• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕ್ಯಾನ್ಸರ್ ಅಲ್ಲ; ದುರ್ಮಾಂಸವಷ್ಟೇ- ಡಾ ತಸ್ಲೀಮಾ ನಸ್ರೀನ್

By Srinath
|

ನ್ಯೂಯಾರ್ಕ್ , ಮೇ 12: ಬಾಂಗ್ಲಾದೇಶದ ವಿವಾದಿತ ಲೇಖಕಿ ತಸ್ಲೀಮಾ ನಸ್ರೀನ್ ಅವರ ಎದೆಗೂಡಿನಲ್ಲಿ ದುರ್ಮಾಂಸ ಬೆಳೆದಿದೆ. ಕೆಮ್ಮು, ಶೀತ ಜಾಸ್ತಿಯಾಗಿದೆ. ಸ್ವಲ್ಪ ಔಷಧ ಕೊಡಿ ಎಂದು ನ್ಯೂಯಾರ್ಕ್ ಆಸ್ಪತ್ರೆಗೆ ಭೇಟಿ ನೀಡಿದ ತಸ್ಲೀಮಾಗೆ ಅಲ್ಲಿನ ವೈದ್ಯರು ಒಂದಷ್ಟು ಪರೀಕ್ಷೆಗಳನ್ನು ನಡೆಸಿ, ತಮಗೆ breast tumour ಇದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳ ಪ್ರಕಾರ ನನಗೆ ಕ್ಯಾನ್ಸರ್ ಇಲ್ಲ; ನನ್ನೆದೆಯ ಗೂಡಿನಲ್ಲಿರುವುದು ದುರ್ಮಾಂಸವಷ್ಟೇನಂತೆ ಎಂದು ಡಾ ತಸ್ಲೀಮಾ ನಸ್ರೀನ್ ಟ್ವೀಟ್ ಮಾಡಿದ್ದಾರೆ.

ತಸ್ಲೀಮಾ ಎದೆಗೂಡಿನಲ್ಲಿ 'ದೊಡ್ಡ ಗಾತ್ರದ' ಗಡ್ಡೆ ಕಾಣಿಸಿಕೊಂಡಿದೆ. ಯಾವುದಕ್ಕೇ ಆಗಲಿ ಒಂದು ಬಯಾಪ್ಸಿ ಮಾಡಿ, ಪರೀಕ್ಷಿಸೋಣ ಎಂದು ವೈದ್ಯರು ತಸ್ಲೀಮಾಗೆ ಸಲಹೆ ನೀಡಿದ್ದಾರಂತೆ. ಅದರಂತೆ ತಸ್ಲೀಮಾ ಬಯಾಪ್ಸಿ ಮಾಡಿಸಿಕೊಂಡಿದ್ದು, ಇಂದು ಅಥವಾ ನಾಳೆ ಬಯಾಪ್ಸಿ ವರದಿ ಲಭ್ಯವಾಗುವ ಸಾಧ್ಯತೆಯಿದೆ.

ಈ ಬೆಳವಣಿಗೆಗಳಿಂದ 51 ವರ್ಷದ ತಸ್ಲೀಮಾ ನಿಜಕ್ಕೂ ಎದೆಗುಂದಿಸಿದ್ದಾರೆ. ಮುಂದೆ ಬಯಾಪ್ಸಿ ವರದಿಯಲ್ಲಿ ಏನು ಫಲಿತಾಂಶ ಬರುವುದೋ ಎಂದು ಅವರು ಆತಂಕಗೊಂಡಿದ್ದಾರೆ. ಏಕೆಂದರೆ ತಸ್ಲೀಮಾರ ತಾಯಿ ಕ್ಯಾನ್ಸರ್ ರೋಗಕ್ಕೆ ಬಲಿಯಾಗಿದ್ದರು. ಇನ್ನು, ಅವರ ಸೋದರ ಈಗಾಗಲೇ ನ್ಯೂಯಾರ್ಕ್ ಆಸ್ಪತ್ರೆಯಲ್ಲಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

'ನನ್ನೆದೆಯಲ್ಲಿ ದುರ್ಮಾಂಸ ಬೆಳೆದಿದೆಯಂತೆ. ನಿಜಕ್ಕೂ ನನಗೆ ಆತಂಕವಾಗಿದೆ. ಆದರೂ ಪರೀಕ್ಷೆಗಳೆಲ್ಲಾ ಮುಗಿದ ಮೇಲೆ ಹೈದರಾಬಾದಿ ಬಿರಿಯಾನಿ ತಿಂದೆ' ಎಂದು ಟ್ವೀಟ್ ಮಾಡಿ ತಮ್ಮ ಎದೆ ಭಾರವನ್ನು ಕಡಿಮೆ ಮಾಡಿಕೊಂಡಿದ್ದಾರೆ.

ಅಷ್ಟೇ ಅಲ್ಲ ತಸ್ಲೀಮಾ ಇನ್ನೂ ಒಂದು ಟ್ವೀಟ್ ಮಾಡಿ ಭಾರತೀಯರಿಗೆ ಒಂದು ಸಂದೇಶವನ್ನೂ ನೀಡಿದ್ದಾರೆ. 'ಓ ಭಾರತೀಯರೇ ನನಗೆ ಕ್ಯಾನ್ಸರ್ ಎಂದು ಗೊತ್ತಾಗಿ, ನಾನು ನಾಳೆಯೇ ಸತ್ತುಹೋದರೆ ನೀವು ನನಗೊಂದು ಉಪಕಾರ ಮಾಡಬೇಕು. ದಯವಿಟ್ಟು ನನ್ನ ಮುದ್ದಿನ ಬೆಕ್ಕನ್ನು ನೋಡಿಕೊಳ್ಳಿ. ನನ್ನ ಮಿನು ವಿಶ್ವದಲ್ಲೇ ಅತ್ಯುತ್ತಮ ಬೆಕ್ಕು' ಎಂದು ತಸ್ಲೀಮಾ ಕೋರಿದ್ದಾರೆ.

ಅಂದಹಾಗೆ 1986ರಲ್ಲಿ ತಸ್ಲೀಮಾ MBBS ಪಾಸು ಮಾಡಿದ್ದಾರೆ. ವೈದ್ಯೆಯಾಗಿ ವೃತ್ತಿ ಜೀವನ ಆರಂಭಿಸಿದ ತಸ್ಲೀಮಾ ಮುಂದೆ ಲಜ್ಜಾದಂತಹ ವಿವಾದಾತ್ಮಕ ಕಾದಂಬರಿಗಳನ್ನು ಬರೆಯಲಾರಂಭಿಸಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bangladeshi author Taslima Nasreen diagnosed with breast tumours at New York hospital. Doctors found the tumours "quite big" and advised her biopsy to check on possible malignancy. Taslima, 51, appears worried, because her mother had died of cancer and a brother of hers is undergoing cancer treatment in New York.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more