ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5 ನಿಮಿಷ ನಿಷೇಧಿತ ಸಿನಿಮಾ ನೋಡಿದ್ದಕ್ಕೆ 14 ವರ್ಷ ಕಠಿಣ ಜೈಲು ಶಿಕ್ಷೆ!

|
Google Oneindia Kannada News

ದಕ್ಷಿಣ ಕೊರಿಯಾ, ಡಿಸೆಂಬರ್‌ 07: ಸರ್ವಾಧಿಕಾರ ಆಡಳಿತ ಇರುವ ಉತ್ತರ ಕೊರಿಯಾದಲ್ಲಿ ಆಡಳಿತ ಹೇಳಿದ್ದೆ ವೇದ ವಾಕ್ಯ ಎಂಬಂತಾಗಿದ್ದು, ಐದು ನಿಮಿಷ ಒಂದು ನಿಷೇಧಿತ ಸಿನಿಮಾವನ್ನು ನೋಡಿದ್ದಕ್ಕೆ ಈ ದೇಶದಲ್ಲಿ ಅಪ್ರಾಪ್ತ ವಿದ್ಯಾರ್ಥಿಗೆ ಸುಮಾರು 14 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.

ಹೌದು, ಯಾಂಗ್‌ಗಾಂಗ್ ಪ್ರಾಂತ್ಯದ 14 ವರ್ಷ ಪ್ರಾಯದ ವಿದ್ಯಾರ್ಥಿಯು ಐದು ನಿಮಿಷ ನಿಷೇಧಿತ ಸಿನಿಮಾವನ್ನು ನೋಡಿದ ಎಂಬ ಕಾರಣಕ್ಕೆ ವಿದ್ಯಾರ್ಥಿಗೆ 14 ವರ್ಷಗಳ ಕಠಿಣ ಸಜೆಯನ್ನು ವಿಧಿಸಲಾಗಿದೆ. ವಿದ್ಯಾರ್ಥಿಯು ದೇಶದಲ್ಲಿ ನಿಷೇಧಿಸಲಾಗಿರುವ ದಕ್ಷಿಣ ಕೊರಿಯಾದ 'ದಿ ಅಂಕಲ್' ಚಲನಚಿತ್ರವನ್ನು ವೀಕ್ಷಣೆ ಮಾಡಿದ್ದಾನೆ ಎಂಬ ಕಾರಣಕ್ಕೆ ಕಠಿಣ ಶಿಕ್ಷೆಯನ್ನು ನೀಡಲಾಗಿದೆ.

ಉತ್ತರ ಕೊರಿಯಾ: ಸ್ಕ್ವಿಡ್ ಗೇಮ್ ಶೋ ಪ್ರತಿ ವಿತರಿಸಿದ ವ್ಯಕ್ತಿಗೆ ಮರಣದಂಡನೆಉತ್ತರ ಕೊರಿಯಾ: ಸ್ಕ್ವಿಡ್ ಗೇಮ್ ಶೋ ಪ್ರತಿ ವಿತರಿಸಿದ ವ್ಯಕ್ತಿಗೆ ಮರಣದಂಡನೆ

ಉತ್ತರ ಕೊರಿಯಾದಲ್ಲಿ ದಕ್ಷಿಣ ಕೊರಿಯಾ ಮತ್ತು ಯುಎಸ್ ಸೇರಿದಂತೆ ಇತರೆ ಹಲವಾರು ದೇಶಗಳ ಸಾಂಸ್ಕೃತಿಕ ವಸ್ತುಗಳನ್ನು ನಿಷೇಧ ಮಾಡಲಾಗಿದೆ. ಇದಕ್ಕಾಗಿ ಉತ್ತರ ಕೊರಿಯಾದಲ್ಲಿ ಇತ್ತೀಚೆಗಷ್ಟೇ ಪ್ರತಿಕ್ರಿಯಾತ್ಮಕ ಚಿಂತನೆ ಮತ್ತು ಸಂಸ್ಕೃತಿ ನಿರ್ಮೂಲನೆ ವಿರೋಧಿ ಕಾನೂನನ್ನು ಅಂಗೀಕಾರ ಮಾಡಲಾಗಿದೆ

Teen Gets 14 Years in Jail For Watching 5 Mins Of Banned Film In North Korea

ಅದು ಸಿನಿಮಾದಿಂದ ಸೇರಿ ಕೆಲವು ಅಗತ್ಯ ವಸ್ತುಗಳು ಕೂಡಾ ಸೇರಿದೆ. ಹೈಸನ್ ಸಿಟಿಯ ಪ್ರಾಥಮಿಕ ಮತ್ತು ಮಧ್ಯಮ ಶಾಲೆಯಲ್ಲಿ ಈ ಅಂಕಲ್‌ ಚಲನಚಿತ್ರವನ್ನು ವೀಕ್ಷಣೆ ಮಾಡುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಯನ್ನು ಬಂಧನ ಮಾಡಲಾಗಿದೆ ಎಂದು ಸ್ಥಳೀಯ ಪ್ರಕಟಣೆ ಮಾಧ್ಯಮ ಡೈಲಿ ಎನ್‌ಕೆ ವರದಿ ಮಾಡಿದೆ.

