ತಾಯದಂತೆ ತಮಗೆ ಬಂದಂತೆ ಹಾಡಿಗೆ ಕುಣಿದಿದ್ದಾರೆ ಅಷ್ಟೆ ಆದರೆ ಅವರಿಂದು ವರ್ಲ್ಡ್‌ ಫೇಮಸ್‌ ಆಗಿಬಿಟ್ಟಿದ್ದಾರೆ.

ಬೇಕಿತ್ತಾ ಇದೆಲ್ಲ! ರೈಲ್ವೇ ಸ್ಟೇಷನ್ ನಲ್ಲಿ ಕಿಕಿ ಡಾನ್ಸ್ ಮಾಡಿದವರ ಪಾಡು ನೋಡಿ! ಬೇಕಿತ್ತಾ ಇದೆಲ್ಲ! ರೈಲ್ವೇ ಸ್ಟೇಷನ್ ನಲ್ಲಿ ಕಿಕಿ ಡಾನ್ಸ್ ಮಾಡಿದವರ ಪಾಡು ನೋಡಿ!

ನ್ಯೂಯಾರ್ಕ್‌ ಟೈಮ್ಸ್‌ನ ವೆಬ್ ಆವೃತ್ತಿಯಲ್ಲಿ ಈ ವರದಿ ಓದಲು ಲಭ್ಯವಿದೆ. ಆಗಸ್ಟ್‌ 6ರಂದು ಈ ವರದಿಯು ವಿಶ್ವ ವಿಭಾಗದದ ಏಷಿಯಾ ಸೆಕ್ಷನ್‌ನಲ್ಲಿ ಪ್ರಕಟವಾಗಿದೆ. ಆಸಕ್ತರು ಓದಬಹುದು.

English summary
International News paper New york times write special article about Telangala boys ki-ki dance. Telangana's Lambadipally village boys danced for ki-ki song in mud.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X