ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಣೆಯಾಗಿದ್ದ ಯುವಕನ ಅವಶೇಷಗಳು ಮೃಗಾಲಯದ ಸಿಂಹದ ಬೋನಿನಲ್ಲಿ ಪತ್ತೆ

|
Google Oneindia Kannada News

ಲಾಹೋರ್, ಫೆಬ್ರವರಿ 27: ಹಲವು ದಿನಗಳ ಹಿಂದೆ ಕಾಣಿಯಾಗಿದ್ದ ಯುವಕನ ಅವಶೇಷಗಳು ಮೃಗಾಲಯದ ಸಿಂಹದ ಬೋನಿನಲ್ಲಿ ಪತ್ತೆಯಾಗಿದೆ.

Recommended Video

ಮೊದಲ ಬಾರಿ ಮ್ಯಾಚ್ ಫಿಕ್ಸಿಂಗ್ ಬಗ್ಗೆ ಧೋನಿ ಮಾತು..? | Oneindia kannada

ಯುವಕನನ್ನು ಕೊಂದು ಬೋನಿನೊಳಗೆ ಎಳೆದೊಯ್ದು ತಿಂದಿದೆ. ಸೋಮವಾರದಂದು ಮನೆಯಿಂದ ಹೊರನಡೆದ ಬಿಲಾಲ್​ (18) ನೇರವಾಗಿ ಸಫಾರಿ ಪಾರ್ಕ್​ನತ್ತ ಹೋಗಿದ್ದ.

ಬೇಲಿ ಹಾರಿ ಸಫಾರಿ ಪಾರ್ಕ್​ನೊಳಗೆ ಹೋದ ಯುವಕ ಅಲ್ಲಿದ್ದ ಹುಲ್ಲನ್ನು ಕೊಯ್ಯಲು ಮುಂದಾಗಿದ್ದಾನೆ. ಅದೇ ಸಮಯಕ್ಕೆ ಮೃಗಾಲಯದ ಸಿಂಹವು ಆತನ ಮೇಲೆ ಎಗರಿದ್ದು, ಯುವಕನನ್ನು ಕೊಂದಿರಬಹುದು ಎಂದು ಅಂದಾಜಿಸಲಾಗಿದೆ.

Teenager Killed In Attack Of Lions In Lahore’s Safari Park

ಘಟನೆ ನಡೆದ ಸ್ಥಳದಲ್ಲಿ ಕುಡಗೋಲು ಮತ್ತು ಹುಲ್ಲು ಸಹ ಇರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಲಾಹೋರ್​ನ ಸಫಾರಿ ಪಾರ್ಕ್​ನಲ್ಲಿ ಈ ಘಟನೆ ನಡೆದಿದೆ. ಬಿಲಾಲ್​ನ ಕುಟುಂಬಸ್ಥರು ಆತನಿಗಾಗಿ ಸತತ ಹುಡುಕಾಟ ನಡೆಸಿದ್ದಾರೆ. ಆತನ ಚಿಕ್ಕಪ್ಪ ಒಬ್ಬರು ಮೃಗಾಲಯದದಲ್ಲಿ ಕೆಲಸ ಮಾಡುತ್ತಿದ್ದರಿಂದಾಗಿ ಅವರು ಮೃಗಾಲಯದ ಆಡಳಿತವನ್ನೂ ಸಹ ಸಂಪರ್ಕಿಸಿದ್ದಾರೆ.

ಅವರ ಮನವಿ ಮೇರೆಗೆ ಮೃಗಾಲಯದಲ್ಲಿ ಪರಿಶೀಲಿಸಿದಾಗ ಸಿಂಹದ ಬೋನಿನೊಳಗೆ ಯುವಕನ ಅವಶೇಷಗಳಿರುವುದು ಪತ್ತೆಯಾಗಿದೆ.

English summary
The remains of a teenager who had been missing for two days have been found in the lions’ enclosure at the safari park on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X