ದಕ್ಷಿಣ ಕೊರಿಯಾದ ಚಲನಚಿತ್ರಗಳು, ರೆಕಾರ್ಡಿಂಗ್‌ಗಳು, ಸಂಕಲನಗಳು, ಪುಸ್ತಕಗಳು, ಹಾಡುಗಳು, ಪೇಂಟಿಂಗ್‌ಗಳು ಮತ್ತು ಫೋಟೋಗಳನ್ನು ನೇರವಾಗಿ ನೋಡಿದ, ಕೇಳುವ ಅಥವಾ ಇಟ್ಟುಕೊಂಡಿರುವವರನ್ನು "ಸರಿಪಡಿಸುವ ಕಾರ್ಯವನ್ನು" ಮಾಡಲಾಗಿದೆ ಎಂದು ಡೈಲಿ ಎನ್‌ಕೆ ಉಲ್ಲೇಖ ಮಾಡಿರುವ ಕಾನೂನು ದಾಖಲೆಯು ಹೇಳಿದೆ.

Teen Gets 14 Years in Jail For Watching 5 Mins Of Banned Film In North Korea

ನೆಟ್‌ಫ್ಲಿಕ್ಸ್‌ನ ಸ್ಕ್ವಿಡ್ ಗೇಮ್ ಶೋ ನೋಡಿದ್ದಕ್ಕೆ ಮರಣದಂಡನೆ!

ಕೆಲ ದಿನಗಳ ಹಿಂದೆಯಷ್ಟೇ ನೆಟ್‌ಫ್ಲಿಕ್ಸ್‌ನ ಸ್ಕ್ವಿಡ್ ಗೇಮ್ ಶೋನ ಪ್ರತಿ ವಿತರಣೆ ಮಾಡಿದ್ದಕ್ಕೆ ವ್ಯಕ್ತಿಯೊಬ್ಬನಿಗೆ ಉತ್ತರ ಕೊರಿಯಾ ಸರ್ಕಾರ ಮರಣದಂಡನೆ ಶಿಕ್ಷೆ ವಿಧಿಸಿದೆ. ಈ ಸ್ಕ್ವಿಡ್​ ಗೇಮ್​​ ಒಂಭತ್ತು ಎಪಿಸೋಡ್​ಗಳ ಶೋ ಆಗಿದ್ದು, ಒಂದು ಕುತೂಹಲಕಾರಿ, ಆಸಕ್ತಿದಾಯಕ ಕಥಾವಸ್ತುವನ್ನು ಒಳಗೊಂಡಿದೆ. ಭಾರಿ ನಗದು ಬಹುಮಾನ ಗೆಲ್ಲುವ ಆಸೆಯಿಂದ ಒಂದಷ್ಟು ಜನರು, ಮಕ್ಕಳ ನಿಗೂಢ ಆಟಗಳನ್ನು ಆಡಲು ಸೈನ್​ಅಪ್​ ಆಗುವ ಕಥೆಯನ್ನು ಈ ಒಂಭತ್ತು ಎಪಿಸೋಡ್​ಗಳು ಹೇಳುತ್ತವೆ. ಅಂದಹಾಗೆ ಇದು ದಕ್ಷಿಣ ಕೊರಿಯಾದ ಡ್ರಾಮಾ ಶೋ. ಈಗಾಗಲೇ ತಿಳಿಸಿದ್ದಂತೆ ಉತ್ತರ ಕೊರಿಯಾದಲ್ಲಿ ದಕ್ಷಿಣ ಕೊರಿಯಾದ ಸಿನಿಮಾ ನಿಷೇಧವಾಗಿದೆ. ಈ ಕಾರಣದಿಂದಾಗಿ ಈ ಶೋವನ್ನು ಖರೀದಿಸಿ ಉಳಿದವರಿಗೆ ವಿತರಿಸಿದ್ದಕ್ಕೆ ವಿದ್ಯಾರ್ಥಿಗೆ ಮರಣದಂಡನೆಯನ್ನು ವಿಧಿಸಲಾಗಿದೆ. ಇನ್ನು ಈತ ಓದುತ್ತಿದ್ದ ಶಾಲೆ ಶಿಕ್ಷಕರು ಮತ್ತು ನಿರ್ವಾಹಕರನ್ನೂ ಕೆಲಸದಿಂದ ತೆಗೆದುಹಾಕಲಾಗಿದ್ದು, ಕೆಲಸ ಮಾಡುವಂತೆ ಗಣಿಗಳಿಗೆ ಕಳಿಸಲಾಗಿದೆ.

 ನಾಯಕ ಕಿಮ್‌ ಫ್ಯಾಷನ್‌ ಅನುಕರಣೆ ತಪ್ಪಿಸಲು ಉ.ಕೊರಿಯಾದಲ್ಲಿ ಚರ್ಮದ ಕೋಟು ನಿಷೇಧ! ನಾಯಕ ಕಿಮ್‌ ಫ್ಯಾಷನ್‌ ಅನುಕರಣೆ ತಪ್ಪಿಸಲು ಉ.ಕೊರಿಯಾದಲ್ಲಿ ಚರ್ಮದ ಕೋಟು ನಿಷೇಧ!

