ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀವ ಬೆದರಿಕೆ : ಭಾರತದಿಂದ ಅಮೆರಿಕಕ್ಕೆ ಹಾರಿದ ತಸ್ಲೀಮಾ

By Mahesh
|
Google Oneindia Kannada News

ನವದೆಹಲಿ, ಜೂ. 03: ಬಾಂಗ್ಲಾದೇಶ ಮೂಲದ ವಿವಾದಿತ ಲೇಖಕಿ ತಸ್ಲೀಮಾ ನಸ್ರೀನ್ ಮತ್ತೊಮ್ಮೆ ನೆಲೆ ಹುಡುಕಿಕೊಂಡು ಹೊರಟ್ಟಿದ್ದಾರೆ. ಭಾರತದಲ್ಲಿ ಆಶ್ರಯ ಪಡೆದಿದ್ದ ತಸ್ಲೀಮಾ ಅವರಿಗೆ ಜೀವ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಯುಎಸ್ ಗೆ ಹಾರಿದ್ದಾರೆ.

ಮುಸ್ಲಿಂ ತೀವ್ರವಾದಿಗಳಿಂದ ತಸ್ಲೀಮಾ ನಸ್ರೀನ್ ಗೆ ಜೀವ ಬೆದರಿಕೆ ಬಂದಿದೆ. ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಮೂವರು ಬ್ಲಾಗರ್ ಗಳನ್ನು ಮೂಲಭೂತವಾದಿಗಳು ಕೊಂದು ಹಾಕಿದ್ದರು.

ಸ್ವೀಡನ್ ಪೌರತ್ವ ಹೊಂದಿದ್ದರೂ ತಸ್ಲೀಮಾ ಅವರು ಭಾರತದಲ್ಲಿ ನೆಲೆಸಿದ್ದರು. 1994ರಿಂದ ಬಾಂಗ್ಲಾದೇಶದಿಂದ ಹೊರಗಿರುವ ತಸ್ಲೀಮಾಗೆ 2004ರಿಂದ ಭಾರತದ ವೀಸಾ ಲಭ್ಯವಾಗಿದೆ.

Taslima Nasreen moves to US after death threats

ಇತ್ತೀಚೆಗೆ ಬೆದರಿಕೆ ಬಂದ ಹಿನ್ನಲೆಯಲ್ಲಿ ಭಾರತ ಸರ್ಕಾರದ ನೆರವು ಕೋರಲು ತಸ್ಲೀಮಾ ನಿರ್ಧರಿಸಿದ್ದರು. ಅದರೆ, ಸರ್ಕಾರದಿಂದ ಸದ್ಯಕ್ಕೆ ಯಾವುದೇ ಸಂದರ್ಶನ ನಿಗದಿಯಾಗದ ಕಾರಣ ತಾತ್ಕಾಲಿಕವಾಗಿ ತಮ್ಮ ನೆಲೆಯನ್ನು ಅಮೆರಿಕದಲ್ಲಿ ಕಂಡುಕೊಳ್ಳಲು ನಿರ್ಧರಿಸಿದ್ದಾರೆ.

ನ್ಯೂಯಾರ್ಕ್ ಮೂಲದ ವಕೀಲರ ಸಂಘಟನೆ ಮುಖ್ಯಸ್ಥರಾದ ರೊನಾಲ್ಡ್ ಲಿಂಡ್ಸೆ ಅವರ ನೆರವು ಪಡೆದಿರುವ ತಸ್ಲೀಮಾಗೆ ಅಮೆರಿಕದಲ್ಲಿ ಉದ್ಯೋಗವಾಗಲಿ, ಮನೆಯಾಗಲಿ ಇಲ್ಲ, ಅದರೆ, ಜೀವ ಉಳಿಸಿಕೊಳ್ಳಲು ನೆಲೆ ಕಂಡು ಕೊಳ್ಳದೇ ವಿಧಿ ಇಲ್ಲ.

52 ವರ್ಷ ವಯಸ್ಸಿನ ತಸ್ಲೀಮಾ ಅವರು 'ಲಜ್ಜಾ' ಹಾಗೂ 'ದ್ವಿಖಾಂಡಿತೋ' ಕೃತಿಗಳ ಮೂಲಕ ಜನಪ್ರಿಯತೆ ಹಾಗೂ ಧಾರ್ಮಿಕ ಮುಖಂಡರ ವಿರೋಧವನ್ನು ಕಟ್ಟುಕೊಂಡಿದ್ದಾರೆ. (ಪಿಟಿಐ)

English summary
Controversial Bangladeshi writer Taslima Nasreen has been relocated to the US from India after death threats by Islamists radicals from her country where three secular bloggers were hacked to death since February.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X