ಒಂದಲ್ಲ ಎರಡಲ್ಲ ಹಲವಾರು ವಸ್ತುಗಳು ನಿಷೇಧ!

ಉತ್ತರ ಕೊರಿಯಾದಲ್ಲಿ ಸರ್ವಾಧಿಕಾರಿ ನಾಯಕ ಕಿಮ್ ಜಾಂಗ್ ಉನ್ ಹಲವಾರು ವಸ್ತುಗಳನ್ನು ನಿಷೇಧಿಸಿದ್ದಾರೆ. ಇತ್ತೀಚೆಗೆ ಉತ್ತರ ಕೊರಿಯಾ ದೇಶದ ಸರ್ವಾಧಿಕಾರಿ ನಾಯಕ ಕಿಮ್ ಜಾಂಗ್ ಉನ್ ಫ್ಯಾಷನ್‌ ಅನ್ನು ಯಾರೂ ಕೂಡಾ ಅನುಕರಣೆ ಮಾಡಬಾರದು ಎಂಬ ನಿಟ್ಟಿನಲ್ಲಿ ಉತ್ತರ ಕೊರಿಯಾದಲ್ಲಿ ಚರ್ಮದ ಕೋಟನ್ನು ನಿಷೇಧ ಮಾಡಲಾಗಿದೆ. ಲೆದರ್‌ ಕೋಟ್‌ (ಚರ್ಮದ ಕೋಟು) ಧರಿಸಿರುವ ನಿವಾಸಿಗಳ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಉತ್ತರ ಕೊರಿಯಾದ ಅಧಿಕಾರಿಗಳು, "ದೇಶದ ನಾಯಕ ಕಿಮ್ ಜಾಂಗ್ ಉನ್‌ರ ಫ್ಯಾಷನ್‌ ಆಯ್ಕೆಗಳನ್ನು ಅನುಕರಣೆ ಮಾಡುವುದು ಅಗೌರವ ತೋರಿದಂತೆ" ಎಂದು ತಿಳಿಸಿದ್ದಾರೆ.

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ 2019 ರಲ್ಲಿ ಟಿವಿ ಕಾರ್ಯಕ್ರಮವೊಂದರಲ್ಲಿ ಚರ್ಮದ ಕೋಟು ಧರಿಸಿದ ಬಳಿಕ ಉತ್ತರ ಕೊರಿಯಾದಲ್ಲಿ ಚರ್ಮದ ಕೋಟುಗಳು ಪ್ರಸಿದ್ಧವಾಗಿದೆ. ಆರಂಭದಲ್ಲಿ ಚೀನಾದಿಂದ ಚರ್ಮದ ಕೋಟುಗಳನ್ನು ಆಮದು ಮಾಡಿಕೊಂಡು ಶ್ರೀಮಂತರು ಧರಿಸುತ್ತಿದ್ದರು, ಆದರೆ ಬಳಿಕ ಉಡುಪು ತಯಾರಕರು ನಕಲಿ ಚರ್ಮದ ಕೋಟುಗಳನ್ನು ರಫ್ತು ಮಾಡಿಕೊಂಡು ಸ್ಥಳೀಯವಾಗಿ ಮಾರಾಟ ಮಾಡಲು ಆರಂಭ ಮಾಡಿದರು. ಈಗ ಉತ್ತರ ಕೊರಿಯಾದ ಎಲ್ಲಾ ಪ್ರದೇಶದಲ್ಲಿ ಚರ್ಮದ ಕೋಟುಗಳನ್ನು ಮಾರಾಟ ಮಾಡಲಾಗುತ್ತಿದೆ.

ಹಾಗೆಯೇ ಹಲವಾರು ಯುವಕರು ತಮ್ಮದೇ ಆದ ಚರ್ಮದ ಕೋಟುಗಳನ್ನು ಧರಿಸಿ ಓಡಾಡುವುದು ಕಂಡು ಬರುತ್ತದೆ. ಆದರೆ ಈಗ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್‌ರ ಫ್ಯಾಷನ್‌ ಅನ್ನು ಎಲ್ಲರೂ ಕೂಡಾ ಅನುಕರಣೆ ಮಾಡುವುದನ್ನು ತಪ್ಪಿಸಲು ಚರ್ಮದ ಕೋಟುಗಳನ್ನು ಧರಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಫ್ಯಾಷನ್ ಪೊಲೀಸರು ಬೀದಿಗಳಲ್ಲಿ ಗಸ್ತು ತಿರುಗುತ್ತಿದ್ದಾರೆ. ಮಾರಾಟಗಾರರು ಹಾಗೂ ನಾಗರಿಕರಿಂದ ಚರ್ಮದ ಕೋಟುಗಳನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ.

English summary
Teen Gets 14 Years in Jail For Watching 5 Mins Of Banned Film In North Korea.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X